ಪ್ರತಿಯೊಬ್ಬರ ಜೀವನದಲ್ಲೂ ಪ್ರೀತಿ (Love) ಬಹಳ ಮುಖ್ಯವಾದದ್ದು. ಆದ್ರೆ ಬದುಕಲ್ಲಿ ವಿಶೇಷ ಅನುಭವ ನೀಡುವ ಪ್ರೀತಿ-ಪ್ರೇಮ ಒಂದೊಮ್ಮೆ ಮುರಿದು ಬಿದ್ದರೆ ಅದರ ಆಘಾತವೂ ಅಷ್ಟೇ ಭಯಂಕರವಾದದ್ದು. ಎಷ್ಟೋ ಕಾಲ ಪ್ರೀತಿಸಿ ಯಾವುದೋ ಕಾರಣಕ್ಕೆ ಸಂಬಂಧ (RelationShip) ಮುರಿದುಕೊಂಡಾಗ ಆಗುವ ನೋವು ಅದನ್ನು ಅನುಭವಿಸಿದವರಿಗಷ್ಟೇ ಗೊತ್ತು. ಅನೇಕ ಸಂದರ್ಭದಲ್ಲಿ ಇಂಥವರು ಮಾನಸಿಕ ಸಮತೋಲನ ಕಳೆದುಕೊಂಡಿರುವ ಉದಾಹರಣೆಗಳೂ ಸಾಕಷ್ಟಿವೆ. ಆದರೆ ಒಂದು ಬ್ರೇಕಪ್ (Love Breakup) ಆಯ್ತು ಎಂದಾದರೆ ಜೀವನ ಅಷ್ಟಕ್ಕೇ ಮುಗಿಯೋದಿಲ್ಲ. ಬದುಕು ಮುಂದೆ ಹೋಗಲೇ ಬೇಕು. ಅದಕ್ಕೆ ಮನಸ್ಸನ್ನು ಗಟ್ಟಿ ಮಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಪ್ರೀತಿ ಮುರಿದು ಬಿದ್ದಾಗ ಮನಸ್ಸನ್ನು ಹತೋಟಿಗೆ ತರುವುದು ಅಷ್ಟು ಸುಲಭದ ಮಾತಲ್ಲ. ಆದರೆ ಅದು ಅಸಾಧ್ಯದ ಕೆಲಸವೇನೂ ಅಲ್ಲ. ಹಾಗಾಗಿ ಬ್ರೇಕಪ್ ಬಳಿಕ ಜೀವನದಲ್ಲಿ (Life) ಮುಂದುವರಿಯಲು ಅನುಸರಿಸಬೇಕಾದ ಕೆಲ ಸಲಹೆಗಳು ಇಲ್ಲಿವೆ. ತಜ್ಞರ ಪ್ರಕಾರ ಈ ಸಲಹೆಗಳು ನಿಮ್ಮ ಜೀವನದಲ್ಲಿ ಮುಂದೆ ಸಾಗಲು ಮತ್ತು ಸಂತೋಷವಾಗಿರಲು ಸಹಾಯ ಮಾಡುತ್ತದೆ.
1. ಸ್ನಾನ ಮಾಡಿ ಫ್ರೆಶ್ ಆಗಿ: ಸಾಮಾನ್ಯವಾಗಿ ಜನರು ಬ್ರೇಕಪ್ ನಂತರ ಆಲಸ್ಯ ಹೊಂದುತ್ತಾರೆ. ಅವರು ತಾಜಾತನವನ್ನು ಅನುಭವಿಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನೀವು ಪ್ರತಿದಿನ ಪರಿಮಳಯುಕ್ತ ಬಾಡಿವಾಶ್ನೊಂದಿಗೆ ಸ್ನಾನ ಮಾಡುವುದು ಒಳ್ಳೆಯದು. ಇದರಿಂದ ನೀವು ತಾಜಾತನವನ್ನು ಅನುಭವಿಸುತ್ತೀರಿ. ಹೀಗೆ ನಿಮ್ಮ ಬಗ್ಗೆ ನೀವು ಕಾಳಜಿ ವಹಿಸಿದರೆ ಜೀವನದಲ್ಲಿ ಮುಂದುವರಿಯಲು ಸಾಧ್ಯವಾಗುತ್ತದೆ.
2. ಹೂವುಗಳನ್ನು ಖರೀದಿಸಿ: ಹೂವುಗಳು ಮನಸ್ಸನ್ನು ಪ್ರಫುಲ್ಲಗೊಳಿಸುತ್ತವೆ. ತಜ್ಞರ ಪ್ರಕಾರ, ಯಾವುದೇ ಬಣ್ಣದ ಹೂವು ವ್ಯಕ್ತಿಯ ಮನಸ್ಸನ್ನು ಸಂತೋಷಪಡಿಸಲು ಸಹಾಯ ಮಾಡುತ್ತದೆ. ಇದು ವ್ಯಕ್ತಿಯ ಮನಸ್ಸಲ್ಲಿ ಸ್ವಯಂ ಪ್ರಾಮುಖ್ಯತೆ ಮತ್ತು ಕಾಳಜಿ ಪ್ರಜ್ಞೆಯನ್ನು ಉಂಟುಮಾಡುತ್ತವೆ. ಬ್ರೇಕಪ್ ನಂತರ ನೀವು ಪ್ರತಿದಿನ ಹೂವುಗಳನ್ನು ಖರೀದಿಸಿದರೆ, ನೀವು ಯಾವುದೇ ದುಃಖವನ್ನು ಮರೆಯಬಹುದು.
3. ಒಂದು ಕೋಣೆಯಲ್ಲಿ ಕೋಪ ಹೊರಹಾಕಿ: ಪ್ರೀತಿ ಮುರಿದು ಬಿದ್ದಾಗ ಕೋಪ ಬರುವುದು ಸಹಜ. ಆದರೆ ಅದನ್ನು ಮನಸ್ಸಿನಲ್ಲಿಯೇ ಇಟ್ಟುಕೊಳ್ಳುವ ಬದಲು ಹೊರಹಾಕುವುದು ಒಳ್ಳೆಯದು. ತಜ್ಞರ ಪ್ರಕಾರ ಬ್ರೇಕಪ್ ಆದ ನಂತರ ನಿಮ್ಮೊಳಗೆ ತುಂಬಾ ಕೋಪವಿದ್ದರೆ, ಆ ಕೋಪವನ್ನು ಒಂದು ಕೋಣೆಯಲ್ಲಿ ಹೊರಹಾಕಿ. ಹೀಗೆ ಕೋಪವನ್ನು ಹೊರಹಾಕಿದರೆ ಮನಸ್ಸು ನಿರಾಳವಾಗುತ್ತದೆ. ಸಮಾಧಾನಗೊಳ್ಳುತ್ತದೆ.
4. ಮನೆಯನ್ನು ಮರು ಹೊಂದಿಸಿ: ಮುರಿದು ಬಿದ್ದ ಪ್ರೀತಿಯನ್ನು ನೆನಪಿಸುವಂಥ ಅನೇಕ ವಿಷಯಗಳು ನಿಮ್ಮ ಜೊತೆಗಿರಬಹುದು. ಮನೆಯಲ್ಲೂ ಅದರ ನೆನಪು ಮಾಡುವಂಥ ವಸ್ತುಗಳಿರಬಹುದು. ಅದನ್ನು ದಿನವೂ ನೋಡುತ್ತಿದ್ದರೆ ಅದೇ ನೋವು ಮತ್ತೆ ಕಾಡಬಹುದು. ತಜ್ಞರ ಪ್ರಕಾರ, ಅಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಮನೆಯನ್ನು ಮರು ಹೊಂದಿಸಿ. ಅಂಥ ವಸ್ತುಗಳನ್ನು ತೆಗೆದುಬಿಡಿ. ಇದರಿಂದ ನಿಮಗೆ ಪದೇ ಪದೇ ಅದೇ ವಿಷಯಗಳು ನೆನಪಾಗುವುದಿಲ್ಲ.
5. ಹೌದು ಎನ್ನಿ: ರಿಲೇಶನ್ಶಿಪ್ ನಲ್ಲಿರುವಾಗ ಸಾಮಾನ್ಯವಾಗಿ ಜನರು ಹೆಚ್ಚು ರಾಜಿ ಮಾಡಿಕೊಳ್ಳುತ್ತಾರೆ. ಆದ್ರೆ ಬ್ರೇಕಪ್ ಆದ ನಂತರ ವರಸೆ ಬದಲಾಗಬಹುದು. ಹೀಗಾಗಿ ಬ್ರೇಕ್ಅಪ್ ಆದ ನಂತರ ನೀವು ಎಲ್ಲದಕ್ಕೂ ಹೌದು ಎಂದು ಹೇಳುವ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು. ಈ ಅಭ್ಯಾಸದಿಂದ ನೀವು ಯಾವುದೇ ಪಶ್ಚಾತ್ತಾಪವಿಲ್ಲದೇ ಜೀವನದಲ್ಲಿ ಮುಂದುವರಿಯಬಹುದು.
6. ಒಂಟಿಯಾಗಿ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ: ಪ್ರೀತಿ-ಪ್ರೇಮ ಅಥವಾ ರಿಲೇಶನ್ಶಿಪ್ನಲ್ಲಿರುವಾಗ ಇಬ್ಬರೂ ಒಟ್ಟಾಗಿ ಆಹಾರವನ್ನು ತಿನ್ನುತ್ತಾರೆ. ಆದರೆ ನೀವು ಒಂಟಿಯಾಗಿ ತಿನ್ನುವ ಅಭ್ಯಾಸ ಮಾಡಿಕೊಂಡರೆ ಬ್ರೇಕಪ್ ನಂತರ ನೀವು ಜೀವನದಲ್ಲಿ ಮುನ್ನಡೆಯಲು ತುಂಬಾ ಸುಲಭವಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Vasishta Simha-Haripriya: ಮಲ್ಪೆ ಕಡಲತೀರದಲ್ಲಿ ಲವ್ ಬರ್ಡ್ಸ್, ಸನ್ ಸೆಟ್ ನೋಡುತ್ತಾ ವಸಿಷ್ಠ-ಹರಿಪ್ರಿಯ ಸಂಭ್ರಮ
7. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಬೇಡಿ: ಸಾಮಾನ್ಯವಾಗಿ ಜನರು ಸಂಬಂಧ ಮುರಿದುಬಿದ್ದ ನಂತರ ಸಾಮಾಜಿಕ ಮಾಧ್ಯಮದಲ್ಲಿ ದೂರುಗಳು ಹೇಳುವಂಥ ಪೋಸ್ಟ್ಗಳನ್ನು ಹಾಕುತ್ತಾರೆ. ತಜ್ಞರ ಅಭಿಪ್ರಾಯದ ಪ್ರಕಾರ, ನೀವು ನಿಮ್ಮ ಬೇಸರವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡದಿದ್ದರೇನೇ ಒಳ್ಳೆಯದು. ಅಲ್ದೇ ಅಂಥ ಯಾವುದೇ ಪೋಸ್ಟ್ಗಳಿಗೆ ಕಾಮೆಂಟ್ ಕೂಡ ಮಾಡಬೇಡಿ ಎನ್ನುತ್ತಾರೆ ತಜ್ಞರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ