Murder for Food: ಹೆಂಡತಿಯೊಬ್ಬಳು ಮನೆಯೊಳಗೆ ಇದ್ದರೆ ನನಗೆ ಅದು ಕೋಟಿ ರೂಪಾಯಿ ಅನ್ನುವುದನ್ನ ಕೇಳಿದ್ದೇವೆ. ಹೆಂಡತಿ ಎಂದರೆ ಭಾರವಲ್ಲ ಅದು ಒಂದು 'ಬಂಧನ'. ಗಂಡನ ಎಲ್ಲಾ ಕೆಲಸಗಳಿಗೂ ಬೆನ್ನೆಲುಬು ಹೆಂಡತಿ. ಒಬ್ಬರಿಗೊಬ್ಬರನ್ನು ಅರ್ಥ ಮಾಡಿಕೊಂಡು ಸಾಗುವುದೇ ದಾಂಪತ್ಯ. ಆದರೆ ಜಾರ್ಖಂಡ್ (Jharkhand)ನಲ್ಲಿ 70 ವರ್ಷದ ಪತಿಯೊಬ್ಬ ಊಟ ಕೊಡಲು ತಡ ಮಾಡಿದ್ದಕ್ಕೆ, ಹೆಂಡತಿಗೆ ಹೊಡೆದು ಸಾಯಿಸಿದ್ದಾನೆ. ಜಾರ್ಖಂಡ್(Jharkhand)ನ ಕುಂತಿ(Khunti) ಜಿಲ್ಲೆಯ ಕಲಾಮತಿ (Khalamati) ಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದೆ. ಮನೆಯಲ್ಲಿಯೇ ಇದ್ದ 70 ವರ್ಷದ ಪತಿ, ರಾತ್ರಿ ಅಡುಗೆ ಮಾಡುವಂತೆ ಹೆಂಡತಿಗೆ ಹೇಳಿದ್ದಾನೆ. ಅದರಂತೆ ಹೆಂಡತಿ ಅಡುಗೆ ಮಾಡಲು ಮುಂದಾಗಿದ್ದಳು. ಅಡುಗೆ ಮಾಡಿ ಊಟ ಬಡಿಸಲು ಕೊಂಚ ಸಮಯ ತಡವಾಗಿದೆ. ಇಷ್ಟಕ್ಕೆ ಕೋಪಗೊಂಡ ಪತಿ ಹೆಂಡತಿ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾನೆ.
ಗಂಡನ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಪತ್ನಿ ಮನೆಯಲ್ಲಿಯೇ ಕುಸಿದು ಬಿದ್ದಿದ್ದಾಳೆ. ಕನಿಷ್ಠ ಪಕ್ಷ ಹೆಂಡತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗದೆ ಪತಿ ಕ್ರೌರ್ಯ ಮೆರೆದಿದ್ದಾನೆ. ಅಕ್ಕ ಪಕ್ಕದವರಿಗೂ ತನ್ನ ವಿಷಯ ತಿಳಿಯಬಾರದೆಂದು ಪತ್ನಿ ಬಾಯಿಯನ್ನು ಮುಚ್ಚಿದ್ದಾನೆ. ಕೈಮುಗಿದು ಹೆಂಡತಿ ಬೇಡಿಕೊಂಡರು, ಪತ್ನಿ ಮೇಲೆ ಮತ್ತೆ
ಹಲ್ಲೆ ಮಾಡಿದ್ದಾನೆ. ರಕ್ತದ ಮಡುವಿನಲ್ಲಿ ಹೆಂಡತಿ ಬಿದ್ದಿದ್ದರು, ತಟ್ಟೆಗೆ ಊಟ ಬಡಿಸಿಕೊಂಡು ತಿಂದು ಮುಗಿಸಿದ್ದಾನೆ ಎನ್ನಲಾಗಿದೆ. ಕಳೆದ ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಮಾರನೇ ದಿನ ಅಂದರೆ ಭಾನುವಾರದವರೆಗೆ ಈ ವಿಷಯ ಯಾರಿಗೂ ತಿಳಿಯದಂತೆ ಪತಿ ನೋಡಿಕೊಂಡಿದ್ದಾನೆ. ಇಡೀ ರಾತ್ರಿ ಹೆಂಡತಿ
ಮೃತದೇಹದ ಜೊತೆಗೆ ಮನೆಯಲ್ಲಿಯೇ ಗಂಡ ಕಾಲ ಕಳೆದಿದ್ದಾನೆ.
ವಿಚಾರ ತಿಳಿದಿದ್ದು ಮಾರನೇ ದಿನ
ಮಾರನೇ ದಿನ ಬೆಳಿಗ್ಗೆ ಪೊಲೀಸರಿಗೆ ಈ ವಿಚಾರ ತಿಳಿದಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪತಿಯನ್ನ ವಶಕ್ಕೆ ಪಡೆದಿದ್ದಾರೆ. ಬಳಿಕ ಹೆಂಡತಿ
ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ, ಅಂತ್ಯಕ್ರಿಯೆ ಮಾಡಲಾಗಿದೆ. ಇನ್ನು ಈ ಘಟನೆಗೂ ಮುನ್ನ ಗಂಡ ಹೆಂಡತಿ ಇಬ್ಬರೂ ಮದ್ಯಪಾನ(Drinks) ಮಾಡಿದ್ದರು ಎಂದು ಹೇಳಲಾಗುತ್ತಿದೆ. 40ಕ್ಕೂ ಹೆಚ್ಚು ವರ್ಷಗಳ ಕಾಲ ಸಂಸಾರ ನಡೆಸಿದ ಈ
ದಂಪತಿ ಬದುಕಲ್ಲಿ, ಈ ರೀತಿಯಾಗಿರುವುದು ವಿಪರ್ಯಾಸವೇ ಸರಿ. ವೃದ್ಧಾಪ್ಯದಲ್ಲಿ ನೆಮ್ಮದಿಯಿಂದ ಇರಬೇಕಿದ್ದ ಪತಿ, ಕೋಪದ ಕೈಗೆ ಬುದ್ಧಿ ಕೊಟ್ಟು ಕಂಬಿ ಹಿಂದೆ ಸೇರಿದ್ದಾನೆ.
ಇದನ್ನೂ ಓದಿ: ಮದ್ಯ ಖರೀದಿಗೆ ಹಣ ನೀಡದ ಹೆಂಡತಿಯನ್ನೇ ಕೊಲೆ ಮಾಡಿದ ಕುಡುಕ ಗಂಡ
ಇನ್ನು ಕಳೆದ ತಿಂಗಳು ಇಂತಹದ್ದೆ ಪ್ರಕರಣ ಬೆಂಗಳೂರಿನಲ್ಲೂ ನಡೆದಿತ್ತು. ಹೆಂಡತಿ ರುಚಿಯಾಗಿ ಚಿಕನ್ ಫ್ರೈ(Tasty Chiken Fry) ಮಾಡಿಲ್ಲ ಎಂಬ ಒಂದೇ ಕಾರಣಕ್ಕೆ ಶುರುವಾದ ಜಗಳ
ಕೊಲೆಯಲ್ಲಿ ಅಂತ್ಯವಾಗಿತ್ತು. ಪತ್ನಿ ಶೀರೀನ್ ಭಾನು ಎಂಬಾಕೆಯನ್ನು ಪತಿ ಮುಬಾರಕ್ ಎಂಬಾತ ಹತ್ಯೆ ಮಾಡಿದ್ದ. ಐದು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಬೆಂಗಳೂರಿನ ಹೆಸರಘಟ್ಟ(Hesaraghatta) ರಸ್ತೆಯ ತರಬನಹಳ್ಳಿಯಲ್ಲಿ ಸಂಸಾರ ನಡೆಸುತ್ತಿದ್ದರು. ಅನ್ಯೋನ್ಯವಾಗಿದ್ದ ಇವರ ಜೀವನದಲ್ಲಿ ಚಿಕನ್ ಫ್ರೈ (Chiken Fry) ಯಮನ ಸ್ವರೂಪವಾಗಿ ಬಂದಿತ್ತು.
ಹೊಂದಾಣಿಕೆ ಇಬ್ಬರಿಗೂ ಮುಖ್ಯ
ಮದುವೆಯಾದ ಬಳಿಕ ಗಂಡ ಹೆಂಡತಿಯನ್ನು ಅರ್ಥ ಮಾಡಿಕೊಳ್ಳುವುದು ಅಥವಾ ಹೆಂಡತಿ ಗಂಡನನ್ನು ಅರ್ಥ ಮಾಡಿಕೊಳ್ಳುವುದು ಸಾಮಾನ್ಯ. ಹಾಗೂ ಇದು ನಡೆಯಬೇಕಾದ ಪ್ರಕ್ರಿಯೆ ಕೂಡ. ಒಬ್ಬರ ಬೇಕು ಬೇಡಗಳನ್ನು ಇನ್ನೊಬ್ಬರು ಅರ್ಥ ಮಾಡಿಕೊಂಡು ಅದರಂತೆ ನಡೆದರೆ ಮಾತ್ರ ಜೀವನ ಖುಷಿಯಾಗಿರುತ್ತದೆ.
(ವರದಿ- ವಾಸುದೇವ್. ಎಂ) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ