• Home
  • »
  • News
  • »
  • national-international
  • »
  • Pokhara Plane Crash: ಸಂಕ್ರಾಂತಿ ದಿನವೇ ಭೀಕರ ವಿಮಾನ ದುರಂತ; 72 ಪ್ರಯಾಣಿಕರಿದ್ದ ವಿಮಾನ ಪತನ

Pokhara Plane Crash: ಸಂಕ್ರಾಂತಿ ದಿನವೇ ಭೀಕರ ವಿಮಾನ ದುರಂತ; 72 ಪ್ರಯಾಣಿಕರಿದ್ದ ವಿಮಾನ ಪತನ

ವಿಮಾನ ಅಪಘಾತ

ವಿಮಾನ ಅಪಘಾತ

ಸದ್ಯಕ್ಕೆ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

  • News18 Kannada
  • Last Updated :
  • New Delhi, India
  • Share this:

ಕಠ್ಮಂಡು: ಸಂಕ್ರಾಂತಿ ಹಬ್ಬದ ದಿನವೇ ಭೀಕರ ವಿಮಾನ ಅಪಘಾತವೊಂದು (Pokhara Plane Crash)  ಸಂಭವಿಸಿದೆ. ನೇಪಾಳದ ಪೋಖರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 72 ಆಸನಗಳ ಪ್ರಯಾಣಿಕ ವಿಮಾನವು ರನ್‌ವೇಯಲ್ಲಿ ಪತನಗೊಂಡಿದೆ. ಸದ್ಯಕ್ಕೆ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.


ಕಠ್ಮಂಡು ಪೋಸ್ಟ್‌ನ ವರದಿಯ ಪ್ರಕಾ  ಯೇತಿ ಏರ್‌ಲೈನ್ಸ್‌ನ ATR 72 ವಿಮಾನವು ಪೋಖರಾದಲ್ಲಿ ಪತನಗೊಂಡಿದೆ. ವಿಮಾನವು ಕಠ್ಮಂಡುವಿನಿಂದ ಪೋಖರಾಗೆ ತೆರಳುತ್ತಿತ್ತು ಒಟ್ಟು 68 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ವಿಮಾನದಲ್ಲಿದ್ದರು ಎಂದು ಹೇಳಲಾಗಿದೆ.ಇದನ್ನೂ ಓದಿ: Protest in PoK: ಭಾರತದೊಂದಿಗೆ ವಿಲೀನಕ್ಕೆ ಆಗ್ರಹಿಸಿದ ಪಿಒಕೆ ನಿವಾಸಿಗಳು! ಪಾಕಿಸ್ತಾನ ತಾರತಮ್ಯ ನೀತಿ ವಿರುದ್ಧ ಪ್ರತಿಭಟನೆ


53 ಮೃತದೇಹ ಪತ್ತೆ
ವಿಮಾನ ಪತನವಾಗುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, ರಕ್ಷಣಾ ಕಾರ್ಯಕರ್ತರು ಅದನ್ನು ನಂದಿಸಲು ಪ್ರಯತ್ನಿಸುತ್ತಿದ್ದಾರೆ. ನೇಪಾಳಿ ಮಾಧ್ಯಮಗಳ ವರದಿಗಳ ಪ್ರಕಾರ ಇದುವರೆಗೆ 53 ಮೃತದೇಹಗಳು ದೊರೆತಿವೆ.


ಐವರು ಭಾರತೀಯರೂ ವಿಮಾನದಲ್ಲಿದ್ದರು
53 ನೇಪಾಳಿಗಳು, ಐದು ಭಾರತೀಯರು, ನಾಲ್ವರು ರಷ್ಯನ್ನರು, ಒಬ್ಬ ಐರಿಶ್ ಪ್ರಜೆ, ಇಬ್ಬರು ಕೊರಿಯನ್ನರು, ಒಬ್ಬ ಅರ್ಜೆಂಟೀನಾದ ಮತ್ತು ಒಬ್ಬ ಫ್ರೆಂಚ್ ಪ್ರಜೆ ಅಪಘಾತದ ಸಮಯದಲ್ಲಿ ವಿಮಾನದಲ್ಲಿದ್ದರು ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ: Armed Forces Veterans Day: ಭಾರತೀಯ ಸಶಸ್ತ್ರ ಪಡೆ ವಿಶ್ವದ ಅತ್ಯುತ್ತಮ ಪಡೆಗಳಲ್ಲಿ ಒಂದು -ಮನೋಜ್ ಪಾಂಡೆ


ಪೋಖರಾ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕ ವಿಮಾನ ಪತನವಾದ ನಂತರ ಸರ್ಕಾರವು ಸಚಿವ ಸಂಪುಟದ ತುರ್ತು ಸಭೆಯನ್ನು ಕರೆದಿದೆ.


ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ, ದಾವೂದ್ ಹೆಸರಲ್ಲಿ 100 ಕೋಟಿಗೆ ಬೇಡಿಕೆ!
ಮಹಾರಾಷ್ಟ್ರದ (Maharashtra) ನಾಗ್ಪುರದಲ್ಲಿರುವ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರ ಕಚೇರಿಗೆ ಶನಿವಾರ ಬೆಳಗ್ಗೆ ಬೆದರಿಕೆ ಕರೆ (threat call) ಬಂದಿವೆ ಎಂದು ನಾಗ್ಪುರ್ ಪೊಲೀಸರು ತಿಳಿಸಿದ್ದಾರೆ. ಕಚೇರಿ ದೂರವಾಣಿ ನಂಬರ್​​ಗೆ ಬೆಳಗ್ಗೆ 11:30 ಹಾಗೂ 12:30ರ ನಡುವೆ ಮೂರು ಬಾರಿ ಕರೆ ಮಾಡಿ ಬೆದರಿಕೆಯೊಡ್ಡಿದ್ದಾರೆ . ಸಚಿವ ಗಡ್ಕರಿ ಅವರ ಜನಸಂಪರ್ಕ ಕಚೇರಿಯ ದೂರವಾಣಿ ಸಂಖ್ಯೆಗೆ ದಾವೂದ್ (Dawood) ಎಂಬ ವ್ಯಕ್ತಿಯ ಹೆಸರಿನಲ್ಲಿ ಕರೆ ಮಾಡಿ ಸಚಿವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕರೆ ಮಾಡಿದವರು 100 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.


ಲ್ಯಾಂಡ್​ಲೈನ್‌ಗೆ ಮೂರು ಬೆದರಿಕೆ ಫೋನ್ ಕರೆಗಳು ಬಂದಿವೆ. ವಿವರಗಳನ್ನು ಕಂಡು ಹಿಡಿಯಲಾಗುತ್ತಿದೆ. ಕರೆ ಮಾಡಿದವರು ಗಡ್ಕರಿ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ನಮ್ಮ ಅಪರಾಧ ವಿಭಾಗ ಸಿಡಿಆರ್​ನಲ್ಲಿ(Call Detail Record) ಕೆಲಸ ಮಾಡುತ್ತದೆ ಎಂದು ನಾಗ್ಪುರದ ಡಿಸಿಪಿ ರಾಹುಲ್ ಮದನೆ ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

Published by:ಗುರುಗಣೇಶ ಡಬ್ಗುಳಿ
First published: