ಕೈಕೊಟ್ಟ ಪ್ರೇಯಸಿ, ಕೈ ಹಿಡಿದ ದರೋಡೆ: 63 ವರ್ಷದ ವ್ಯಕ್ತಿಯ ರಿಯಲ್​ ಕಹಾನಿ

news18
Updated:July 31, 2018, 2:11 PM IST
ಕೈಕೊಟ್ಟ ಪ್ರೇಯಸಿ, ಕೈ ಹಿಡಿದ ದರೋಡೆ: 63 ವರ್ಷದ ವ್ಯಕ್ತಿಯ ರಿಯಲ್​ ಕಹಾನಿ
news18
Updated: July 31, 2018, 2:11 PM IST
ನ್ಯೂಸ್​ 18 ಕನ್ನಡ

ನವದೆಹಲಿ (ಜುಲೈ 31):  ಕಾಲೇಜಿನ ಮೆಟ್ಟಿಲು ಹತ್ತುತ್ತಿದ್ದಂತೆ ಹುಡುಗರಿಗೆ ಹುಡುಗಿಯರ ಬಗ್ಗೆ ಆಕರ್ಷಣೆ ಮೂಡುವುದು ಸಾಮಾನ್ಯ. ಆದರೆ, 63 ವರ್ಷದ ಬ್ಯಾಚುಲರ್​ ಅಂಕಲ್​ ತನ್ನ ಪ್ರಿಯತಮೆ ಕೈಕೊಟ್ಟಳೆಂದು ದರೋಡೆಯ ಕೆಲಸಕ್ಕೆ ಕೈಹಾಕಿದ. ಹಾಗಾದರೆ, ಆತ ಸಿಕ್ಕಿಬಿದ್ದಿದ್ದು ಹೇಗೆ?

ದೆಹಲಿಯ ಬಂಧು ಸಿಂಗ್​ ಎಂಬ ವ್ಯಕ್ತಿಗೆ 63 ವರ್ಷ, ಇನ್ನೂ ಮದುವೆಯಾಗಿಲ್ಲ. ಹಾಗಂತ ಎಲ್ಲ ಇಷ್ಟಾರ್ಥಗಳನ್ನೂ ತ್ಯಜಿಸಿದವನು ಎಂದುಕೊಳ್ಳಬೇಡಿ. ತನ್ನ ಐವರು ಪ್ರೇಯಸಿಯರ ಬೇಡಿಕೆಗಳನ್ನು ಮೆಚ್ಚಿಸಲು ಯಾವ ಕೆಲಸ ಬೇಕಾದರೂ ಮಾಡುವಂತಹ ವ್ಯಕ್ತಿ ಈತ. ವಾಸ ಮಾಡುವುದು ಸ್ಲಮ್​ನಲ್ಲಾದರೂ ಬಿಳಿ ಕೂದಲನ್ನು ಡೈ ಮಾಡಿಕೊಂಡು, ನೀಟಾಗಿ ಡ್ರೆಸ್​ ಮಾಡಿಕೊಂಡು ಮನೆಯಿಂದ ಹೊರಟರೆ ಸ್ಲಮ್​ನಲ್ಲಿ ಇರುವುದೆಂದು ಯಾರಿಗೂ ಗೊತ್ತಾಗದು.

ಒಂದು ದಶಕದ ಆತನ ಬಳಿ ಹಣವಿಲ್ಲ ಎಂದು ಪ್ರೇಯಸಿ ಬಿಟ್ಟು ಹೋಗುತ್ತಾಳೆ. ಅದಾದ ನಂತರ ತನ್ನ ಪ್ರೀತಿಯನ್ನು ತಿರಸ್ಕರಿಸಲು ತನ್ನ ಬಡತನವೆಂದೂ ಕಾರಣವಾಗಬಾರದು ಎಂದು ಸಿಂಗ್​ ನಿರ್ಧಾರ ಮಾಡುತ್ತಾನೆ. ಹಾಗಾಗಿ, ಸುಲಭವಾಗಿ ಹಣ ಸಂಪಾದನೆ ಮಾಡುವ ಮಾರ್ಗಕ್ಕಾಗಿ ಯೋಚಿಸುತ್ತಾನೆ. ಇದಕ್ಕಾಗಿ ಕಳ್ಳತನದ ಮಾರ್ಗ ಹಿಡಿಯುತ್ತಾನೆ!

ದರೋಡೆಯೇ ಕಸುಬಾಯ್ತು:

ಹೌದು, ಆತ ಯಾವ ಮಟ್ಟದಲ್ಲಿ ಕಳ್ಳತನದಲ್ಲಿ ಪಳಗುತ್ತಾನೆ ಎಂದರೆ ಆತನನ್ನು ನೋಡಿದ ಯಾರಿಗೂ ಆತನೊಬ್ಬ ಕಳ್ಳ ಎಂದು ಗೊತ್ತಾಗುವುದೇ ಇಲ್ಲ. ಆ ರೀತಿಯಾಗಿ ಎಲ್ಲರನ್ನೂ ನಂಬಿಸತೊಡಗುತ್ತಾನೆ. ಕ್ರಮೇಣ ದರೋಡೆಯನ್ನೇ ವೃತ್ತಿಯನ್ನಾಗಿಸಿಕೊಳ್ಳುವ ಸಿಂಗ್​ ದೆಹಲಿಯ ಶ್ರೀಮಂತರು ವಾಸಿಸುವ ಬಡಾವಣೆಗಳಲ್ಲಿ ದೋಚತೊಡಗುತ್ತಾನೆ. ಅದರಲ್ಲೂ ಸಿಸಿಟಿವಿ ಇಲ್ಲದ ಮನೆಗಳನ್ನೇ ಹುಡುಕಿ ದರೋಡೆ ಮಾಡುವುದು ಇವನ ಅಭ್ಯಾಸ.

ಇದರಿಂದ ಯಾವ ಕಾರಣಕ್ಕೂ ಸಿಕ್ಕಿಹಾಕಿಕೊಳ್ಳುವುದಿಲ್ಲ ಎಂಬ ಹುಂಬ ಧೈರ್ಯ ಆತನಿಗೆ.
Loading...

ಇಂತಹ ದುರ್ಬುದ್ಧಿಗಳೆಲ್ಲವೂ ಇರುವ ಸಿಂಗ್​ ಇದ್ದಕ್ಕಿದ್ದಂತೆ ಶ್ರೀಮಂತನಾಗಿಬಿಡುತ್ತಾನೆ. ಅವನಲ್ಲಿರುವ ಹಣವನ್ನು ನೋಡಿ 28ರಿಂದ 40 ವರ್ಷದೊಳಗಿನ ಮಹಿಳೆಯರು ಆತನ ಪ್ರೇಯಸಿಯರಾಗುತ್ತಾರೆ. ಹೀಗೆ ನಾಲ್ಕೈದು ಸಂಬಂಧ ಇಟ್ಟುಕೊಂಡಿರುವ ಬಗ್ಗೆ ಪ್ರೇಯಸಿಯರಿಗೆ ಗೊತ್ತಾಗದ ಹಾಗೆ ನೋಡಿಕೊಳ್ಳುವ ಸಿಂಗ್​ ಐಷಾರಾಮಿ ಜೀವನವನ್ನೇ ನಡೆಸುತ್ತಾನೆ.

ಸಿಕ್ಕಿಹಾಕಿಕೊಂಡಿದ್ದು ಹೇಗೆ?:

ಅದೊಂದು ದಿನ ಶ್ರೀಮಂತರೊಬ್ಬರ ಮನೆಗೆ ದರೋಡೆಗೆ ಹೋಗಿದ್ದಾಗ ಸಿಸಿಟಿವಿಯನ್ನು ನೋಡಿ ಬಲ್ಬ್​ ಎಂದುಕೊಂಡು ಒಳನುಗ್ಗುವ ಸಿಂಗ್​ ಅದೊಂದು ಸಣ್ಣ ತಪ್ಪಿನಿಂದ ಪೊಲೀಸರ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ಆಗ ವಿಚಾರಣೆ ಮಾಡತೊಡಗಿದ ಪೊಲೀಸರಿಗೆ ಆತನ ದರೋಡೆಯ ವೃತ್ತಾಂತ ಕೇಳಿ ಆಶ್ಚರ್ಯವಾಗುತ್ತದೆ. ತಾನು ಕದ್ದ ವಸ್ತುಗಳನ್ನೆಲ್ಲ ಇಡಲೆಂದೇ ಸಿಂಗ್​ ಬಾಡಿಗೆಮನೆಯೊಂದನ್ನು ಮಾಡಿಕೊಂಡಿದ್ದ.

ತನಿಖೆಯ ವೇಳೆ ಪೊಲೀಸರಿಗೆ ತನ್ನ ಹಿನ್ನೆಲೆಯನ್ನು ಹೇಳಿಕೊಂಡಿರುವ ಸಿಂಗ್​, ತನ್ನ ಐವರು ಪ್ರೇಯಸಿಯರು ಬಹಳ ಐಷಾರಾಮಿ ಜೀವನವನ್ನು ಬಯಸುತ್ತಾರೆ. ಅವರು ನನ್ನ ಕೈತಪ್ಪಿ ಹೋಗಬಾರದೆಂದರೆ ನಾನು ಹಣ ಸಂಪಾದಿಸಲೇಬೇಕು. ಹಾಗಾಗಿ ಕಳ್ಳತನಕ್ಕೆ ಇಳಿದೆ ಎಂದು ಹೇಳಿಕೊಂಡಿದ್ದಾನೆ. ಆತನನ್ನು ಬಂಧಿಸಿದ ಬಳಿಕ ಹಿಂದಿನ 20 ಕೇಸುಗಳು ತೆರೆದುಕೊಂಡು ಈಗ ಸಿಂಗ್​ ಜೈಲಿನಲ್ಲಿ ಕಂಬಿ ಎಣಿಸುವಂತಾಗಿದೆ.
First published:July 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...