PM Modi Birthday: ನವ ಭಾರತ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಿದ ಪ್ರಧಾನಿ ಮೋದಿ; ವಿಶ್ವ ಗುರುವಾಗಿ ಭಾರತ ಹೇಗೆ ಬೆಳೆದಿದೆ?

ಇತಿಹಾಸದ ಉದಯದಿಂದಲೂ ವಿಶ್ವಕ್ಕೆ ಅಗಾಧವಾದ ಬುದ್ಧಿವಂತಿಕೆಯನ್ನು ದೇಶ ಹರಡಿದೆ. ಪರಕೀಯರ ಆಳ್ವಿಕೆಯಲ್ಲಿ ಎಂದೂ ಬಡವಾಗದ ದೇಶವು ಪ್ರತಿ ಪೀಳಿಗೆಗೆ ಶ್ರೇಷ್ಟವಾದ ಆಧ್ಯಾತ್ಮಿಕ ಬೋಧನೆಗಳು, ಗುರುಗಳು, ಯೋಗಿಗಳ ಹಾಗೂ ಋಷಿಮುನಿಗಳ ಕೊಡುಗೆಗಳನ್ನು ನೀಡಿದೆ. ಇಂದು ಇದೇ ವಿಶಾಲವಾದ ನಾಗರಿಕ ಪರಂಪರೆಯನ್ನು ನವೀಕರಿಸಲು ನವಭಾರತವು ಜನ್ಮತಾಳುತ್ತಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ

 • Share this:
  ವಿಶ್ವದ ಅತಿದೊಡ್ಡ ಪ್ರಜಾಫ್ರಭುತ್ವ (Democracy) ರಾಷ್ಟ್ರವಾಗಿರುವ ಭಾರತವು ವೈವಿಧ್ಯಮಯವಾದ ಹಾಗೂ ಸ್ಪಂದನಶೀಲ ಸಂಸ್ಕೃತಿ ಅಂತೆಯೇ ಅಗಾಧವಾದ ನಾಗರಿಕತೆಯ ಚೇತನ ಎಂದೆನಿಸಿದೆ. ಇತಿಹಾಸದ (History) ಉದಯದಿಂದಲೂ ವಿಶ್ವಕ್ಕೆ ಅಗಾಧವಾದ ಬುದ್ಧಿವಂತಿಕೆಯನ್ನು ದೇಶ ಹರಡಿದೆ. ಪರಕೀಯರ ಆಳ್ವಿಕೆಯಲ್ಲಿ ಎಂದೂ ಬಡವಾಗದ ದೇಶವು ಪ್ರತಿ ಪೀಳಿಗೆಗೆ ಶ್ರೇಷ್ಟವಾದ ಆಧ್ಯಾತ್ಮಿಕ ಬೋಧನೆಗಳು (Spiritual teaching), ಗುರುಗಳು, ಯೋಗಿಗಳ ಹಾಗೂ ಋಷಿಮುನಿಗಳ ಕೊಡುಗೆಗಳನ್ನು ನೀಡಿದೆ. ಇಂದು ಇದೇ ವಿಶಾಲವಾದ ನಾಗರಿಕ ಪರಂಪರೆಯನ್ನು ನವೀಕರಿಸಲು ನವಭಾರತವು (New India) ಜನ್ಮತಾಳುತ್ತಿದೆ.  2022 ನೇ ವರ್ಷದಲ್ಲಿ ಸ್ವಾತಂತ್ರ್ಯದ 75 ವರ್ಷಗಳ ನಂತರ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವ ಹಾಗೂ ಸಿದ್ಧಾಂತದ ಮಾರ್ಗದರ್ಶನದಲ್ಲಿ ನವ ಭಾರತ ಉದಯಿಸುತ್ತಿದೆ.  ಇದರಲ್ಲಿ ಮೋದಿಯವರ (Modi) ಪಾತ್ರವೇನು ತಿಳ್ಕೊಳ್ಳಿ

  ವಿಶ್ವಗುರು ಭಾರತ
  1947 ರ ಭಾರತದ ಸ್ವಾತಂತ್ರ್ಯವು ದೇಶಕ್ಕೆ ಒಂದು ರಾಷ್ಟ್ರವಾಗಿ ತನ್ನ ಧಾರ್ಮಿಕ ಅಂಶಗಳನ್ನು ಮತ್ತೊಮ್ಮೆ ನವೀಕರಿಸಿಕೊಳ್ಳುವ ಅವಕಾಶವನ್ನು ಒದಗಿಸಿತು. ಬಾಲಗಂಗಾಧರ ತಿಲಕ್, ಶ್ರೀ ಅರಬಿಂದೋ ಮತ್ತು ರವೀಂದ್ರನಾಥ ಠಾಗೋರ್ ಅವರಂತಹ ನಾಯಕರು ವ್ಯಕ್ತಪಡಿಸಿದ ಭಾರತದ ಸ್ವಾತಂತ್ರ್ಯ ಚಳುವಳಿಯ ಆಶಯ ಹಾಗೂ ಭರವಸೆಯಾಗಿತ್ತು. ಯೋಗ ಹಾಗೂ ವೇದಾಂತದ ಜ್ಞಾನವನ್ನು ಜಗತ್ತಿಗೆ ಸಾರುವಲ್ಲಿ ಸ್ವಾಮಿ ವಿವೇಕಾನಂದರ ಪ್ರೇರೇಪಣೆ ಮಹತ್ವವಾದುದು. ಅನೇಕ ಮಹಾನ್ ಚಿಂತಕರು ಮತ್ತು ಅತೀಂದ್ರಿಯಗಳು ಮಾನವೀಯತೆಯ ಆಧ್ಯಾತ್ಮಿಕ ನವೀಕರಣಕ್ಕೆ ಸಹಾಯ ಹಸ್ತ ಚಾಚಿದರು ಹಾಗೂ ಹೊಸ ಭಾರತದ ಉದಯಕ್ಕೆ ಕಾರಣೀಕರ್ತರೆಂದೆನಿಸಿದರು.

  ವಸಾಹತು ಶಾಹಿ ದಬ್ಬಾಳಿಕೆಯಿಂದ ನಾಗರಿಕತೆ ಪರಂಪರೆ ಹಾಗೂ ತನ್ನದೇ ಗುರುತನ್ನು ಕಳೆದುಕೊಂಡ ಭಾರತ ಸ್ವಾತಂತ್ರ್ಯ ನಂತರ ಕೂಡ ಅರ್ಥಹೀನ ನಾಯಕರ ಆಳ್ವಿಕೆಯಿಂದ ಶೋಷಣೆಗೆ ಒಳಪಟ್ಟಿತ್ತು. ಸ್ವತಂತ್ರ ಭಾರತದಲ್ಲಿನ ನೂತನ ರಾಜಕೀಯ ಅಂತೆಯೇ ಶೈಕ್ಷಣಿಕ ಶಕ್ತಿಗಳು ವಸಾಹತು ಶಾಹಿ ಹಾಗೂ ಮಾರ್ಕ್ಸ್‌ವಾದಿ ಪ್ರಭಾವಕ್ಕೆ ಒಳಪಟ್ಟಿರುವುದು ನಿಜವಾಗಿತ್ತು. ಋಷಿಮುನಿಗಳ ಅವರ ಆಧ್ಯಾತ್ಮಿಕ ಚಿಂತೆನಗಳ ಕೊಡುಗೆ ಎಂದೇ ವಿಶ್ವಕ್ಕೆ ಸಾರಿದ್ದ ಭಾರತವನ್ನು ಸ್ವಾತಂತ್ರ್ಯೋತ್ತರ ನೆಹರೂವಿಯನ್/ಕಾಂಗ್ರೆಸ್ ಗುರುತಿಸಲಿಲ್ಲ ಹಾಗೂ ಗೌರವಿಸಲಿಲ್ಲ. ಬದಲಿಗೆ ಭಾರತಕ್ಕೆ ರಾಜಮನೆತನದ ಚಿತ್ರಣವನ್ನು ನೀಡುವ ಮೂಲಕ ಭಾರತವನ್ನು ಮರುರೂಪಿಸಲು ಪ್ರಯತ್ನಿಸಿತು.

  ಮೋದಿ, ನವ ಭಾರತ ಹಾಗೂ ನಾಗರಿಕತೆಯ ಗುರುತು
  ಇಂದು 2022 ನೇ ವರ್ಷದಲ್ಲಿ ಸ್ವಾತಂತ್ರ್ಯದ 75 ವರ್ಷಗಳ ನಂತರ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವ ಹಾಗೂ ಸಿದ್ಧಾಂತದ ಮಾರ್ಗದರ್ಶನದಲ್ಲಿ ನವ ಭಾರತ ಉದಯಿಸುತ್ತಿದೆ. ಈಗಿನ ಭಾರತ ರಾಜಕೀಯ ಹಾಗೂ ಆರ್ಥಿಕ ಮಟ್ಟದಲ್ಲಿ ಸಂಯೋಜನೆಗೊಂಡ ಕ್ರಿಯಾತ್ಮಕ ಹಾಗೂ ವಿಸ್ತಾರ ದೇಶವಾಗಿದೆ. ಸಂಸ್ಕೃತಿ ಹಾಗೂ ಸನಾತನ ಭಾರತೀಯ ನಾಗರಿಕತೆಯ ಮಹತ್ವವನ್ನು ಸಾರಿದೆ.

  ಇದನ್ನೂ ಓದಿ: PM Narendra Modi Birthday: ಪ್ರಧಾನಿ ಮೋದಿ ಅಧಿಕಾರವಾಧಿಯಲ್ಲಿ ಆದ ದಿಟ್ಟ ನಿರ್ಧಾರಗಳಿವು

  ನಾಗರಿಕತೆಯನ್ನು ಸಂಕೇತಿಸುವುದು ಅಲ್ಲಿರುವ ಸ್ಮಾರಕಗಳಿಂದ. ನಮ್ಮ ದೇಶದ ನಾಗರಿಕತೆಯ ಸಂಕೇತಗಳೆಂದರೆ ದೇವಾಲಯಗಳು, ಶತಮಾನಗಳ ಹಿನ್ನಲೆ ಇರುವ ಧಾರ್ಮಿಕ ಕಟ್ಟಡಗಳು, ಸಂಪ್ರದಾಯಗಳು.

  ದೇಶಾದ್ಯಂತ ಇಂತಹ ಅನೇಕ ಸ್ಮಾರಕಗಳಿದ್ದರೂ ಹೆಚ್ಚಿನವು ನಿರ್ಲಕ್ಷ್ಯಕ್ಕೆ ಒಳಪಟ್ಟಿವೆ. ಮೋದಿಯವರು ಭಾರತದ ಪಾರಂಪರಿಕ ತಾಣಗಳಾದ ಅಯೋಧ್ಯೆ, ಕೇದಾರನಾಥ, ಕಾಶಿ ವಿಶ್ವನಾಥ ಹೀಗೆ ಅನೇಕ ಯಾತ್ರಾ ಸ್ಥಳಗಳನ್ನು ಗುರುತಿಸಿ ಮನ್ನಣೆ ನೀಡಿದ್ದಾರೆ.

  ಬ್ರಿಟಿಷ್ ವಸಾಹತಿನ ಅವನತಿ
  ಸ್ವಾತಂತ್ರ್ಯನಂತರದ ರಾಜಕೀಯ ಸ್ಮಾರಕಗಳಿಗೂ ಇದೇ ರೀತಿಯ ಮಹತ್ವವನ್ನು ನೀಡುವ ಅಗತ್ಯ ಭಾರತದ ನಾಗಕರಿಕತೆಗೆ ಅವಶ್ಯಕವಾಗಿದೆ. ಕರ್ತವ್ಯ ಪಥ ಹಾಗೂ ನವೀಕರಿಸಿದ ಸೆಂಟ್ರಲ್ ವಿಸ್ಟಾ ಕಾಂಪ್ಲೆಕ್ಸ್‌ನಿಂದ ದೆಹಲಿಯನ್ನು ಮೋದಿಯವರು ರಾಷ್ಟ್ರ ಶಕ್ತಿಯ ಕೇಂದ್ರವಾಗಿ ಪರಿವರ್ತಿಸಿದ್ದಾರೆ. ಬ್ರಿಟಿಷರ ಕಾಲದ ಹಳೆಯ ಪುರಾತನ ವಸಾಹತುಶಾಹಿ ಸ್ಮಾರಕಗಳನ್ನು ತೊಡೆದು ಹಾಕಿ ಭಾರತದ ಸ್ಮಾರಕಗಳೊಂದಿಗೆ ದೇಶದ ನಾಗರಿಕ ಪರಂಪರೆಯನ್ನು ಮೇಳೈಸಿದ್ದಾರೆ.

  ಈ ಹಿಂದೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಮಹಾನ್ ರಾಜಕೀಯ ಮಾರ್ಗದರ್ಶಕರಾದ ಸರ್ದಾರ್ ವಲ್ಲಭಭಾಯಿ ಪಟೇಲ್, ಸುಭಾಸ್ ಚಂದ್ರ ಬೋಸ್, ಶ್ರೀ ಅರಬಿಂದೋ ಮತ್ತು ವೀರ್ ಸಾವರ್ಕರ್ ಅವರಿಗೆ ಹಿಂದಿನ ಮನ್ನಣೆ ಹಾಗೂ ಗೌರವವನ್ನು ಮೋದಿಯವರು ನೀಡಿದ್ದಾರೆ. ಇದಕ್ಕೆ ಉದಾಹರಣೆಯೆಂದರೆ ಗುಜರಾತಿನ ಸಮುದ್ರ ತೀರದಲ್ಲಿರುವ ಸರ್ದಾರ್ ಪಟೇಲ್ ಅವರ ಸ್ಮಾರಕ ಮತ್ತು ದೆಹಲಿಯ ಸುಭಾಸ್ ಚಂದ್ರ ಬೋಸ್ ಪ್ರತಿಮೆ ಅತ್ಯಂತ ಗಮನಾರ್ಹವಾದವುಗಳಾಗಿವೆ. ರಾಣಾ ಪ್ರತಾಪ್ ಮತ್ತು ಛತ್ರಪತಿ ಶಿವಾಜಿಯಂತಹ ಐತಿಹಾಸಿಕ ವ್ಯಕ್ತಿಗಳಿಂದ ಹಿಡಿದು ಸ್ವಾತಂತ್ರ್ಯ ಚಳವಳಿಯ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸುವ ಸ್ಮರಿಸುವ ಸಂಪ್ರದಾಯಕ್ಕೆ ಮೋದಿಯವರು ಮತ್ತೊಮ್ಮೆ ಬುನಾದಿ ಹಾಕಿದ್ದಾರೆ.

  ಭಾರತದ ಸಂಸೃತಿ ಜಾಗತಿಕವಾಗಿ ಪಸರಿಸಿದೆ
  ಭಾರತದಲ್ಲಿ 80% ದಷ್ಟು ಹಿಂದುಗಳಿದ್ದರೂ, ಒಬ್ಬ ಹೆಮ್ಮೆಯ ಹಿಂದೂವಾಗಿ ಭಾರತವನ್ನು ಆಳಿದ ಮೊದಲ ಪ್ರಧಾನಿ ಬಹುಶಃ ನರೇಂದ್ರ ಮೋದಿಯೇ ಆಗಿದ್ದಾರೆ. ಭಾರತದ ಸಂಸ್ಕೃತಿ ಹಾಗೂ ಪರಂಪರೆಯನ್ನು ವಿಶ್ವದ ಮೂಲೆ ಮೂಲೆಗೂ ಹರಡಿರುವ ಮಹಾನ್ ಶಕ್ತಿ ಮೋದಿಯಾಗಿದ್ದಾರೆ. ವಿಶ್ವದಾದ್ಯಂತವಿರುವ ವೈವಿಧ್ಯಮಯ ಜನರು ಹಾಗೂ ಸಂಸ್ಕೃತಿಗಳಿಗೆ ಮೋದಿಯವರು ಭೇಟಿ ನೀಡಿದ್ದಾರೆ.

  ಜಾಗತಿಕ ಸಂಪರ್ಕಗಳೊಂದಿಗೆ ಮೋದಿಯವರು ಅವಿನಾಭಾವ ಸಂಪರ್ಕವನ್ನು ಜೋಡಿಸಿಕೊಂಡಿದ್ದಾರೆ.ಶಿವ, ಕೃಷ್ಣ, ರಾಮ, ಸೀತೆ, ಸರಸ್ವತಿ, ದುರ್ಗಾ ಮತ್ತು ಕಾಳಿ, ಗಣೇಶ ಮತ್ತು ಹನುಮಂತ ದೇವತೆಗಳು ಭಾರತದಲ್ಲಿ ಪುನಃ ಅಧಿಪತ್ಯವನ್ನು ಸ್ಥಾಪಿಸಿವೆ. ಈ ದೇವರ ದೇವಾಲಯಗಳಿಗೆ ಭೇಟಿ ನೀಡುವ ಮೋದಿಯವರು ದೇವತೆಗಳ ಮಾರ್ಗದರ್ಶನ ಹಾಗೂ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ. ಇತರ ರಾಜಕೀಯ ನಾಯಕರು ಇದೇ ಕ್ರಮವನ್ನು ಅನುಸರಿಸುತ್ತಿದ್ದಾರೆ.

  ಅಂತರರಾಷ್ಟ್ರೀಯ ಯೋಗ ದಿನ ಮತ್ತು ಆಯುರ್ವೇದ ದಿನದಂತಹ ಹೊಸ ಕಾರ್ಯಕ್ರಮಗಳೊಂದಿಗೆ ನರೇಂದ್ರ ಮೋದಿಯವರು ಅವರು ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಭಾರತದ ಶ್ರೇಷ್ಠ ಹಬ್ಬಗಳನ್ನು ಆಚರಿಸುತ್ತಾರೆ. ಪ್ರಧಾನ ಮಂತ್ರಿಗಳು ಭಾರತದ ಮಹಾನ್ ಗುರುಗಳಾದ ಆದಿ ಶಂಕರ, ರಾಮಾನುಜ, ಬುದ್ಧ, ಮಹಾವೀರ, ಗುರುನಾನಕ್ ಮತ್ತು ಇನ್ನೂ ಅನೇಕರನ್ನು ಗೌರವಿಸಿದ್ದಾರೆ, ಭಾರತದ ನಾಗರಿಕತೆಯ ಧಾರ್ವಿುಕ ಬೇರುಗಳನ್ನು ಪೋಷಿಸಿದ್ದಾರೆ. ಭಾರತದ ಪವಿತ್ರ ಭೌಗೋಳಿಕ ವಾಸ್ತುವನ್ನು ಮೋದಿಯವರು ಪುನಃಸ್ಥಾಪಿಸಿದ್ದಾರೆ. ಹಿಮಾಲಯದಿಂದ ಹಿಡಿದು ತಮಿಳುನಾಡಿನವರೆಗೆ, ಕಾಶ್ಮೀರದಿಂದ ಈಶಾನ್ಯದವರೆಗೆ ಭಾರತವನ್ನು ಸುತ್ತುವರೆದಿರುವ ಎಲ್ಲಾ ಪ್ರದೇಶಗಳು ಹಾಗೂ ರಾಜ್ಯಗಳನ್ನು ಪ್ರಧಾನಿಯವರು ಗೌರವಿಸಿದ್ದಾರೆ ಹಾಗೂ ಮನ್ನಣೆ ನೀಡಿದ್ದಾರೆ.

  ಇದನ್ನೂ ಓದಿ: PM Modi Birthday: ಮೋದಿ ಅಭಿಮಾನಿಗಳು ವಿಶ್ವದ ಈ ದಿಗ್ಗಜ ನಾಯಕರು: ಈ ಐವರು ನಾಯಕರ ಜೊತೆ ಪ್ರಧಾನಿಗೆ ಆಪ್ತ ಸ್ನೇಹ!

  ಭಾರತೀಯರಲ್ಲಿ ಪರಿಸರ ಜಾಗೃತಿಯನ್ನು ಮೂಡಿಸುವಲ್ಲಿ ಕೂಡ ಮೋದಿಯವರದ್ದು ಬಹುಮುಖ್ಯ ಪಾತ್ರವಾಗಿದೆ. ಪವಿತ್ರ ಗಂಗಾ ನದಿಯ ಪುನರುತ್ಥಾನ ಅಂತೆಯೇ ಭಾರತದ ವನ್ಯಜೀವಿ, ಸಸ್ಯಗಳ ರಕ್ಷಣೆ, ದೇಶದ ಪ್ರವಾಸಿ ತಾಣಗಳ ಸುಧಾರಣೆ ಹೀಗೆ ಹತ್ತು ಹಲವು ಕೈಂಕರ್ಯಗಳಲ್ಲಿ ತೊಡಗಿದ್ದಾರೆ ಮತ್ತು ಇವುಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸಹಾಯ ಹಸ್ತ ಚಾಚಿದ್ದಾರೆ.

  ಮೋದಿಯವರ ಯೋಜನೆಗಳು
  ದೇಶದ ಮೂಲಸೌಕರ್ಯಗಳ ಪರಿವರ್ತನೆ, ಜೀವನಮಟ್ಟದ ಸುಧಾರಣೆ ಮತ್ತು ಸಾಮಾನ್ಯ ಜನರ ಅಭಿವೃದ್ಧಿ, ಗ್ರಾಮೀಣ ಪರಿಸರದಲ್ಲಿ ಅನುಕೂಲತೆಗಳನ್ನು ಕಲ್ಪಿಸುವುದು, ಭ್ರಷ್ಟಾಚಾರ ಮತ್ತು ಸಮಾಜಕ್ಕೆ ಅಂಟಿರುವ ಪಿಡುಗಗಳನ್ನು ಹೋಗಲಾಡಿಸುವ ಮೂಲಕ ಮೋದಿಯವರ ಯೋಜನೆಗಳು ಆರ್ಥಿಕ ಮಟ್ಟಕ್ಕೆ ವಿಸ್ತರಿಸಿದೆ. ಸಮೃದ್ಧಿಯ ಸಂಕೇತವಾದ ಶ್ರೀ ಲಕ್ಷ್ಮೀ ದೇವರ ಸ್ಥಾನಕ್ಕೆ ಪ್ರಾಶಸ್ತ್ಯ ನೀಡಿದ್ದಾರೆ. ಹೊಸ ಉದ್ಯಮಿಗಳನ್ನು ಹೊಸ ಸಮೃದ್ಧಿಯ ಪ್ರವರ್ತಕರಾಗಿ ಗೌರವಿಸಿದ್ದಾರೆ.

  ಜಾಗತಿಕ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ, ಮೋದಿಯವರು ತಮ್ಮ ವಿಶ್ವ ಪ್ರವಾಸಗಳು, ಸಮ್ಮೇಳನಗಳು ಮತ್ತು ಶೃಂಗಸಭೆಗಳಲ್ಲಿ 'ವಿಶ್ವಗುರು' ಎಂದು ಸಂಪೂರ್ಣ ವಿಶ್ವದಲ್ಲಿಯೇ ಭಾರತದ ಮಹತ್ವವನ್ನು ಎತ್ತಿಹಿಡಿದಿದ್ದಾರೆ ಅವರು ಯುರೋಪ್, ಏಷ್ಯಾ, ಆಫ್ರಿಕಾ, ಮಧ್ಯಪ್ರಾಚ್ಯ, ಉತ್ತರ ಮತ್ತು ದಕ್ಷಿಣ ಅಮೆರಿಕಾದ ನಾಯಕರೊಂದಿಗೆ ನಿಕಟ ಸಂಪರ್ಕ ಸಾಧಿಸುವ ಮೂಲಕ ವಿಶ್ವದ ಯಾವುದೇ ನಾಯಕರಿಗಿಂತ ಒಂದು ಕೈ ಹೆಚ್ಚಾಗಿಯೇ ಮುಂದೆ ಹೋಗಿ ಜಾಗತಿಕ ನಾಯಕರೊಂದಿಗೆ ನಿರಂತರ ಸ್ನೇಹವನ್ನು ಬೆಳೆಸಿಕೊಂಡಿದ್ದಾರೆ. ನಾಗರಿಕತೆಯ ಪರಂಪರೆಯನ್ನು ಪ್ರತಿಬಿಂಬಿಸುವ ರಾಷ್ಟ್ರಗಳ ಜಗತ್ತಿನಲ್ಲಿ ಭಾರತಕ್ಕೆ ಹೆಚ್ಚಿನ ಗೌರ, ಸ್ಥಾನವನ್ನು ಮೋದಿ ನೀಡಿದ್ದಾರೆ.

  ಮುಂದಿನ ಭವಿಷ್ಯಕ್ಕಾಗಿ ಭಾರತವನ್ನು ನವೀಕರಣದತ್ತ ಕೊಂಡೊಯ್ಯುವ ಮೋದಿಯವರ ಪ್ರಯತ್ನವನ್ನು ಟೀಕಿಸುವವರೂ ಇದ್ದಾರೆ. ಇವುಗಳಲ್ಲಿ ಮೊದಲನೆಯದು ಲುಟ್ಯೆನ್ಸ್‌ನ ದೆಹಲಿ ಮತ್ತು ಹಳೆಯ ರಾಜವಂಶದ ಕೂಟ ಮತ್ತು ಅವರ ಮಾಧ್ಯಮ ಬೆಂಬಲ, ಎಡ ಪಂಥೀಯರನ್ನೊಳಗೊಂಡಂತೆ ಅಧಿಕಾರ ಮತ್ತು ಪ್ರಭಾವದಿಂದ ವಂಚಿತವಾಗಿವೆ. ಭಾರತವನ್ನು ಒಡೆಯಲು ಬಯಸುವ ಪಡೆಗಳು ಇವುಗಳ ಭಾಗವಾಗಿದ್ದು, ಈ ಪಡೆಗಳು ನಿಯಂತ್ರಿಸಬಹುದಾದ ದುರ್ಬಲ ಮತ್ತು ವಿಭಜಿತ ಭಾರತವನ್ನು ಬಯಸುತ್ತಿವೆ. ಮೋದಿ ನೇತೃತ್ವದ ನವಭಾರತವು ಅಸಹಿಷ್ಣುತೆಯ ದ್ಯೋತಕವಾಗಿದ್ದು ಸಾಕಷ್ಟು ಪ್ರಾಬಲ್ಯವನ್ನು ಹೊಂದಿಲ್ಲ. ಪಾಕ್‌ ಇನ್ನೂ ಭಾರತದ ಮೇಲೆ ಆಕ್ರಮಣ ನಡೆಸುತ್ತಿದೆ ಇನ್ನೊಂದೆಡೆಯಿಂದ ಚೀನಾ ಹಾಗೂ ಆಕ್ರಮಣ ಮಾಡುತ್ತಿದೆ.

  ಇದನ್ನೂ ಓದಿ: PM Narendra Modi: ಆಹಾರ, ವಸತಿ ಹಾಗೂ ಆರೋಗ್ಯ: 8 ವರ್ಷದಲ್ಲಿ ತಂದ ಈ ಯೋಜನೆಗಳೇ ಮೋದಿ ಜನಪ್ರಿಯತೆಯ ಮೆಟ್ಟಿಲುಗಳು!

  ಹೀಗೆ ಭಾರತದ ನವ ನಿರ್ಮಾಣ ಎಲ್ಲಿ ನಡೆಯುತ್ತಿದೆ ಎಂದೇ ಟೀಕಾಕಾರರು ಪ್ರಶ್ನಿಸುತ್ತಿದ್ದಾರೆ. ತನ್ನ ಪ್ರಾಚೀನ ನಾಗರಿಕ ಪರಂಪರೆಯನ್ನು ಸಂರಕ್ಷಿಸುವುದರೊಂದಿಗೆ ಭಾರತದಂತಹ ಏಕಾತನತೆಯನ್ನು ಏಷ್ಯಾ ಅಥವಾ ಪ್ರಪಂಚದ ಬೇರೆ ಯಾವ ದೇಶ ಹೊಂದಿದೆ? ಪ್ರಪಂಚದ ಹಲವು ದೇಶಗಳಲ್ಲಿ ವಿಭಜನೆ ಹಾಗೂ ಸಂಘರ್ಷ ಇಂದಿಗೂ ನಡೆಯುತ್ತಿದೆ. ಜಾಗತಿಕ ಪರಿಣಾಮಗಳು ಮತ್ತು ಆರ್ಥಿಕ ಕುಸಿತದೊಂದಿಗೆ ಯುರೋಪ್, ಐರೋಪ್ಯ ಯುದ್ಧಗಳ ಕಪಿಮುಷ್ಟಿಯಲ್ಲಿದೆ.

  ಪ್ರಪಂಚದ ಅನೇಕ ಭಾಗಗಳಲ್ಲಿ ಸಂಸ್ಕೃತಿಯು ಅವನತಿಯತ್ತ ಸಾಗುತ್ತಿದೆ ಹಾಗೂ ಅನೇಕ ಸಂಸ್ಕೃತಿಗಳು ನಾಶಹೊಂದಿವೆ. ಪ್ರಾಚೀನ ಭಾರತ ಮತ್ತು ಭವಿಷ್ಯದ ನವ ಭಾರತದೊಂದಿಗೆ ಆಧುನಿಕ ಭಾರತದ ಸಂಪರ್ಕವನ್ನು ಮೋದಿ ಮರುಸ್ಥಾಪಿಸಿದ್ದಾರೆ. ಅವರು ರಾಜತಾಂತ್ರಿಕ, ಆರ್ಥಿಕ, ಮಿಲಿಟರಿ ಮತ್ತು ಸಾಂಸ್ಕೃತಿಕ ಮಟ್ಟದಲ್ಲಿ ಭಾರತವನ್ನು ಜಾಗತಿಕ ಶಕ್ತಿಯಾಗಿ ರೂಪಿಸಿದ್ದಾರೆ. ನವಭಾರತವು ಮಾನವೀಯತೆಯ ಹೊಸ ಬೆಳಕೆನಸಬಹುದು.
  Published by:Ashwini Prabhu
  First published: