Workers Rescued: ಕಾಣೆಯಾಗಿದ್ದ 7 ಕಾರ್ಮಿಕರು 3 ವಾರಗಳ ಬಳಿಕ ಪತ್ತೆ; ಸಣಕಲು ದೇಹ, ಮಾತಾಡಲು ಆಗ್ತಿಲ್ಲ!

ಈದ್  ಆಚರಿಸಲು ಅಸ್ಸಾಂಗೆ ಮರಳಲು ಗುತ್ತಿಗೆದಾರರು ಅನುಮತಿ ನಿರಾಕರಿಸಿದ ನಂತರ ಜುಲೈ 5 ರಂದು ನಿರ್ಮಾಣ ಸ್ಥಳದಲ್ಲಿನ ಶಿಬಿರಗಳಿಂದ ಪಲಾಯನ ಮಾಡಿದ್ದರು.

ಪತ್ತೆಯಾದ ಕಾರ್ಮಿಕ

ಪತ್ತೆಯಾದ ಕಾರ್ಮಿಕ

  • Share this:
ಅವರೆಲ್ಲಾ ಅರುಣಾಚಲ-ಚೀನಾದ ಗಡಿಯಲ್ಲಿ (Arunachal's China Border) ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿಯ ಕೆಲಸಗಾರರು (Seven Labourers). ಈ ತಿಂಗಳ ಆರಂಭದಲ್ಲಿ ಈದ್​ ಹಬ್ಬಕ್ಕಾಗಿ ತಮ್ಮ ಊರು ಅಸ್ಸಾಂಗೆ (Assam) ಹೋಗಬೇಕು ಅಂದುಕೊಂಡಿದ್ದರು. ಆದರೆ ಗುತ್ತಿಗೆದಾರ ಈ ಕೆಲಸಗಾರರಿಗೆ ಅನುಮತಿಯನ್ನು ನಿರಾಕರಿಸಿದ್ದರು. ಹಬ್ಬಕ್ಕೆ ಹೋಗಲು ರಜೆ ನೀಡದ್ದಕ್ಕೆ ಕಾರ್ಮಿಕರು ಗುಂಪು ಹತಾಷೆಗೊಂಡಿತ್ತು. ಹೇಗಾದರೂ ಮಾಡಿ ಹಬ್ಬಕ್ಕಾಗಿ ಊರಿಗೆ ಹೋಗಲೇಬೇಕು ಎಂದು ಪಣತೊಟ್ಟರು. ಇದಕ್ಕಾಗಿ 8 ಮಂದಿ ಕಾರ್ಮಿಕರು ಕಾಲ್ನಡಿಗೆಯಲ್ಲೇ ಕೆಲಸದ ಜಾಗದಿಂದ ಪಾಲಾಯನ ಮಾಡಿದ್ದರು. ಊರು ತಲುಪುವ ದಾರಿ ಗೊತ್ತಾಗದೇ ದುರ್ಗಮ ಕಾಡಿನಲ್ಲಿ ತಮ್ಮನ್ನು ಮೂರು ಗುಂಪುಗಳಾಗಿ ವಿಂಗಡಿಸಿದರು. ಮೂರು ಗುಂಪುಗಳು ಬೇರೆ ಬೇರೆ ದಿಕ್ಕಿನಲ್ಲಿ ಹೋಗುವುದೆಂದು ನಿರ್ಧರಿಸಿದ್ದರು. ಆದರೆ ಅವರು ಕೈಗೊಂಡ ಪ್ರಯಾಣ ನಿಜಕ್ಕೂ ಅವರ ಪ್ರಾಣಕ್ಕೆ ಸಂಚಕಾರ ತರುವಂತಿತ್ತು. 8 ಕಾರ್ಮಿಕರು ಅಂದಿನಿಂದ ಕಾಣೆಯಾಗಿದ್ದರು. ಅದರಲ್ಲಿ ಒಬ್ಬಾತ ಸಾವಿನ ಮನೆ ಸೇರಿದ್ದರೆ, ಉಳಿದ 7 ಮಂದಿಯನ್ನು ಪತ್ತೆ ಹಚ್ಚಲಾಗಿದೆ.

3 ವಾರಗಳ ಬಳಿಕ ಪತ್ತೆಯಾದ 7 ಕಾರ್ಮಿಕರು

ಕಣ್ಮರೆಯಾಗಿದ್ದ 7 ಕಾರ್ಮಿಕರು 3 ವಾರಗಳ ಬಳಿಕ ಪವಾಡದಂತೆ ಪತ್ತೆಯಾಗಿದ್ದಾರೆ. ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳ ನಿರಂತ ಕಾರ್ಯಾಚರಣೆ ಫಲ ನೀಡಿದೆ. ಅಸ್ಸಾಂನ 19 ರಸ್ತೆ ನಿರ್ಮಾಣ ಕಾರ್ಮಿಕರ ಗುಂಪಿನ ಏಳು ಕಾರ್ಮಿಕರನ್ನು ಪತ್ತೆಹಚ್ಚಿವೆ. ಅವರು ಅರುಣಾಚಲ ಪ್ರದೇಶದ ದೂರದ ಕುರುಂಗ್ ಕುಮೇ ಜಿಲ್ಲೆಯಲ್ಲಿ ಈ ತಿಂಗಳ ಆರಂಭದಲ್ಲಿ ಚೀನಾದ ನೈಜ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ನಾಪತ್ತೆಯಾಗಿದ್ದರು. ವರದಿಗಳ ಪ್ರಕಾರ, ದಮನ್ ವೃತ್ತದಲ್ಲಿರುವ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ನ ರಸ್ತೆ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಏಳು ಕಾರ್ಮಿಕರನ್ನು ಹುರಿ ಬಳಿಯ ದಮನ್‌ನಲ್ಲಿ ರಕ್ಷಿಸಲಾಗಿದೆ.

ಇದನ್ನೂ ಓದಿ: African Swine Fever: ಕೇರಳದಲ್ಲಿ ಸ್ವೈನ್ ಫ್ಲೂ ಪತ್ತೆ! ರಾಹುಲ್ ಗಾಂಧಿ ಕ್ಷೇತ್ರ ವಯನಾಡ್​ನಲ್ಲಿ 300 ಹಂದಿ ಹತ್ಯೆ

ಸರಿಯಾಗಿ ಮಾತನಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಪತ್ತೆ

ಈದ್  ಆಚರಿಸಲು ಅಸ್ಸಾಂಗೆ ಮರಳಲು ಗುತ್ತಿಗೆದಾರರು ಅನುಮತಿ ನಿರಾಕರಿಸಿದ ನಂತರ ಜುಲೈ 5 ರಂದು ನಿರ್ಮಾಣ ಸ್ಥಳದಲ್ಲಿನ ಶಿಬಿರಗಳಿಂದ ಪಲಾಯನ ಮಾಡಿದ್ದರು. ನಂತರ ಅವರು ತಮ್ಮನ್ನು ಮೂರು ವಿಭಿನ್ನ ಗುಂಪುಗಳಾಗಿ ವಿಂಗಡಿಸಿ ಬೇರೆ ಬೇರೆ ದಿಕ್ಕುಗಳಲ್ಲಿ ಹೋದೆವು ಎಂದು ರಕ್ಷಿಸಿದ ಕಾರ್ಮಿಕರು ಹೇಳಿದ್ದಾರೆ. ಕೆಲಸಗಾರರು ಅತ್ಯಂತ ದುರ್ಬಲ ಸ್ಥಿತಿಯಲ್ಲಿ ಕಂಡು ಬಂದಿದ್ದು, ಸರಿಯಾಗಿ ಮಾತನಾಡಲು ಸಹ ಅವರಿಗೆ ಸಾಧ್ಯವಾಗಲಿಲ್ಲ.

ಒಬ್ಬ ಕಾರ್ಮಿಕನ ಶವ ಪತ್ತೆ

ವೈದ್ಯಕೀಯ ನೆರವು ಮತ್ತು ಇತರ ಅಗತ್ಯಗಳನ್ನು ಒದಗಿಸಲು ಅವರನ್ನು ಸ್ಥಳದಲ್ಲಿ ಇರಿಸಲಾಗಿದೆ. ಅಗತ್ಯ ಸಹಾಯವನ್ನು ಕಳುಹಿಸಲು ಜಿಲ್ಲಾಡಳಿತವನ್ನು ನಿಯೋಜಿಸಲಾಗಿದೆ ಮತ್ತು ವೈದ್ಯಕೀಯ ತಂಡಗಳನ್ನು ಕಳುಹಿಸಲಾಗಿದೆ ಎಂದು ಕುರುಂಗ್ ಕುಮೇ ಜಿಲ್ಲೆಯ ಪೊಲೀಸ್ ಅಧೀಕ್ಷಕರು ಎಎನ್‌ಐಗೆ ತಿಳಿಸಿದ್ದಾರೆ. ANI ಪ್ರಕಾರ, ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದು, ಸೋಮವಾರ ದಮನ್ ವೃತ್ತದ ಫುರಾಕ್ ನದಿಯಲ್ಲಿ ಶವ ಪತ್ತೆಯಾಗಿದೆ.

ಇದಕ್ಕೂ ಮುನ್ನ, ಕುರುಂಗ್ ಕುಮೇ ಜಿಲ್ಲೆಯ ಡೆಪ್ಯುಟಿ ಕಮಿಷನರ್ ಘಟನೆ ಬಗ್ಗೆ ಮಾತನಾಡಿ, ಜುಲೈ 13 ರಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ದೂರು ದಾಖಲಿಸಲಾಗಿದೆ. ಈ ಪ್ರದೇಶವು ಗುಡ್ಡಗಾಡು ಪ್ರದೇಶಗಳು ಮತ್ತು ದಟ್ಟ ಕಾಡು ಬಹಳ ದೂರದಲ್ಲಿರುವುದರಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ನಿರ್ಮಾಣ ಹಂತದಲ್ಲಿರುವ ರಸ್ತೆಯು ನಿರ್ಣಾಯಕ ಆಯಕಟ್ಟಿನ ಗಡಿ ರಸ್ತೆಯಾಗಿದ್ದು, ಇದು LAC ಯಿಂದ ಸುಮಾರು 80 ಕಿಮೀ ದೂರದಲ್ಲಿರುವ ಡಾಮಿನ್ ವೃತ್ತದ ಪ್ರಧಾನ ಕಛೇರಿಯಿಂದ ದೂರದ ಗಡಿ ಗ್ರಾಮಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ತಿಳಿಸಿದರು. ಅಸ್ಸಾಂನಿಂದ ವಲಸೆ ಕಾರ್ಮಿಕರನ್ನು ಕರೆತಂದ ಅಸ್ಸಾಂನ ಲಖಿಂಪುರದ ಉಪ ಗುತ್ತಿಗೆದಾರನ ವಿರುದ್ಧ ಮತ್ತೊಂದು ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
Published by:Kavya V
First published: