ಮಗುವಿಗೆ ಜನ್ಮ ನೀಡಿದ 70 ವರ್ಷದ ಮಹಿಳೆ, ಮದುವೆಯಾಗಿ 54 ವರ್ಷದ ಬಳಿಕ ಸಂಸಾರದಲ್ಲಿ ಖುಷಿ!

ರಾಜಸ್ಥಾನದಲ್ಲಿ ಮಹಿಳೆಯೊಬ್ಬರು 54 ವರ್ಷಗಳ ವಿವಾಹದ ನಂತರ ಮೊದಲ ಬಾರಿಗೆ ತಾಯಿಯಾಗಿದ್ದಾರೆ. ಈ ಮಹಿಳೆ ಜುಂಜುನು ಮೂಲದವರಾಗಿದ್ದು, ಅಲ್ವಾರ್‌ನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಐವಿಎಫ್ ತಂತ್ರದಿಂದ ಮಗು ಜನಿಸಿದೆ. ವೃದ್ಧ ದಂಪತಿಯ ಜೀವನದಲ್ಲಿ ಸಂತಸ ತಂದಿದೆ. ಇದೆಲ್ಲ ಹೇಗೆ ಸಾಧ್ಯವಾಯಿತು? ಇಲ್ಲಿದೆ ವಿವರ.

ಮಗುವಿಗೆ ಜನ್ಮ ನೀಡಿದ 70 ವರ್ಷದ ಮಹಿಳೆ,

ಮಗುವಿಗೆ ಜನ್ಮ ನೀಡಿದ 70 ವರ್ಷದ ಮಹಿಳೆ,

 • Share this:
  ಅಲ್ವಾರ್​(ಆ. 09): ರಾಜಸ್ಥಾನದ ಅಲ್ವಾರ್ (Rajasthan's Alwear) ಜಿಲ್ಲೆಯಲ್ಲಿ 70 ವರ್ಷದ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಮಹಿಳೆಯ ಗಂಡನ ವಯಸ್ಸು 75 ವರ್ಷ. ಈ ಜೋಡಿ ಸುಮಾರು 54 ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಮಗುವಿನ ನಗು ಅವರ ಅಂಗಳದಲ್ಲಿ ಪ್ರತಿಧ್ವನಿಸಿರಲಿಲ್ಲ. ಈಗ IVF ತಂತ್ರದೊಂದಿಗೆ, ಮಗುವಿನ ಕೂಗು ಅವರ ಅಂಗಳದಲ್ಲಿ ಪ್ರತಿಧ್ವನಿಸಿದೆ. ದಂಪತಿ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ವೈದ್ಯರ ಪ್ರಕಾರ, ಈ ವಯಸ್ಸಿನಲ್ಲಿ ಮಹಿಳೆ ಗರ್ಭಿಣಿಯಾಗಿರುವುದರಿಂದ ಅನೇಕ ಆತಂಕಗಳು ಇದ್ದವು, ಆದರೆ ಕೊನೆಯಲ್ಲಿ ಎಲ್ಲವೂ ಸುಖಾಂತ್ಯವಾಗಿದೆ ಎಂದಿದ್ದಾರೆ.

  ಚಂದ್ರಾವತಿ ಮತ್ತು ಗೋಪಿ ಸಿಂಗ್ ದಂಪತಿ ಜುಂಜುನು ಜಿಲ್ಲೆಯ ಸಿಂಘನಾ ಗ್ರಾಮದ ನಿವಾಸಿಗಳು ಎಂದು ಅಲ್ವಾರ್‌ನಲ್ಲಿರುವ ಇಂಡೋ ಐವಿಎಫ್ ಟೆಸ್ಟ್ ಟ್ಯೂಬ್ ಬೇಬಿ ಸೆಂಟರ್‌ನ ವೈಜ್ಞಾನಿಕ ನಿರ್ದೇಶಕ ಮತ್ತು ಭ್ರೂಣಶಾಸ್ತ್ರಜ್ಞ ಡಾ.ಪಂಕಜ್ ಗುಪ್ತಾ ಹೇಳಿದ್ದಾರೆ. ಚಂದ್ರಾವತಿಯವರ ವಯಸ್ಸು ಸುಮಾರು 70 ಮತ್ತು ಗೋಪಿ ಸಿಂಗ್ ಅವರ ವಯಸ್ಸು 75 ವರ್ಷ. ಮದುವೆಯ ನಂತರ ಮಗುವಾಗದ ಕಾರಣ ಬೇಸರಗೊಂಡ ಈ ದಂಪತಿ ಹಲವೆಡೆ ಚಿಕಿತ್ಸೆ ಪಡೆದರೂ ಸಂತೋಷ ಅವರ ಜೀವನದಲ್ಲಿ ಬಂದಿರಲಿಲ್ಲ.

  ಇದನ್ನೂ ಓದಿ: Pregnancy: ಗರ್ಭಿಣಿಯಾಗಿದ್ದಾಗ ಜಂಕ್ ಫುಡ್ ತಿನ್ನುವ ಬಯಕೆ ತಂದೊಡ್ಡಲಿದೆ ಅಪಾಯ!

  ಹಲವು ಅನುಮಾನಗಳಿದ್ದವು

  ಸುಮಾರು ಒಂದೂವರೆ ವರ್ಷದ ಹಿಂದೆ ಅವರು ತಮ್ಮ ಸಂಬಂಧಿಕರ ಮೂಲಕ ಇಲ್ಲಿಗೆ ಬಂದಿದ್ದರು. ಬಳಿಕ ಇಲ್ಲಿ ಚಿಕಿತ್ಸೆ ಆರಂಭಿಸಲಾಯಿತು. ಐವಿಎಫ್ ಪ್ರಕ್ರಿಯೆಯ ಮೂಲಕ ಮೂರನೇ ಪ್ರಯತ್ನದಲ್ಲಿ ಚಂದ್ರಾವತಿ ದೇವಿ 9 ತಿಂಗಳ ಹಿಂದೆ ಗರ್ಭಿಣಿಯಾಗಲು ಸಾಧ್ಯವಾಯಿತು. ಆ ಸಮಯದಲ್ಲಿ ಸಂತೋಷವಾಗಿತ್ತಾದರೂ, ಆದರೆ ಇಷ್ಟು ಹಿರಿಯ ವಯಸ್ಸಿನಲ್ಲಿ ಗರ್ಭಧಾರಣೆಯಾಗಿ 9 ತಿಂಗಳು ಮಗುವನ್ನು ಹೊತ್ತುಕೊಂಡು ನಂತರ ಯಶಸ್ವಿ ಪ್ರಸವ ಸಾಧ್ಯವೋ ಇಲ್ಲವೋ ಎಂಬ ಭಯವೂ ಹುಟ್ಟಿಕೊಂಡಿತ್ತು. ಆದರೆ ಅಂತಿಮವಾಗಿ ಸೋಮವಾರ, ಎಲ್ಲವೂ ಸಾಧ್ಯವಾಯಿತು. ಮಗು ಕೂಡಾ ಆರೋಗ್ಯವಾಗಿದೆ.

  Supreme Court allows unmarried women to terminate 24 week pregnancy stg asp

  ಹೊಸ ಕಾನೂನು ಜೂನ್ 2022 ರಿಂದ ಜಾರಿಗೆ ಬಂದಿದೆ
  ಗುಪ್ತಾ ಪ್ರಕಾರ, ಡಿಸೆಂಬರ್ 2021 ಮತ್ತು ಜನವರಿ 2022 ರಲ್ಲಿ ಭಾರತದ ಸಂಸತ್ತು ಕಾನೂನನ್ನು ಅಂಗೀಕರಿಸಿತು. ಇದು ಜೂನ್ 2022 ರಿಂದ ಜಾರಿಗೆ ಬಂದಿದೆ. ಅವರ ಪ್ರಕಾರ, ಈಗ ಯಾವುದೇ ಕೇಂದ್ರವು 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಮತ್ತು ಪುರುಷರಿಗೆ ಬಂಜೆತನಕ್ಕೆ ಐವಿಎಫ್​ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ, ಅಥವಾ ಅವರಿಗೆ ದೀರ್ಘ ವಯಸ್ಸಾಗಿರುವುದರಿಂದ ಚಿಕಿತ್ಸೆಯನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಈ ಕಾನೂನು ಜಾರಿಗೆ ಬರುವ ಸ್ವಲ್ಪ ಸಮಯ ಹಿಂದೆಯೇ ದಂಪತಿ ಈ ಪ್ರಕ್ರಿಯೆ ಮಾಡಿಸಿದ್ದರು. ಹೀಗಾಗಿ ಈ ವಯಸ್ಸಿನಲ್ಲಿ ಪೋಷಕರಾಗಿರುವುದು ದಂಪತಿಗಳ ಅದೃಷ್ಟವಾಗಿದೆ.

  ಇದನ್ನೂ ಓದಿ:  Pregnancy Tips: PCOS ಇದ್ದರೂ ಗರ್ಭಿಣಿಯಾಗಬಹುದು..! ಈ ವಿಚಾರಗಳನ್ನು ತಪ್ಪದೇ ಪಾಲಿಸಿ ಎನ್ನುತ್ತಾರೆ ವೈದ್ಯರು

  ಗೋಪಿ ಸಿಂಗ್ 40 ವರ್ಷಗಳ ಹಿಂದೆ ನಿವೃತ್ತರಾಗಿದ್ದರು

  ಗೋಪಿ ಸಿಂಗ್ ನಿವೃತ್ತ ಯೋಧ. ಸೇನೆಯಿಂದ ನಿವೃತ್ತರಾಗಿ 40 ವರ್ಷಗಳಾಗಿವೆ. ಬಾಂಗ್ಲಾದೇಶ ಯುದ್ಧದಲ್ಲಿ ಗೋಪಿ ಸಿಂಗ್ ಕೂಡ ಗುಂಡು ಹಾರಿಸಿದ್ದರು. ಮದುವೆಯಾಗಿ ಸುಮಾರು ಐದೂವರೆ ದಶಕಗಳ ನಂತರ ಅವರ ಮನೆಯಲ್ಲಿ ದೀಪ ಬೆಳಗಿದೆ. ಸಂತೋಷದ ಉಡುಗೊರೆ ಬಂದಿದೆ. ಚಂದ್ರಾವತಿಯ ಸಿಸೇರಿಯನ್ ಆಪರೇಷನ್ ಮಾಡಿದ ವೈದ್ಯೆ ಕರ್ನಲ್ ರೀನಾ ಯಾದವ್ ಕೂಡ ಯೋಧ ಎಂಬುದು ಕಾಕತಾಳೀಯ.
  Published by:Precilla Olivia Dias
  First published: