• Home
  • »
  • News
  • »
  • national-international
  • »
  • Climate Change: ಹವಾಮಾನ ಬದಲಾವಣೆ! ಭೂಮಿ ಮೇಲಿನ 65% ಕೀಟಗಳು ನಾಶ

Climate Change: ಹವಾಮಾನ ಬದಲಾವಣೆ! ಭೂಮಿ ಮೇಲಿನ 65% ಕೀಟಗಳು ನಾಶ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮುಂದಿನ ಶತಮಾನದಲ್ಲಿ ತಾಪಮಾನ ಬದಲಾವಣೆಗಳಿಗೆ ಕೀಟಗಳ ಸಮೂಹವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಅನ್ವೇಷಿಸಲು ತಂಡವು ಕೆಲವೊಂದು ಅಧ್ಯಯನಗಳನ್ನು ನಡೆಸಿದೆ.

  • Trending Desk
  • Last Updated :
  • Bangalore, India
  • Share this:

ಹವಾಮಾನ (Weather) ವಿಪತ್ತು ಮಾನವರ ಮೇಲೆ ಮಾತ್ರ ಹಾನಿಯನ್ನುಂಟು ಮಾಡುವುದಲ್ಲ ಬದಲಿಗೆ ಇದರಿಂದ ಕೀಟಗಳ ಸಂಖ್ಯೆಯಲ್ಲೂ ಕ್ಷೀಣವಾಗುವ ಸಾಧ್ಯತೆ ಇದೆ ಎಂದು ಹೊಸ ಅಧ್ಯಯನ (Study) ಸೂಚಿಸಿದೆ. ಗ್ರಹದಲ್ಲಿನ ಕೀಟಗಳ ಸಂಖ್ಯೆಯಲ್ಲಿ ಬಹುಶಃ 65% ದಷ್ಟು ಮುಂದಿನ ಶತಮನಾದಲ್ಲಿ ನಾಶವಾಗಬಹುದು ಎಂದು ಸಂಶೋಧಕರು ಪತ್ತೆಹಚ್ಚಿದ್ದಾರೆ. ಅಧ್ಯಯನದ ವಿವರಗಳನ್ನು ನೇಚರ್ ಕ್ಲೈಮೇಟ್ ಚೇಂಜ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದ್ದು, ಇದಕ್ಕೆ ಮುಖ್ಯ ಕಾರಣ ಉಷ್ಣ ಒತ್ತಡದಲ್ಲಿನ ಹವಾಮಾನ-ಸ್ಥಿತಿಯ ಬದಲಾವಣೆಗಳು ಎಂಬುದಾಗಿ ಊಹಿಸಲಾಗಿದ್ದು ಈ ಬದಲಾವಣೆಗಳು ಪ್ರಾಣಿಗಳ (Animals) ಸಂಖ್ಯೆಯನ್ನು ಅಸ್ಥಿರಗೊಳಿಸುತ್ತದೆ. ಪ್ರಾಣಿಗಳನ್ನು ಅಳಿವಿನ ಅಪಾಯಕ್ಕೆ ಅವನ್ನು ತಳ್ಳುತ್ತದೆ ಎಂದು ವರದಿಯಾಗಿದೆ. ಅದೂ ಅಲ್ಲದೆ ಹವಾಮಾನ ಬದಲಾವಣೆಯ ಪರಿಣಾಮಗಳು ಹಿಂದೆ ಊಹಿಸಿದ್ದಕ್ಕಿಂತ ಹೆಚ್ಚು ವ್ಯಾಪಕವಾಗಿರಬಹುದು ಎಂದು ವರದಿ ತಿಳಿಸಿದೆ.


ಹವಾಮಾನ ವೈಪರೀತ್ಯವು ಕೀಟಗಳ ಸಂಖ್ಯೆಯಲ್ಲಿ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಇನ್ನಷ್ಟು ವಿವರವಾಗಿ ಅಧ್ಯಯನ ನಡೆಸಲು ಮಾಡೆಲಿಂಗ್ ಉಪಕರಣದ ಅಗತ್ಯವಿದೆ ಎಂದು ತಿಳಿಸಿರುವ ಅಧ್ಯಯನಕಾರರು, ಈ ಅಧ್ಯಯನದ ಮೂಲಕ ವಿವರವಾದ ಅಂಶವನ್ನು ಒದಗಿಸಲಿದ್ದೇವೆ ಎಂದು ತಿಳಿಸಿದ್ದಾರೆ.


ಮಾಡೆಲಿಂಗ್ ಉಪಕರಣವು ವಿಜ್ಞಾನಿಗಳಿಗೆ ಈ ಕ್ರಿಯಾತ್ಮಕತೆಯನ್ನು ಅರ್ಥಮಾಡಿಕೊಳ್ಳಲು ಹೆಚ್ಚು ನೇರ ಮತ್ತು ನಿಖರವಾದ ವಿಧಾನವಾಗಿದೆ ಎಂದು ನಾಸಾದ ಏಮ್ಸ್ ಸಂಶೋಧನಾ ಕೇಂದ್ರದ ಮಾಜಿ ಪೋಸ್ಟ್‌ಡಾಕ್ಟರಲ್ ಸಂಶೋಧಕರು ಡಾ. ಕೇಟ್ ಡಫ್ಫಿ ತಿಳಿಸಿದ್ದಾರೆ.


ಮುಂದೆ ಏನಾಗುತ್ತದೆ?


ಮುಂದಿನ ಶತಮಾನದಲ್ಲಿ ಯೋಜಿತ ತಾಪಮಾನ ಬದಲಾವಣೆಗಳಿಗೆ ಕೀಟಗಳ ಸಮೂಹವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಅನ್ವೇಷಿಸಲು ತಂಡವು ಕೆಲವೊಂದು ಅಧ್ಯಯನಗಳನ್ನು ನಡೆಸಿದೆ. ಅವರು ಅಧ್ಯಯನ ಮಾಡಿದ 38 ಕೀಟ ಪ್ರಭೇದಗಳಲ್ಲಿ 25 ಅಳಿವಿನ ಅಪಾಯವನ್ನು ಎದುರಿಸಬಹುದು ಎಂಬುದನ್ನು ತಂಡವು ಅರಿತುಕೊಂಡಿದ್ದು, ವಿಶೇಷವಾಗಿ ತಮ್ಮ ಸ್ಥಳೀಯ ಪರಿಸರದಲ್ಲಿನ ವೈಪರೀತ್ಯ ಮತ್ತು ಅನಿಯಮಿತ ತಾಪಮಾನದ ಬದಲಾವಣೆಗಳೇ ಇದಕ್ಕೆ ಕಾರಣ ಎಂದು ತಿಳಿಸಿದೆ.


ಇದನ್ನೂ ಓದಿ: Bharat Jodo Yatra: ನರ್ಮದಾ ತೀರದಲ್ಲಿ 'ರಾಗಾ'! ಪ್ರಿಯಾಂಕಾ, ರಾಹುಲ್ ಗಾಂಧಿಯಿಂದ ಆರತಿ


ಹವಾಮಾನ ಬದಲಾವಣೆಯು ಜೈವಿಕ ವೈವಿಧ್ಯತೆ ಮತ್ತು ಭೂಮಿಯ ಮೇಲಿನ ಜೀನ್‌ಗಳು, ಜಾತಿಗಳು ಮತ್ತು ಪರಿಸರ ವ್ಯವಸ್ಥೆಗಳಲ್ಲಿ ಕಂಡುಬರುವ ವ್ಯತ್ಯಾಸದ ಪ್ರಮಾಣವು ಹೇಗೆ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ ಎಂಬುದನ್ನು ವಿಜ್ಞಾನಿಗಳು ಬಹಳ ಹಿಂದೆಯೇ ಆಲೋಚಿಸಿದ್ದಾರೆ. ಮಾನವನ ಆರೋಗ್ಯ, ಆಹಾರ ಭದ್ರತೆ, ಶುದ್ಧ ಗಾಳಿ ಮತ್ತು ನೀರು ಮತ್ತು ವಿಶ್ವಾದ್ಯಂತ ಲಕ್ಷಾಂತರ ಕೃಷಿ ಉದ್ಯೋಗಗಳಿಗೆ ವೈವಿಧ್ಯತೆಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ ಎಂಬುದು ಅಧ್ಯಯನಕಾರರ ಮಾತಾಗಿದೆ.


65 % ದಷ್ಟು ಕೀಟ ಸಮೂಹದ ನಾಶ


ಸಂರಕ್ಷಣಾ ಕ್ರಮಗಳು ಜೀವವೈವಿಧ್ಯದ ನಷ್ಟವನ್ನು ಸುಧಾರಿಸಬಹುದಾದರೂ, ಈ ಪ್ರಯತ್ನಗಳ ಯಶಸ್ಸು ಪರಿಸರದ ಬದಲಾವಣೆಗಳಿಗೆ ಪರಿಸರ ವ್ಯವಸ್ಥೆಗಳ ಪ್ರತಿಕ್ರಿಯೆಯನ್ನು ಊಹಿಸುವ ನಮ್ಮ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ ಎಂಬುದು ಅಧ್ಯಯನದಲ್ಲಿ ತಿಳಿಸಲಾಗಿದೆ. ತಾಪಮಾನದಲ್ಲಿನ ತೀವ್ರ ಬದಲಾವಣೆಗಳಿಂದಾಗಿ, ಅಧ್ಯಯನ ಮಾಡಿದ 38 ಕೀಟ ಸಮೂಹದ 65 % ದಷ್ಟು ಮುಂದಿನ 50 ರಿಂದ 100 ವರ್ಷಗಳಲ್ಲಿ ಅಳಿವಿನ ಅಪಾಯವನ್ನು ಎದುರಿಸಬಹುದು ಎಂಬುದು ವರದಿಗಳಿಂದ ತಿಳಿದುಬಂದಿದೆ.


ಆಂತರಿಕ ಶಾಖವನ್ನು ಉತ್ಪಾದಿಸಲು ಸಾಧ್ಯವಾಗದ ಕೀಟಗಳಿಗೆ ಹವಾಮಾನ ಬದಲಾವಣೆಗಳು ಹೆಚ್ಚಿನ ಬೆದರಿಕೆಯನ್ನುಂಟು ಮಾಡುತ್ತವೆ ಏಕೆಂದರೆ ತೀವ್ರವಾದ ತಾಪಮಾನದ ಏರಿಳಿತಗಳಲ್ಲಿ ಇಂತಹ ಜೀವಿಗಳು ತಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸುವ ಕಾರ್ಯವಿಧಾನಗಳನ್ನು ಹೊಂದಿರುವುದಿಲ್ಲ ಎಂದು ಅಧ್ಯಯನ ಸೂಚಿಸಿದೆ.


ಕೀಟಗಳ ನಷ್ಟವು ಗ್ರಹದಲ್ಲಿನ ಪ್ರಕೃತಿಯ ಸಮತೋಲನವನ್ನು ಹೇಗೆ ಬದಲಾಯಿಸಬಹುದು?


ಪರಿಸರ ವ್ಯವಸ್ಥೆಯಲ್ಲಿ ಪ್ರತಿಯೊಂದು ಜೀವಿಗಳು ಒಂದೊಂದು ಪಾತ್ರವನ್ನು ಹೊಂದಿವೆ. ಕೀಟಗಳು ಸಾವಯವ ಪದಾರ್ಥಗಳನ್ನು ಕೊಳೆಸುವುದರ ಜೊತೆಗೆ ಪರಾಗಸ್ಪರ್ಶದ ಮೂಲಕ ಹಣ್ಣುಗಳು, ತರಕಾರಿಗಳು ಮತ್ತು ಹೂವುಗಳ ಉತ್ಪಾದನೆಗೆ ಸಹಾಯ ಮಾಡುತ್ತವೆ. ಹಾನಿಕಾರಕ ಕೀಟಗಳನ್ನು ನಿಯಂತ್ರಿಸಲು ಕೂಡ ಕೀಟಗಳು ಸಹಾಯ ಮಾಡುತ್ತವೆ.


ನೇಚರ್ ಕನ್ಸರ್ವೆನ್ಸಿ ಪ್ರಕಾರ, ಕೀಟಗಳು ನೈರ್ಮಲ್ಯ ತಜ್ಞರಂತೆ ಕಾರ್ಯನಿರ್ವಹಿಸುತ್ತವೆ ಅದೂ ಅಲ್ಲದೆ ತ್ಯಾಜ್ಯವನ್ನು ಸ್ವಚ್ಛಗೊಳಿಸುವ ಬಹುಮುಖ್ಯ ಕಾರ್ಯವನ್ನು ಕೀಟಗಳು ಮಾಡುವುದರಿಂದ ಪ್ರಪಂಚವು ಕೊಳಕಾಗಿಲ್ಲ ಹಾಗೂ ತ್ಯಾಜ್ಯಗಳ ರಾಶಿಯಿಂದ ತುಂಬಿಕೊಂಡಿಲ್ಲ. ಅವುಗಳ ಪರಭಕ್ಷಕ ಮಟ್ಟದಲ್ಲಿ, ಕೀಟಗಳನ್ನು ಬೇಟೆಯಾಡಲು ಜವಾಬ್ದಾರರಾಗಿರುತ್ತವೆ. ಗಿಡಹೇನುಗಳಿಂದ ಹಾನಿಯಾಗುವ ಸಸ್ಯಗಳನ್ನು ಸಂರಕ್ಷಿಸಲು ಜೀರುಂಡೆಗಳಂತಹ ಕೀಟಗಳ ಕಾರ್ಯ ಪ್ರಮುಖವಾಗಿವೆ. ಹಾಗಾಗಿ ಕೀಟಗಳ ಸಮೂಹಗಳಲ್ಲಿನ ನಷ್ಟವು ಗ್ರಹದಲ್ಲಿನ ಪ್ರಕೃತಿಯ ಸಮತೋಲನವನ್ನು ಬದಲಾಯಿಸಬಹುದು ಎಂದು ವರದಿ ತಿಳಿಸಿದೆ.

Published by:Divya D
First published: