• Home
  • »
  • News
  • »
  • national-international
  • »
  • 7 Girls Drown: ಹೊಂಡದಲ್ಲಿ ಸ್ನಾನ ಮಾಡಲು ತೆರಳಿದ 7 ಬಾಲಕಿಯರು ನೀರುಪಾಲು: ಮುಗಿಲು ಮುಟ್ಟಿದ ಆಕ್ರಂದನ

7 Girls Drown: ಹೊಂಡದಲ್ಲಿ ಸ್ನಾನ ಮಾಡಲು ತೆರಳಿದ 7 ಬಾಲಕಿಯರು ನೀರುಪಾಲು: ಮುಗಿಲು ಮುಟ್ಟಿದ ಆಕ್ರಂದನ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಇತ್ತೀಚೆಗಷ್ಟೇ ಸುರಿದ ಮಳೆಗೆ ಹೊಂಡದಲ್ಲಿ ನೀರು ತುಂಬಿತ್ತು. ಸ್ನಾನ ಮಾಡಲು ಹಳ್ಳದ ಆಳವಾದ ಭಾಗಕ್ಕೆ ಹೋದಾಗ, ಇಬ್ಬರು ಹುಡುಗಿಯರು ಒಳಗೆ ಸಿಲುಕಿಕೊಂಡರು. ಉಳಿದವರು ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ನಂತರ ಎಲ್ಲರೂ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ.

  • Share this:

ಚೆನ್ನೈ: ತಮಿಳುನಾಡಿನ (Tamil Nadu) ಕಡಲೂರು ಸಮೀಪದ ಎ.ಕುಚಿಪಾಳ್ಯಂನಲ್ಲಿ ಗೆದ್ದಿಲಂ ನದಿಗೆ (Gedilam river) ಅಡ್ಡಲಾಗಿ ನಿರ್ಮಿಸಲಾದ ಚೆಕ್ ಡ್ಯಾಂ ನೀರಲ್ಲಿ ಮುಳುಗಿ 7 ಬಾಲಕಿಯರು (7 Girls Drown) ಸಾವಿನ ಮನೆ ಸೇರಿದ್ದಾರೆ. 10 ರಿಂದ 18 ವರ್ಷದ ಏಳು ಬಾಲಕಿಯರು ನೀರು ತುಂಬಿದ ಆಳವಾದ ಗುಂಡಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಆಯನ ಕುರುಂಜಿಪಾಡಿ ಗ್ರಾಮದ ಆರ್.ಪ್ರಿಯದರ್ಶಿನಿ (15), ಅವರ ಸಹೋದರಿ ದಿವ್ಯ ದರ್ಶಿನಿ (10), ಎ.ಮೋನಿಶಾ (16), ಎಂ.ನವನೀತ (18), ಕೆ.ಪ್ರಿಯಾ (18), ಎಸ್.ಸಂಗವಿ (16) ಮತ್ತು ಎಂ.ಕುಮುದಾ ಎಂದು ಗುರುತಿಸಲಾಗಿದೆ. ಭಾನುವಾರ ಮಧ್ಯಾಹ್ನ 12.45ರ ಸುಮಾರಿಗೆ ಈ ಘಟನೆ ನಡೆದಿದೆ. ಗೆದಿಲಂ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಚೆಕ್ ಡ್ಯಾಂನಿಂದ 300 ಮೀಟರ್ ದೂರದಲ್ಲಿರುವ 15 ಅಡಿ ಆಳದ ಹೊಂಡದ ಬಳಿ ಹುಡುಗಿಯರು ಸ್ನಾನಕ್ಕೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಸುರಿದ ಮಳೆಗೆ ಹೊಂಡದಲ್ಲಿ ನೀರು ತುಂಬಿತ್ತು. ಸ್ನಾನ ಮಾಡಲು ಹಳ್ಳದ ಆಳವಾದ ಭಾಗಕ್ಕೆ ಹೋದಾಗ, ಇಬ್ಬರು ಹುಡುಗಿಯರು ಒಳಗೆ ಸಿಲುಕಿಕೊಂಡರು. ಉಳಿದವರು ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ನಂತರ ಎಲ್ಲರೂ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ.


ಮುಗಿಲು ಮುಟ್ಟಿದ ಆಕ್ರಂದನ


ಅಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆದು, ಕಡಲೂರು ಸರ್ಕಾರಿ ಜನರಲ್ ಆಸ್ಪತ್ರೆಗೆ (ಜಿಎಚ್) ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ದುರಂತದ ಸುದ್ದಿ ಹರಡುತ್ತಿದ್ದಂತೆ, ಸಂತ್ರಸ್ತರ ಕುಟುಂಬ ಸದಸ್ಯರು ಜಿಎಚ್‌ಗೆ ದೌಡಾಯಿಸಿದರು. ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಎಂ.ಆರ್.ಕೆ. ಪನ್ನೀರಸೆಲ್ವಂ ಮತ್ತು ಕಡಲೂರು ಜಿಲ್ಲಾಧಿಕಾರಿ ಕೆ.ಬಾಲಸುಬ್ರಮಣ್ಯಂ ಅವರು ಜಿಎಚ್‌ನಲ್ಲಿ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಚೆಕ್ ಡ್ಯಾಂ ಬಳಿ ನದಿಯ ದಡದಲ್ಲಿ ಹಲವು ಹೊಂಡಗಳಿದ್ದು, ಮಕ್ಕಳು ಹೆಚ್ಚಾಗಿ ಸ್ನಾನಕ್ಕೆ ಬರುತ್ತಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.


ಇದನ್ನೂ ಓದಿ: Uttarakhand: ಪ್ರಪಾತಕ್ಕೆ ಬಸ್ ಉರುಳಿ 25 ಯಾತ್ರಾರ್ಥಿಗಳ ದಾರುಣ ಸಾವು: ₹2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ


ಎಚ್ಚರಿಕೆ ಫಲಕಗಳನ್ನು ಹಾಕುವಂತೆ ಸೂಚನೆ


ಎಚ್ಚರಿಕೆ ಫಲಕಗಳನ್ನು ಹಾಕುವಂತೆ ಕಂದಾಯ ಇಲಾಖೆ ಸೂಚಿಸಿದೆ. ಘಟನೆಯ ಬಗ್ಗೆ ಆರ್‌ಡಿಒ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದರು. ಈ ಪ್ರದೇಶದಲ್ಲಿ ಎಚ್ಚರಿಕೆ ಫಲಕಗಳನ್ನು ಹಾಕುವಂತೆ ಕಂದಾಯ ಇಲಾಖೆಗೆ ಸೂಚಿಸಲಾಗಿದೆ ಮುಳುಗಡೆ ಪ್ರಕರಣಗಳನ್ನು ತಡೆಗಟ್ಟಲು ಎಲ್ಲಾ ಜಲಮೂಲಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.


ಮೃತರ ಕುಟುಂಬಗಳಿಗೆ ತಲಾ ₹ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ


ಏಳು ಮಂದಿಯ ಸಾವಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಂತಾಪ ಸೂಚಿಸಿದರು. ಮುಖ್ಯಮಂತ್ರಿಗಳ ಸಾರ್ವಜನಿಕ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ ₹ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಈ ಪ್ರದೇಶದಲ್ಲಿ ಮಣ್ಣು ಪರೀಕ್ಷೆ ನಡೆಸಲಾಗುವುದು ಎಂದು ಪನ್ನೀರಸೆಲ್ವಂ ಸುದ್ದಿಗಾರರಿಗೆ ತಿಳಿಸಿದರು. ಹೊಂಡ ಹೇಗೆ ನಿರ್ಮಾಣವಾಗಿದೆ ಎಂಬ ಬಗ್ಗೆಯೂ ವಿಚಾರಣೆ ನಡೆಸಲಾಗುವುದು ಎಂದರು. ಮೃತ ಏಳು ಮಂದಿಯ ಕುಟುಂಬಗಳಿಗೆ ಅಂತಿಮ ಸಂಸ್ಕಾರ ನೆರವೇರಿಸಲು ಸಚಿವರು ತಲಾ ₹ 25 ಸಾವಿರವನ್ನು ತಮ್ಮ ಸ್ವಂತ ಕೊಡುಗೆಯಾಗಿ ನೀಡಿದರು. ಕಾರ್ಮಿಕ ಕಲ್ಯಾಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಸಿ.ವಿ. ಗಣೇಶನ್ ಮತ್ತು ಪಂರುತಿ ಶಾಸಕ ಟಿ.ವೇಲ್ಮುರುಗನ್ ಕೂಡ ಜಿಎಚ್‌ನಲ್ಲಿ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

Published by:Kavya V
First published: