ಹೈದರಾಬಾದ್: ಟಿಡಿಪಿ ಮುಖ್ಯಸ್ಥ ಹಾಗೂ ಎಪಿ ಮಾಜಿ ಮುಖ್ಯಮಂತ್ರಿ ಚಂದ್ರಬಾಬು (Chandra babu naidu) ರೋಡ್ ಶೋ (Road show) ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ನೆಲ್ಲೂರು (Nelluru) ಜಿಲ್ಲೆಯ ಇದ್ವೆಂ ಕರ್ಮರ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಚಂದ್ರಬಾಬು ನಾಯ್ಡು, ಕಂದುಕೂರಿನಲ್ಲಿ ರೋಡ್ ಶೋ ನಡೆಸಿದರು. ಇನ್ನೂ ಈ ರೋಡ್ ಶೋನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು (TDP Workers) ಭಾಗವಹಿಸಿದ್ದರು. ರೋಡ್ ಶೋ ವೇಳೆ ಚಂದ್ರಬಾಬು ನಾಯ್ಡು ಅವರು ಭಾಷಣ ಆರಂಭವಾಗುತ್ತಿದ್ದಲೇ ಸಾಕಷ್ಟು ಗದ್ದಲ ಉಂಟಾಗಿದ್ದು, ವೇದಿಕೆ ಮೇಲೆ ನೂಕುನುಗ್ಗಲು ಪ್ರಾರಂಭವಾಗಿ ಕೆಲವು ಕಾರ್ಯಕರ್ತರು ಕಾಲ್ತುಳಿತಕ್ಕೆ ಒಳಗಾಗಿ ಪಕ್ಕದಲ್ಲಿದ್ದ ಕಾಲುವೆಗೆ ಜಾರಿಬಿದ್ದಿದ್ದಾರೆ. ಘಟನೆಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು, ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ನಂತರ ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಸೇರಿಸುವಂತೆ ಚಂದ್ರಬಾಬು ನಾಯ್ಡು ಆದೇಶಿಸಿದರು. ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿಕೊಂಡು ನಂತರ ಭಾಷಣ ಮುಂದುವರಿಸುವುದಾಗಿ ಹೇಳಿ ಅರ್ಧದಲ್ಲಿಯೇ ಕಾರ್ಯಕ್ರಮ ನಿಲ್ಲಿಸಿ ಕೂಡಲೇ ಚಂದ್ರಬಾಬು ಅವರು ಆಸ್ಪತ್ರೆಗೆ ತೆರಳಿದರು.
ನಂತರ ಗಾಯಗೊಂಡ ಕಾರ್ಯಕರ್ತರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಚಂದ್ರಬಾಬು ನಾಯ್ಡು ಅವರು, ಮೃತರ ಕುಟುಂಬಸ್ಥರಿಗೆ 10 ರೂಪಾಯಿ ಪರಿಹಾರ ಘೋಷಿಸಿದರು. ಜೊತೆಗೆ ಕಾಲ್ತುಳಿತದಿಂದ ಕಾರ್ಯಕರ್ತರು ಸಾವನ್ನಪ್ಪಿರುವುದು ನೋವು ತರಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
Andhra Pradesh | Seven TDP workers lost their lives after a scuffle broke out between party workers during a public meeting being held by TDP leader N Chandrababu Naidu in Kandukuru of Nellore district today.
7 people have lost their lives, injured admitted to hospital: Police pic.twitter.com/uqU1j8K66X
— ANI (@ANI) December 28, 2022
ಆಸ್ಪತ್ರೆಯಲ್ಲಿ ಸಂತ್ರಸ್ತರನ್ನು ಭೇಟಿ ಮಾಡಿದ ನಂತರ ಚಂದ್ರಬಾಬು ರೋಡ್ ಶೋ ಆವರಣಕ್ಕೆ ಬಂದರು. ಪಕ್ಷದ ಕಾರ್ಯಕರ್ತರ ಸಾವು ತುಂಬಲಾರದ ನಷ್ಟ ಎಂದು ಹೇಳಿದರು. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಬಂದಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿಸಿದರು.
ಸದ್ಯಕ್ಕೆ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ. ಮೃತರ ಕುಟುಂಬಗಳಿಗೆ, ಅವರ ಮಕ್ಕಳಿಗೆ ಎಲ್ಲ ರೀತಿಯ ಬೆಂಬಲ ನೀಡುತ್ತೇವೆ. ಎನ್ಟಿಆರ್ ಟ್ರಸ್ಟ್ ಮೂಲಕ ಘಟನೆಯಲ್ಲಿ ಸಾವನ್ನಪ್ಪಿದ್ದವರ ಕುಟುಂಬಸ್ಥರಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಅಲ್ಲದೇ ನಾಳೆ ಟಿಡಿಪಿ ಮೃತರ ಅಂತ್ಯಕ್ರಿಯೆಯಲ್ಲಿ ಎಲ್ಲ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಅಂತ್ಯ ಸಂಸ್ಕಾರಕ್ಕೆ ಬೇಕಾದ ನೆರವು ನೀಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: Jr Ntr: ಜೂನಿಯರ್ ಎನ್ಟಿಆರ್ಗೆ ನಾಚಿಕೆಯಾಗಬೇಕು! ತಾರಕ್ ವಿರುದ್ಧ ರೊಚ್ಚಿಗೆದ್ದ ಆಂಧ್ರ ರಾಜಕಾರಣಿಗಳು
ರೋಡ್ ಶೋ ಆವರಣದಲ್ಲಿ ಮೃತರಿಗೆ ಎರಡು ನಿಮಿಷಗಳ ಚಂದ್ರಬಾಬು ನಾಯ್ಡು ಮೌನಾಚರಣೆ- ಮಾಡಿದರು. ಬಳಿಕ ಕಂದುಕೂರಿನಿಂದ ನಿರ್ಗಮಿಸಿದರು. ಮೃತ ದುರ್ದೈವಿಗಳನ್ನು ದೇವಿನೇನಿ ರವೀಂದ್ರ ಬಾಬು, ಕಲಕ್ಕೂರಿ ಯಾನಾಡಿ, ಯಾತಗಿರಿ ವಿಜಯ, ಕಾಕುಮಣಿ ರಾಜ, ಮರಳಪತಿ ಚಿನಕೊಂಡಯ್ಯ ಮತ್ತು ಪುರಶೋತ್ತೈ ಎಂದು ಗುರುತಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ