ಪೆಸಿಫಿಕ್​ ಸಾಗರದಲ್ಲಿ ಭೂಕಂಪ; 8.2 ರಷ್ಟು ತೀವ್ರತೆ

news18
Updated:August 19, 2018, 11:03 AM IST
ಪೆಸಿಫಿಕ್​ ಸಾಗರದಲ್ಲಿ ಭೂಕಂಪ; 8.2 ರಷ್ಟು ತೀವ್ರತೆ
news18
Updated: August 19, 2018, 11:03 AM IST
-ನ್ಯೂಸ್​ 18 ಕನ್ನಡ

ಫಿಜಿ ಬಳಿಯ ಪೆಸಿಫಿಕ್​ ಸಾಗರದ ಮಧ್ಯಭಾಗದಲ್ಲಿ ಭಾರೀ ಭೂಕಂಪ ಸಂಭವಿಸಿದೆ. ರಿಕ್ಟರ್​ ಮಾಪನದದಲ್ಲಿ 8.2 ರಷ್ಟು ಭೂಕಂಪನದ ತೀವ್ರತೆ ದಾಖಲಾಗಿದೆ. ಭೂಮಿಯ ಮೇಲ್ಮೈಗಿಂತ 563.4 ಕಿ.ಮೀ ಒಳಗೆ ಸಂಭವಿಸಿದ್ದರಿಂದ ಯಾವುದೇ ಹಾನಿಯಾಗಿಲ್ಲ  ಎಂದು ಅಮೇರಿಕಾದ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಅಮೇರಿಕಾವು ಈ ಮೊದಲೇ ಸುನಾಮಿ ಬಗ್ಗೆ ಎಚ್ಚರಿಕೆ ನೀಡಿತ್ತು ಎಂದು ರಾಯಿಟರ್ಸ್​ ವರದಿ ಮಾಡಿದೆ.

ಮೊದಲು ಭೂಕಂಪನದ ತೀವ್ರತೆ ರಿಕ್ಟರ್​ ಮಾಪನದಲ್ಲಿ 8.0 ದಾಖಲಾಗಿತ್ತು. ನಂತರ 8.2 ಕ್ಕೆ ಏರಿಕೆಯಾಗಿದೆ. ಗುವಾಮ್, ಸಂಯುಕ್ತ ಸಂಸ್ಥಾನದ ವೆಸ್ಟ್​ ಕೋಸ್ಟ್​, ಬ್ರಿಟಿಷ್​ ಕೊಲಂಬಿಯಾ, ಅಲಸ್ಕಾ, ಹವಾಯಿ, ಅಮೇರಿಕಾದ ಸಮೋವಾ ಮತ್ತು ಸಮೀಪದ ಸ್ಥಳಗಳಲ್ಲಿ ಸುನಾಮಿಯ ಯಾವುದೇ ಭಯವಿಲ್ಲ. ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದೆ.
First published:August 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ