Humanity Story: ಕುಟುಂಬಕ್ಕೆ ನಿಷ್ಠನಾಗಿದ್ದ ಬಂಡಿ ಎಳೆಯುವ ಬಡವನಿಗೆ ಕೋಟ್ಯಂತರ ರೂ. ಆಸ್ತಿ ದಾನ ಮಾಡಿದ ವಿಧವೆ!

ನನ್ನ ಮಗಳು ಶಾಲೆಯಲ್ಲಿದ್ದಾಗ, ಬುಧ ಅವಳನ್ನು ಕರೆದುಕೊಂಡು ಹೋಗಿ ಮರಳಿ ಕರೆತರುತ್ತಿದ್ದನು. ನನ್ನ ಪತಿ ಯಾವಾಗಲೂ ಅವನನ್ನು ನಂಬುತ್ತಿದ್ದರು. ನನ್ನ ಮಗಳ ಮರಣದ ನಂತರ, ನನ್ನ ಸಂಬಂಧಿಕರು ಅಥವಾ ನನ್ನ ಪೋಷಕರ ಕುಟುಂಬದ ಯಾರೊಬ್ಬರೂ ನನ್ನ ಆರೋಗ್ಯದ ಬಗ್ಗೆ ವಿಚಾರಿಸಲು ಅಥವಾ ನನ್ನ ಕರೆಗಳಿಗೆ ಪ್ರತಿಕ್ರಿಯಿಸಲಿಲ್ಲ ಎಂದು ಅವರು ಹೇಳಿದರು.

ಬಂಡಿ ಎಳೆಯುವವನ ಕುಟುಂಬಕ್ಕೆ ಆಸ್ತಿ ವಿಲ್ ಮಾಡಿಸಿದ ಮಿನಾತಿ (ಮಧ್ಯೆದಲ್ಲಿ ಕುಳಿತಿರುವವರು)

ಬಂಡಿ ಎಳೆಯುವವನ ಕುಟುಂಬಕ್ಕೆ ಆಸ್ತಿ ವಿಲ್ ಮಾಡಿಸಿದ ಮಿನಾತಿ (ಮಧ್ಯೆದಲ್ಲಿ ಕುಳಿತಿರುವವರು)

  • Share this:
    ಒಡಿಶಾದ ಕಟಕ್ ನಗರದಲ್ಲಿ (Cuttack In Odisha) ವಾಸವಾಗಿರುವ 63 ವರ್ಷದ ವಿಧವೆ ಮಿನಾತಿ ಪಟ್ನಾಯಕ್ (63 Old Widow Minati Patnaik) ಕಳೆದ 25 ವರ್ಷಗಳಿಂದ ತನ್ನ ಕುಟುಂಬಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ರಿಕ್ಷಾ ಅಥವಾ ಬಂಡಿ ಎಳೆಯುವವ (Rickshaw- puller) ವ್ಯಕ್ತಿಯ ಹೆಸರಿಗೆ ತಾನು ವಾಸಿಸುವ ಮನೆ ಸೇರಿದಂತೆ ಜಮೀನು, ಆಸ್ತಿಯನ್ನು ನೀಡುವುದಾಗಿ ಉಯಿಲು (Wills) ಮಾಡಿಸಿದ್ದಾರೆ. ಕಟಕ್‌ನ ಸುತಾಹತ್ ಕ್ರಿಶ್ಚಿಯನ್ಸಾಹಿ ಪ್ರದೇಶದ ಮಿನಾತಿ ಪಟ್ನಾಯಕ್ ಶುಕ್ರವಾರ ತನ್ನ ಮೂರು ಅಂತಸ್ತಿನ ಮನೆ ಮತ್ತು ಆಕೆಯ ಎಲ್ಲಾ ವಸ್ತುಗಳು ಹಾಗೂ ಒಂದು ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ನಗರದ ರಿಕ್ಷಾ ಎಳೆಯುವ 53 ವರ್ಷದ ಬುಧ ಸಮಲ್ ಎಂಬುವವರ ಕುಟುಂಬಕ್ಕೆ ವಿಲ್ ಮಾಡಿದರು.

    “ಕಳೆದ ವರ್ಷ ಅನಿರೀಕ್ಷಿತವಾಗಿ ನನ್ನ ಪತಿ ಮತ್ತು ಮಗಳನ್ನು ಕಳೆದುಕೊಂಡ ನಂತರ, ನಾನು ಒಬ್ಬಂಟಿಯಾಗಿದ್ದೇನೆ ಮತ್ತು ನನ್ನ ಸರದಿಗಾಗಿ ಕಾಯುತ್ತಿದ್ದೇನೆ. ನಾನು ನನ್ನ ಆಸ್ತಿಯನ್ನು ಬಡ ಕುಟುಂಬಕ್ಕೆ ದಾನ ಮಾಡಲು ಬಯಸುತ್ತೇನೆ. ಕೊಳೆಗೇರಿಯಲ್ಲಿ ವಾಸಿಸುತ್ತಿರುವ ಬುಧ ಮತ್ತು ಅವನ ಕುಟುಂಬಕ್ಕೆ ನನ್ನ ಎಲ್ಲ ಆಸ್ತಿಯನ್ನು ದಾನ ಮಾಡಲು ನಿರ್ಧರಿಸಿದ್ದೇನೆ. ಕಳೆದ 25 ವರ್ಷಗಳಲ್ಲಿ ಬುಧ ನನಗೆ ಮತ್ತು ನನ್ನ ಕುಟುಂಬಕ್ಕಾಗಿ ತುಂಬಾ ನಿಷ್ಠೆಯಿಂದ ಮಾಡಿದ್ದಾನೆ. ನಾನು ಅವರಿಗೆ ಕೃತಜ್ಞಳಾಗಿದ್ದೇನೆ. ಆತ ಅವನದೆ ಆದ ಒಂದು ಆಶ್ರಯ ಹೊಂದಬೇಕೆಂದು ಎಂಬುದು ನನ್ನ ಬಯಕೆಯಾಗಿದೆ,”ಎಂದು ಮಿನಾಟಿ ಹೇಳಿದ್ದಾರೆ.

    ಮಿನಾತಿ ಅವರು ಕಳೆದ ವರ್ಷ ತನ್ನ 70 ವರ್ಷದ ಪತಿ, ಉದ್ಯಮಿ ಕೃಷ್ಣ ಕುಮಾರ್ ಪಟ್ನಾಯಕ್ ಅವರನ್ನು ಕಳೆದುಕೊಂಡಿದ್ದರು. ಅದಾದ ಆರು ತಿಂಗಳ ನಂತರ, ಅವರ 31 ವರ್ಷದ ಮಗಳು ಕೋಮಲ್ ಕುಮಾರಿ ಎಣ್ಣೆ ದೀಪವನ್ನು ಬೆಳಗಿಸುವಾಗ ಗಾಯಗೊಂಡರು ಮತ್ತು ಆ ಕ್ಷಣದಲ್ಲೇ ಹೃದಯ ಸ್ತಂಭನವಾಗಿ ಅಸುನೀಗಿದರು. ಆರು ತಿಂಗಳ ಅಂತರದಲ್ಲಿ ಎರಡು ಸಾವಿನ ನಂತರ ನಿರಾಶೆಗೊಂಡ ಮಿನಾತಿ ಬದುಕುವ ಆಸೆಯನ್ನು ಕಳೆದುಕೊಂಡಿದ್ದರು. ಊಟವನ್ನು ತ್ಯಜಿಸಿಬಿಟ್ಟಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಬುಧ ಆಸ್ಪತ್ರೆಗೆ ಸೇರಿಸಿ, ಅವರ ಆರೈಕೆ ಮಾಡತೊಡಗಿದರು. ನಂತರದ ದಿನಗಳಲ್ಲೂ ಅವರ ಅಗತ್ಯಗಳನ್ನು ನೋಡಿಕೊಳ್ಳುವುದರಿಂದ, ಬುಧ ಮತ್ತು ಅವನ ಕುಟುಂಬವು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸೇವೆಯನ್ನು ಮಿನಾತಿ ಅವರಿಗೆ ಮಾಡಿದರು.

    ಕಳೆದ 25 ವರ್ಷಗಳಿಂದ ತನ್ನ ಕುಟುಂಬವು ಬಂಡಿ ಎಳೆಯುವ ಬುಧನೊಂದಿಗೆ ಸುರಕ್ಷಿತವಾಗಿದೆ ಎಂದು ಮಿನಾಟಿ ಹೇಳಿದರು. “ನನ್ನ ಮಗಳು ಶಾಲೆಯಲ್ಲಿದ್ದಾಗ, ಬುಧ ಅವಳನ್ನು ಕರೆದುಕೊಂಡು ಹೋಗಿ ಮರಳಿ ಕರೆತರುತ್ತಿದ್ದನು. ನನ್ನ ಪತಿ ಯಾವಾಗಲೂ ಅವನನ್ನು ನಂಬುತ್ತಿದ್ದರು. ನನ್ನ ಮಗಳ ಮರಣದ ನಂತರ, ನನ್ನ ಸಂಬಂಧಿಕರು ಅಥವಾ ನನ್ನ ಪೋಷಕರ ಕುಟುಂಬದ ಯಾರೊಬ್ಬರೂ ನನ್ನ ಆರೋಗ್ಯದ ಬಗ್ಗೆ ವಿಚಾರಿಸಲು ಅಥವಾ ನನ್ನ ಕರೆಗಳಿಗೆ ಪ್ರತಿಕ್ರಿಯಿಸಲಿಲ್ಲ. ಕಳೆದ 25 ವರ್ಷಗಳಿಂದ ಬುಧ ಮತ್ತು ಅವರ ಕುಟುಂಬ ನನ್ನ ಬೆಂಬಲಕ್ಕೆ ನಿಂತಿತ್ತು. ಅವರು ಯಾವಾಗಲೂ ನನಗೆ ಗೌರವವನ್ನು ನೀಡುತ್ತಾರೆ ಮತ್ತು ನನ್ನ ಕುಟುಂಬವನ್ನು ನೋಡಿಕೊಳ್ಳುತ್ತಾರೆ, ”ಎಂದು ಅವರು ಹೇಳಿದರು.

    ಇದನ್ನು ಓದಿ: Viral Video: ಅದೇನು ಭಕ್ತಿ.. ಅದೇನು ಭಯ: ಹುಂಡಿ ಹಣ ಎಗರಿಸುವ ಮುನ್ನ ದೇವರಿಗೆ ನಮಸ್ಕರಿಸಿದ ಕಳ್ಳ!

    ರಿಕ್ಷಾ ಚಾಲನ ಬುಧನಿಗೆ ಮಿನಾಟಿ ಅವರು ತನ್ನ ಆಸ್ತಿಯನ್ನು ನೀಡಿರುವ ಬಗ್ಗೆ ಹೇಳಿದಾಗ ಅವರು ಆಶ್ಚರ್ಯ ವ್ಯಕ್ತಪಡಿಸಿದರು. “ನಾನು ಆಸ್ತಿಯ ಕನಸು ಕಂಡಿರಲಿಲ್ಲ. ಆದರೆ ಮಿನಾತಿ ಅವರ ಪತಿ ತೀರಿಕೊಂಡ ನಂತರ ನನ್ನ ಕುಟುಂಬ ಯಾವಾಗಲೂ ಅವರನ್ನು ಆತ್ಮೀಯವಾಗಿ ನೋಡಿಕೊಂಡೆವು. ಅವರು ಜೀವಂತವಾಗಿರುವವರೆಗೂ ನಾವು ಅವರನ್ನು ತುಂಬು ಪ್ರೀತಿಯಿಂದ ನೋಡಿಕೊಳ್ಳುತ್ತೇವೆ ”ಎಂದು ಬುಧ ಹೇಳಿದರು. ಬುಧ ಅವರ ಕುಟುಂಬವು ಅವರ ಹೆಂಡತಿ, ಮೂರು ಮಕ್ಕಳು, ಇಬ್ಬರು ಗಂಡು ಮಕ್ಕಳನ್ನು ಒಳಗೊಂಡಿದೆ.
    Published by:HR Ramesh
    First published: