ಬಾಲಿವುಡ್​ನ 7 ಪ್ರೊಡಕ್ಷನ್​ ಹೌಸ್​ಗಳಲ್ಲಿ ಲೈಂಗಿಕ ದೌರ್ಜನ್ಯ ವಿರೋಧಿ ಕೇಂದ್ರ ರಚನೆ

news18
Updated:July 16, 2018, 11:01 PM IST
ಬಾಲಿವುಡ್​ನ 7 ಪ್ರೊಡಕ್ಷನ್​ ಹೌಸ್​ಗಳಲ್ಲಿ ಲೈಂಗಿಕ ದೌರ್ಜನ್ಯ ವಿರೋಧಿ ಕೇಂದ್ರ ರಚನೆ
news18
Updated: July 16, 2018, 11:01 PM IST
ನ್ಯೂಸ್​ 18 ಕನ್ನಡ

ಸಿನಿಮಾಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಒಂದಲ್ಲ ಒಂದು ರೀತಿಯಿಂದ ಭದ್ರತೆಯ ವಿಷಯದಲ್ಲಿ ತೊಂದರೆಯಾಗೇ ಇರುತ್ತದೆ.  ಇತ್ತೀಚೆಗೆ ಕಾಸ್ಟಿಂಗ್​ ಕೌಚ್​ ಹೆಚ್ಚಾಗಿರುವುದರಿಂದ ನಟಿಯರಿಗಂತೂ ಕೆಲಸದ ಸ್ಥಳದಲ್ಲಿ ಕಿರಿಕಿರಿ ಇದ್ದಿದ್ದೇ. ಹಾಗಾಗಿ, ಲೈಂಗಿಕ ದೌರ್ಜನ್ಯ ಕಾಯ್ದೆಯಡಿ ಲೈಂಗಿಕ ದೌರನ್ಯ ವಿರೋಧಿ ಸೆಲ್​ಗಳನ್ನು ತೆರೆಯಬೇಕೆಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಸಚಿವಾಲಯ ಸೂಚನೆ ನೀಡಿತ್ತು.

ಬಾಲಿವುಡ್​ನಲ್ಲಿ ಕೆಲಸ ಮಾಡುವ ಕಲಾವಿದೆಯರಿಗೆ ಭದ್ರತೆ ಒದಗಿಸುವ ದೃಷ್ಟಿಯಿಂದ ಪ್ರೊಡಕ್ಷನ್​ ಹೌಸ್​ಗಳಲ್ಲಿ ಲೈಂಗಿಕ ದೌರ್ಜನ್ಯ ವಿರೋಧಿ ಕೇಂದ್ರಗಳನ್ನು ತೆರೆಯಬೇಕೆಂಬ ಮನವಿಯನ್ನು ಬಾಲಿವುಡ್​ನ 7 ಪ್ರೊಡಕ್ಷನ್ ಹೌಸ್​ಗಳು ಒಪ್ಪಿಕೊಂಡಿವೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ ತಿಳಿಸಿದ್ದಾರೆ.

ಪ್ರೊಡಕ್ಷನ್​ ಹೌಸ್​ಗಳು ತಮ್ಮಲ್ಲಿ ಮಾಡಿರುವ ಸಮಿತಿಗಳ ಬಗ್ಗೆ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಅವರು, ಕಳೆದ ವರ್ಷ ಬಾಲಿವುಡ್​ನ ಸಿನಿಮಾ ನಿರ್ಮಾಪಕರ ಬಳಿ ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟಲು ಸಮಿತಿ ರಚಿಸುವಂತೆ ಕೋರಲಾಗಿತ್ತು. ಶಾರುಕ್​ ಖಾನ್​ ಅವರ ರೆಡ್​ ಚಿಲ್ಲೀಸ್​ ಎಂಟರ್​ಟೈನ್ಮೆಂಟ್​, ಕರಣ್​ ಜೋಹರ್​ ಅವರ ಧರ್ಮ ಪ್ರೊಡಕ್ಷನ್​ ಸೇರಿದಂತೆ 24 ಪ್ರೊಡಕ್ಷನ್​ ಹೌಸ್​ಗಳ ಪಟ್ಟಿ ತಯಾರಿಸಿ ಲೈಂಗಿಕ ದೌರ್ಜನ್ಯ ವಿರೋಧಿ ಕೇಂದ್ರ ತೆರೆಯಲು ಸೂಚಿಸಲಾಗಿತ್ತು.

ಲೈಂಗಿಕ ದೌರ್ಜನ್ಯ ಕಾಯ್ದೆಯಡಿ ಯಶ್​ರಾಜ್​ ಫಿಲ್ಮ್ಸ್​, ಆಮೀರ್​ ಖಾನ್ ಪ್ರೊಡಕ್ಷನ್​, ಮುಕ್ತಾ ಆರ್ಟ್ಸ್​, ಎಕ್ಸೆಲ್​ ಎಂಟರ್​ಟೈನ್​ಮೆಂಟ್​, ಫಾಂಟಂ ಫಿಲ್ಮ್ಸ್​, ಟಿ-ಸೀರೀಸ್​, ದೃಶ್ಯಂ ಫಿಲ್ಮ್ಸ್​ ಕೇಂದ್ರ ಸರ್ಕಾರದ ಮನವಿಯನ್ನು ಒಪ್ಪಿ ಸಮಿತಿ ರಚಿಸಲು ಮುಂದಾಗಿವೆ.
First published:July 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ