Crime News| ನಾಗ್ಪುರದ ಶಾಲೆಯ ಶೌಯದಲ್ಲಿ 7 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಆರೋಪಿಯನ್ನು ಪೊಲೀಸರು ಸ್ಥಳೀಯ ಮಾಜಿಸ್ಟ್ರೇಟ್‌ ಮುಂದೆ ಹಾಜರು ಪಡಿಸಿದ್ದಾರೆ. ನ್ಯಾಯಾಧೀಶರು 3 ದಿನಗಳ ಅವಧಿಯವರೆಗೆ ಆರೋಪಿಯನ್ನು ಪೊಲೀಸ್‌ ಕಸ್ಟಡಿಗೆ ನೀಡಿದ್ದಾರೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ನಾಗ್ಪುರ (ಜೂನ್ 14); 7 ವರ್ಷದ ಬಾಲಕಿಯನ್ನು ವ್ಯಕ್ತಿಯೋರ್ವ ಅತ್ಯಾಚಾರ ನಡೆಸಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಾಗ್ಪುರ ಜಿಲ್ಲೆಯ ಕೊಂಢಸಾವಲಿ ಗ್ರಾಮದಲ್ಲಿ ಶನಿವಾರ ಸಂಜೆಯ ವೇಳೆಗೆ ಆರೋಪಿಯು ಬಾಲಕಿಯಯನ್ನು ಶಾಲೆಯ ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಘಟನೆ ತಿಳಿದ ಸ್ಥಳಿಯರು ಸ್ಥಳಕ್ಕೆ ಆಗಮಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ಅತ್ಯಾಚಾರ ಆರೋಪಿ ಅಂಕುಶ್‌ ಭೋಸ್ಕರ್‌ (25) ಸ್ಥಳೀಯ ನಿವಾಸಿಯಾಗಿದ್ದು ಬಾಲಕಿಗೆ ಪರಿಚಿತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

  ಅತ್ಯಾಚಾರಕ್ಕೆ ಒಳಗಾದ ಬಾಲಕಿ ಶಾಲೆಯ ಮೈದಾನದಲ್ಲಿ ಆಟವಾಡುತ್ತಿದ್ದಳು. ಆರೋಪಿಯು ಬಲವಂತವಾಗಿ ಬಾಲಕಿಯನ್ನು ಶೌಚಾಲಯಕ್ಕೆ ಎಳೆದೊಯ್ದಿದ್ದಾನೆ. ಆನಂತರ ಶೌಚಾಲಯದಲ್ಲಿ ಬಾಲಕಿಯ ಮೇಲೆ ಆರೋಪಿ ಅಂಕುಶ್‌ ಭೋಸ್ಕರ್‌ ಅತ್ಯಾಚಾರವೆಸಗಿದ್ದಾನೆ. ಆರೋಪಿಯು ಬಾಲಕಿಗೆ ವಿಷಯವನ್ನು ಯಾರಿಗೂ ತಿಳಿಸದಂತೆ ಜೀವ ಬೆದರಿಕೆಯನ್ನು ಸಹ ಹಾಕಿದ್ದಾನೆ.

  ಶಾಲೆಯ ದಾರಿಯಲ್ಲಿ ಹೋಗುತ್ತಿದ್ದ ಸ್ಥಳೀಯ ವ್ಯಕ್ತಿ ಬಾಲಕಿಯ ಕಿರುಚಾಟವನ್ನು ಕೇಳಿ ಸ್ಥಳಕ್ಕೆ ಹೋಗಿ ಬಾಲಕಿಯನ್ನು ರಕ್ಷಿಸಿದ್ದಾರೆ. ಈ ವೇಳೆ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ ಪೊಲೀಸರು ಹಳ್ಳಿಗರಿಂದ ಮಾಹಿತಿಯನ್ನು ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.

  ಇದನ್ನೂ ಓದಿ: Siddaramaih: ಕೊರೋನಾದಿಂದ ಮೃತಪಟ್ಟವರ ಪರಿಹಾರವನ್ನು 5 ಲಕ್ಷಕ್ಕೆ ಏರಿಸಿ; ಸಿದ್ದರಾಮಯ್ಯ ಒತ್ತಾಯ

  IPC ಸೆಕ್ಷನ್‌ 376(a) (b) (12 ವರ್ಷದ ಒಳಗಿನ ಮಹಿಳೆಯ ಮೇಲೆ ಅತ್ಯಾಚಾರ) ಮತ್ತು ಸೆಕ್ಷನ್‌ 506 ( ಅಪರಾಧಿಕ ಕೃತ್ಯಕ್ಕೆ ಕುಮ್ಮಕ್ಕು) ಅಡಿಯಲ್ಲಿ ಆರೋಪಿಯ ವಿರುದ್ಧ FIR ದಾಖಲಿಸಲಾಗಿದೆ. ಹಾಗೇ POCSO ಕಾಯ್ದೆಯ ಅಡಿಯಲ್ಲಿಯೂ ಆರೋಪಿಯ ವಿರುದ್ಧ ಕಟೋಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಇದನ್ನೂ ಓದಿ: ಕುಟುಂಬದಲ್ಲಿ ಕೊರೊನಾದಿಂದ ಮೃತಪಟ್ಟ ಒಬ್ಬರಿಗೆ ₹1 ಲಕ್ಷ ಪರಿಹಾರ : ಸಿಎಂ ಯಡಿಯೂರಪ್ಪ ಘೋಷಣೆ

  ಆರೋಪಿಯನ್ನು ಪೊಲೀಸರು ಸ್ಥಳೀಯ ಮಾಜಿಸ್ಟ್ರೇಟ್‌ ಮುಂದೆ ಹಾಜರು ಪಡಿಸಿದ್ದಾರೆ. ನ್ಯಾಯಾಧೀಶರು 3 ದಿನಗಳ ಅವಧಿಯವರೆಗೆ ಆರೋಪಿಯನ್ನು ಪೊಲೀಸ್‌ ಕಸ್ಟಡಿಗೆ ನೀಡಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:MAshok Kumar
  First published: