• Home
  • »
  • News
  • »
  • national-international
  • »
  • India's 76th Independence Day: ಕೆಂಪುಕೋಟೆಯಲ್ಲಿ ಹಾರಿದ ತ್ರಿವರ್ಣ ಧ್ವಜ, ನಾರಿಶಕ್ತಿಗೆ ಮೋದಿ ನಮನ: ಇಲ್ಲಿದೆ ನಮೋ ಭಾಷಣದ ಹೈಲೈಟ್ಸ್​

India's 76th Independence Day: ಕೆಂಪುಕೋಟೆಯಲ್ಲಿ ಹಾರಿದ ತ್ರಿವರ್ಣ ಧ್ವಜ, ನಾರಿಶಕ್ತಿಗೆ ಮೋದಿ ನಮನ: ಇಲ್ಲಿದೆ ನಮೋ ಭಾಷಣದ ಹೈಲೈಟ್ಸ್​

ಪ್ರಧಾನಿ ಮೋದಿ ಅವರು ಕೆಂಪು ಕೋಟೆಯಲ್ಲಿ ತ್ರಿವರ್ಣ ಸತತ 9 ನೇ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ

ಪ್ರಧಾನಿ ಮೋದಿ ಅವರು ಕೆಂಪು ಕೋಟೆಯಲ್ಲಿ ತ್ರಿವರ್ಣ ಸತತ 9 ನೇ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ

ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಪ್ರಧಾನಿ ಮೋದಿ ಅವರು ಕೆಂಪು ಕೋಟೆಯಲ್ಲಿ ತ್ರಿವರ್ಣ ಸತತ 9 ನೇ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ

  • Share this:

ನವದೆಹಲಿ(ಆ.15): ಭಾರತ ಇಂದು ತನ್ನ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು(India's 76th Independence Day) ಆಚರಿಸಿಕೊಳ್ಳುತ್ತಿದೆ. ಈ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕೆಂಪು ಕೋಟೆಯ ಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಪ್ರಧಾನಿ ಮೋದಿ ಅವರು ಕೆಂಪು ಕೋಟೆಯಲ್ಲಿ (Red Fort) ತ್ರಿವರ್ಣ ಸತತ 9 ನೇ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಈ ವರ್ಷ ಭಾರತಕ್ಕೆ ಬಹಳ ವಿಶೇಷವಾಗಿದೆ ಮತ್ತು ಇಡೀ ದೇಶ ಇದನ್ನು ಸ್ವಾತಂತ್ರ್ಯದ ಅಮೃತವೆಂದು ಆಚರಿಸುತ್ತಿದೆ. ಪ್ರಧಾನಿ ಮೋದಿ ಅವರು ಮೊದಲು ರಾಜ್‌ಘಾಟ್‌ಗೆ ಆಗಮಿಸಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು.ದೇಶವನ್ನುದ್ದೇಶಿಸಿ ಮೋದಿ ಮಾತು: ಇಲ್ಲಿದೆ ಹೈಲೈಟ್ಸ್​


* ದೇಶದ ಮೂಲೆಮೂಲೆಯಲ್ಲೂ ಸಂಭ್ರಮ ಮನೆ ಮಾಡಿದೆ. ನಮ್ಮ ತ್ರಿವರ್ಣ ಧ್ವಜ ಹೆಮ್ಮೆಯಿಂದ ಪ್ರಜ್ವಲಿಸುತ್ತಿದೆ. ಈ ದಿನ ಐತಿಹಾಸಿಕ ದಿನವಾಗಿದೆ. ಹೊಸ ಸಂಕಲ್ಪದೊಂದಿಗೆ ಮುನ್ನಡೆಯುವ ಕ್ಷಣ


* ಸ್ವಾತಂತ್ರ್ಯಕ್ಕಾಗಿ ಇಡೀ ದೇಶ ಸಂಘರ್ಷ ನಡೆಸಿತ್ತು, ನೂರಾರು ವರ್ಷ ಗುಲಾಮಗಿರಿ ವಿರುದ್ಧ ಹೋರಾಟ ನಡೆಸಿದ ಪ್ರತಿಯೊಬ್ಬ ಮಹನೀಯರಿಗೆ ನಮಿಸುವ ಸಂದರ್ಭ. ಪ್ರತಿಯೊಂದು ಬಲಿದಾನವನ್ನು ನೆನಪಿಸೋ ಸಮಯ. ನಾವೆಲ್ಲರೂ ಗಾಂಧೀಜಿ, ಬೋಸ್, ಅಂಬೇಡ್ಕರ್ ನೆನಪಿಸಬೇಕು


* ವೀರ ಸಾವರ್ಕರ್ ಅವರ ಹೋರಾಟ ನೆನಪಿಸಿಕೊಳ್ಳಬೇಕು, ಮಂಗಲ್ ಪಾಂಡೆ, ತಾತ್ಯಾ ಟೋಪೆ, ಭಗತ್ ಸಿಂಗ್, ಚಂದ್ರಶೇಖರ್ ಆಝಾದ್, ಅಷ್ಫಾಖುಲ್ಲಾ ಖಾನ್, ಹೀಗೆ ಹಲವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ.


ಇದನ್ನೂ ಓದಿ:  Independence Day 2022: ಭಾರತದಾದ್ಯಂತ ಪ್ರತಿಧ್ವನಿಸುತ್ತದೆ ಹರ್ ಘರ್ ತಿರಂಗ ಅಭಿಯಾನ, ಎಲ್ಲೆಲ್ಲಿ ಹೇಗಿದೆ ನೋಡಿ


* ರಾಣಿ ಲಕ್ಷ್ಮೀ ಬಾಯಿ, ದುರ್ಗಾ ಭಾಬಿ, ರಾಣಿ ಚೆನ್ನಮ್ಮ ಬೇಗಂ ಹಜ್ರತ್ ಮಹಲ್​ರಂಥವರು ದೇಶದ ನಾರಿಶಕ್ತಿ ಸ್ವಾತಂತ್ರ್ಯದ ಹೋರಾಟ ಮಾಡಿದವರಿಗೆ ನಮನ, ಸ್ವಾತಂತ್ರ್ಯದ ನಂತರ ದೇಶ ನಿರ್ಮಿಸಿದವರಿಗೆ ನಮನ. ನೆಹರು, ಶಾಸ್ತ್ರಿ, ವಿನೋಬಾ ಭಾವೆ, ಅಸಂಖ್ಯ ಮಹಾಪುರುಷರು, ದೇಶ ನಿರ್ಮಿಸಿದ ಮಹಾಪುರುಷರಿಗೆ ನಮಿಸುವ ಸಮಯ


* ನಮ್ಮ ಆದಿವಾಸಿ ಸಮಾಜವನ್ನೂ ಗೌರವಿಸಬೇಕು, ಆದಿವಾಸಿ ಬಾಂಧವರಲ್ಲಿ ದೇಶಭಕ್ತಿ ಸಮ್ಮಿಲಿತವಾಗಿದೆ. ಹಲವು ಮಹಾಪುರುಷರು ದೇಶಕ್ಕಾಗಿ ದುಡಿದಿದ್ದಾರೆ, ಎಲ್ಲಾ ಮಹಾಪುರುಷರಿಗೆ ನೆನಪಿಸಿಕೊಳ್ಳುವ ಸಮಯ. ಇಂದು ದೇಶ ಎಲ್ಲಾ ವೀರರಿಗೆ ನೆನಪಿಸಿಕೊಂಡು ನಮಿಸಿದೆ


* ನಿನ್ನೆ ಆ.14ರಂದು ವಿಭಜನೆಯ ಸ್ಮೃತಿ ದಿನ ನೆನಪಿಸಿಕೊಂಡಿದೆ, ವಿಭಜನೆಯ ಆ ದುಃಖವನ್ನು ದೇಶ ನೆನಪಿಸಿಕೊಂಡಿದೆ. ಇಂದು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ, ದೇಶದ ಸಂಕಲ್ಪ ಪೂರ್ಣಗೊಳಿಸಿದವರಿಗೆ ನಮನ. ಸೇನಾಸಿಬ್ಬಂದಿ, ಪೊಲೀಸರು, ಜನಪ್ರತಿನಿಧಿಗಳಿಗೆ ನಮನ


* ಸಂಸದರು, ಶಾಸಕರು, ಎಲ್ಲರ ಸೇವೆ ಸ್ಮರಿಸುವ ದಿನ, ದೇಶದ ಕೋಟಿಕೋಟಿ ನಾಗರೀಕರಿಗೆ ನಮನ. ದೇಶ ಮುನ್ನಡೆಸಲು ಶ್ರಮಿಸಿದವರಿಗೆ ನಮನ
75 ವರ್ಷಗಳ ನಮ್ಮ ಯಾತ್ರೆ ಹಲವು ಏರಿಳಿತ ಕಂಡಿದೆ. ಸುಖ-ದುಖಃದ ಛಾಯೆ ಬಂದು ಹೋಗಿದೆ.


azadi-ka-amrit-mahotsav-independence-day-celebration-2022-live-update-mrq
ಪ್ರಧಾನಿ ಮೋದಿ


* ದೇಶ ಎಂದಿಗೂ ಸೋಲನ್ನು ಒಪ್ಪಿಕೊಂಡಿಲ್ಲ, ಸಂಕಲ್ಪಗಳು ಮರೆಯಾಗಲು ಬಿಟ್ಟಿಲ್ಲ. ಶತಮಾನಗಳ ಗುಲಾಮಗಿರಿ ನಂತರವೂ ಎದ್ದುನಿಂತಿದೆ. ನಕಾರಾತ್ಮಕವಾಗಿ ಯೋಚಿಸಿದವರಿಗೆ ಮಣ್ಣಿನ ಗುಣ ಗೊತ್ತಿರ್ಲಿಲ್ಲ, ನಾವು ಹಲವು ಸಂಕಟಗಳನ್ನು ಎದುರಿಸಿದ್ದೇವೆ


* ಆಹಾರ, ಯುದ್ಧ, ಭಯೋತ್ಪಾದನೆ ಸಂಕಷ್ಟ ಎದುರಿಸಿದ್ದೇವೆ, ಪ್ರಾಕೃತಿಕ ವಿಕೋಪಗಳನ್ನು ಎದುರಿಸಿದ್ದೇವೆ. ಎಂಥಾ ಸಂಕಷ್ಟದಲ್ಲೂ ಭಾರತ ಮುನ್ನಡೆದಿದೆ, ಭಾರತದ ವಿವಿಧತೆಯೇ ಭಾರತದ ಅಪ್ರತಿಮ ಶಕ್ತಿ, ಭಾರತದ ಬಳಿ ಸಾಮರ್ಥ್ಯ ಇರೋದು ಜಗತ್ತಿಗೆ ಗೊತ್ತಿರ್ಲಿಲ್ಲ


* ದೇಶದೊಳಗಿನ ಶಕ್ತಿ ಬಗ್ಗೆ ಹಲವರಿಗೆ ಗೊತ್ತೂ ಇಲ್ಲ, ನನ್ನ ದೇಶದ ಸಾಮರ್ಥ್ಯ ತ್ರಿವರ್ಣ ಧ್ವಜ ತೋರಿಸಿದೆ. ಧ್ವಜ ಹಿಡಿದು ಇಡೀ ಭಾರತ ಮುನ್ನಡೆಯುತ್ತಿದೆ. ದೀಪ ಬೆಳಗಿಸಿ ಕೊರೊನಾ ವಿರುದ್ಧ ಹೋರಾಡಿದೆ. ಕೊರೋನಾ ಕಾಲದಲ್ಲಿ ಬಡವರೂ ವ್ಯಾಕ್ಸಿನ್ ಪಡೆದಿದ್ದಾರೆ.


ಇದನ್ನೂ ಓದಿ: Independence day: 75ನೇ ಸ್ವಾತಂತ್ರ್ಯೋತ್ಸವ, ಬ್ರಿಟಿಷ್​ರಿಂದ ಬಿಡುಗಡೆಯಾದ ದಿನದ ಒಂದು ಮೆಲುಕು


* ಜಗತ್ತಿನ ಬದಲಾವಣೆ 75 ವರ್ಷದ ಭಾರತದ ಅನುಭವವಾಗಿದೆ. ಸಂಕಲ್ಪದೊಂದಿಗೆ ನಾವು ಮುನ್ನಡೆಯುತ್ತಿರೋದನ್ನ ಜಗತ್ತು ನೋಡ್ತಿದೆ. ರಾಜಕೀಯ ಸ್ಥಿರತೆ ಇದ್ದಾಗ ಹೆಚ್ಚು ಅಭಿವೃದ್ಧಿ ಸಾಧ್ಯ, ಸೂಕ್ತ ನೀತಿ ನಿಯಮಗಳಿಂದ ಅಭಿವೃದ್ಧಿ ಸುಲಲಿತ. 75 ಅಮೃತ ಸರೋವರ ನಿರ್ಮಾಣ ಕಾರ್ಯ ನಡೀತಿದೆ


* ಬಡವರ ಕಲ್ಯಾಣಕ್ಕಾಗಿ ದೇಶ ಒಟ್ಟಾಗಿ ಮುನ್ನಡೆಯುತ್ತಿದೆ. ನಮ್ಮ ಬೆನ್ನು ನಾವೇ ತಟ್ಟಿಕೊಳ್ತಿದ್ರೆ ದೇಶ ಹಿಂದಕ್ಕೆ ಹೋಗಲಿದೆ. ನಾವಿಂದು ಅಮೃತ ಕಾಲವನ್ನು ಪ್ರವೇಶಿಸುತ್ತಿದ್ದೇವೆ. ನಾನಿಂದು 130 ಕೋಟಿ ಜನರ ಕನಸುಗಳನ್ನು ನೋಡುತ್ತಿದ್ದೇನೆ. ಮುಂಬರುವ ಎಲ್ಲಾ ವರ್ಷಗಳಿಗೆ ಪಂಚಸೂತ್ರ ಕೇಂದ್ರೀಕರಿಸಬೇಕಿದೆ.


* ಸಂಕಲ್ಪ, ಸಾಮರ್ಥ್ಯಗಳನ್ನು ಕೇಂದ್ರೀಕರಿಸಬೇಕಿದೆ. 25 ವರ್ಷಗಳ ನಂತರ ಸ್ವಾತಂತ್ರ್ಯದ 100 ವರ್ಷಗಳಾಗಲಿವೆ. ಇಂದು ನಾವು ದೊಡ್ಡ ಸಂಕಲ್ಪದೊಂದಿಗೆ ಮುನ್ನಡೆಯಬೇಕಿದೆ. ಅಭಿವೃದ್ಧಿಯುತ ಭಾರತದ ಸಂಕಲ್ಪ ಮಾಡಬೇಕಿದೆ. ಗುಲಾಮಿಗಿರಿಯ ಕಟ್ಟಕಡೆಯ ಅಂಶವನ್ನೂ ನಾಶಪಡಿಸಬೇಕಿದೆ.


  • ಸ್ವಾತಂತ್ರ್ಯ ಅಮೃತ ಮಹೋತ್ಸವ ಭಾಷಣದ ವೇಳೆ ಪ್ರಧಾನಿ ಮೋದಿ, ದೇಶದ ಇನ್ನಷ್ಟು ಏಳಿಗೆಗಾಗಿ ಸಂಕಲ್ಪ ಮಾಡಿದರು. ಬಡವರ ಕಲ್ಯಾಣಕ್ಕಾಗಿ ದೇಶ ಒಟ್ಟಾಗಿ ಮುನ್ನಡೆಯುತ್ತಿದೆ. ನಮ್ಮ ಬೆನ್ನು ನಾವೇ ತಟ್ಟಿಕೊಳ್ತಿದ್ರೆ ದೇಶ ಹಿಂದಕ್ಕೆ ಹೋಗಲಿದೆ.. ಅಭಿವೃದ್ಧಿಯುತ ಭಾರತದ ಸಂಕಲ್ಪ ಮಾಡಬೇಕಿದೆ. ಗುಲಾಮಿಗಿರಿಯ ಕಟ್ಟಕಡೆಯ ಅಂಶವನ್ನೂ ನಾಶಪಡಿಸಬೇಕಿದೆ ಅಂತಾ ಕರೆ ಕೊಟ್ಟರು. ನಮ್ಮ ಪರಂಪರೆಯನ್ನು ನಾವು ಗೌರವಿಸಬೇಕಿದೆ. ಏಕತೆಯನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಿದೆ ಅಂತ ಮೋದಿ ಹೇಳಿದರು


ಕೆಂಪುಕೋಟೆಯಲ್ಲಿ ಭಾರೀ ಭದ್ರತಾ ವ್ಯವಸ್ಥೆ


ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಕೆಂಪು ಕೋಟೆಯ ಪ್ರವೇಶ ದ್ವಾರದಲ್ಲಿ ಬಹುಪದರದ ಭದ್ರತಾ ಕಾರ್ಡನ್ ಜೊತೆಗೆ ಮುಖ ಗುರುತಿಸುವಿಕೆ ವ್ಯವಸ್ಥೆಯುಳ್ಳ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪೊಲೀಸರ ಪ್ರಕಾರ, ಈ ಬಾರಿ ಸುಮಾರು 7000 ಅತಿಥಿಗಳು ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ರಾಷ್ಟ್ರೀಯ ಸ್ಮಾರಕದ ಸುತ್ತಲೂ 10,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಡ್ರೋನ್ ಮತ್ತು UAV ಗಳಿಂದ ಯಾವುದೇ ಸಂಭವನೀಯ ಬೆದರಿಕೆಯನ್ನು ಎದುರಿಸಲು ದೆಹಲಿ ಪೊಲೀಸರು 4 ಕಿಮೀ ವ್ಯಾಪ್ತಿಯ ಕೆಂಪು ಕೋಟೆ ಪ್ರದೇಶದಲ್ಲಿ DRDO ಅಭಿವೃದ್ಧಿಪಡಿಸಿದ ಕೌಂಟರ್ ಡ್ರೋನ್ ವ್ಯವಸ್ಥೆಯನ್ನು ಸ್ಥಾಪಿಸಿದ್ದಾರೆ. ಯಾವುದೇ ಹಾರುವ ವಸ್ತುವನ್ನು ಟ್ರ್ಯಾಕ್ ಮಾಡುವ ಮೂಲಕ ನಿಷ್ಕ್ರಿಯಗೊಳಿಸಿ.

Published by:Precilla Olivia Dias
First published: