National Film Awards: 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಉತ್ತಮ ಕನ್ನಡ ಚಿತ್ರ ಅಕ್ಷಿ, ಕಂಗನಾ ರನೌತ್​ ಉತ್ತಮ ನಟಿ

ನಾನ್​ ಫೀಚರ್​ ಫಿಲ್ಮ್​ ವಿಭಾಗದಲ್ಲಿ ಅತ್ಯುತ್ತಮ ನಿರೂಪಣೆಗಾಗಿ ಸರ್​ ಡೇವಿಡ್​ ಅಟೆನ್​ಬರೋ​ ಅವರ ವೈಲ್ಡ್​ ಕರ್ನಾಟಕ ಚಿತ್ರ ಪ್ರಶಸ್ತಿ ಪಡೆದಿದೆ. 

  • Share this:
    67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರನ್ನು ಘೋಷಿಸಲಾಗಿದೆ. ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಒಂದು ವರ್ಷ ತಡವಾಗಿ ಈ ಪ್ರಶಸ್ತಿಯನ್ನು ಮುಂದೂಡಲಾಗಿತ್ತು. ಪ್ರತಿ ವರ್ಷ ಮೇ 3 ರಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭವನ್ನು ನಡೆಸಲಾಗುತ್ತದೆ. ಆದರೆ, ಕಳೆದ ವರ್ಷ ಜಾಗತಿಕ ಸೋಂಕಿನ ಹಿನ್ನಲೆ ಈ ಪ್ರಶಸ್ತಿಯನ್ನು ಮುಂದೂಡಲಾಗಿತ್ತು. ಈ ಬಾರಿ ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇನ್ನು ಈ ಬಾರಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮಣಿಕರ್ಣಿಕಾ ಸಿನಿಮಾಕ್ಕಾಗಿ ನಟಿ ಕಂಗನಾ ರನೌತ್​ ಪಡೆದಿದ್ದಾರೆ. ಧನುಷ್, ಮನೋಜ್ ಬಾಜ್ಪೇಯಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಅತ್ಯುತ್ತಮ ಹಿಂದಿ ಚಿತ್ರ ಸುಶಾಂತ್​ ಸಿಂಗ್​ ರಜಪೂತ್​ ಅವರ ಚಿಂಚೋರೆ ಚಿತ್ರ ಪಡೆದಿದೆ.

    ಪ್ರಶಸ್ತಿ ಪಟ್ಟಿ ಇಂತಿದೆ.
    ಅತ್ಯುತ್ತಮ ಚಿತ್ರ : ಮರಕ್ಕರ್​- ಅರಬಿಕಾಡಾಲಿಂಟೆ-ಸಿಂಹಂ
    ಅತ್ಯುತ್ತಮ ನಟ: ಅಸುರನ್​ ಸಿನಿಮಾಗಾಗಿ ಧನುಷ್​, ಭೋನ್ಸಲೆ ಚಿತ್ರಕ್ಕಾಗಿ ಮನೋಜ್​ ಬಾಜ್ಪೇಜಿ
    ಅತ್ಯುತ್ತಮ ನಟಿ: ಪಂಕಾ ಮತ್ತು ಮಣಿಕರ್ಣಿಕಾ ಚಿತ್ರಕ್ಕಾಗಿ ನಟಿ ಕಂಗನಾ ರನೌತ್​
    ಅತ್ಯುತ್ತಮ ಸಹಾಯಕ ನಟ: ಸೂಪರ್​ ಡಿಲಕ್ಸ್​ ಚಿತ್ರಕ್ಕಾಗಿ ನಟ ವಿಜಯ್​ ಸೇತುಪತಿ
    ಅತ್ಯುತ್ತಮ ಸಹಾಯಕ ನಟಿ: ದಿ ತಷ್ಕೆಂಟ್​ ಫೈಲ್ಸ್​ ಗಾಗಿ ನಟಿ ಪಲ್ಲವಿ ಜೋಷಿ
    ಅತ್ಯುತ್ತಮ ನಿರ್ದೇಶಕ: ಬಹಟ್ಟರ್​ ಹುರೈನ್​ ಚಿತ್ರಕ್ಕಾಗಿ ಸಂಜಯ್​ ಪುರಾನ್ ಸಿಂಗ್​ ಚೌಹನ್
    ಅತ್ಯುತ್ತಮ ಕನ್ನಡ ಚಿತ್ರ : ಅಕ್ಷಿ
    ಅತ್ಯುತ್ತಮ ಹಿಂದಿ ಚಿತ್ರ : ಚಿಚೋರೆ
    ಅತ್ಯುತ್ತಮ ಬೆಂಗಾಲಿ ಚಿತ್ರ: ಗುಮ್ನಾಮಿ
    ಅತ್ಯುತ್ತಮ ತುಳು ಚಿತ್ರ: ಪಿಂಗಾರ
    ಅತ್ಯುತ್ತಮ ತೆಲುಗು ಚಿತ್ರ: ಜೆರ್ಸಿ
    ಅತ್ಯುತ್ತಮ ತಮಿಳು ಚಿತ್ರ: ಅಸುರನ್​
    ಅತ್ಯುತ್ತಮ ಮಲಯಾಳಂ ಚಿತ್ರ: ಸಕಲ್ಲ ನೊಟ್ಟಂ
    ಅತ್ಯುತ್ತಮ ಸಾಹಸ ನಿರ್ದೇಶನ ಅವನ್ನೇ ಶ್ರೀಮನ್ನಾರಾಯಣ
    ಅತ್ಯುತ್ತಮ ಸಾಹಸ ನಿರ್ದೇಶನ ತೆಲುಗು: ಮಹರ್ಷಿ

    ಅತ್ಯುತ್ತಮ ನಿರ್ದೇಶಕ : ತಮಿಳಿನ ವೆಟ್ರಿಮಾರನ್ ಚಿತ್ರದ ನಿರ್ದೇಶಕ ಅಸುರನ್
    ಅತ್ಯತ್ತಮ ಸಾಮಾಜಿಕ ಕಳಕಳಿ ಚಿತ್ರ: ಆನಂದಿ ಗೋಪಾಲ್​
    ಅತ್ಯುತ್ತಮ ಸಂಗೀತ ನಿರ್ದೇಶ: ವಿಶ್ವಾಸಂ ಚಿತ್ರಕ್ಕಾಗಿ ಡಿ ಇಮಾನ್​
    ನಾನ್​ ಫೀಚರ್​ ಫಿಲ್ಮ್​ ವಿಭಾಗದಲ್ಲಿ ಅತ್ಯುತ್ತಮ ನಿರೂಪಣೆಗಾಗಿ ಸರ್​ ಡೇವಿಡ್​ ಅಟೆನ್​ಬರೋ​ ಅವರ ವೈಲ್ಡ್​ ಕರ್ನಾಟಕ ಚಿತ್ರ ಪ್ರಶಸ್ತಿ ಪಡೆದಿದೆ.
    Published by:Seema R
    First published: