ನವದೆಹಲಿ(ಜ.26): ಜನವರಿ 26 ಭಾರತದಕ್ಕಿಂದು ಗಣರಾಜ್ಯ ಸಂಭ್ರಮ. ಕರ್ತವ್ಯ ಪಥದಲ್ಲಿಂದು ಗಣರಾಜ್ಯೋತ್ಸವ (Republic Day) ಪರೇಡ್ ನಡೆಯಲಿದೆ. ಈ ಪರೇಡ್ನಲ್ಲಿ ಭಾರತೀಯ ಸೇನೆಯ ಶಕ್ತಿ ಪ್ರದರ್ಶನವಾಗಲಿದೆ. ಗಣರಾಜ್ಯೋತ್ಸವ ಪರೇಡ್ನಲ್ಲಿ ಸೇನೆ, ವಾಯುಸೇನೆ ಮತ್ತು ನೌಕಾಪಡೆಯ ಶಕ್ತಿಶಾಲಿ ಶಸ್ತ್ರಾಸ್ತ್ರಗಳಳು ಅನಾವರಣಗೊಳ್ಳಲಿವೆ. ಈ ಬಾರಿಯ ಗಣರಾಜ್ಯೋತ್ಸವ ಪರೇಡ್ (Parade) ಕೂಡಾ ಬಹಳ ವಿಶೇಷವಾಗಿದೆ. ಬೆಳಗ್ಗೆ 9 ಗಂಟೆಗೆ ಆರಂಭವಾಗುವ ಈ ಪರೇಡ್ನಲ್ಲಿ ಆತ್ಮ ನಿರ್ಭರ ಭಾರತ ಅಭಿಯಾನದಡಿ ಸ್ವದೇಶಿಯಾಗಿ ಅಭಿವೃದ್ಧಿಪಡಿಸಿದ ಶಸ್ತ್ರಾಸ್ತ್ರಗಳ ಪ್ರದರ್ಶನವೂ ಇಂದು ನಡೆಯಲಿದೆ.
ಮುಖ್ಯ ಅತಿಥಿ ಯಾರು?
ಈ ಬಾರಿ ಈಜಿಪ್ಟ್ ಅಧ್ಯಕ್ಷರು ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. 2023ರ ಗಣರಾಜ್ಯೋತ್ಸವ ದಿನದಂದು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್ ಸಿಸಿ ಅತಿಥಿಯಾಗಲಿದ್ದಾರೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಭಾರತದ ಮಿಲಿಟರಿ ಶಕ್ತಿ ಅನಾವರಣ
ಭಾರತೀಯ ಸೇನೆಯ ಹೇಳಿಕೆಯನ್ವಯ, ಆತ್ಮ ನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಗಣರಾಜ್ಯೋತ್ಸವ ಪರೇಡ್ನಲ್ಲಿ ಅರ್ಜುನ್ ಟ್ಯಾಂಕ್, ನಾಗ್ ಮಿಸೈಲ್ ಸಿಸ್ಟಮ್, ಕೆ9 ವಜ್ರ ಮತ್ತು ಆಕಾಶ್ ವೆಪನ್ ಸಿಸ್ಟಮ್ ಅನ್ನು ಪ್ರದರ್ಶಿಸಲಾಗುವುದು. ಈ ಶಕ್ತಿಶಾಲಿ ಶಸ್ತ್ರಾಸ್ತ್ರಗಳನ್ನು ಭಾರತದಲ್ಲಿಯೇ ಅಭಿವೃದ್ಧಿಪಡಿಸಲಾಗಿದೆ. DRDO ಪ್ರಕಾರ, ಅರ್ಜುನ್ ಟ್ಯಾಂಕ್ ಅತ್ಯಾಧುನಿಕ ಟ್ಯಾಂಕ್ ಆಗಿದೆ. MBT ಅರ್ಜುನ್ನ ಹನ್ನೆರಡು Mk 1 ಮಾದರಿಗಳನ್ನು ನಿರ್ಮಿಸಲಾಗಿದೆ. ಇದು 120 ಎಂಎಂ ಗನ್ ಅನ್ನು ಹೊಂದಿದ್ದು, ಟ್ಯಾಂಕ್ನಲ್ಲಿ ಬಳಸುವ ರಕ್ಷಾ ಕವಚವನ್ನು ಹೊಡೆದುರುಳಿಸುತ್ತದೆ.
ನಾಗ ಮಿಸೈಲ್ ಸಿಸ್ಟಮ್ ಪ್ರದರ್ಶನ
ಅಲ್ಲದೇ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ನಾಗ ಮಿಸೈಲ್ ಸಿಸ್ಟಮ್ ಈ ಬಾರಿ ಕರ್ತವ್ಯ ಪಥದಲ್ಲಿ ಕಾಣಿಸಿಕೊಳ್ಳಲಿದೆ. ಇದರ ವಿಶೇಷತೆಯೆಂದರೆ ಇದನ್ನು BMP 2ಕ್ಯಾರಿಯರ್ ನಲ್ಲಿ ಅಳವಡಿಸಲಾಗಿದೆ. ಇದು ಫೈರ್ ಅಂಡ್ ಫರ್ಗೆಟ್ ಟಾಪ್ ಟೆಕ್ನಿಕ್ ಅನ್ನು ಆಧರಿಸಿದೆ. 4 ಕಿಲೋಮೀಟರ್ ಪರಿದಿಯಲ್ಲಿರುವ ಟ್ಯಾಂಕ್ಗಳನ್ನು ಸ್ಫೋಟಿಸುವ ಸಾಮರ್ಥ್ಯ ಇದಕ್ಕಿದೆ. ಇದನ್ನು ಹಿರತುಪಡಿಸಿ ಕೆ9 ವಜ್ರವೂ ರಾರಾಜಿಸಲಿದೆ. K-9 ನ ಫೈರ್ಪವರ್ ಅತ್ಯದ್ಭುತವಾಗಿದೆ. ದಾಳಿಯ ನಂತರ ತಕ್ಷಣವೇ ತನ್ನ ಸ್ಥಳವನ್ನು ಬದಲಾಯಿಸುತ್ತದೆ. ಈ ಕಾರಣಕ್ಕಾಗಿ, ಇದು ಶತ್ರುಗಳ ಪ್ರತೀಕಾರದಿಂದ ತಪ್ಪಿಸಿಕೊಳ್ಳುತ್ತದೆ. ಕೆ-9 ವಜ್ರವು 40 ಮೀಟರ್ ದೂರದಲ್ಲಿದಲ್ಲಿರುವ ಶತ್ರುಗಳನ್ನು ನಾಶಮಾಡುವ ಶಕ್ತಿಯನ್ನು ಹೊಂದಿದೆ.
ಈ ಪರೇಡ್ನಲ್ಲಿ ಆಕಾಶ್ ಕ್ಷಿಪಣಿ ವ್ಯವಸ್ಥೆಯೂ ಕಾಣಿಸಿಕೊಳ್ಳಲಿದೆ. ಇದು ಸುಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆಯಾಗಿದೆ. ಆತ್ಮನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ DRDO ಮತ್ತು ಭಾರತ್ ಡೈನಾಮಿಕ್ಸ್ ಇದನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದೆ.
ಇದನ್ನೂ ಓದಿ: ಎಸ್ ಎಂ ಕೃಷ್ಣಗೆ ಪದ್ಮ ವಿಭೂಷಣ, ಸುಧಾ ಮೂರ್ತಿ, ಬೈರಪ್ಪಗೆ ಪದ್ಮ ಭೂಷಣ ಗೌರವ
ರಾಜ್ಯದ ಸ್ತಬ್ಧಚಿತ್ರ ‘ನಾರಿ ಶಕ್ತಿ’ ಅನಾವರಣ
ಇನ್ನು ಈ ಪರೇಡ್ನಲ್ಲಿ ಎಂದಿನಂತೆ ದೇಶದ ಪರಂಪರೆ ಹಾಗೂ ಸಂಸ್ಕೃತಿ ಬಿಂಬಿಸುವ ಸ್ತಬ್ಧಚಿತ್ರ ಪ್ರದರ್ಶನವೂ ನಡೆಯಲಿದೆ. ಕರ್ನಾಟಕ ರಾಜ್ಯದ ಪರವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಸ್ತ್ರೀ ಸಬಲೀಕರಣವನ್ನು ಪ್ರತಿಬಿಂಬಿಸುವ ‘ನಾರಿ ಶಕ್ತಿʼ ಸ್ತಬ್ಧ ಚಿತ್ರಪ್ರದರ್ಶನಕ್ಕೆ ಸಿದ್ಧತೆ ನಡೆಸಿದೆ. ಈ ಮೂಲಕ ಸತತ ಹದಿನಾಲ್ಕು ವರ್ಷಗಳಿಂದ ಸ್ತಬ್ಧಚಿತ್ರದೊಂದಿಗೆ ಪಾಲ್ಗೊಂಡ ದೇಶದ ಏಕೈಕ ರಾಜ್ಯವೆಂಬ ಶ್ರೇಯಸ್ಸು ಕರ್ನಾಟಕ ಪಾಲಾಗಲಿದೆ.
14 ವರ್ಷಗಳಿಂದ ಪಾಲ್ಗೊಂಡ ಏಕೈಕ ರಾಜ್ಯ ಕರ್ನಾಟಕ
ಇಲಾಖೆಯು ಕಳೆದ 14 ವರ್ಷಗಳಿಂದ ನಿರಂತರವಾಗಿ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಪಾಲ್ಗೊಳ್ಳುತ್ತಿದ್ದು, ಸ್ತಬ್ಧಚಿತ್ರದ ವಿಷಯದ ಆಯ್ಕೆ, ವಿನ್ಯಾಸ, ಕೇಂದ್ರದಲ್ಲಿ ಅದರ ಅನುಮೋದನೆ, ನಿರ್ಮಾಣ ಹೀಗೆ ಎಲ್ಲಾ ಹಂತಗಳಲ್ಲೂ ವಾರ್ತಾ ಇಲಾಖೆಯೇ ಸಕ್ರಿಯವಾಗಿ ಪಾಲ್ಗೊಳ್ಳುತ್ತದೆ. ಅಲ್ಲದೇ, ಇದು ಕನ್ನಡಿಗರೆಲ್ಲರೂ ಹೆಮ್ಮೆ ಪಡುವ ಸಂಗತಿ ಎಂದು ಇಲಾಖೆಯ ಆಯುಕ್ತ ಡಾ. ಪಿ.ಎಸ್. ಹರ್ಷ ಅವರು ಸಂತಸ ಹಂಚಿಕೊಂಡಿದ್ದಾರೆ.
ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕರ್ನಾಟಕ ರಾಜ್ಯದ ಪರವಾಗಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸ್ತ್ರೀ ಸಬಲೀಕರಣವನ್ನು ಪ್ರತಿಬಿಂಬಿಸುವ ‘ನಾರಿ ಶಕ್ತಿʼ ಸ್ತಬ್ಧಚಿತ್ರವು ಸಂಪೂರ್ಣವಾಗಿ ಸಿದ್ಧಗೊಂಡಿದೆ. ಸತತವಾಗಿ ಹದಿನಾಲ್ಕು ವರ್ಷಗಳಿಂದ ಸ್ತಬ್ಧಚಿತ್ರದೊಂದಿಗೆ ಪಾಲ್ಗೊಂಡ ದೇಶದ ಏಕೈಕ ರಾಜ್ಯವೆಂಬ ಶ್ರೇಯವನ್ನು ಕರ್ನಾಟಕ ತನ್ನದಾಗಿಸಿಕೊಳ್ಳಲಿದೆ.ವಾರ್ತಾ ಇಲಾಖೆಯು ದೆಹಲಿಯ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ರಾಜ್ಯದ ಪರವಾಗಿ ಸ್ತಬ್ಧಚಿತ್ರದೊಂದಿಗೆ ಪ್ರತಿ ಬಾರಿಯೂ ಪಾಲ್ಗೊಳ್ಳುತ್ತದೆ.
ಸ್ತಬ್ಧಚಿತ್ರದ ವಿಷಯದ ಆಯ್ಕೆ, ವಿನ್ಯಾಸ, ಕೇಂದ್ರದಲ್ಲಿ ಅದರ ಅನುಮೋದನೆ, ನಿರ್ಮಾಣ, ಪಾಲ್ಗೊಳ್ಳುವಿಕೆ ಹೀಗೆ ಎಲ್ಲಾ ಹಂತಗಳಲ್ಲೂ ವಾರ್ತಾ ಇಲಾಖೆಯೇ ಸಕ್ರಿಯವಾಗಿ ಪಾಲ್ಗೊಳ್ಳುತ್ತದೆ. ಅಲ್ಲದೆ, ಇಲಾಖೆಯು ಕಳೆದ 14 ವರ್ಷಗಳಿಂದ ನಿರಂತರವಾಗಿ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಪಾಲ್ಗೊಳ್ಳುತ್ತಿದೆ. ಇದು ಕನ್ನಡಿಗರೆಲ್ಲರೂ ಹೆಮ್ಮೆ ಪಡುವ ಸಂಗತಿ ಎಂದು ಇಲಾಖೆಯ ಆಯುಕ್ತ ಡಾ. ಪಿ.ಎಸ್. ಹರ್ಷ ಅವರು ಸಂತಸ ಹಂಚಿಕೊಂಡಿದ್ದಾರೆ.
ಐದು ವಿಷಯಗಳಲ್ಲಿ ನಾರಿಶಕ್ತಿಗೆ ಅನುಮೋದನೆ
2023ರ ಗಣರಾಜ್ಯೋತ್ಸವದ ಸ್ತಬ್ಧಚಿತ್ರಕ್ಕಾಗಿ ಇಲಾಖೆಯು ಕರ್ನಾಟಕದ ಮಹಿಳೆಯರ ಶೌರ್ಯ, ರೇಷ್ಮೆ ಕರ್ನಾಟಕದ ಹೆಮ್ಮೆ ಕರ್ನಾಟಕದ ಪುಷ್ಪೋದ್ಯಮ ಕರ್ನಾಟಕ : ಸಿರಿಧಾನ್ಯದ ನಾಯಕ, ನಾರಿ ಶಕ್ತಿ ಈ ಐದು ವಿಷಯಗಳನ್ನು ಆಯ್ಕೆ ಮಾಡಿ ಕಳುಹಿಸಿತ್ತು. ಇದರಲ್ಲಿ ಸ್ತ್ರೀ ಸಬಲೀಕರಣವನ್ನು ಬಿಂಬಿಸುವ ʼನಾರಿ ಶಕ್ತಿʼ ವಿಷಯ ಪರಿಣತರ ತಂಡ ಅಂತಿಮಗೊಳಿಸಿತ್ತು. ಅದಕ್ಕನುಗಣವಾಗಿ ಈ ಬಾರಿಯ ಸ್ತಬ್ಧಚಿತ್ರದಲ್ಲಿ ಕರ್ನಾಟಕಕ್ಕೆ ಕೀರ್ತಿ ತಂದ ಮೂವರು ಮಹಿಳಾ ಸಾಧಕಿಯರ ಸಾಧನೆಯನ್ನು ಪ್ರದರ್ಶನಗೊಳ್ಳಲಿದೆ.
ಹೌದು ಈ ನಾರಿಶಕ್ತಿ ಸ್ತಬ್ಧಚಿತ್ರದ ಮೂಲಕ ಸೂಲಗಿತ್ತಿ ನರಸಮ್ಮ, ವೃಕ್ಷ ಮಾತೆ ತುಳಸಿ ಗೌಡ ಹಾಲಕ್ಕಿ ಮತ್ತು ಸಾಲುಮರದ ತಿಮ್ಮಕ್ಕ ಸಾಧನೆಗಳನ್ನು ಪ್ರಸ್ತುತಪಡಿಸಲಾಗಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಕಲಾನಿರ್ದೇಶಕ ಶಶಿಧರ ಅಡಪ ವಿನ್ಯಾಸ ಮಾಡಿಕೊಟ್ಟ ಮಾದರಿಗೆ ಆಯ್ಕೆ ಸಮಿತಿ ಮೊದಲ ಹಂತದಲ್ಲೇ ಅನುಮೋದನೆ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ