LIVE NOW

(LIVE) ಜಯ ಭಾರತ: ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣ ಅಂತ್ಯ

Kannada.news18.com | August 15, 2018, 9:26 AM IST
facebook Twitter google Linkedin
Last Updated August 15, 2018
auto-refresh

Highlights

ದೇಶದೆಲ್ಲೆಡೆ ಇಂದು 72ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ತ್ರಿವರ್ಣ ಧ್ವಜಾರೋಹಣ ಮಾಡಿ, ದೇಶದ ಜನರಿಗೆ ಸ್ವಾತಂತ್ರ್ಯೋತ್ಸವದ ಶುಭ ಕೋರಿದರು. ಅತಿಥಿಗಳಾಗಿ ಮಾಜಿ ಪ್ರಧಾನಿಗಳಾದ ಹೆಚ್​.ಡಿ. ದೇವೇಗೌಡ ಮತ್ತು ಮನಮೋಹನ್​ ಸಿಂಗ್, ಕೇಂದ್ರ ಸಚಿವರು​ ಉಪಸ್ಥಿತರಿದ್ದು, ವಿದೇಶಿ ಗಣ್ಯರು ಆಮಂತ್ರಿತರಾಗಿದ್ದಾರೆ. ಎನ್​ಡಿಎ ಸರ್ಕಾರದ ಅಧಿಕಾರಾವಧಿಯ ಕೊನೆಯ ಸ್ವಾತಂತ್ರ್ಯೋತ್ಸವ ಇದಾಗಿದ್ದು, ಮುಂದಿನ ವರ್ಷ ರಚನೆಯಾಗಲಿರುವ ನೂತನ ಸರ್ಕಾರದ ಪ್ರಧಾನಮಂತ್ರಿ ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ.

ಕೆಂಪು ಕೋಟೆಯಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯ ಉತ್ಸವ ಆಚರಣೆಯ ಸಂಪೂರ್ಣ ಮಾಹಿತಿ ಮತ್ತು ಪ್ರಧಾನಿ ಮೋದಿ ಅವರ ಭಾಷಣದ ಪ್ರಮುಖ ಅಂಶಗಳನ್ನು ನ್ಯೂಸ್​ 18 ಕನ್ನಡದಲ್ಲಿ ನೀಡುತ್ತಿದ್ದೇವೆ.
Load More