6th Phase Election 2019: ಪ್ರಮುಖ ಕ್ಷೇತ್ರಗಳ ಪ್ರೊಫೈಲ್​​; ಕಣದಲ್ಲಿರುವ ಘಟಾನುಘಟಿಗಳ ವಿವರ

ಭಾರತ ರಾಜಧಾನಿ ದೆಹಲಿ ಸೇರಿದಂತೆ ಏಳು ರಾಜ್ಯಗಳ 59 ಲೋಕಸಭಾ ಕ್ಷೇತ್ರಗಳಲ್ಲಿ ಶಾಂತಿಯುತ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಅಂತಿಮ ಸಿದ್ಧತೆ ನಡೆಸಿಕೊಂಡಿದೆ.

Ganesh Nachikethu
Updated:May 12, 2019, 7:52 AM IST
6th Phase Election 2019: ಪ್ರಮುಖ ಕ್ಷೇತ್ರಗಳ ಪ್ರೊಫೈಲ್​​; ಕಣದಲ್ಲಿರುವ ಘಟಾನುಘಟಿಗಳ ವಿವರ
ಪ್ರಾತಿನಿಧಿಕ ಚಿತ್ರ
  • Share this:
ನವದೆಹಲಿ(ಮೇ.11): ಸಾರ್ವತ್ರಿಕ ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನ ಇಂದು ಭಾರೀ ಬಿಗಿ ಬಂದೋಬಸ್ತ್ ನಡುವೆ ನಡೆಯುತ್ತಿದೆ. ಭಾರತ ರಾಜಧಾನಿ ದೆಹಲಿ ಸೇರಿದಂತೆ ಏಳು ರಾಜ್ಯಗಳ 59 ಲೋಕಸಭಾ ಕ್ಷೇತ್ರಗಳಲ್ಲಿ ಶಾಂತಿಯುತ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಅಂತಿಮ ಸಿದ್ಧತೆ ನಡೆಸಿಕೊಂಡಿದೆ. ನಿನ್ನೆ ಸಂಜೆಯೇ ಮನೆಮನೆ ಪ್ರಚಾರಕ್ಕೆ ತೆರೆಬಿದ್ದಿದೆ. ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಪ್ರಾದೇಶಿಕ ಪಕ್ಷಗಳು ಬಿರುಸಿನ ಪ್ರಚಾರ ನಡೆಸಿ ಮತದಾರರನ್ನು ಓಲೈಸುವ ಕಸರತ್ತು ನಡೆಸಿದ್ದಾರೆ.

ಸ್ಪರ್ಧಾ ಕಣದಲ್ಲಿರುವ ಘಟಾನುಘಟಿಗಳು:

1. ಉತ್ತರ ಪ್ರದೇಶ

ಉತ್ತರಪ್ರದೇಶದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಸದ್ಯ ಆಡಳಿತರೂಢ ಬಿಜೆಪಿ, ಕಾಂಗ್ರೆಸ್​​, ಎಸ್‍ಪಿ-ಬಿಎಸ್‍ಪಿ ನೇತೃತ್ವದ ಮೈತ್ರಿ ಕೂಟದ ನಡುವೆ ಹಣಾಹಣಿ ಏರ್ಪಟ್ಟಿದೆ. ಇಲ್ಲಿ ಎಸ್‍ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮತ್ತು ಕೇಂದ್ರ ಸಚಿವೆ ಮನೇಕಾ ಗಾಂಧಿ ಸ್ಪರ್ಧೆಯಲ್ಲಿದ್ದಾರೆ. ಹಾಗಾಗಿ ಪ್ರಮುಖ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠಿತ ಕಣವಾಗಿ ಮಾರ್ಪಟ್ಟಿದೆ.

2. ಹರಿಯಾಣ

ಹರಿಯಾಣದಲ್ಲಿ 10 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಅಲ್ಲದೇ ಇಲ್ಲಿ ಕೂಡ ಆಡಳಿತರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇದೆ. ಕೇಂದ್ರ ಸಚಿವರಾದ ಕೃಷ್ಣ ಪಾಲ್ ಗುರ್ಜರ್ ಮತ್ತು ರಾವ್ ಇಂದ್ರಜಿತ್ ಸಿಂಗ್, ಮಾಜಿ ಸಿಎಂ ಭೂಪಿಂದರ್ ಸಿಂಗ್ ಕಣದಲ್ಲಿದ್ಧಾರೆ. ಇವರ ಭವಿಷ್ಯವೂ ಇಂದು ಇವಿಎಂನಲ್ಲಿ ಭದ್ರವಾಗಲಿದೆ.

ಇದನ್ನೂ ಓದಿ: Lok Sabha Election: 6ನೇ ಹಂತದ ಚುನಾವಣೆ; ಏಳು ರಾಜ್ಯಗಳಲ್ಲಿ 59 ಕ್ಷೇತ್ರಗಳಿಗೆ ಇಂದು ಮತದಾನ3. ಬಿಹಾರ

ಬಿಹಾರದಲ್ಲಿ ಇದೇ ಮೊದಲ ಬಾರಿಗೆ ಆರ್​ಜೆಡಿ ಮುಖ್ಯಸ್ಥ ಮತ್ತು ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಇಲ್ಲದೇ ಚುಣಾವಣೆ ನಡೆಯುತ್ತಿದೆ. ಇಲ್ಲಿ 8 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ನೇತೃತ್ವದ ಮಿತ್ರ ಪಕ್ಷಗಳು ಮತ್ತು ಆರ್​ಜೆಡಿ ನಡುವೆ ಸ್ಫರ್ಧೆ ಕಂಡು ಬಂದಿದೆ. ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಮಾತ್ರತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ಧಾರೆ.

4. ಮಧ್ಯಪ್ರದೇಶ

ಕಾಂಗ್ರೆಸ್​ ಆಡಳಿತರೂಢ ಮಧ್ಯಪ್ರದೇಶದಲ್ಲಿ 8 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಿಜೆಪಿಗೆ ಗೆಲ್ಲುವುದು ಲೋಕಸಭಾ ಚುನಾವಣೆಯಲ್ಲಿ ಗೆಲುವು ಪ್ರತಿಷ್ಠೆ ಪ್ರಶ್ನೆಯಾಗಿದೆ. ಸದ್ಯ ಕಣದಲ್ಲಿ ಕಾಂಗ್ರೆಸ್​ ಹಿರಿಯ ನಾಯಕ ಮತ್ತು ಮಾಜಿ ಸಿಎಂ ದಿಗ್ವಿಜಯ್ ಸಿಂಗ್, ಬಿಜೆಪಿ ಅಭ್ಯರ್ಥಿ ಪ್ರಾಗ್ಯಾ ಸಿಂಗ್ ಠಾಕೂರ್, ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೋತಿರಾದಿತ್ಯ ಸಿಂದಿಯಾ ಪ್ರಮುಖರಿದ್ದಾರೆ.

5. ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳದಲ್ಲಿಯೂ 8 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದೆ. ಬಿಜೆಪಿ ಸೋಲಿಸುವುದು ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಇಲ್ಲಿ ಮೇಲ್ನೋಟಕ್ಕೆ ಟಎಂಸಿ ಬಲವಾಗಿದ್ದರೂ, ಬಿಜೆಪಿ ಫೈಟ್‍ ಕೊಡುವ ಸಾಧ್ಯತೆಯಿದೆ. ಇಲ್ಲಿ 83 ಅಭ್ಯರ್ಥಿಗಳು ಸ್ಪರ್ಧಿಗಿಳಿದಿದ್ದಾರೆ.

ಇದನ್ನೂ ಓದಿ: Lok Sabha Election 6th Phase Voting Live: ಆರನೇ ಹಂತದ ಮತದಾನ; 59 ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

6. ದೆಹಲಿ

ಭಾರತ ರಾಜಧಾನಿ ದೆಹಲಿಯಲ್ಲಿ ಏಳು ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್​, ಬಿಜೆಪಿ ಮತ್ತು ಆಪ್​​ ನಡುವೇ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇನ್ನು ಸ್ಪರ್ಧಾ ಕಣದಲ್ಲಿ ಕಾಂಗ್ರೆಸ್ ಹಿರಿಯ ನಾಯಕಿ-ಮಾಜಿ ಸಿಎಂ ಶೀಲಾ ದೀಕ್ಷಿತ್, ಒಲಿಂಪಿಯನ್ ಬಾಕ್ಸರ್ ವೀರೇಂದ್ರ ಸಿಂಗ್, ಕೇಂದ್ರ ಸಚಿವ ಹರ್ಷವರ್ಧನ್, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮತ್ತು ಆಪ್​​ ಅತಿಶಿ ಸೇರಿದಂತೆ ಒಟ್ಟು 164 ಅಭ್ಯರ್ಥಿಗಳು ಇದ್ದಾರೆ.

7. ಜಾರ್ಖಂಡ್

ಜಾರ್ಖಂಡ್​​ನಲ್ಲಿ 4 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಒಟ್ಟು 67 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ಧಾರೆ. ಕಾಂಗ್ರೆಸ್​ ಮೈತ್ರಿಕೂಟ ಬಿಜೆಪಿಗೆ ಪೈಟ್ ನೀಡಲಿದೆ. ನಕ್ಸಲರ ದಾಳಿ ಸಾಧ್ಯತೆ ಕಟ್ಟೆಚ್ಚರ ವಹಿಸಲಾಗಿದೆ.

First published:May 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading