• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Covid 19: ದೇಶದಲ್ಲಿ ಒಂದೇ ದಿನ 7,000 ಕೋವಿಡ್ ಪ್ರಕರಣ ದಾಖಲು; XBB 1.16 ರೂಪಾಂತರ ಮಟ್ಟ ಹಾಕಲು ರಾಜ್ಯಗಳು ಹೇಗೆ ತಯಾರಿ ನಡೆಸಿವೆ?

Covid 19: ದೇಶದಲ್ಲಿ ಒಂದೇ ದಿನ 7,000 ಕೋವಿಡ್ ಪ್ರಕರಣ ದಾಖಲು; XBB 1.16 ರೂಪಾಂತರ ಮಟ್ಟ ಹಾಕಲು ರಾಜ್ಯಗಳು ಹೇಗೆ ತಯಾರಿ ನಡೆಸಿವೆ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

7,830 ಹೊಸ ಸೋಂಕುಗಳೊಂದಿಗೆ ಭಾರತದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ. ಸಕ್ರಿಯ ಸೋಂಕುಗಳು 40,215 ರಷ್ಟಿದೆ. ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವುದಕ್ಕೆ ಕೆಲವೊಂದು ಕಾರಣಗಳನ್ನು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಪಟ್ಟಿಮಾಡಿದೆ.

  • Share this:

XBB 1.16 ರೂಪಾಂತರದ ಹಾವಳಿ ಭಾರತದಲ್ಲಿ ಕೋವಿಡ್ ಪ್ರಕರಣಗಳಲ್ಲಿ (Indian Covid Cases) ಉಲ್ಬಣಕ್ಕೆ ಕಾರಣವಾಗಿದ್ದು ದೇಶಾದ್ಯಂತ ಸ್ಥಳೀಯ ಹಾಗೂ ರಾಜ್ಯ ಸರಕಾರಗಳು ಕೋವಿಡ್ ನಿಯಮಾವಳಿಗಳನ್ನು ಪಾಲಿಸುವಂತೆ ನಾಗರಿಕರಲ್ಲಿ ವಿನಂತಿಸುತ್ತಿದೆ. ಹೊರಗೆ ಬರುವ ಸಮಯದಲ್ಲಿ ಕಡ್ಡಾಯ ಮಾಸ್ಕ್ (Mask) ಬಳಕೆ ಹಾಗೂ ಅನಗತ್ಯವಾಗಿ ಸಭೆ ಸಮಾರಂಭಗಳಲ್ಲಿ (Functions) ಭಾಗವಹಿಸದಿರುವ ಎಚ್ಚರಿಕೆಗಳನ್ನು ರವಾನಿಸುತ್ತಿದೆ.


ಕೋವಿಡ್ ಏರಿಕೆಗೆ ಕಾರಣವೇನು?


7,830 ಹೊಸ ಸೋಂಕುಗಳೊಂದಿಗೆ ಭಾರತದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ. ಸಕ್ರಿಯ ಸೋಂಕುಗಳು 40,215 ರಷ್ಟಿದೆ. ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವುದಕ್ಕೆ ಕೆಲವೊಂದು ಕಾರಣಗಳನ್ನು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಪಟ್ಟಿಮಾಡಿದೆ.


  • ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸದೇ ಇರುವುದು.

  • ಕೋವಿಡ್ ಪರೀಕ್ಷೆಗಳಲ್ಲಿ ಇಳಿಕೆ.

  • ಸಾರ್ವಜನಿಕರು ಹೊರಗಡೆ ಬಂದ ಸಂದರ್ಭದಲ್ಲಿ ಮುಖಗವಸು ಧರಿಸದೇ ಇರುವುದು. ಹಾಗೂ ಸೂಕ್ತ ನಿಯಮಗಳನ್ನು ಪಾಲಿಸದೇ ಇರುವುದು.

  • ಹೊಸ ರೂಪಾಂತರ.


ದೇಶದ ಹಲವು ರಾಜ್ಯಗಳಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಅಂತೆಯೇ ಯಾವೆಲ್ಲಾ ಬಗೆಯಲ್ಲಿ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ತಿಳಿದುಕೊಳ್ಳೋಣ


ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಭೀಕರ ದುರಂತ; ಕಾಲು ಸೇತುವೆ ಕುಸಿದು 40ಕ್ಕೂ ಹೆಚ್ಚು ಮಂದಿಗೆ ಗಾಯ!


ದೆಹಲಿ: ಭಾನುವಾರ, ಏಪ್ರಿಲ್ 9 ರಂದು ದೆಹಲಿಯಲ್ಲಿ ನಾಲ್ಕು ಕೋವಿಡ್ ಸಾವುಗಳು ಸಂಭವಿಸಿವೆ. ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ತಿಳಿಸಿರುವ ಮಾಹಿತಿಯ ಪ್ರಕಾರ ಒಂದು ಮರಣಕ್ಕೆ ಕೋವಿಡ್ ಕಾರಣವಾಗಿದ್ದರೆ ಇತರರು ಇನ್ನಿತರ ಆರೋಗ್ಯ ಸಮಸ್ಯೆಗಳಿಂದ ಮರಣ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.


ಲೋಕನಾಯಕ್ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಸುರೇಶ್ ಕುಮಾರ್ ತಿಳಿಸಿರುವಂತೆ ಕೋವಿಡ್ - XBB 1.16 ನ ಹೊಸ ರೂಪಾಂತರ ತೀವ್ರವಾದ ಕಾಯಿಲೆಯನ್ನುಂಟು ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.


ಮೊಹಾಲಿ: ಕೋವಿಡ್ ಕೇಸ್‌ಗಳಲ್ಲಿ ಉಲ್ಬಣವಾದಾಗ ಏನು ಮಾಡಬಹುದು ಎಂಬ ಪ್ರಾತ್ಯಕ್ಷಿಕೆಯಾಗಿ ಡೆಪ್ಯೂಟಿ ಕಮಿಷನರ್ ಆಶಿಕಾ ಜೈನ್ ಮೊಹಾಲಿಯಲ್ಲಿ ಅಣಕು ಡ್ರಿಲ್‌ಗಳನ್ನು ನಡೆಸಿದರು. ವೈದ್ಯಕೀಯ ಆಮ್ಲಜನಕ ಘಟಕವನ್ನು ಪರೀಕ್ಷಿಸಲು ಹಾಗೂ ಜಿಲ್ಲೆಯಾದ್ಯಂತ ಪರೀಕ್ಷೆಯನ್ನು ಹೆಚ್ಚಿಸಲು ರಾಜ್ಯ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.


ಸಾಂಕೇತಿಕ ಚಿತ್ರ


ಭೋಪಾಲ್: ಭೋಪಾಲ್‌ನಲ್ಲಿ ಕೂಡ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲು ಹಾಗೂ ಕೇಸುಗಳಲ್ಲಿ ಉಲ್ಭಣವಾದಾಗ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು ಎಂಬ ಪ್ರಾತ್ಯಕ್ಷಿಕೆಗಳನ್ನು ನಗರದಲ್ಲಿ ಮಾಡಲಾಯಿತು. ನಗರದ ಆರೋಗ್ಯ ಸೌಲಭ್ಯಗಳು ಅವುಗಳ ಆಮ್ಲಜನಕ ಉತ್ಪಾದನಾ ಸಾಮರ್ಥ್ಯ, ಔಷಧ ದಾಸ್ತಾನುಗಳು, ವೆಂಟಿಲೇಟರ್‌ಗಳು, ಐಸಿಯು ಮೊದಲಾದ ಸೌಲಭ್ಯಗಳನ್ನು ಪರಿಶೀಲಿಸಲಾಯಿತು.


ಮುಂಬೈ: ಬೃಹನ್‌ಮುಂಬೈ ಮಹಾನಗರ ಪಾಲಿಕೆಯು ನಗರದ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಮಾಸ್ಕ್‌ಗಳನ್ನು ಕಡ್ಡಾಯಗೊಳಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲೂ ಅದೇ ರೀತಿ ಮಾಡಲಾಗಿದೆ ಎಂದು ಸುದ್ದಿಪತ್ರಿಕೆಗಳು ವರದಿ ಮಾಡಿವೆ.


ಅಸ್ಸಾಂ: ಅಸ್ಸಾಂ ರಾಷ್ಟ್ರೀಯ ಆರೋಗ್ಯ ಮಿಷನ್ ಮೂಲಕ 1,300 ಸೌಲಭ್ಯಗಳಲ್ಲಿ ಅಣಕು ಡ್ರಿಲ್‌ಗಳನ್ನು ನಡೆಸಲಾಯಿತು. ಅಸ್ಸಾಂ ಸದ್ಯಕ್ಕೆ ಕೋವಿಡ್ ಪ್ರಕರಣಗಳ ಏರಿಕೆಗೆ ಸಾಕ್ಷಿಯಾಗದಿದ್ದರೂ, ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯವು ಸಿದ್ಧವಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.


ಕೇರಳ: ಆರೋಗ್ಯ ಸಚಿವರಾದ ವೀಣಾ ಜಾರ್ಜ್ ಗರ್ಭಿಣಿಯರು, ಹಿರಿಯ ನಾಗರಿಕರು ಹಾಗೂ ಬೇರೆ ಬೇರೆ ರೋಗಗಳಿಂದ ಬಳಲುತ್ತಿರುವವರಿಗೆ ಮಾಸ್ಕ್ ಕಡ್ಡಾಯಗೊಳಿಸಿದ್ದಾರೆ.


ಹರಿಯಾಣ ಪಾಂಡಿಚೇರಿ: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಎಂಬ ನೀತಿಯನ್ನು ಆರೋಗ್ಯ ಅಧಿಕಾರಿಗಳು ಜಾರಿಗೆ ತಂದಿದ್ದಾರೆ. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲು ನಾಗರಿಕರಲ್ಲಿ ವಿನಂತಿಸಿದ್ದಾರೆ.




ನಾಗರಿಕರು ಯಾವ ರೀತಿ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬಹುದು


  • ನೀವು ಅನಾರೋಗ್ಯದಿಂದ ಬಳಲುತ್ತಿರುವ ಸಂದರ್ಭದಲ್ಲಿ ಅನಗತ್ಯವಾಗಿ ಜನದಟ್ಟಣೆ ಪ್ರದೇಶಗಳಿಂದ ದೂರವಿರಿ. ಕಡ್ಡಾಯವಾಗಿ ಮಾಸ್ಕ್ ಧರಿಸಿ

  • ಸಾರ್ವಜನಿಕ ಸ್ಥಳದಲ್ಲಿ ಆದಷ್ಟು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ

  • ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳುತ್ತಿರಿ

First published: