ಭೋಪಾಲ್: ಆಟ ಆಡುವ ವೇಳೆ ಕಾಲು ಜಾರಿ ಕೊಳವೆ ಬಾವಿಗೆ (Borewell) ಬಿದ್ದಿದ್ದ 7 ವರ್ಷದ ಬಾಲಕನನ್ನು ಸುಮಾರು 24 ಗಂಟೆಗಳ ಕಾರ್ಯಾಚರಣೆಯ ನಂತರ ಮೇಲೆತ್ತಲಾಯಿತಾದರೂ, ಬಾಲಕ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ (Madhya Pradesh) ವಿದಿಶಾ ಜಿಲ್ಲೆಯಲ್ಲಿ ನಡೆದಿದೆ. 7 ವರ್ಷದ ಲೋಕೇಶ್ ಅಹರ್ವಾರ್ ಎಂಬ ಬಾಲಕ ಮಂಗಳವಾರ ಬೆಳಗ್ಗೆ ಮನೆಯ ಪಕ್ಕದಲ್ಲಿ ಆಟ ಆಡುತ್ತಿದ್ದ ಸಂದರ್ಭದಲ್ಲಿ ಕಾಲು ಜಾರಿ ತೆರದ ಕೊಳವೆ ಬಾವಿಗೆ ಬಿದ್ದಿದ್ದ. ಘಟನೆ ತಿಳಿದು ಸ್ಳಳಕ್ಕಾಗಮಿಸಿದ ಅಧಿಕಾರಿಗಳು, ರಕ್ಷಣಾ ತಂಡ (Rescue Team) ಬಾಲಕನನ್ನು ಹೊರ ತೆಗೆಯಲು ಕಾರ್ಯಾಚರಣೆ ನಡೆಸಿದ್ದರು. ಆದರೆ 24 ಗಂಟೆಗಳ ಕಾರ್ಯಾಚರಣೆ ವಿಫಲವಾಗಿ ಬಾಲಕ ಸಾವನ್ನಪ್ಪಿದ್ದಾನೆ. ಮಂಗಳವಾರ ಪುಣೆಯಲ್ಲಿ (Pune) 5 ವರ್ಷದ ಬಾಲಕ ಕೂಡ ಕೊಳವೆ ಬಾವಿ ದುರಂತದಲ್ಲಿ ಸಾವನ್ನಪ್ಪಿದ್ದ. 24 ಗಂಟೆಗಳ ಅಂತರಲ್ಲಿ ಇಬ್ಬರು ಬಾಲಕರು ಇದೇ ದುರಂತದಲ್ಲಿ ಸಾವನ್ನಪ್ಪಿರುವುದು ದುರಾದೃಷ್ಟಕರ ಸಂಗತಿಯಾಗಿದೆ.
60 ಅಡಿ ಕೊಳವೆ ಬಾವಿ
ಬಾಲಕ 60 ಅಡಿ ಆಳದ ಕೊಳವೆ ಬಾವಿ ಬಿದ್ದಿದ್ದು, 43 ಅಡಿ ಆಳದಲ್ಲಿ ಸಿಲುಕಿದ್ದ. ಕ್ಯಾಮರಾವನ್ನು ಕೊಳವೆ ಬಾವಿಯೊಳಗೆ ಇಳಿಸಿ ಆತನ ಪರಿಸ್ಥಿತಿಯನ್ನು ಗಮನ ಹರಿಸಲಾಗುತ್ತಿತ್ತು. ಕೃತಕ ಉಸಿರಾಟ ವ್ಯವಸ್ಥೆ ಕಲ್ಪಿಸಿಕೊಡಲಾಗಿತ್ತು. ಕೊಳವೆ ಬಾವಿ ಪಕ್ಕದಲ್ಲೇ ಸುರಂಗವನ್ನು ತೋಡಿ ಬಾಲಕನನ್ನು ಬದುಕಿಸಲು ಪ್ರಯತ್ನ ನಡೆಸಲಾಗಿತ್ತು. ಆದರೆ ಸತತ 24 ಗಂಟೆಗಳ ಕಾರ್ಯಾಚರಣೆ ನಡೆಸಿ ಬಾಲಕನನ್ನು ಹೊರ ತೆಗೆದರೂ ಬಾಲಕ ಜೀವಂತವಾಗಿ ಉಳಿಯಲಿಲ್ಲ ಎಂದು ವಿದಿಶಾ ಜಿಲ್ಲಾಧಿಕಾರಿ ಉಮಾಶಂಕರ್ ಭಾರ್ಗವ್ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ನಂತರ ತಿಳಿಸಿದ್ದಾರೆ.
4 ಲಕ್ಷ ರೂಪಾಯಿ ಪರಿಹಾರ
ಕೊಳವೆ ಬಾವಿಗೆ ಬಿದ್ದಿದ್ದ ಬಾಲಕನನ್ನು ಸುಮಾರು 24 ಗಂಟೆಗಳ ಮೇಲೆತ್ತಲಾಯಿತು. ನಂತರ ಜಿಲ್ಲಾ ಕೇಂದ್ರದಿಂದ ಸುಮಾರು 14 ಕಿಮೀ ದೂರದಲ್ಲಿರುವ ಲ್ಯಾಟೇರಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಮಗುವನ್ನು ಸಾಗಿಸಲಾಯಿತು. ಆದರೆ ಆತನನ್ನು ಜೀವಂತವಾಗಿ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಹರ್ಷಲ್ ಚೌಧರಿ ತಿಳಿಸಿದ್ದಾರೆ.
ಇನ್ನು ದುರಂತದಲ್ಲಿ ಮೃತಪಟ್ಟ ಬಾಲಕನ ಕುಟುಂಬಕ್ಕೆ ಸಾಂತ್ವನ ತಿಳಿಸಿರುವು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕುಟುಂಬಕ್ಕೆ 4 ಲಕ್ಷ ರೂಪಾಯಿ ನೆರವು ಘೋಷಿಸಿದ್ದಾರೆ.
ಇದನ್ನೂ ಓದಿ: Bhopal ಅನಿಲ ದುರಂತ ಪ್ರಕರಣ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ!
ಕಬ್ಬು ಕಾರ್ಮಿಕನ ಪುತ್ರ
ಸೋಮವಾರ ಸಂಜೆ 5 ಗಂಟೆವೇಳೆ ಕರ್ಜತ್ ತಾಲೂಕಿನ ವ್ಯಾಪ್ತಿಯ ಕೋಪರ್ಡಿ ಗ್ರಾಮದಲ್ಲಿ ಬಾಲಕ ಕೊಳವೆ ಬಾವಿಗೆ ಬಿದ್ದಿದ್ದ. ಈತ ಮಧ್ಯಪ್ರದೇಶ ಮೂಲದ ಕಬ್ಬು ಕಾರ್ಮಿಕನ ಮಗ ಎಂದು ತಿಳಿದುಬಂದಿದೆ. ಬಾಲಕ ಕೊಳವೆ ಬಾವಿಗೆ ಬಿದ್ದ ಸುದ್ದಿ ಎಲ್ಲೆಡೆ ಹಬ್ಬಿದ್ದರಿಂದ ಸಾವಿರಾರು ಜನರು ಘಟನಾ ಸ್ಥಳಕ್ಕೆ ಆಗಮಿಸಿದ್ದರು. 15 ಅಡಿ ಆಳದಲ್ಲಿ ಸಿಲುಕಿದ್ದ ಬಾಲಕನಿಗೆ ರಕ್ಷಣಾ ಸಿಬ್ಬಂದಿ ಆಮ್ಲಜನಕ ವ್ಯವಸ್ಥೆ ಮಾಡಿ ಉಸಿರಾಟಕ್ಕೆ ತೊಂದರೆಯಾಗದಂತೆ ನೋಡಿಕೊಂಡಿದ್ದರು.
ಮಧ್ಯರಾತ್ರಿ 2ರ ವೇಳೆ ಕಾರ್ಯಾಚರಣೆ ನಡೆಸಿ ಮಗುವನ್ನು ಹೊರ ತೆಗೆಯಲಾಯಿತು. ಆದರೆ ದುರಾದೃಷ್ಟವಶಾತ್ ಮಗುವಿನ ಜೀವವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಉಸಿರಾಟ ತೊಂದರೆಯಿಂದ ಬಾಲಕ ಬಾವಿ ಒಳಗೆ ಜೀವ ಬಿಟ್ಟಿದ್ದ ಎಂದು ತಿಳಿದುಬಂದಿದೆ.
ಕೊಳವೆ ಬಾವಿಗಳನ್ನು ಮುಚ್ಚಲು ಮನವಿ
ನೀರು ಬತ್ತಿದ ಕೊಳವೆ ಬಾವಿಗಳನ್ನು ಅಥವಾ ನೀರು ಬಾರದ ಬೋರ್ವೆಲ್ಗಳನ್ನು ಮುಚ್ಚದೆ ಹಾಗೆ ಬಿಡುವುದರಿಂದ ಇಂತಹ ದುರಂತಗಳು ನಡೆಯುತ್ತಲೇ ಇವೆ. ರೈತರು ತಮ್ಮ ಬೋರ್ವೆಲ್ಗಳಲ್ಲಿ ನೀರು ಬಾರದಿದ್ದಾಗ ಮುನ್ನಚ್ಚೆರಿಕೆ ಕ್ರಮವಾಗಿ ಅವುಗಳನ್ನು ಮುಚ್ಚಬೇಕು. ಇದರಿಂದ ಇಂತಹ ಮಕ್ಕಳ ಸಾವುಗಳನ್ನು ನಿಯಂತ್ರಿಸಬಹುದು ಎಂದು ಅಧಿಕಾರಿಗಳು ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ