HOME » NEWS » National-international » 8 COACHES OF MUMBAI BHUBANESWAR EXPRESS DERAIL IN ODISHAS CUTTACK 20 INJURED LG

ಹಳಿ ತಪ್ಪಿದ ಮುಂಬೈ-ಭುವನೇಶ್ವರ ಎಕ್ಸ್​ಪ್ರೆಸ್​ ರೈಲು; 20 ಪ್ರಯಾಣಿಕರಿಗೆ ಗಾಯ

ಕಟಕ್​ನ ನೇರ್ಗುಂಡಿ ರೈಲ್ವೆ ನಿಲ್ದಾಣದ ಬಳಿ ಎಕ್ಸ್​​ಪ್ರೆಸ್​ ರೈಲುಗಾಡಿಯ 8 ಬೋಗಿಗಳು ಹಳಿ ತಪ್ಪಿವೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಸುಮಾರು 20 ಮಂದಿಗೆ ಗಾಯವಾಗಿದ್ದು, ಅವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

news18-kannada
Updated:January 16, 2020, 9:46 AM IST
ಹಳಿ ತಪ್ಪಿದ ಮುಂಬೈ-ಭುವನೇಶ್ವರ ಎಕ್ಸ್​ಪ್ರೆಸ್​ ರೈಲು; 20 ಪ್ರಯಾಣಿಕರಿಗೆ ಗಾಯ
ರೈಲು ಹಳಿ ತಪ್ಪಿರುವ ದೃಶ್ಯ
  • Share this:

ಒಡಿಶಾ(ಜ.16): ಮುಂಬೈ-ಭುವನೇಶ್ವರ ಲೋಕಮಾನ್ಯ ತಿಲಕ್​ ಟರ್ಮಿನಸ್​ ಎಕ್ಸ್​ಪ್ರೆಸ್​​ ರೈಲು ಹಳಿತಪ್ಪಿ ಸುಮಾರು 20 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಒಡಿಶಾದಲ್ಲಿ ಸಂಭವಿಸಿದೆ.


ಕಟಕ್​ನ ನೇರ್ಗುಂಡಿ ರೈಲ್ವೆ ನಿಲ್ದಾಣದ ಬಳಿ ಎಕ್ಸ್​​ಪ್ರೆಸ್​ ರೈಲುಗಾಡಿಯ 8 ಬೋಗಿಗಳು ಹಳಿ ತಪ್ಪಿವೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಸುಮಾರು 20 ಮಂದಿಗೆ ಗಾಯವಾಗಿದ್ದು, ಅವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬಂದರು ವಿಸ್ತರಣೆ ವಿರೋಧಿಸಿ ಮೀನುಗಾರರ ಬೃಹತ್ ಹೋರಾಟ; ಇಂದು ಕಾರವಾರ ಬಂದ್

ಮಂಜು ಕವಿದಿದ್ದರಿಂದ ಎಕ್ಸ್​ಪ್ರೆಸ್​​​ ರೈಲು ಗೂಡ್ಸ್​ ರೈಲಿಗೆ ಡಿಕ್ಕಿ ಹೊಡೆದು, ಬಳಿಕ ಹಳಿ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗೂಡ್ಸ್​​ ರೈಲು ಸಲಗೋನ್​ನಿಂದ ನೇರ್ಗುಂಡಿಗೆ ತೆರಳುತ್ತಿತ್ತು. ಎಕ್ಸ್​​ಪ್ರೆಸ್​​ ರೈಲಿನ 5 ಬೋಗಿಗಳು ಸಂಪೂರ್ಣವಾಗಿ ಹಳಿತಪ್ಪಿದ್ದು, 3 ಬೋಗಿಗಳು ಭಾಗಶಃ ಹಳಿ ತಪ್ಪಿವೆ.

ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಸಾಗುತ್ತಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ರೈಲ್ವೈ ಅಧಿಕಾರಿಗಳು ಮತ್ತು ಪೊಲೀಸರು ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
Youtube Video
Published by: Latha CG
First published: January 16, 2020, 9:25 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories