ಆಟ ಕಲಿಸಬೇಕಿದ್ದ ಕೋಚ್ ಬಾಲಕನ ಪಾಲಿಗೆ ಯಮನಾದ: ಹುಡುಗನ ದೇಹವನ್ನು 27 ಸಲ ನೆಲಕ್ಕೆ ಬಡಿದ ಕ್ರೂರಿ!

ಜುಡೋ ಸ್ಪರ್ಧೆಯಲ್ಲಿ ದೊಡ್ಡವರೊಂದಿಗೆ ಕಾದಾಡುವಂತೆ 7 ವರ್ಷ ಬಾಲಕನೊಂದಿಗೆ ಕದಾಡಿದ್ದಾನೆ. ಏಕಾಏಕಿ ಬಾಲಕನ ಅಂಕಲ್​ ಮುಂದೆಯೇ ರೌದ್ರಾವತಾರ ತಾಳಿದ್ದಾನೆ. ಬಾಲಕನ್ನು ಹಿಡಿದುಕೊಂಡು ಇಡೀ ದೇಹ ನೆಲಕ್ಕೆ ಬೀಳುವಂತೆ ಒಗೆದಿದ್ದಾನೆ.

ಫೈಲ್​ ಫೋಟೋ

ಫೈಲ್​ ಫೋಟೋ

  • Share this:
ಗುರುವಿನ ಅಡಿಯಾಳು ಆಗುವವರೆಗೂ ವಿದ್ಯೆ ದಕ್ಕಲ್ಲ ಎಂಬ ಮಾತು ಇತ್ತು. ಗುರುವಿಗಾಗಿ ಹೆಬ್ಬರಳ್ಳನ್ನೇ ಕೊಟ್ಟ ಏಕಲವ್ಯನ ಕಥೆಯನ್ನೇ ಕೇಳಿದ್ದೇವೆ. ಗುರಿ ತೋರಬೇಕಿದ್ದ ಗುರುವೊಬ್ಬ ಇಲ್ಲಿ ಶಿಷ್ಯನ ಪಾಲಿಗೆ ಯಮನಾಗಿದ್ದಾರೆ. ಜೂಡೋ ಕೋಚ್​ 7 ವರ್ಷ ಬಾಲಕನ ಪ್ರಾಣವನ್ನೇ ತೆಗೆದಿದ್ದಾರೆ. ಆಟದ ಪಟ್ಟುಗಳ ಅಭ್ಯಾಸ ಮಾಡಿಸುವ ವೇಳೆ ಪುಟ್ಟ ಬಾಲಕನ ದೇಹವನ್ನು ಬರೋಬ್ಬರಿ 27 ಬಾರಿ ನೆಲಕ್ಕೆ ಬಡಿದಿದ್ದಾನೆ. ಕೋಚ್​ ಕ್ರೌರ್ಯಕ್ಕೆ ಮುಗ್ಧ ಬಾಲಕ 70 ದಿನಗಳ ಕಾಲ ಕೋಮದಲ್ಲಿದ್ದು, ಕೊನೆಗೆ ಕೊನೆಯುಸಿರೆಳೆದಿದ್ದಾನೆ.

ನಮ್ಮಲ್ಲಿ ಕಬಡ್ಡಿ ಆಟದಂತೆ ಥೈವಾನ್​​ನಲ್ಲಿ ಜುಡೋ ಆಟಕ್ಕೆ ತನ್ನದೇ ಆದ ಪ್ರಾಶಸ್ತ್ಯವಿದೆ. ಇಲ್ಲಿ ಮಕ್ಕಳನ್ನು ಕ್ರಿಕೆಟ್​ ಕಲಿಸುವಂತೆ ಅಲ್ಲಿನ ಪೋಷಕರು ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲೇ ಜುಡೋ ತರಬೇತಿಗೆ ಸೇರಿಸುತ್ತಾರೆ. ಹುಂಗಾ ಎಂಬ ಮನೆತನದ ಬಾಲಕನನ್ನು ಹೋ ಎಂಬುವರ ಜುಡೋ ಟ್ರೈನಿಂಗ್​ ಕೇಂದ್ರಕ್ಕೆ ಸೇರಿಸಿದ್ದಾರೆ. ಎರಡು ತಿಂಗಳುಗಳ ಹಿಂದೆ ತನ್ನ ಅಂಕಲ್​​ನೊಂದಿಗೆ ಬಾಲಕ ಜುಡೋ ಟ್ರೈನಿಂಗ್​ ಕ್ಲಾಸ್​​ಗೆ ಬಂದಿದ್ದ.

ರಿಂಗ್​ನಲ್ಲಿ ಜುಡೋ ಕಲಿಸುವುದಾಗಿ ಬಂದ ಕೋಚ್​ ಬಾಲಕನಿಗೆ ಕಲಿಸುತ್ತಿದ್ದೇನೆ ಎಂಬುವುದನ್ನೇ ಮರೆತು ವರ್ತಿಸಿದ್ದಾನೆ. ನಿಜವಾದ ಜುಡೋ ಸ್ಪರ್ಧೆಯಲ್ಲಿ ದೊಡ್ಡವರೊಂದಿಗೆ ಕಾದಾಡುವಂತೆ 7 ವರ್ಷ ಬಾಲಕನೊಂದಿಗೆ ಕದಾಡಿದ್ದಾನೆ. ಏಕಾಏಕಿ ಬಾಲಕನ ಅಂಕಲ್​ ಮುಂದೆಯೇ ರೌದ್ರಾವತಾರ ತಾಳಿದ್ದಾನೆ. ಬಾಲಕನ್ನು ಹಿಡಿದುಕೊಂಡು ಇಡೀ ದೇಹ ನೆಲಕ್ಕೆ ಬೀಳುವಂತೆ ಒಗೆದಿದ್ದಾನೆ. ಉಸಿರು ಆಡಲು ಸಾಧ್ಯವಾಗುತ್ತಿಲ್ಲ ಎಂದು ಬಾಲಕ ಬೇಡಿಕೊಂಡರು ಬಿಟ್ಟಿಲ್ಲ.

ಬರೋಬ್ಬರಿ 27ಕ್ಕೂ ಹೆಚ್ಚು ಬಾರಿ ಬಾಲಕನನ್ನು ಬಟ್ಟೆಯಂತೆ ಒಗೆದಂತೆ ನೆಲಕ್ಕೆ ಬಡಿದಿದ್ದಾನೆ. ಭಯಗೊಂಡ ಅಂಕಲ್​​ ಓಡಿ ಬಂದು ಕೋಚ್​ನ ತಡೆದಿದ್ದಾನೆ. ಅಷ್ಟರಲ್ಲಿ ಬಾಲಕ ಪ್ರಜ್ಞಾಹೀನನಾಗಿದ್ದ. ಕೂಡಲೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೆದುಳಿಗೆ ತೀವ್ರ ಪೆಟ್ಟಾಗಿದ್ದರಿಂದ ಬಾಲಕ ಕೋಮಗೆ ಹೋಗಿದ್ದ. 70 ದಿನಗಳ ಕಾಲ ಕೋಮಾದಲ್ಲಿದ್ದ ಬಾಲಕ ಕೊನೆ ಕಣ್ಣು ಮುಚ್ಚಿದ್ದಾನೆ. ಕ್ರೂರಿ ಕೋಚ್​​ನ ಥೈವಾನ್​ ಪೊಲೀಸರು ಬಂಧಿಸಿದ್ದಾರೆ.

ಇತರೆ ಮಕ್ಕಳ ಮೇಲೂ ಹಲ್ಲೆ ಮಾಡಿರುವು, ಮಕ್ಕಳನ್ನು ಅಪರಾಧ ಕೃತ್ಯಗಳಲ್ಲಿ ಬಳಸಿಕೊಂಡಿರುವುದು ಬಯಲಾಗಿದೆ. ಅಮಾನವೀಯವಾಗಿ ನಡೆದುಕೊಂಡ ಕೋಚ್​ ವಿರುದ್ಧ ಭಾರೀ ಜನಾಕ್ರೋಶ ವ್ಯಕ್ತವಾಗಿದೆ. ಬಾಲಕನ ಕುಟುಂಬ ನ್ಯಾಯಕ್ಕಾಗಿ ಹೋರಾಡುತ್ತಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: