ಟ್ಯಾಂಕ್​ ಸ್ಪಚ್ಛಗೊಳಿಸಲು ಇಳಿದಿದ್ದ ಮೂವರು ಸಫಾಯಿ ಕರ್ಮಚಾರಿ ಸೇರಿದಂತೆ ಏಳು ಜನ ಉಸಿರುಗಟ್ಟಿ ಸಾವು

ದಬೋಯಿ ತೆಹ್ಸಿಲ್​ ಹೊಟೇಲ್​ನ ತೊಟ್ಟಿಯನ್ನು​ ಸ್ವಚ್ಛಗೊಳಿಸಲು ಹೊಟೇಲ್​ನ ಮೂವರು ಸಿಬ್ಬಂದಿ ಸೇರಿದಂತೆ ನಾಲ್ವರು ಸಫಾಯಿ ಕರ್ಮಚಾರಿಗಳು ಮುಂದಾಗಿದ್ದರು. ಈ ವೇಳೆ ಉಸಿರುಗಟ್ಟಿ ಇವರೆಲ್ಲ ಅಸುನೀಗಿದ್ದಾರೆ.

Seema.R | news18
Updated:June 15, 2019, 12:57 PM IST
ಟ್ಯಾಂಕ್​ ಸ್ಪಚ್ಛಗೊಳಿಸಲು ಇಳಿದಿದ್ದ ಮೂವರು ಸಫಾಯಿ ಕರ್ಮಚಾರಿ ಸೇರಿದಂತೆ ಏಳು ಜನ ಉಸಿರುಗಟ್ಟಿ ಸಾವು
ಶುಚಿ ಮಾಡಲು ಇಳಿದಿದ್ದ ತೊಟ್ಟಿ
  • News18
  • Last Updated: June 15, 2019, 12:57 PM IST
  • Share this:
ನವದೆಹಲಿ (ಜೂ.15): ಹೊಟೇಲ್​​ನ ಮ್ಯಾನ್​ ಹೋಲ್​ನ ಸ್ಚಚ್ಛಗೊಳಿಸಲು ಇಳಿದಿದ್ದ, ಏಳು ಜನರು ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆ ವಡೋದರದಲ್ಲಿ ನಡೆದಿದೆ.

ಜಿಲ್ಲೆಯ ಫರ್ಕುತಿಯಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನಾಲ್ವರು ಸಫಾಯಿ ಕರ್ಮಚಾರಿಗಳು ಸೇರಿದಂತೆ ಏಳು ಜನರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಇಂಡಿಯನ್​ ಎಕ್ಸ್​ಪ್ರೆಸ್​ ವರದಿ ಮಾಡಿದೆ.

ದಬೋಯಿ ತೆಹ್ಸಿಲ್​ ಹೊಟೇಲ್​ನ ತೊಟ್ಟಿಯನ್ನು​ ಸ್ವಚ್ಛಗೊಳಿಸಲು ಹೊಟೇಲ್​ನ ಮೂವರು ಸಿಬ್ಬಂದಿ ಸೇರಿದಂತೆ ನಾಲ್ವರು ಸಫಾಯಿ ಕರ್ಮಚಾರಿಗಳು ಮುಂದಾಗಿದ್ದರು. ಈ ವೇಳೆ ಉಸಿರುಗಟ್ಟಿ ಇವರೆಲ್ಲ ಅಸುನೀಗಿದ್ದಾರೆ.

ಮಹೇಶ್​ ಪಟನ್​ವಾಡಿಯಾ, ಅಶೋಕ್​ ಹರಿಜನ್​, ಬ್ರಿಜೇಶ್​ ಹರಿಜನ್​, ಮಹೇಶ್​ ಹರಿಜನ್​, ವಿಜಯ್​ ಚೌದರಿ, ಸಹದೇವ್​ ವಸವ ಮತ್ತು ಅಜೇಯ ವಸವ ಸಾವನ್ನಪ್ಪಿರುವವರು.

ಇದನ್ನು ಓದಿ: ಇಂದು ಪ್ರಧಾನಿ ನೇತೃತ್ವದಲ್ಲಿ ನೀತಿ ಆಯೋಗದ ಸಭೆ; ಫಲಪ್ರದವಲ್ಲದ ಸಭೆ ಎಂದು ದೂರ ಉಳಿದ ಮಮತಾ ಬ್ಯಾನರ್ಜಿ

ಟ್ಯಾಂಕನ್ನು ಶುಚಿಗೊಳಿಸಲು ನಾಲ್ವರಿಗೆ ಕೆಲಸ ನೀಡಲಾಗಿತ್ತು, ಇದರಲ್ಲಿ ಒಬ್ಬಾತ ಪ್ರವೇಶ ದ್ವಾರದಲ್ಲಿದ್ದರು. ಅಲ್ಲಿ ಗ್ಯಾಸ್​ ಸೋರಿಕೆಯಾದ ಪರಿಣಾಮ ಅವರಿಗೆ ಉಸಿರಾಟದ ಸಮಸ್ಯೆಯಾಗಿದೆ, ಯಾವಾಗ ತೊಟ್ಟಿಯಲ್ಲಿ ಇಳಿದಾದ ಮೇಲೆ ಬರಲಿಲ್ಲ. ಆಗ ಇನ್ನೊಬ್ಬರು ಏನಾಗಿದೆ ಎಂದು ನೋಡಲು ಕೆಳಗಿಳಿದಿದ್ದಾರೆ. ಹೀಗೆ ಏಳು ಜನ ಸಾವನ್ನಪ್ಪಿದ್ದಾರೆ. ಈ ಕುರಿತು ಪೊಲೀಸರು ತನಿಖೆಗೆ ಮುಂದಾಗಿದ್ದು, ಯಾವ ಗ್ಯಾಸ್​ ಸೋರಿಕೆಯಾಗಿ ಈ ಅನಾಹುತ ಸಂಭವಿಸಿದೆ ಎಂಬ ಬಗ್ಗೆ ಪೊಲೀಸರು ತನಿಖೆ ಶುರುಮಾಡಿದ್ದಾರೆ.

First published: June 15, 2019, 12:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading