ಅಹಮದಾಬಾದ್(ಡಿ.27): ಗುಜರಾತ್ನ (Gujarat) ನಾಡಿಯಾಡ್ನಲ್ಲಿ ತನ್ನ ಮಗಳ ಅಶ್ಲೀಲ ವಿಡಿಯೋ ವೈರಲ್ ಮಾಡಿದ್ದನ್ನು ವಿರೋಧಿಸಿದ ಬಿಎಸ್ಎಫ್ ಜವಾನನನ್ನು ಹತ್ಯೆ ಮಾಡಿದ ಆರೋಪದ ಮೇಲೆ ಏಳು ಜನರನ್ನು ಬಂಧಿಸಲಾಗಿದೆ. ಮೂಲಗಳ ಪ್ರಕಾರ, ಬಿಎಸ್ಎಫ್ (BSF) ಸಿಬ್ಬಂದಿ 15 ವರ್ಷದ ಬಾಲಕನ ಮನೆಗೆ ದೂರು ನೀಡಲು ಹೋಗಿದ್ದರು, ಅವರು ವಿಡಿಯೋವನ್ನು ಆನ್ಲೈನ್ನಲ್ಲಿ ಪೋಸ್ಟ್ (Online Post) ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ಜಗಳ ನಡೆದಿದ್ದು, ಬಾಲಕಿಯ ಸಂಬಂಧಿಕರು ಜವಾನನ ಮೇಲೆ ಹಲ್ಲೆ ನಡೆಸಿದ್ದಾರೆ.
ಏಳು ಆರೋಪಿಗಳನ್ನು ಪೊಲೀಸರು ವಿಚಾರಣೆ
ಮಾಧ್ಯಮ ವರದಿಗಳ ಪ್ರಕಾರ, ಮೃತ ಬಿಎಸ್ಎಫ್ ಜವಾನನ ಪತ್ನಿ ಎಫ್ಐಆರ್ ದಾಖಲಿಸಿದ್ದಾರೆ. ಅದರ ಮೇಲೆ ಪೊಲೀಸರು ಕ್ರಮ ಕೈಗೊಂಡಾಗ ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ಇದೀಗ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ: BSF Jawan: ಮಣ್ಣಲ್ಲಿ ಮಣ್ಣಾದ ಬೆಳಗಾವಿಯ ಯೋಧ, ಮುಗಿಲು ಮುಟ್ಟಿದ ಆಕ್ರಂದನ
ಪೊಲೀಸರು ದಾಖಲಿಸಿರುವ ಎಫ್ಐಆರ್ ಪ್ರಕಾರ, ಕಳೆದ ಶನಿವಾರ ರಾತ್ರಿ ಬಿಎಸ್ಎಫ್ ಯೋಧ ತನ್ನ ಪತ್ನಿ, ಇಬ್ಬರು ಪುತ್ರರು ಮತ್ತು ಸೋದರಳಿಯನೊಂದಿಗೆ ಆರೋಪಿ ಬಾಲಕನ ಮನೆಗೆ ದೂರು ನೀಡಲು ತೆರಳಿದ್ದರು. ಆದರೆ ಆರೋಪಿಗಳ ಕುಟುಂಬಸ್ಥರು ನಿಂದಿಸಲು ಆರಂಭಿಸಿದ್ದಾರೆ. ಪ್ರತಿಭಟನೆಗೆ ಮುಂದಾದಾಗ ಆರೋಪಿಗಳು ಆತನ ಮೇಲೆ ಹಲ್ಲೆ ನಡೆಸಿದ್ದಾರೆ.
ಮೃತನ ಮಗಳ ಆಕ್ಷೇಪಾರ್ಹ ವಿಡಿಯೋ ವೈರಲ್ ಆಗಿತ್ತು
ಮೃತ ಯೋಧನನ್ನು ಬಿಎಸ್ಎಫ್ 56 ಮೆಹ್ಸಾನಾದಲ್ಲಿ ನಿಯೋಜಿಸಲಾಗಿತ್ತು. ಟೈಮ್ಸ್ ಆಫ್ ಇಂಡಿಯಾ ಸುದ್ದಿ ಪ್ರಕಾರ, ಇತ್ತೀಚೆಗೆ ಜವಾನನ ಹದಿಹರೆಯದ ಮಗಳ ಆಕ್ಷೇಪಾರ್ಹ ವಿಡಿಯೋ ವೈರಲ್ ಆಗಿತ್ತು. ಚಕ್ಲಾಸಿ ಗ್ರಾಮದ ಹದಿನೈದು ವರ್ಷದ ಬಾಲಕ ಕೂಡಾ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾನೆ. ಸಂತ್ರಸ್ತೆಯ ಕುಟುಂಬದ ಪ್ರಕಾರ, ಅದೇ ಹುಡುಗನೇ ವಿಡಿಯೋವನ್ನು ವೈರಲ್ ಮಾಡಿದ್ದಾನೆ.
As victim Meljibhai Vaghela along with his son & relatives reached victim Shailesh's home a fight broke out b/w them & accused's father Dinesh Jadav, uncle Arvind Jadav & other family members attacked him where he died on the spot. Victim's son was injured, rushed to hospital:DSP pic.twitter.com/G1fR5kZ9V8
— ANI (@ANI) December 27, 2022
ಇದನ್ನೂ ಓದಿ: BSF Recruitment: ತಿಂಗಳಿಗೆ ಬರೋಬ್ಬರಿ 92,300 ರೂ. ಸಂಬಳ: ಅರ್ಜಿ ಸಲ್ಲಿಸಲು ನಾಳೆನೇ ಕೊನೆ ದಿನ
ಮೃತ ಯೋಧನ ಪತ್ನಿಯಿಂದ್ ಎಫ್ಐಆರ್
ಶನಿವಾರ ರಾತ್ರಿ ಬಿಎಸ್ಎಫ್ ಜವಾನ ಮತ್ತು ಆತನ ಕುಟುಂಬ ಸದಸ್ಯರು ಬಾಲಕನ ಮನೆಗೆ ತೆರಳಿದ್ದರು ಎಂದು ಮೃತ ಬಿಎಸ್ಎಫ್ ಜವಾನನ ಪತ್ನಿ ತನ್ನ ಎಫ್ಐಆರ್ನಲ್ಲಿ ದಾಖಲಿಸಿದ್ದಾರೆ. ಹುಡುಗನ ತಂದೆ ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಇತರ ಆರು ಕುಟುಂಬ ಸದಸ್ಯರು ಜವಾನ ಮತ್ತು ಅವನ ಕುಟುಂಬ ಸದಸ್ಯರನ್ನು ನಿಂದಿಸಲು ಪ್ರಾರಂಭಿಸಿದರು. ಅವರು ದೌರ್ಜನ್ಯದ ವಿರುದ್ಧ ಪ್ರತಿಭಟಿಸಿದ್ದರು. ಆದರೆ ಮನೆಯಲ್ಲಿದ್ದ ಕುಟುಂಬದ ಏಳು ಸದಸ್ಯರು ಅವನ ಮತ್ತು ಅವನ ಕುಟುಂಬದ ಮೇಲೆ ಹಲ್ಲೆ ನಡೆಸಿದರು. ಈ ಇಡೀ ವಿಷಯವು ಗಂಭೀರ ರೂಪ ಪಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ