• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Inspiration: ಅರ್ಧಕ್ಕೆ ನಿಂತ ಶಾಲಾ ನಿರ್ಮಾಣ ಕಾರ್ಯ, ಹಾಲು ಮಾರಿ ಸಂಪಾದಿಸಿದ್ದ 3 ಲಕ್ಷ ದೇಣಿಗೆ ನೀಡಿದ 65 ವರ್ಷದ ರೈತ

Inspiration: ಅರ್ಧಕ್ಕೆ ನಿಂತ ಶಾಲಾ ನಿರ್ಮಾಣ ಕಾರ್ಯ, ಹಾಲು ಮಾರಿ ಸಂಪಾದಿಸಿದ್ದ 3 ಲಕ್ಷ ದೇಣಿಗೆ ನೀಡಿದ 65 ವರ್ಷದ ರೈತ

ಶಾಲೆ ನಿರ್ಮಾಣಕ್ಕೆ 3 ಲಕ್ಷ ದೇಣಿಗೆ ನೀಡಿದ ರೈತ

ಶಾಲೆ ನಿರ್ಮಾಣಕ್ಕೆ 3 ಲಕ್ಷ ದೇಣಿಗೆ ನೀಡಿದ ರೈತ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಒಂದರಿಂದ ಎಂಟನೇ ತರಗತಿವರೆಗೆ 115 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಶಾಲೆಯಲ್ಲಿ ಕೇವಲ ನಾಲ್ಕೇ ಕೊಠಡಿಗಳಿವೆ. ಒಂದನ್ನು ಶಾಲೆಯ ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು ಮತ್ತೊಂದು ಸ್ಟೋರ್​ ರೂಮ್ ಆಗಿ ಬಳಸಲಾಗುತ್ತಿದೆ. ಉಳಿದ ಎರಡು ಕೊಠಡಿಗಳಲ್ಲಿ ಎಲ್ಲಾ ಮಕ್ಕಳು ಪಾಠ ಕೇಳುತ್ತಿದ್ದಾರೆ.

ಮುಂದೆ ಓದಿ ...
  • Local18
  • 5-MIN READ
  • Last Updated :
  • Share this:

ರಾಜಸ್ಥಾನ: ಸಾಮಾನ್ಯವಾಗಿ ಜನರು ಭವಿಷ್ಯಕ್ಕಾಗಿ (Future) ಹಣವನ್ನು ಉಳಿಸಲು ಭಯಸುತ್ತಾರೆ. ಈ ಹಣ ತಮ್ಮ ವೃದ್ಧಾಪ್ಯದಲ್ಲಿ ಆಸರೆಯಾಗಬಹುದು ಎಂದು ಚಿಂತಿಸುತ್ತಾರೆ. ಆದರೆ ರಾಜಸ್ಥಾನದ (Rajasthan) ಡುಂಗರ್​ಪುರದಲ್ಲಿ 65 ವರ್ಷದ ದನಗಾಹಿ ಮತ್ತು ಹಾಲು ಮಾರಾಟಗಾರ (Milk Seller) ತಾವೂ ಕಷ್ಟಪಟ್ಟು ಸಂಪಾದಿಸಿ ಕೂಡಿಟ್ಟಿದ್ದ ಹಣವನ್ನು ತಮ್ಮ ಹಳ್ಳಿಯ (Village) ಮಕ್ಕಳ ಶಾಲೆಯಲ್ಲಿ (School) ಉತ್ತಮ ಸೂರು ನಿರ್ಮಿಸಿಕೊಡಲು ದೇಣಿಗೆ (Donate) ನೀಡಿದ್ದಾರೆ. 10 -20 ಸಾವಿರವಲ್ಲ ಬರೋಬ್ಬರಿ 3 ಲಕ್ಷ ರೂಪಾಯಿಗಳನ್ನು ಆ ವೃದ್ಧ ದೇಣಿಗೆ ನೀಡಿದ್ದಾರೆ. ಧಾಣಿ ಘಾಟಾವ್​ನ ಮಾದು ರೈಬರಿ ಎಂಬುವವರು ಈ ಅದ್ಭುತ ಕೆಲಸ ಮಾಡಿದ್ದಾರೆ. ಇದೀಗ ಇಡೀ ಗ್ರಾಮ ಹಾಗೂ ಜಿಲ್ಲೆಯ ಜನತೆ ಮಾದು ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಶಾಲೆಗಳಿಗೆ ದೇಣಿಗೆ ನೀಡಲು ಇತರರಿಗೂ ಪ್ರೇರಣೆಯಾಗಿದ್ದಾರೆ.


2 ಕೊಠಡಿಯಲ್ಲಿ 115 ವಿದ್ಯಾರ್ಥಿಗಳಿಗೆ ಪಾಠ


ವಾಸ್ತವವಾಗಿ, ಡುಂಗರ್‌ಪುರ ಜಿಲ್ಲೆಯ ದೋವ್ಡಾ ಬ್ಲಾಕ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಧಾಣಿ ಘಾಟಾವ್​ನಲ್ಲಿ ಒಂದರಿಂದ ಎಂಟನೇ ತರಗತಿವರೆಗೆ 115 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಶಾಲೆಯಲ್ಲಿ ಕೇವಲ ನಾಲ್ಕೇ ಕೊಠಡಿಗಳಿವೆ. ಇವುಗಳಲ್ಲಿ ಒಂದು ಕೊಠಡಿಯನ್ನು ಶಾಲೆಯ ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು ಬಳಸುತ್ತಿದ್ದಾರೆ. ಸ್ಟೋರ್​ ರೂಮ್​ಗಾಗಿ ಒಂದು ಕೊಠಡಿ ಮೀಸಲಿಡಲಾಗಿದೆ. ಉಳಿದ ಎರಡು ಕೊಠಡಿಗಳಲ್ಲಿ ಒಂದರಿಂದ ಎಂಟನೇ ತರಗತಿಯ ಮಕ್ಕಳು ಕುಳಿತು ಪಾಠ ಕೇಳುವಂತಾಗಿತ್ತು.


ಗ್ರಾಮಸ್ಥರ ನೆರವು ಕೋರಿದ ಮುಖ್ಯಶಿಕ್ಷಕ


ಈ ಶಾಲೆಯ ಸಮಸ್ಯೆ ಕಂಡು ಶಾಲೆಯ ಮುಖ್ಯ ಶಿಕ್ಷಕರು ಗ್ರಾಮದ ಮುಖ್ಯಸ್ಥರನ್ನು ಭೇಟಿ ಮಾಡಿ ಶಾಲಾ ಕೊಠಡಿ ನಿರ್ಮಿಸುವುದಕ್ಕೆ ಮನವಿ ಮಾಡಿ, ಯೋಜನೆ ರೂಪಿಸಿಕೊಂಡಿದ್ದಾರೆ. ಈ ಯೋಜನೆಗಾಗಿ ಗ್ರಾಮ ಪಂಚಾಯಿಯಿಂದ ಎರಡೂವರೆ ಲಕ್ಷ ರೂಪಾಯಿ ಹಾಗೂ ಗ್ರಾಮದಿಂದ ಒಂದಷ್ಟು ಹಣ ಸಂಗ್ರಹಿಸಿ ಶಾಲಾ ಕೊಠಡಿ ಮತ್ತು ಸಭಾಂಗಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು.


ಇದನ್ನೂ ಓದಿ: Success Story: ರಜೆ ಕೇಳಿದ್ದಕ್ಕೆ ಕೊಡಲೊಪ್ಪದ ಕಂಪನಿ, ಕೆಲಸಕ್ಕೆ ಗುಡ್​ ಬೈ ಹೇಳಿ ಟೀ ಅಂಗಡಿ ನಡೆಸಿ ಯಶಸ್ಸು ಕಂಡ ದಂಪತಿ


ಸ್ವಯಂ ಪ್ರೇರಿತವಾಗಿ 3 ಲಕ್ಷ ದೇಣಿಗೆ ನೀಡಿದ ರೈತ


ಆದರೆ ಈ ಮೊತ್ತದಲ್ಲಿ ಸಭಾಂಗಣದ ಪಿಲ್ಲರ್​ ಹಾಗೂ ಆರ್​ಸಿಸಿ ಹಾಕುವುದಕ್ಕೆ ಮಾತ್ರ ಸಾಧ್ಯವಾಗಿದೆ. ಹಣದ ಕೊರತೆಯಿಂದಾಗಿ ನಿರ್ಮಾಣ ಕಾಮಗಾರಿ ಅಪೂರ್ಣವಾಗಿತ್ತು. ಇದಾದ ನಂತರ ಒಂದು ದಿನ ಧಾಣಿ ಘಾಟಾವ್ ಗ್ರಾಮದ ಸರಕಾರಿ ಶಾಲೆಯ ಮುಖ್ಯಶಿಕ್ಷಕ ಮಹೇಶ ವ್ಯಾಸ್ ಅವರು ಗ್ರಾಮದ ಹಾಲು ಮಾರಾಟಗಾರ ಮಾದು ರೈಬರಿಗೆ ಶಾಲಾ ಕಟ್ಟಡದ ಸಮಸ್ಯೆಯ ಬಗ್ಗೆ ತಿಳಿಸಿದ್ದಾರೆ. ಶಾಲೆಯಲ್ಲಿ ಸಭಾಂಗಣ, ತರಗತಿ ಕೊಠಡಿಗಳ ಕೊರತೆ ಇದ್ದು, ಇದರಿಂದ ಮಕ್ಕಳ ಅಧ್ಯಯನಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದಿದ್ದಾರೆ.


ಇದನ್ನು ಕೇಳಿದ ಮಾದು ತನ್ನೂರಿನ ಶಾಲೆಗೆ ಆರ್ಥಿಕ ನೆರವು ನೀಡಲು ನಿರ್ಧರಿಸಿದ್ದಾರೆ. ಜ್ಞಾನ ಸಂಕಲ್ಪ್ ಪೋರ್ಟಲ್ ಮೂಲಕ ಶಾಲೆಗೆ ಹಾಲು ಮಾರಾಟದಿಂದ ತಾವೂ ಸಂಪಾದಿಸಿದ್ದ 3 ಲಕ್ಷ ರೂಪಾಯಿಗಳನ್ನು ಮಾದು ರೈಬರಿ ಸ್ವಯಂ ಪ್ರೇರಿತರಾಗಿ ಊರಿನ ಮುಖ್ಯಸ್ಥರ ಮುಂದೆ ಶಾಲೆಯ ಕಟ್ಟಡ ಕಾಮಗಾರಿಗೆ ದೇಣಿಗೆ ನೀಡಿದ್ದಾರೆ.




ಹಳ್ಳಿಯ ಮಕ್ಕಳು ನನ್ನ ಮಕ್ಕಳೆಂದು ಭಾವಿಸುತ್ತೇನೆ


ಮಾದುಗೆ ವಿವಾಹವಾಗಿಲ್ಲ, ಒಂಟಿ ಜೀವನ ನಡೆಸುತ್ತಿರುವ ಇವರು ಪಶುಪಾಲನೆ ಹಾಗೂ ಹಾಲು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಅವರು ತಮ್ಮ ಹಳ್ಳಿಯ ಶಾಲೆಯಲ್ಲಿ ಓದುತ್ತಿರುವ ಎಲ್ಲಾ ಮಕ್ಕಳನ್ನೂ ತನ್ನ ಮಕ್ಕಳೆಂದು ಭಾವಿಸುತ್ತೇನೆ. ಭವಿಷ್ಯದಲ್ಲಿ ಶಾಲೆಗೆ ಮತ್ತೆ ಏನಾದರೂ ಸಹಾಯ ಬೇಕಾದರೆ, ತನ್ನ ಕೈಯಲ್ಲಿ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇನೆ ಎಂದು ಮಾದು ಭರವಸೆ ನೀಡಿದ್ದಾರೆ.


ಶಾಲಾ ಕೊಠಡಿ ನಿರ್ಮಾಣಕ್ಕೆ ರೈತನ ನೆರವು

top videos


    ರೈಬರಿಯವರ ಪ್ರೇರಣೆಯಿಂದ ಶಾಲೆಯಲ್ಲಿ ಕಟ್ಟಡ ಕಾಮಗಾರಿ ಆರಂಭಿಸಲಾಗಿದೆ. ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಶೀಘ್ರದಲ್ಲೇ ಹೊಸ ಕ್ಲಾಸ್​ ರೂಮ್​ಗಳು ಮತ್ತು ಸಭಾಂಗಣಗಳು ದೊರೆಯಲಿವೆ. ಕಾಮಗಾರಿ ಪೂರ್ಣಗೊಂಡ ಬಳಿಕ ಶಾಲೆಯಲ್ಲಿ ತರಗತಿ ಕೊಠಡಿಗಳ ಕೊರತೆ ನೀಗಲಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

    First published: