ಕಾಶ್ಮೀರದಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ 65ರ ಮಹಿಳೆ; ಇದೆಲ್ಲ ಅಲ್ಲಾಹ್ ಪವಾಡ ಎಂದ 80 ವರ್ಷದ ತಂದೆ!

65 ವರ್ಷದ ಮಹಿಳೆ ಹೆಣ್ಣುಮಗುವಿಗೆ ಜನ್ಮ ನೀಡುವ ಮೂಲಕ ವಿಶ್ವದ ಅತ್ಯಂತ ಹಿರಿಯ ತಾಯಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಂದಹಾಗೆ, ಈ ನವಜಾತ ಶಿಶುವಿನ ತಂದೆಗೆ 80 ವರ್ಷವಾಗಿದೆ ಎಂಬುದು ಇನ್ನೊಂದು ವಿಶೇಷ!

sushma chakre | news18
Updated:December 30, 2018, 9:10 AM IST
ಕಾಶ್ಮೀರದಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ 65ರ ಮಹಿಳೆ; ಇದೆಲ್ಲ ಅಲ್ಲಾಹ್ ಪವಾಡ ಎಂದ 80 ವರ್ಷದ ತಂದೆ!
ಪ್ರಾತಿನಿಧಿಕ ಚಿತ್ರ
sushma chakre | news18
Updated: December 30, 2018, 9:10 AM IST
ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿಯಿಂದಾಗಿ 35 ವರ್ಷ ದಾಟಿದರೆ ಮಕ್ಕಳಾಗುವ ಸಾಧ್ಯತೆಯೇ ಕಡಿಮೆ ಎಂದು ವೈದ್ಯರೇ ಎಚ್ಚರಿಕೆ ನೀಡತೊಡಗಿದ್ದಾರೆ. ಒಂದುವೇಳೆ 35 ವರ್ಷದ ನಂತರ ಮಕ್ಕಳಾದರೂ ಅನೇಕ ರೀತಿಯ ಆರೋಗ್ಯದ ಸಮಸ್ಯೆಗಳು ಶುರುವಾಗುತ್ತದೆ ಎಂದು ಕೆಲ ಅಧ್ಯಯನಗಳೇ ತಿಳಿಸಿವೆ. ಆದರೆ, ಆ ಎಲ್ಲ ವರದಿ, ಅಧ್ಯಯನಗಳನ್ನು ನಿವಾಳಿಸಿ ತೆಗೆಯುವಂತೆ ಜಮ್ಮು ಕಾಶ್ಮೀರದ 65 ವರ್ಷದ ಮಹಿಳೆಯೊಬ್ಬರು ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

65 ವರ್ಷದ ಕಾಶ್ಮೀರಿ ಮಹಿಳೆಗೆ ಸುಸೂತ್ರವಾಗಿ ಹೆರಿಗೆಯಾಗಿರುವುದು ಸ್ವತಃ ವೈದ್ಯರಿಗೂ ಆಶ್ಚರ್ಯ ಉಂಟುಮಾಡಿದೆ. ಇನ್ನು, ಆ ಮಹಿಳೆಯ ಗಂಡ 80 ವರ್ಷದ ಹಕೀಂ ದಿನ್​ ಕೂಡ ತಾನು ಈ ವಯಸ್ಸಿನಲ್ಲಿ ತಂದೆಯಾದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದು, ಎಲ್ಲವೂ ಅಲ್ಲಾಹ್​ ಪವಾಡ ಎಂದು ಎಲ್ಲ ಕ್ರೆಡಿಟ್​ ಅನ್ನು ದೇವರಿಗೆ ಅರ್ಪಿಸಿದ್ದಾರೆ. ಈ ಮುಪ್ಪಿನ ವಯಸ್ಸಿನಲ್ಲಿ ದೇವರು ನನಗೆ ಅಮೂಲ್ಯವಾದ ಉಡುಗೊರೆಯೊಂದನ್ನು ನೀಡಿದ್ದಾನೆ ಎಂದು ಅಲ್ಲಾಹ್​ಗೆ ಧನ್ಯವಾದ ಅರ್ಪಿಸಿದ ಅವರು, ಈ ವಯಸ್ಸಿನಲ್ಲಿ ಇಷ್ಟು ಚಿಕ್ಕ ಮಗುವನ್ನು ಪಾಲನೆ ಮಾಡಲು ಕಷ್ಟವಾಗುವುದರಿಂದ ಸರ್ಕಾರ ತಮಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಬಾಲಿವುಡ್ ಬಾದ್​ಶಾ ಭೇಟಿಗೆಂದು ಬಂದು ಜೈಲುಪಾಲಾಗಿದ್ದ ಪಾಕ್ ಪ್ರಜೆ 22 ತಿಂಗಳ ಬಳಿಕ ಬಿಡುಗಡೆ

ಈ ಬಗ್ಗೆ ಡೈಲಿ ಮೇಲ್ ವರದಿ ಮಾಡಿದ್ದು, ಜಮ್ಮು ಕಾಶ್ಮೀರದ ಪೂಂಚ್​ನ ಜಿಲ್ಲಾಸ್ಪತ್ರೆಯಲ್ಲಿ 65 ವರ್ಷದ ಮಗುವಿಗೆ ಜನ್ಮ ನೀಡಿದ್ದಾರೆ. ಅಂದಹಾಗೆ, ಈ 65 ಮತ್ತು 80 ವರ್ಷ ವಯಸ್ಸಿನ ದಂಪತಿಗೆ ಈಗಾಗಲೇ 10 ವರ್ಷದ ಮತ್ತೊಂದು ಚಿಕ್ಕ ಮಗನಿದ್ದಾನೆ.

ಸಾಮಾನ್ಯವಾಗಿ ಭಾರತೀಯರಲ್ಲಿ 47 ವರ್ಷದವರೆಗೂ ಹೆಣ್ಣು ಗರ್ಭಿಣಿಯಾದ ಉದಾಹರಣೆಗಳಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಆಹಾರ ಶೈಲಿ, ಜೀವನ ಕ್ರಮ ಬದಲಾಗುತ್ತಿರುವುದರಿಂದ 35ರಿಂದ 37 ವರ್ಷದೊಳಗೆ ಮಕ್ಕಳನ್ನು ಮಾಡಿಕೊಂಡರೆ ಉತ್ತಮ. ಈಗ 40 ವರ್ಷದ ವೇಳೆಗೆ ಮಹಿಳೆಯರಿಗೆ ಋತುಚಕ್ರ ನಿಲ್ಲತೊಡಗುತ್ತದೆ. ಆದರೆ, ಇದು ನಿಜಕ್ಕೂ ಅಚ್ಚರಿಯ ಸಂಗತಿ. 65 ವರ್ಷದವರೆಗೂ ಋತುಚಕ್ರವಾಗಿ, ಆರೋಗ್ಯವಂತ ಮಗುವಿಗೆ ಜನ್ಮ ನೀಡಿರುವುದು ನಂಬಲು ತುಸು ಕಷ್ಟಕರವಾದ ವಿಷಯ ಎಂದು ಕಾಶ್ಮೀರದ ಪ್ರಸೂತಿ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: ಹೊಸ ವರ್ಷದ ದಿನದಂದು ವಿಶ್ವದಲ್ಲೇ ಜನಿಸುವ ಮಕ್ಕಳ ಸಂಖ್ಯೆ ಅಧಿಕ; ಇದರಲ್ಲಿ ಭಾರತಕ್ಕೆ ಮೊದಲ ಸ್ಥಾನ

ಸದ್ಯಕ್ಕೆ ಸ್ಪೇನ್​ನ 66 ವರ್ಷದ ಮರಿಯಾ ಡೆಲ್ ಕಾರ್ಮೆನ್ ಬೌಸದ ಡೆ ಲಾರಾ ಎಂಬ ಮಹಿಳೆ ಐವಿಎಫ್​ ವಿಧಾನದ ಮೂಲಕ ಮಗುವನ್ನು ಹೆರುವ ಮೂಲಕ ಜಗತ್ತಿನ ಅತಿ ಹಿರಿಯ ತಾಯಿ ಎನಿಸಿಕೊಂಡಿದ್ದಾರೆ. ಆದರೆ, ಯಾವುದೇ ವೈಜ್ಞಾನಿಕ ವಿಧಾನಗಳನ್ನು ಅನುಸರಿಸದೆ ನೈಸರ್ಗಿಕವಾಗಿ ಮಗುವಿಗೆ ಜನ್ಮ ನೀಡಿದ ಅತ್ಯಂತ ಹಿರಿಯ ಮಹಿಳೆ ಕಾಶ್ಮೀರದ ಈ ಮಹಿಳೆಯಾಗಿದ್ದಾರೆ.
Loading...

First published:December 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ