ಮೋದಿ ಆಡಳಿತಕ್ಕೆ ಶೇ.65 ಜನರ ಮೆಚ್ಚುಗೆ; ಪ್ರಧಾನಿ ಮೆಚ್ಚಿದವರಲ್ಲಿ ಬಿಹಾರ ಫಸ್ಟ್, ಕರ್ನಾಟಕಕ್ಕೆಷ್ಟನೇ ಸ್ಥಾನ?

ಆರನೇ ಸ್ಥಾನದಲ್ಲಿರುವ ಕರ್ನಾಟಕದ ಶೇ. 82.56 ಜನರು ಮೋದಿ ಆಡಳಿತವನ್ನು ಮೆಚ್ಚಿದ್ದಾರೆ. ವಿಶೇಷ ಎಂದರೆ ಮೋದಿಯನ್ನು ಮೆಚ್ಚಿರುವ ಆಂಧ್ರ ಪ್ರದೇಶ ಹಾಗೂ ಛತ್ತೀಸ್​ಗಢದಲ್ಲಿ ಬಿಜೆಪಿ ಆಡಳಿತ ಇಲ್ಲ.

news18-kannada
Updated:June 3, 2020, 11:26 AM IST
ಮೋದಿ ಆಡಳಿತಕ್ಕೆ ಶೇ.65 ಜನರ ಮೆಚ್ಚುಗೆ; ಪ್ರಧಾನಿ ಮೆಚ್ಚಿದವರಲ್ಲಿ ಬಿಹಾರ ಫಸ್ಟ್, ಕರ್ನಾಟಕಕ್ಕೆಷ್ಟನೇ ಸ್ಥಾನ?
ನರೇಂದ್ರ ಮೋದಿ
  • Share this:
ನವದೆಹಲಿ (ಜೂ. 3): ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿ ಇಷ್ಟವಾಗಿದೆ ಎಂದು ಶೇ.65.69ರು ವೋಟ್​ ಮಾಡಿದ್ದಾರೆ. ಐಎಎನ್​ಎಸ್​-ಸಿ ವೋಟರ್ಸ್​ ನಡೆಸಿದ ಸಮೀಕ್ಷೆಯಲ್ಲಿ ಈ ವಿಚಾರ ಗೊತ್ತಾಗಿದೆ. ಪ್ರಧಾನಿ ಮೆಚ್ಚಿದವರಲ್ಲಿ ಬಿಹಾರ ಫಸ್ಟ್ ಇದ್ದರೆ​, ಕೇರಳ ಲಾಸ್ಟ್​ ಇದೆ.

ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಶೇ. 24.01 ಜನರು ಮೋದಿ ಆಡಳಿತದಿಂದ ಅಲ್ಪ ತೃಪ್ತಿ ಪಡೆದಿದ್ದೇವೆ ಎಂದಿದ್ದಾರೆ. ಶೇ.16.71 ಜನರು ಮಾತ್ರ ಮೋದಿ ಆಡಳಿತ ತೃಪ್ತಿ ನೀಡಿಲ್ಲ ಎಂದು ಹೇಳಿದ್ದಾರೆ.

ಬಿಹಾರದಲ್ಲಿ ಶೇ. 95.6 ಜನರು ಮೋದಿಯನ್ನು ಒಪ್ಪಿರುವುದಾಗಿ ಹೇಳಿದ್ದಾರೆ. ಈ ಪೈಕಿ ಶೇ. 84.87 ಜನರು ಮೋದಿ ಆಡಳಿತದ ಬಗ್ಗೆ ಭಾರೀ ಮೆಚ್ಚುಗೆ ಹೊರ ಹಾಕಿದರೆ, ಶೇ. 2.2 ಜನರು ಮೋದಿ ಆಡಳಿತವನ್ನು ಒಪ್ಪಿಲ್ಲ.

ಮೋದಿ ಆಡಳಿತವನ್ನು ಮೆಚ್ಚಿದ ರಾಜ್ಯಗಳ ಪೈಕಿ ಹಿಮಾಚಲ ಪ್ರದೇಶ (93.95), ಛತ್ತೀಸ್​ಗಢ (92.73) ಮತ್ತು ಆಂಧ್ರ ಪ್ರದೇಶ (83.6) ಅನುಕ್ರಮವಾಗಿ ಎರಡು, ಮೂರು ಹಾಗೂ ನಾಲ್ಕನೇ ಸಾಲಿನಲ್ಲಿವೆ. ಆರನೇ ಸ್ಥಾನದಲ್ಲಿರುವ ಕರ್ನಾಟಕದ ಶೇ. 82.56 ಜನರು ಮೋದಿ ಆಡಳಿತವನ್ನು ಮೆಚ್ಚಿದ್ದಾರೆ. ವಿಶೇಷ ಎಂದರೆ ಆಂಧ್ರ ಪ್ರದೇಶ ಹಾಗೂ ಛತ್ತೀಸ್​ಗಢದಲ್ಲಿ ಬಿಜೆಪಿ ಆಡಳಿತ ಇಲ್ಲ.

ಇದನ್ನೂ ಓದಿ: ಸತತ ಏರಿಕೆ ಕಂಡ ಬೆನ್ನಲ್ಲೇ ಇಳಿಕೆ ಕಂಡ ಚಿನ್ನ

ಇನ್ನು, ಉತ್ತರಾಖಂಡ, ಗೋವಾ ಹಾಗೂ ಹರಿಯಾಣ ಭಾಗದ ಜನರು ಮೋದಿ ಆಡಳಿತದ ಬಗ್ಗೆ ನಿರುತ್ಸಾಹ ತೋರಿದ್ದಾರೆ. ಉತ್ತರಾಖಂಡ್​ ಜನತೆ ಮೋದಿ ಆಡಳಿತಕ್ಕೆ ಶೇ.53 ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉಳಿದಂತೆ ಗೋವಾದಲ್ಲಿ ಶೇ. 52.54 ಜನರು ಮೋದಿ ಆಡಳಿತ  ಕೊಂಡಾಡಿದ್ದಾರೆ. ಹರಿಯಾಣದಲ್ಲಿ ಶೇ. 51.25 ಜನರು ಮೋದಿ ಆಡಳಿತ ಶ್ಲಾಘಿಸಿದ್ದಾರೆ. ಇನ್ನು ಕೇರಳದಲ್ಲಿ ಶೇ. 32.89 ಹಾಗೂ ತಮಿಳುನಾಡಿನಲ್ಲಿ ಶೇ. 32.15 ಜನರು ಮಾತ್ರ ಮೋದಿ ಆಡಳಿತಕ್ಕೆ ಉಘೇ ಎಂದಿದ್ದಾರೆ.
Published by: Rajesh Duggumane
First published: June 3, 2020, 11:26 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading