PM Narendra Modi Birthday: ಪ್ರಧಾನಿ ಮೋದಿ ಅಧಿಕಾರವಾಧಿಯಲ್ಲಿ ಆದ ದಿಟ್ಟ ನಿರ್ಧಾರಗಳಿವು

73 ನೇ ವರ್ಷಕ್ಕೆ ಕಾಲಿಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಹುಟ್ಟುಹಬ್ಬದ ದಿನ ಕೂಡ ಏನಾದರೂ ವಿಶೇಷವಾದ ಮಹತ್ವವಾದ ಕೆಲಸಗಳನ್ನು ಮಾಡುವ ಮೂಲಕ ವಿನೂತನವಾಗಿ ಜನ್ಮದಿನವನ್ನು ಆಚರಿಸಿಕೊಳ್ಳುತ್ತಾರೆ. 2014 ರಿಂದ ಪ್ರತೀ ವರ್ಷದಂತೆ ಈ ವರ್ಷ ಕೂಡ ನರೇಂದ್ರ ಮೋದಿ ಹಾಗೂ ಬಿಜೆಪಿ ಪಕ್ಷವು ಅವರ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ಸೇವೆ ಹಾಗೂ ಅಭಿವೃದ್ಧಿ ಯೋಜನೆಗಳನ್ನು ಆರಂಭಿಸಲು ಬಳಸಿಕೊಂಡಿವೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ

 • Share this:
  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ (Prime Minister Narendra Modi) ಇಂದು ಸೆಪ್ಟೆಂಬರ್ 17ರಂದು ಹುಟ್ಟುಹಬ್ಬದ ಸಂಭ್ರಮ. 72 ಸಂವತ್ಸರಗಳನ್ನು ಪೂರೈಸಿ 73 ನೇ ವರ್ಷಕ್ಕೆ ಕಾಲಿಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಹುಟ್ಟುಹಬ್ಬದ (Birthday) ದಿನ ಕೂಡ ಏನಾದರೂ ವಿಶೇಷವಾದ ಮಹತ್ವವಾದ ಕೆಲಸಗಳನ್ನು ಮಾಡುವ ಮೂಲಕ ವಿನೂತನವಾಗಿ ಜನ್ಮದಿನವನ್ನು ಆಚರಿಸಿಕೊಳ್ಳುತ್ತಾರೆ. 2014 ರಿಂದ ಪ್ರತೀ ವರ್ಷದಂತೆ ಈ ವರ್ಷ ಕೂಡ ನರೇಂದ್ರ ಮೋದಿ ಹಾಗೂ ಬಿಜೆಪಿ (BJP) ಪಕ್ಷವು ಅವರ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ಸೇವೆ ಹಾಗೂ ಅಭಿವೃದ್ಧಿ (Development) ಯೋಜನೆಗಳನ್ನು ಆರಂಭಿಸಲು ಬಳಸಿಕೊಂಡಿವೆ.

  ಮೋದಿಯವರ ಹುಟ್ಟುಹಬ್ಬದಂದು ನಡೆಯಲಿರುವ ಕಾರ್ಯಕ್ರಮಗಳು 
  ದೇಶದ ವನ್ಯಜೀವಿ ಸಂಪತ್ತಿಗೆ ಉತ್ತೇಜನ ನೀಡುವ ಸಲುವಾಗಿ ನಮೀಬಿಯಾದಿಂದ ತಂದ ಚಿರತೆಗಳನ್ನು ಇಂದು ಮೋದಿಯವರು ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಲಿದ್ದಾರೆ.

  ಮಹಿಳಾ ಸ್ವ ಸಹಾಯ ಗುಂಪುಗಳೊಂದಿಗೆ ಅಭಿವೃದ್ಧಿಯ ಕುರಿತು ಸಂವಾದಗಳನ್ನು ನಡೆಸಲಿದ್ದಾರೆ. ಮಧ್ಯಪ್ರದೇಶಕ್ಕೆ ಪ್ರಯಾಣಿಸುವ ಸಂದರ್ಭದಲ್ಲಿ ಬಿಜೆಪಿ ಪಕ್ಷವು ರಕ್ತದಾನ, ಬಡವರಿಗೆ ಅಂಕವಿಕಲರಿಗೆ ಸಹಾಯ ಮಾಡುವುದು, ಸ್ವಚ್ಛತಾ ಕಾರ್ಯಕ್ರಮ ಹೀಗೆ ಹದಿನೈದು ದಿನಗಳ ರಾಷ್ಟ್ರವ್ಯಾಪಿ ಸಾರ್ವಜನಿಕ ಉಪಕ್ರಮಗಳನ್ನು ಆಯೋಜಿಸುತ್ತಿದೆ.

  ಹೆಚ್ಚಾಗಿ ಬಿಡುವಿಲ್ಲದ ವೇಳಾಪಟ್ಟಿಗೆ ಮಹತ್ವ ನೀಡುವ ಮೋದಿಯವರು ತಮ್ಮ ಎಂಟು ವರ್ಷಗಳ ಅಧಿಕಾರಾವಧಿಯಲ್ಲಿ ಸ್ಮರಣೀಯ ಕ್ಷಣಗಳನ್ನು ಹೊಂದಿದ್ದಾರೆ. ಅದೇನು ಎಂಬುದನ್ನು ನೋಡೋಣ

  ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್
  ಸೆಪ್ಟೆಂಬರ್ 28, 2014 ರಂದು ನ್ಯೂಯಾರ್ಕ್ ನಗರದಲ್ಲಿ ಸುಮಾರು 20,000 ಭಾರತೀಯ-ಅಮೆರಿಕನ್ನರು ಮತ್ತು ಯುಎಸ್ ಗಣ್ಯರನ್ನು ಉದ್ದೇಶಿಸಿ ಮೋದಿಯವರು ವಿಜಯೋತ್ಸವ ಭಾಷಣ ಮಾಡಿದಾಗ ದೀಪಗಳು, ಲೇಸರ್‌ಗಳು ಹಾಗೂ ವಿಜಯೋತ್ಸವದ ಘೋಷಣೆಗಳಿಗೆ ಸಾಕ್ಷಿಯಾಯಿತು.

  ಇದನ್ನೂ ಓದಿ: PM Modi Birthday: ಮೋದಿ ಅಭಿಮಾನಿಗಳು ವಿಶ್ವದ ಈ ದಿಗ್ಗಜ ನಾಯಕರು: ಈ ಐವರು ನಾಯಕರ ಜೊತೆ ಪ್ರಧಾನಿಗೆ ಆಪ್ತ ಸ್ನೇಹ!

  ದೊಡ್ಡ ಕ್ರೀಡಾಕೂಟಗಳು ಹಾಗೂ ರಾಕ್ ಮ್ಯೂಸಿಕ್‌ನ ದೊಡ್ಡ ಸಂಗೀತ ಕೂಟಗಳನ್ನು ಏರ್ಪಡಿಸುವ ಸ್ಥಳವಾದ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಮೋದಿಯವರು ಭಾಷಣ ಮಾಡುತ್ತಿರುವಾಗ, ಭಾರತದ ಅಭಿವೃದ್ಧಿಗೆ ಕೈಜೋಡಿಸಲು ತಮ್ಮೊಂದಿಗೆ ಆಂದೋಲನದಲ್ಲಿ ಭಾಗಿಯಾಗಲು ಅವರು ನೆರೆದಿದ್ದವರನ್ನು ವಿನಂತಿಸಿದರು.

  ಇಂದು ವಿಶ್ವವು ಭಾರತವನ್ನು ನೋಡುತ್ತಿರುವ ದೃಷ್ಟಿಕೋನವನ್ನು ಬದಲಾಯಿಸುವಲ್ಲಿ ಭಾರತೀಯರು-ಅಮೆರಿಕನ್ ಸಮುದಾಯದ ಕೊಡುಗೆ ಹಿರಿದಾದುದು ಎಂದು ಮೋದಿಯವರು ಕೊಂಡಾಡಿದರು. ಹಾವನ್ನು ಚಾಕಚಕ್ಯತೆಯಿಂದ ಪಳಗಿಸುವವರಿಂದ ಹಿಡಿದು ಎಲೆಕ್ಟ್ರಾನಿಕ್ ಮೌಸ್‌ನಲ್ಲಿ ಕೈಯಾಡಿಸುವ ನಿಪುಣಾವಂತ ಜನರಿಂದ ಭಾರತದ ಕೀರ್ತಿ ಹಬ್ಬಿದೆ ಎಂದು ಮೋದಿ ಕೊಂಡಾಡಿದರು.

  3.2 ಮಿಲಿಯನ್ ಪ್ರಬಲ ಭಾರತೀಯ ಡಯೊಸ್ಪಾರ ಸದಸ್ಯರು ಈ ಸಮಯದಲ್ಲಿ ಮೋದಿ ಮೋದಿ ಎಂದು ಹರ್ಷೋದ್ಗಾರ ಮಾಡಿದರು. ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಮೋದಿಯವರು ಮಾಡಿದ 70 ನಿಮಿಷದ ಭಾಷಣದಲ್ಲಿ ವಿದೇಶಿ ನಾಯಕರಿಗೆ ಅಮೆರಿಕಾದಲ್ಲಿ ಸೇರುವ ಅತಿದೊಡ್ಡ ಜನಸಂದಣಿಯನ್ನೇ ಮೋದಿಯವರು ನಿರ್ಮಿಸಿದ್ದರು. ಭಾರತದ 1.2 ಶತಕೋಟಿ ಜನರೊಂದಿಗೆ ವ್ಯಾಪಾರ ಮತ್ತು ರಾಜಕೀಯ ಸಂಬಂಧಗಳನ್ನು ವಿಸ್ತರಿಸುವ ಆಶಯದೊಂದಿಗೆ US ಕಾಂಗ್ರೆಸ್‌ನ 30 ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದರು.

  ಡಿಮೋನಿಟೈಸೇಶನ್ (ನೋಟು ಅಮಾನ್ಯೀಕರಣ)
  ನವೆಂಬರ್ 8, 2016 ರ ರಾತ್ರಿ ಮೋದಿಯವರು ರೂ 500 ಹಾಗೂ ರೂ 1000 ದ ಚಲಾವಣೆಯ ನೋಟುಗಳು ಇನ್ನುಮುಂದೆ ಕಾನೂನು ಬದ್ಧ ಟೆಂಡರ್ ಆಗುವುದಿಲ್ಲ ಹಾಗೂ ಚಲಾವಣೆಯಲ್ಲಿರುವುದಿಲ್ಲ ಎಂದು ಘೋಷಿಸಿದಾಗ ಸಂಪೂರ್ಣ ರಾಷ್ಟ್ರವೇ ಬೆರಗಾಯಿತು.

  ರಾಷ್ಟ್ರವನ್ನುದ್ದೇಶಿಸಿ ಮೋದಿಯವರು ದೂರದರ್ಶನದ ಭಾಷಣದಲ್ಲಿ ನಿಷೇಧಿತ ನೋಟುಗಳನ್ನು ಬ್ಯಾಂಕ್ ಖಾತೆಗಳಲ್ಲಿ ಜಮೆಮಾಡಬಹುದು ಆದರೆ ಜಮೆಯು ರೂ 2,50,000 ಕ್ಕಿಂತ ಹೆಚ್ಚಾದಲ್ಲಿ ಅದನ್ನು ತನಿಖೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

  ಇದನ್ನೂ ಓದಿ: PM Modi Birthday: ಹುಟ್ಟುಹಬ್ಬದ ಸಂಭ್ರಮದಲ್ಲಿ ನರೇಂದ್ರ ಮೋದಿ; ನಮ್ಮ ಪ್ರಧಾನಿ ಈ ಮಟ್ಟಕ್ಕೆ ಬೆಳೆದದ್ದೇ ರೋಚಕ!

  ಸರಕಾರವು ಅಂತಿಮವಾಗಿ ರೂ 500 ಹಾಗೂ ರೂ 2,000 ದ ನೋಟುಗಳನ್ನು ಬಿಡುಗಡೆ ಮಾಡಿತು.

  ಆರ್ಟಿಕಲ್ 370
  ಸುಮಾರು ಏಳು ದಶಕಗಳ ಬಹು-ವ್ಯಾಪಕ ರಾಜಕೀಯ ನಡೆಯಲ್ಲಿ ನರೇಂದ್ರ ಮೋದಿ ಸರಕಾರವು ಆಗಸ್ಟ್ 5, 2019 ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳಲು ಮುಂದಾಯಿತು. ಆರ್ಟಿಕಲ್ 370 ಮತ್ತು ಆರ್ಟಿಕಲ್ 35-ಎ ನಿಬಂಧನೆಗಳನ್ನು ರದ್ದುಗೊಳಿಸಲಾಯಿತು ಮತ್ತು ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂದು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಯಿತು.

  ಸಂವಿಧಾನದಲ್ಲಿ ತಾತ್ಕಾಲಿಕ ನಿಬಂಧನೆಯಾದ ಆರ್ಟಿಕಲ್ 370, ಹಿಂದಿನ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿತು, ಆದರೆ ಆರ್ಟಿಕಲ್ 35-ಎ ಪ್ರಕಾರ ಜಮ್ಮು ಮತ್ತು ಕಾಶ್ಮೀರದ ಖಾಯಂ ನಿವಾಸಿಯಾಗಿರದ ಯಾವುದೇ ವ್ಯಕ್ತಿಯು ಜಮ್ಮು ಮತ್ತು ಕಾಶ್ಮೀರದಲ್ಲಿ ಆಸ್ತಿ ಹೊಂದಲು, ಜಮ್ಮು ಮತ್ತು ಕಾಶ್ಮೀರ ಸರ್ಕಾರದಲ್ಲಿ ಉದ್ಯೋಗವನ್ನು ಪಡೆಯಲು, ಜಮ್ಮು ಮತ್ತು ಕಾಶ್ಮೀರ ಸರಕಾರವು ನಡೆಸುವ ಯಾವುದೇ ವೃತ್ತಿಪರ ಕಾಲೇಜಿಗೆ ಸೇರಲು ಅಥವಾ ಸರಕಾರದ ನಿಧಿಯಿಂದ ಯಾವುದೇ ರೀತಿಯ ಸರಕಾರಿ ಸಹಾಯವನ್ನು ಪಡೆಯುವಂತಿಲ್ಲ.

  ಬೇರ್ ಗ್ರಿಲ್ಸ್ ಜೊತೆ ಮ್ಯಾನ್ VS ವೈಲ್ಡ್
  ಆಗಸ್ಟ್ 2019 ರಲ್ಲಿ ಮೋದಿಯವರು ಬೇರ್ ಗ್ರಿಲ್ಸ್ ಜೊತೆಗೆ ಸಂರಕ್ಷಣೆ ಹಾಗೂ ಸ್ವಚ್ಛತೆಯನ್ನು ಉತ್ತೇಜಿಸುವ ಅಂಶಗಳಿಗಾಗಿ ಕೈಜೋಡಿಸಿದರು. ಅರಣ್ಯದಲ್ಲಿ ಸಿಲುಕಿಕೊಂಡಾಗ ಬದುಕುಳಿಯುವ ನೈಪುಣ್ಯಗಳನ್ನು ತಿಳಿಸಿಕೊಡುವ ಬೇರ್ ಗ್ರಿಲ್ಸ್ ಅವರೊಂದಿಗೆ ಮೋದಿಯವರು ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಅರಣ್ಯದಲ್ಲಿ ಮಳೆ ಹಾಗೂ ಚಳಿಯನ್ನು ಧೈರ್ಯದಿಂದ ಎದುರಿಸಿದರು.

  ಮೋದಿಯವರು ಅತ್ಯುತ್ತಮ ಕ್ರೀಡಾ ಸ್ಫೂರ್ತಿಯುಳ್ಳವರು ಎಂದೇ ಬೇರ್ ಗ್ರಿಲ್ಸ್ ಮೋದಿಯವರನ್ನು ಕೊಂಡಾಡಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ ತಮ್ಮ ಕಾರ್ಯಕ್ರಮದಲ್ಲಿ ಮೊದಲು ಸೆಲೆಬ್ರಿಟಿ ಅತಿಥಿಗಳನ್ನು ಪರಿಚಯಿಸುವ ಗ್ರಿಲ್ಸ್, ಮೋದಿಯವರಿಗೆ ಅವರ ಬಾಲ್ಯ ಕಾಲದ ಕನಸುಗಳು, ಜೀವನದ ಕುರಿತು ಭಯ ಹಾಗೂ ರಾಜಕೀಯ ರ‍್ಯಾಲಿಯನ್ನು ಮೊದಲ ಬಾರಿಗೆ ನಡೆಸುವಾಗ ಏನಾದರೂ ಭಯಗೊಂಡಿದ್ದಿರಾ ಹೀಗೆ ಪ್ರಶ್ನೆಗಳನ್ನು ಕೇಳಿದ್ದರು.

  ಭಾವನಾತ್ಮಕ ಅಪ್ಪುಗೆ
  ಸಪ್ಟೆಂಬರ್ 7, 2019 ರಂದು ಇಸ್ರೋದ ಚಂದ್ರಯಾನ – 2 ಯೋಜನೆಯು ಚಂದ್ರನ ಮೈಲ್ಮೈಯಲ್ಲಿ ತನ್ನ ಗುರುತನ್ನು ಮೂಡಿಸಲು ವಿಫಲವಾದಾಗ ಭಾರತಕ್ಕೆ ಬರಸಿಡಿಲೇ ಬಡಿದಂತಾಯಿತು. ಭೂಮಿಯ ಸ್ಟೇಶನ್‌ಗಳೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿದ್ದರಿಂದ ಬಾಹ್ಯಾಕಾಶ ನೌಕೆ ವಿಕ್ರಮ್‌ನ ಲ್ಯಾಂಡಿಂಗ್ ಇಸ್ರೋದ ಯೋಜನೆಯ ಪ್ರಕಾರ ಸಂಭವಿಸಲಿಲ್ಲ.

  ಇಸ್ರೋದ ಮುಖ್ಯಸ್ಥರಾದ ಕೆ ಶಿವನ್ ಅವರನ್ನು ಸಾಂತ್ವಾನಗೊಳಿಸಲು ಭಾವನಾತ್ಮಕವಾಗಿ ಅಪ್ಪಿಕೊಂಡಿರುವ ನರೇಂದ್ರ ಮೋದಿಯವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು ಹಾಗೂ ನೆಟ್ಟಿಗರು ಇದನ್ನು ಶತಕೋಟಿ ಭಾರತೀಯರ ಸಾಂತ್ವಾನದ ಅಪ್ಪುಗೆ ಎಂದು ಬಣ್ಣಿಸಿದರು. ಆ ದಿನ ಇಸ್ರೋ ಕೇಂದ್ರದಲ್ಲಿ ಭಾಷಣ ಮಾಡಿದ ಮೋದಿಯವರು, ಚಂದ್ರಯಾನದಲ್ಲಿ ಉಂಟಾಗುವ ಅಡೆತಡೆಗಳಿಂದ ವಿಜ್ಞಾನಿಗಳು ನಿರಾಶರಾಗಬಾರದು ಎಂದು ವಿನಂತಿಸಿಕೊಂಡರು ಹಾಗೂ ಭಾರತೀಯ ವಿಜ್ಞಾನಿಗಳು ಮಾಡುವ ಸಾಧನೆಗಳು ಹೊಸ ಉದಯಕ್ಕೆ ನಾಂದಿಯಾಗುತ್ತದೆ ಎಂದು ಭರವಸೆ ನೀಡಿದರು.

  ಇದನ್ನೂ ಓದಿ:  PM Narendra Modi Birthday: ಮೋದಿ ಹುಟ್ಟುಹಬ್ಬಕ್ಕೆ ದೇಶಕ್ಕೆ ಚಿರತೆಗಳ ಉಡುಗೊರೆ!

  ಮೋದಿಯವರ ಈ ಭಾವನಾತ್ಮಕ ಸಾಂತ್ವಾನದ ಅಪ್ಪುಗೆ ಪ್ರಪಂಚದಾದ್ಯಂತ ಮೆಚ್ಚುಗೆಗೆ ಕಾರಣವಾಯಿತು. ಇಸ್ರೋ ತಂಡದ ಅದರಲ್ಲೂ ಮುಖ್ಯಸ್ಥರಾದ ಶಿವನ್ ಅವರನ್ನು ನೈತಿಕವಾಗಿ ಬೆಂಬಲಿಸಿದ್ದಕ್ಕೆ ನರೇಂದ್ರ ಮೋದಿಯವರನ್ನು ಪ್ರತಿಯೊಬ್ಬರೂ ಶ್ಲಾಘಿಸಿದರು ಹಾಗೂ ಈ ವಿಡಿಯೋ ವ್ಯಾಪಕವಾಗಿ ಪ್ರಚಾರಗೊಂಡಿತು.

  ಮೋದಿಯವರೇ ಹೇಗಿದ್ದೀರಾ
  ಸೆಪ್ಟೆಂಬರ್ 22, 2019 ರಂದು, ಅಮೆರಿಕಾದ ನೆಲದಲ್ಲಿ ವಿದೇಶಿ ನಾಯಕನ ಉಪಸ್ಥಿತಿಯನ್ನು ಖಾತ್ರಿಪಡಿಸಲು 50,000 ಕ್ಕಿಂತ ಹೆಚ್ಚಿನ ಜನರು ಭಾಗವಹಿಸಿದ ರ‍್ಯಾಲಿಯಲ್ಲಿ ಆಗಿನ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ಮೋದಿಯವರು ಒಂದೇ ವೇದಿಕೆಯಲ್ಲಿ ಉಪಸ್ಥಿತರಿದ್ದರು ಹಾಗೂ ಇಬ್ಬರೂ ಮೋದಿಯವರೇ ಹೇಗಿದ್ದೀರಾ ಎಂದು ಪರಸ್ಪರ ಕುಶಲೋಪಚಾರ ನಡೆಸಿದರು.

  ಅಲಂಕೃತ ಸೀರೆಗಳಿಂದ ಹಿಡಿದು ಸರಳವಾದ ಧೋತಿಗಳನ್ನು ಧರಿಸಿ ಹರ್ಷೋದ್ಗಾರದಿಂದ ಭಾಗವಹಿಸಿದ ಬೆಂಬಲಿಗರು ಭಾರತೀಯ ಧ್ವಜಗಳನ್ನು ಬೀಸುತ್ತಾ ಮೋದಿ ಮೋದಿ ಎಂದು ಘೋಷಣೆಗಳನ್ನು ಕೂಗಿದರು. ಹೂಸ್ಟನ್ ಟೆಕ್ಸಾನ್ಸ್ ಫುಟ್‌ಬಾಲ್ ತಂಡದ ತವರಾದ NRG ಸ್ಟೇಡಿಯಮ್‌ನಲ್ಲಿ ಮೋದಿಯವರು ತಮ್ಮ ಭಾಷಣವನ್ನು ಆರಂಭಿಸುವ ಮೊದಲು ಹೇಗಿದ್ದೀರಾ ನನ್ನ ಗೆಳೆಯರೇ ಎಂದು ನೆರೆದವರನ್ನು ಕೇಳಿದರು.

  ಹಿಂದಿಯಲ್ಲಿ ತಮ್ಮ ಹೇಳಿಕೆ ನೀಡಿದ ಮೋದಿಯವರು, ಹೊಸ ಎತ್ತರಕ್ಕೆ ದೇಶವನ್ನು ಕೊಂಡೊಯ್ಯುವವರೆಗೆ ಶ್ರಮಿಸುತ್ತೇನೆ ಹಾಗೂ ಭಾರತದಲ್ಲಿ ಇಂದು ಝೇಂಕರಿಸುತ್ತಿರುವ ಪದ ಅಭಿವೃದ್ಧಿಯದು ಎಂದು ತಿಳಿಸಿದರು.

  ನಮಸ್ತೆ ಟ್ರಂಪ್
  ಹೂಸ್ಟನ್‌ನಲ್ಲಿ ನಡೆದ ‘ಹೌಡಿ ಮೋದಿ!’ (ಮೋದಿ ಹೇಗಿದ್ದೀರಾ) ಕಾರ್ಯಕ್ರಮದ ತಿಂಗಳುಗಳ ನಂತರ, ಫೆಬ್ರವರಿ 24, 2020 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಸ್ವಂತ ರಾಜಕೀಯ ತಾಯ್ನಾಡಾದ ಅಹಮದಾಬಾದ್‌ನಲ್ಲಿರುವ ಬೃಹತ್ ನವೀನ ಮೊಟೆರಾ ಕ್ರೀಡಾಂಗಣದಲ್ಲಿ ಆಗಿನ ಯುಎಸ್ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರನ್ನು ದೇಶವಾಸಿಗಳು ಭರ್ಜರಿಯಾಗಿ ಸ್ವಾಗತಿಸಿದರು.

  ನಮಸ್ತೆ ಟ್ರಂಪ್ ಎಂದು ಕರೆಯಲಾದ ಈ ಕಾರ್ಯಕ್ರಮದಲ್ಲಿ 100,000 ಭಾರತೀಯರು ಭಾಗವಹಿಸಿ ಹುರಿದುಂಬಿಸಿದರು. ನಾವು ಪರಸ್ಪರ ಹಂಚಿಕೊಳ್ಳಲು ತುಂಬಾ ವಿಷಯಗಳಿವೆ ಅಂತೆಯೇ ಮೌಲ್ಯಗಳು ಹಾಗೂ ಆದರ್ಶಗಳನ್ನು ಹಂಚಿಕೊಂಡಿದ್ದೇವೆ, ಅವಕಾಶಗಳು ಹಾಗೂ ಸವಾಲುಗಳನ್ನು ಪರಸ್ಪರ ಹಂಚಿಕೊಂಡಿರುವೆವು ಎಂದು ಮೋದಿಯವರು ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದರು.

  ಲಸಿಕೀಕರಣ ಮೈಲಿಗಲ್ಲು
  ಪೋಲಿಯೊವನ್ನು ನಿರ್ಮೂಲನೆ ಮಾಡಿದ ನಂತರ, ಅಕ್ಟೋಬರ್ 21, 2021 ರಂದು ದೇಶವು ಕೋವಿಡ್ 19 ರ ವಿರುದ್ಧ ಮೊದಲ ಬಾರಿಗೆ ನಡೆಸಿದ ಹೋರಾಟವು ಆರೋಗ್ಯ ರಕ್ಷಣೆಯ ಪ್ರಯಾಣದಲ್ಲಿ ಒಂದು ಮೈಲಿಗಲ್ಲು ಎಂದೆನಿಸಿದೆ. ಈ ದಿನ ಭಾರತವು ಕೋವಿಡ್ -19 ವಿರುದ್ಧದ ತನ್ನ ಲಸಿಕೆ ಕಾರ್ಯಕ್ರಮದಲ್ಲಿ 100 ಕೋಟಿಯ ಹೆಗ್ಗುರುತನ್ನು ಮಾಡಿದೆ.

  ಇದನ್ನೂ ಓದಿ: Arun Yogiraj: ಇಂಡಿಯಾ ಗೇಟ್‌ ಬಳಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ, ಇದರ ಹಿಂದಿದೆ ಕನ್ನಡಿಗನ ಕೈಚಳಕ

  ವ್ಯಾಕ್ಸಿನೇಶನ್ ಕಾರ್ಯಕ್ರಮದಲ್ಲಿ ದೇಶವು ಸಾಧಿಸಿದ ಮೈಲಿಗಲ್ಲನ್ನು ಮೋದಿಯವರು ವಿಜ್ಞಾನ ಹಾಗೂ ಉದ್ಯಮ ರಂಗದ ಸಾಧನೆ ಎಂದು ಶ್ಲಾಘಿಸಿದರು.
  Published by:Ashwini Prabhu
  First published: