PM Modi Birthday: ಮೋದಿ ಅಧಿಕಾರಕ್ಕೆ ಬಂದಮೇಲೆ ಬಿಜೆಪಿಯಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ?

2014ರಲ್ಲಿ ಭಾರತದ ಪ್ರಧಾನಿಯಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಬಿಜೆಪಿಯ ಅತಿ ಪ್ರಮುಖ ವ್ಯಕ್ತಿಗಳಲ್ಲೊಬ್ಬರಾಗಿ ಹೊರಹೊಮ್ಮಿದ ಮೋದಿಯವರು ಬಿಜೆಪಿಯನ್ನು ಬದಲಾಯಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿದ್ದಾರೆನ್ನಬಹುದು. ಇಂದು ರಾಷ್ಟ್ರದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಗುರುತಿಸಿಕೊಂಡಿದೆ. ಇದರ ಹಿಂದೆ ಮೋದಿಯವರ ಶ್ರಮವೂ ಇದೆ.

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

 • Share this:
  35 ವರ್ಷಗಳ ಕಾಲ ಆರ್ ಎಸ್‍ಎಸ್ ನೊಂದಿಗೆ (RSS) ಸೇವೆ ಸಲ್ಲಿಸಿದ ನಂತರ ಕೊನೆಗೆ 1987 ರಲ್ಲಿ ನರೇಂದ್ರ ಮೋದಿಯವರು (Narendra Modi) ಭಾರತೀಯ ಜನತಾ ಪಕ್ಷವನ್ನು (Bharatiya Janata Party) ಸೇರಿದರು. ಅಲ್ಲಿಂದ ಪಕ್ಷ ಸೇರಿದ ಮೋದಿ ಇಂದಿನವರೆಗೂ ಅದರ ಪ್ರಮುಖ ನಾಯಕರಾಗಿ ಪಕ್ಷವನ್ನು ನಡೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತ ಬಂದಿದ್ದಾರೆ. 2014 ರಲ್ಲಿ ಭಾರತದ ಪ್ರಧಾನಿಯಾಗಿ ಜವಾಬ್ದಾರಿ (Responsibility) ವಹಿಸಿಕೊಂಡ ನಂತರ ಬಿಜೆಪಿಯ ಅತಿ ಪ್ರಮುಖ ವ್ಯಕ್ತಿಗಳಲ್ಲೊಬ್ಬರಾಗಿ ಹೊರಹೊಮ್ಮಿದ ಮೋದಿಯವರು ಬಿಜೆಪಿಯನ್ನು ಬದಲಾಯಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿದ್ದಾರೆನ್ನಬಹುದು. ಇಂದು ರಾಷ್ಟ್ರದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಗುರುತಿಸಿಕೊಂಡಿದೆ.

  ಆದರೆ, ಪಕ್ಷಕ್ಕೆ ಈ ಸ್ಥಿತಿ ಎಂಬತ್ತರ ದಶಕದಲ್ಲಿರಲಿಲ್ಲ. ಮೋದಿ ಅವರು ಬಿಜೆಪಿ ಸೇರಿದ್ದಾಗ ಪಕ್ಷವು ಲೋಕಸಭೆಯಲ್ಲಿ ಕೇವಲ ಎರಡು ಸದಸ್ಯರ ಬಲವನ್ನಷ್ಟೇ ಹೊಂದಿತ್ತೆಂಬುದನ್ನು ಗಮನಿಸಬೇಕಾದ ವಿಚಾರ.

  ಗುಜರಾತ್ ರಾಜ್ಯದಲ್ಲೂ ಪಕ್ಷವು ತನ್ನ ಪ್ರಭುತ್ವ ಸ್ಥಾಪಿಸಬೇಕಾಗಿತ್ತು. ಸೋಮನಾಥದಿಂದ ಅಯೋಧ್ಯಾದವರೆಗೂ ಇನ್ನೂ ರಥಯಾತ್ರೆಯನ್ನು ಉದ್ಘಾಟಿಸಬೇಕಾಗಿತ್ತು. ಮೋದಿ ಮೊದಲು ಬಿಜೆಪಿ ಸೇರಿದಾಗ ಅವರಿಗೆ ಅಹ್ಮದಾಬಾದಿನಲ್ಲಿ ಸಿವಿಕ್ ಚುನಾವಣೆಯ ಅಂಗವಾಗಿ ಬಿಜೆಪಿಯ ಅಭಿಯಾನವನ್ನು ಪರಿಣಾಮಕಾರಿಯಾಗಿ ನೆರವೇರಿಸುವುದಾಗಿತ್ತು. ಆ ಚುನಾವಣೆಯನ್ನು ಬಿಜೆಪಿ ಗೆದ್ದಿತು ಕೂಡ.

  ಮೋದಿ ಮೊದಲ ಬಾರಿ ಗುರುತಿಸಿಕೊಂಡ ಆ ಸಂದರ್ಭ
  ವಾಸ್ತವದಲ್ಲಿ, ಮೋದಿಯವರ ಜನಪ್ರೀಯತೆ ಗುಜರಾತಿನಲ್ಲೇನೋ ಇತ್ತಾದರೂ ಅದರಾಚೆ ಅಷ್ಟೊಂದಿರಲಿಲ್ಲ. ಬಿಜೆಪಿಯ ಇನ್ನೊಬ್ಬ ಹಿರಿಯ ನಾಯಕ ಎಲ್.ಕೆ ಅಡ್ವಾನಿ ಅವರು ಸೋಮನಾಥದಿಂದ ಅಯೋಧ್ಯಾದವರೆಗೆ ರಥ ಯಾತ್ರೆಯ ಘೋಷಣೆ ಮಾಡಿದ್ದರು. ಈ ಸಂದರ್ಭದಿಂದಲೇ ಮೋದಿ ಹೆಚ್ಚು ಮನೆ ಮಾತಾಗತೊಡಗಿದರು. ಏಕೆಂದರೆ ಅವರು ಈ ಯಾತ್ರೆಯಲ್ಲಿ ಅತ್ಯದ್ಭುತವಾಗಿ ತಮ್ಮ ಪಾತ್ರ ನಿರ್ವಹಿಸಿ ಎಲ್ಲರನ್ನು ತಮ್ಮೆಡೆ ಆಕರ್ಷಿಸಿಕೊಂಡರು.

  ನಂತರ ಗುಜರಾತ್ ಅಭೂತಪೂರ್ವ ಪ್ರಗತಿ ಕಾಣುತ್ತ ಸಾಗಿತು. 1991 ರಲ್ಲೇ ಮಾಧ್ಯಮಗಳು ಮೋದಿಯವರನ್ನು ಗುಜರಾತಿನ ಆಧುನಿಕ ಆರ್ಕಿಟೆಕ್ಟ್ ಎಂದು ಸಂಭೋದಿಸಲು ಪ್ರಾರಂಭಿಸಿದ್ದವು. ತದನಂತರ 2013 ರಲ್ಲಿ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಜೆಪಿ ಘೋಷಿಸಿದ ನಂತರ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಬ್ರಾಹ್ಮಣ-ಬನಿಯಾ ಪ್ರತಿನಿಧಿಸುವ ಅರ್ಬನ್ ಪಕ್ಷವಾಗಿ ಗುರುತಿಸಿಕೊಂಡಿತು.

  ಇದನ್ನೂ ಓದಿ:  PM Modi Birthday: ನವ ಭಾರತ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಿದ ಪ್ರಧಾನಿ ಮೋದಿ; ವಿಶ್ವ ಗುರುವಾಗಿ ಭಾರತ ಹೇಗೆ ಬೆಳೆದಿದೆ?

  ತದನಂತರ 2014-22 ರ ಅವಧಿಯಲ್ಲಿ ಮೋದಿ ಪ್ರಧಾನಿಯಾಗಿ ಅಮಿತ್ ಶಾ ಅವರೊಡನೆ ಸೇರಿಕೊಂಡು ಬಿಜೆಪಿಯ ಮೂಲ ರೂಪದಲ್ಲಿ ಸಾಕಷ್ಟು ಮಹತ್ವಕಾರಿ ಬದಲಾವಣೆಗಳನ್ನು ತರುವುದಲ್ಲದೆ ಬಿಜೆಪಿ ದೇಶದ ಅತಿ ದೊಡ್ಡ ಪಕ್ಷವಾಗಿ ಹೆಚ್ಚು ಬೆಂಬಲಿಗರನ್ನು ಹೊಂದಿರುವ ಪಕ್ಷವನ್ನಾಗಿ ರೂಪಿಸಿದರು.

  ಗ್ರಾಮೀಣ ಪಕ್ಷವಾಗಿ ಗುರುತಿಸಿಕೊಂಡಿದ್ದು
  2014 ರ ನಂತರ ಮೋದಿಯವರು ಬಿಜೆಪಿಯು ಭಾರತದಾದ್ಯಂತ ದೊಡ್ಡ ಗ್ರಾಮೀಣ ಪಕ್ಷವಾಗಿ ಹೆಚ್ಚು ಪ್ರವರ್ಧಮಾನಕ್ಕೆ ಬಂದಿತು. ಅದರಲ್ಲೂ ವಿಶೇಷವಾಗಿ ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಇದು ಹೆಚ್ಚೆ ಹೆಚ್ಚು ಗುರುತಿಸಿಕೊಂಡಿತು. ಇದು ಏನಿಲ್ಲವೆಂದರೂ ಲೋಕಸಭೆಯ 543 ಸ್ಥಾನಗಳ ಪೈಕಿ 225 ಸ್ಥಾನಗಳನ್ನೊಳಗೊಂಡಿದೆ. ಒಂದೊಮ್ಮೆ ನಗರದ ಮೇಲ್ವರ್ಗದ ಜನರ ಪಕ್ಷ ಎಂದು ಗುರುತಿಸಿಕೊಂಡಿದ್ದ ಬಿಜೆಪಿಗೆ ಹೊಸ ಆಯಾಮವನ್ನೇ ನೀಡಿತು.

  ಜಾತ್ಯಾತೀತತೆ
  ಒಂದೊಮ್ಮೆ ಮೇಲ್ವರ್ಗದವರ ಪಕ್ಷ ಎಂದೇ ಬಿಜೆಪಿ ಗುರುತಿಸಿಕೊಂಡಿತ್ತು. ಆದರೆ, ಈ ಬಗ್ಗೆ ವಾಸ್ತವಿಕತೆಯನ್ನು ಮೋದಿಯವರು ಸಾರ್ವಜನಿಕವಾಗಿ ಘೋಷಿಸುವ ಮೂಲಕ ಪಕ್ಷದ ಜಾತ್ಯಾತೀತತೆಯ ಬಗ್ಗೆ ಸಾರಿ ಹೇಳಿದರು. ಆ ಸಂದರ್ಭದಲ್ಲಿ ಅಂದರೆ ಜೂನ್ 2020 ರಲ್ಲಿ ಮೋದಿಯವರು ಪಕ್ಷವು ಲೋಕಸಭೆಯಲ್ಲಿ 113 ಒಬಿಸಿ, 43 ಪರಿಶಿಷ್ಟ ಪಂಗಡ ಹಾಗೂ 53 ಪರಿಶಿಷ್ಟ ಜಾತಿಗಳ ಪ್ರತಿನಿಧಿಗಳನ್ನು ಹೊಂದಿರುವುದಾಗಿ ಘೋಷಿಸಿದರು. ಈ ಮೂಲಕ ಬಿಜೆಪಿ ಸರ್ವರಲ್ಲೂ ಹೆಚ್ಚು ಮನ್ನಣೆಗಳಿಸಲು ಸಾಧ್ಯವಾಯಿತು.

  ಬಿಜೆಪಿ-ಬಡವರ ಪಕ್ಷ
  ಮೋದಿ ನೇತೃತ್ವದಲ್ಲಿ ಬಿಜೆಪಿಯ ಅಗಾಧ ಬೆಳವಣಿಗೆಗೆ ಪ್ರಮುಖ ಕಾರಣ ಬಡ ಮತದಾರರಿಂದ ಆಗಿದೆ ಎಂದರೆ ತಪ್ಪಾಗದು. ಬಡವರಿಗೆ ಸರ್ಕಾರದ ಯೋಜನೆಗಳ ಲಾಭ ತಲುಪಿಸಲು ಪಾರದರ್ಶಕತೆಯನ್ನು ಕಾಯುತ್ತ ಪರಿಣಾಮಕಾರಿಯಾಗಿ ತಲುಪುವಂತೆ ತಂತ್ರಜ್ಞಾನಗಳ ಬಳಕೆ ಮೋದಿ ಮಾಡಿದರು. ಈ ಮೂಲಕ ಅವರು ಬಡಜನರಿಗೆ ಇನ್ನಷ್ಟು ಹತ್ತಿರವಾಗುವಂತಾಯಿತು.

  ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ತರುವ ಮೂಲಕ ಕೋಟಿ ಕೋಟಿ ಜನರಿಗೆ ಸರ್ಕಾರದ ಎಲ್ಲ ಯೋಜನೆಗಳ ಲಾಭ ತಲುಪುವಂತೆ ಮೋದಿ ಕ್ರಮವಹಿಸಿದರು. ಒಂದೊಮ್ಮೆ ಹತ್ತು ಕೋಟಿ ಜನರಿಗೆ ತಲುಪುತ್ತಿದ್ದ ಲಾಭ 2018-19 ರಲ್ಲಿ 70 ಕೋಟಿಗೂ ಅಧಿಕ ಜನರಿಗೆ ತಲುಪುವಂತೆ ಮಾಡಿದರು.

  ಮಹಿಳೆಯರಿಗೆ ಪ್ರಾತಿನಿಧ್ಯತೆ
  ಇದು ಮೋದಿಯವರ ಮಹತ್ವದ ಕನಸುಗಳಲ್ಲೊಂದಾಗಿದೆ ಎಂದು ಹೇಳಬಹುದು. ಐತಿಹಾಸಿಕವಾಗಿ ಭಾರತದಲ್ಲಿ ಮತ ಚಲಾವಣೆಗೆ ಸಂಬಂಧಿಸಿದಂತೆ ಲಿಂಗ ತಾರತಮ್ಯವಿದ್ದಿತು. ಅದನ್ನು ಹೋಗಲಾಡಿಸಲು ಪಣ ತೊಟ್ಟ ಮೋದಿ ಅವರು ಹೊಸತಾಗಿ ಮಹಿಳೆಯರು ಮತದಾರರನ್ನಾಗಿ ರೂಪಿಸುವಂತಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಯಶಸ್ವಿಯಾದರು.

  ಇದನ್ನೂ ಓದಿ:  Explained: ರಾತ್ರಿ ಪ್ರಯಾಣ, ಹೆಲಿಕಾಪ್ಟರ್ ಸವಾರಿ, ಕ್ವಾರಂಟೈನ್: ಹೀಗಿತ್ತು ನಮೀಬಿಯಾದಿಂದ ಭಾರತಕ್ಕೆ ಚಿರತೆಗಳ ಪ್ರಯಾಣ!

  2019 ರ ಚುನಾವಣೆಯಲ್ಲಿ ಮೊದಲ ಬಾರಿಗೆ ಮಹಿಳೆಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣೆಯಲ್ಲಿ ಭಾಗವಹಿಸಿದರು. ಮೋದಿಯವರೇ ವೈಯಕ್ತಿಕವಾಗಿ ಪಕ್ಷವು ಮಹಿಳೆಯರನ್ನು ಹೆಚ್ಚು ಹೆಚ್ಚು ತಲುಪುವಂತೆ ಮುತುವರ್ಜಿವಹಿಸಿದ್ದರು ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ.

  ಈಶಾನ್ಯ ಭಾರತದಲ್ಲಿ ಬಿಜೆಪಿ ಪ್ರಗತಿ
  ಹಿಂದಿ ರಾಜ್ಯಗಳನ್ನು ಹೊರತುಪಡಿಸಿದರೆ ಒಂದೊಮ್ಮೆ ಬಿಜೆಪಿ ಈಶಾನ್ಯ ರಾಜ್ಯಗಳಲ್ಲಿ ಯಾವ ವರ್ಚಸ್ಸಾಗಲಿ ಸ್ಥಾನವಾಗಲಿ ಹೊಂದಿರಲಿಲ್ಲ. ಮೋದಿ ನೇತೃತ್ವದಲ್ಲಿ ರಣತಂತ್ರಗಳು, ಯೋಜನೆಗಳು ಹಾಗೂ ಚಾಕಚಕ್ಯತೆಯಿಂದ ಕೂಡಿರುವ ಯೋಜನೆಗಳ ಮೂಲಕ ಬಿಜೆಪಿ ಹೊಸ ಹೊಸ ಪ್ರದೇಶಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಪ್ರಾರಂಭಿಸಿತು.

  ಈಶಾನ್ಯ ಭಾರತದ ಎಂಟು ರಾಜ್ಯಗಳಲ್ಲಿ 2016ರ ವರೆಗೂ ಬಿಜೆಪಿ ಎಂದೂ ಆಳಿರಲಿಲ್ಲ. ಆದರೆ, 2014 ರ ಬಿಜೆಪಿಯ ಗೆಲುವಿನೊಂದಿಗೆ ಈಪ್ರದೇಶಗಳಲ್ಲಿ ಸಾಕಷ್ಟು ಬದಲಾವಣೆಗಳಾದವು. ಬಿಜೆಪಿ ನಿಧಾನವಾಗಿ ತನ್ನ ವರ್ಚಸ್ಸನ್ನು ಈ ರಾಜ್ಯಗಳಲ್ಲಿ ಸ್ಥಾಪಿಸಿಕೊಂಡಿತು.
  Published by:Ashwini Prabhu
  First published: