Crime News: ಪಂಕ್ಚರ್​ ಅಂಗಡಿ ತೆರೆದವ ಕೋಟಿ ಕೋಟಿ ಗಳಿಸಿದ್ದು ಹೇಗೆ? ಖತರ್ನಾಕ್​ ಆಸಾಮಿಯ ಅಸಲಿ ಕಥೆ!

ಪಂಕ್ಚರ್ ಹಾಕುವವ ಕೋಟಿ ಆಸ್ತಿಗಳನ್ನು ಹೊಂದಿದ್ದಾನೆ. ಆದರೆ ಸದ್ಯ ಆತ ಪೊಲೀಸರ (Police) ಅತಿಥಿಯಾಗಿದ್ದು, ಆತನ ಹಿಂದಿನ ಕಹಾನಿ ಕೇಳಿದರೆ ಒಮ್ಮೆ ನೀವೂ ಅಚ್ಚರಿ ಪಡುತ್ತೀರಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಭಿಕ್ಷುಕನ ಬಳಿ ಲಕ್ಷಾಂತರ ಮೊತ್ತದ ದುಡ್ಡು (Money) ಸಿಕ್ಕಿತಂತೆ, ಯಾರೊ ಬಡವನ ಬಳಿ ಕೋಟಿ ಆಸ್ತಿ (Property) ಇದೆಯಂತೆ ಎಂದೆಲ್ಲಾ ನಾವುಗಳು ಅನೇಕ ಬಾರಿ ಕೇಳಿದ್ದೇವೆ. ಆದರೆ ಇವುಗಳಲ್ಲಿ ಕೆಲವುಗಳು ನ್ಯಾಯಯುತವಾಗಿ ದುಡಿದಿದ್ದಾಗಿರುತ್ತದೆ. ಆದರೆ ಕೆಲವರು ಅನ್ಯಾಯದ ಮಾರ್ಗದಿಂದ ಹಣ ಸಂಪಾದಿಸಿರುತ್ತಾರೆ. ಆದರೆ ಇಲ್ಲೊಬ್ಬ ಪಂಕ್ಚರ್ ಅಂಗಡಿ ಇಟ್ಟುಕೊಂಡು ಕೋಟಿ ಕೋಟಿ ಆಸ್ತಿಯನ್ನು ಹೊಂದಿದ್ದಾನೆ. ಹೌದು, ನೀವು ಅಚ್ಚರಿಗೊಂಡರೂ ಇದು ಸತ್ಯ. ಉತ್ತರ ಪ್ರದೇಶದ ಬರೇಲಿ ಎಂಬಲ್ಲಿ ಓರ್ವ ಪಂಕ್ಚರ್ ಹಾಕುವವ ಕೋಟಿ ಆಸ್ತಿಗಳನ್ನು ಹೊಂದಿದ್ದಾನೆ. ಆದರೆ ಸದ್ಯ ಆತ ಪೊಲೀಸರ (Police) ಅತಿಥಿಯಾಗಿದ್ದು, ಆತನ ಹಿಂದಿನ ಕಹಾನಿ ಕೇಳಿದರೆ ಒಮ್ಮೆ ನೀವೂ ಅಚ್ಚರಿ ಪಡುತ್ತೀರಿ. ಪಂಕ್ಚರ್ ಅಂಗಡಿ ನಡೆಸುತ್ತಿದ್ದ ಆ ವ್ಯಕ್ತಿ ಕೇವಲ ಒಂದೇ ಒಂದು ವರ್ಷದಲ್ಲಿ 7 ಕೋಟಿ ಆಸ್ತಿ ಸಂಪಾದಿಸಿದ್ದಾನೆ. ಅಷ್ಟೇ ಅಲ್ಲ ಬೈಕ್ (Bike) ಶೋರೂಂ ಕೂಡ ತೆರೆದಿದ್ದಾನೆ.

    ಮಾದಕ ದ್ರವ್ಯ ಸಾಗಣೆಯಲ್ಲಿ ತೊಡಗಿಕೊಂಡಿದ್ದ ಇಸ್ಲಾಂ:

    ಇನ್ನು, ಓರ್ವ ಪಂಕ್ಚರ್ ಅಂಗಡಿಯಲ್ಲಿ ತಿಂಗಳಿಗೆ ಸಾವಿರದ ಲೆಕ್ಕದಲ್ಲಿ ಸಂಪಾದನೆ ಮಾಡಿದರೆ ಅದೇ ಹೆಚ್ಚು ಆದರೆ ಈತ ಕೋಟಿಗಟ್ಟಲೇ ಹೇಗೆ ಸಂಪಾಧನೆ ಮಾಡಿದ್ದಾನೆ ಎಂದು ನೀವು ಕೇಳಬಹುದು. ಈತ ಡ್ರಗ್ಸ್ ಕಳ್ಳಸಾಗಣೆ ಮಾಡುವ ಮೂಲಕ ಕೋಟಿಗಟ್ಟಲೇ ಆಸ್ತಿ ಸಂಪಾದಿಸಿದ್ದಾನೆ. ಹೌದು, ಇಸ್ಲಾಂ ಖಾನ್ ಎಂಬ ವ್ಯಕ್ತಿ ಇಲ್ಲಿನ ನಕಾಟಿಯಾ ಪ್ರದೇಶದ ವಾಸವಾಗಿದ್ದನು. ಇಸ್ಲಾಂ ಖಾನ್ ಜೀವನೋಪಾಯಕ್ಕಾಗಿ ಹೆದ್ದಾರಿಯಲ್ಲಿ ಚಿಕ್ಕದೊಂದು ಪಂಕ್ಚರ್ ಅಂಗಡಿ ಇಟ್ಟುಕೊಂಡಿದ್ದನು. ಆದರೆ ಇದರಿಂದ ಬರುವ ಆದಾಯ ಇತನಿಗೆ ಸಾಲುತ್ತಿರಲಿಲ್ಲ. ಬೇಗ ಶ್ರೀಮಂತನಾಗುವ ಬಯಕೆಯಿಂದ ಡ್ರಗ್ಸ್ ಸಾಗಾಣಿಕೆ ಮಾಡಲು ಆರಮಬಿಸಿದನು ಎಮದು ಪೊಲಿಸರು ಮಾಹಿತಿ ನೀಡಿದ್ದಾರೆ.

    ಪಂಕ್ಚರ್ ಶಾಪ್​ ನಲ್ಲಿ ಕಳ್ಳ ಸಾಗಾಣಿಕೆ:

    ಇಸ್ಲಾಂ ಖಾನ್ ಪಂಕ್ಚರ್ ಅಂಗಡಿಯಲ್ಲಿ ಡ್ರಗ್ಸ್ ಕಳ್ಳಸಾಗಣೆ ಮಾಡಲಾರಂಭಿಸಿದನು. ಯುವಕರಿಗೆ, ಮಕ್ಕಳಿಗೆ ಡ್ರಗ್ಸ್ ನೀಡುತ್ತಾ ಕೇವಲ ಒಂದೇ ವರ್ಷದಲ್ಲಿ ಕೋಟ್ಯಾಂತರ ಆಸ್ತಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆದರೆ ಅನಕ್ಷರಸ್ಥನಾಗಿರು ಇಸ್ಲಾಂ ಖಾನ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಎಲ್ಲಾ ಆಸ್ತಿಯನ್ನೂ ತನ್ನ ಹೆಂಡತಿಯ ಹೆಸರಿಗೆ ಮಾಡಿದ್ದಾನೆ. ಅಲ್ಲದೇ ಅದೇ ಹಣದಿಂದ ತನ್ನದೇ ಹೊಸ ಬೈ ಶೋರೂಂ ಅನ್ನು ಸಹ ತೆರೆದಿದ್ದಾನೆ.

    ಇದನ್ನೂ ಓದಿ: Cream Bun: ಬನ್​ನಲ್ಲಿ ಕ್ರೀಂ ಇಲ್ಲ ಎಂದು ಬೇಕರಿ ಮಾಲೀಕನ ಕೈ ಮುರಿದ ಪುಂಡರು

    ಐಷಾರಾಮಿ ಬದುಕಿನಿಂದ ಸಿಕ್ಕಿಬಿದ್ದ ಇಸ್ಲಾಂ ಖಾನ್:

    ಇತ್ತ ಪಂಕ್ಚರ್ ಶಾಪ್ ನಲ್ಲಿ ಡ್ರಗ್ಸ್ ಸಾಗಾಣಿಕೆ ಮಾಡುತ್ತಾ ಕೋಟಿಗಟ್ಟಲೆ ಆಸ್ತಿ ಮಾಡಿದ ಇಸ್ಲಾಂ, ಐಷಾರಾಮಿಯಾಗಿ ಬದುಕಲು ಆರಂಭಿಸಿದ್ದಾನೆ. ಇದರ ನಡುವೆ ಇಸ್ಲಾಂ ಸೋದರ ಅಳಿಯನನ್ನು ಪೊಲೀಸರು ಪ್ರಕರಣವೊಂದರಲ್ಲಿ ಬಂಧಿಸಿದ್ದರು. ಆ ವೇಳೆ ಈತನ ಹೆಸರು ಕೇಳಿಬಂದಿದ್ದರಿಂದ ಪೊಲೀಸರು ಸಹ ಈತನ ಮೇಲೆ ಕಣ್ಣಿಟ್ಟಿದ್ದರು. ಹೀಗಾಗಿ ಆತನ ವೈಭೋಗದ ಜೀವನ ನೋಡಿದ ಪೊಲೀಸರಿಗೆ ಅನುಮಾನ ಬಂದಿದೆ.

    ಇಸ್ಲಾಂ ಖಾನ್


    ತಕ್ಷಣ ಸಾಕ್ಷಿಗಾಗಿ ಆತನ ಆಧಾರ್ ಮತ್ತು ಫ್ಯಾನ್ ಕರ್ಡ್ ಗಳನ್ನು ಪರಿಶೀಲಿಸಿದಾಗ ಎಲ್ಲಾ ಮೋಸದ ದಂದೆಗಳೂ ಬಯಲಿಗೆ ಬಂದಿದೆ. ಈ ವೇಳೆ ಇಸ್ಲಾಂ ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ ಭಾರೀ ಮೊತ್ತವನ್ನು ತೋರಿಸಲಾಗಿದೆ ಎಂದು ಗ್ರಾಮಾಂತರ SP ತಿಳಿಸಿದ್ದಾರೆ. ಅಲ್ಲದೇ ಒಂದು ಐಷಾರಾಮಿ ಮೆನ ಮತ್ತು ಬೈಕ್ ಶೋರೂಂ ಹೊಂದಿರುವುದಾಗಿ ತಿಳಿದುಬಂದಿದೆ. ನಂತರ ಇದ್ನನೇ ಆಧಾರವಾಗಿ ಇಟ್ಟುಕೊಂಡು ಇಸ್ಲಾಂ ನನ್ನು ಇದೀಗ ಪೊಲೀಸರು ಬಂಧೀಸಿದ್ದಾರೆ.

    ಇದನ್ನೂ ಓದಿ: KGF Chapter 2: ರಾಕಿ ಭಾಯ್ ಪಾತ್ರದಿಂದ ಫುಲ್ ಫಿದಾ! ಫುಲ್ ಪ್ಯಾಕ್ ಸಿಗರೇಟ್ ಸೇದಿದ 15ರ ಹುಡುಗ ತೀವ್ರ ಅಸ್ವಸ್ಥ!

    ಇಸ್ಲಾಂ ಅಕ್ರಮ ಆಸ್ತಿ ಜಪ್ತಿ:

    ಇಷ್ಟೆಲ್ಲಾ ದಾಖಲೆಗಳು ಸಿಕ್ಕ ನಂತರ ಇಸ್ಲಾಂ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಿಸಿದ್ದಾರೆ. ಈ ವೇಳೆ ಆರೋಪಿ ಮಾಡಿರುವ ತಪ್ಪುಗಳನ್ನು ಎಲ್ಲವನ್ನೂ ಒಪ್ಪಿಕೊಂಡಿದ್ದಾರೆ. ನಂತರ ಪೊಲೀಸರು ಆತನ ಆಸ್ತಿಯನ್ನು ವಶಪಡಿಸಿಕೊಂಡು ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
    Published by:shrikrishna bhat
    First published: