Union Budget 2019: 2 ವರ್ಷಗಳ ನಂತರ ಆರೋಗ್ಯ ಕ್ಷೇತ್ರಕ್ಕೆ 61 ಸಾವಿರ ಕೋಟಿ ಮೀಸಲಿಟ್ಟ ಕೇಂದ್ರ ಸರ್ಕಾರ

ಆರೋಗ್ಯ ವಲಯಕ್ಕೆ 61 ಸಾವಿರ ಕೋಟಿ ಮೀಸಲಿಡಲಾಗಿದ್ದು, 6,400 ಕೋಟಿಯನ್ನು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಆಯುಷ್ಮಾನ್ ಭಾರತ್​ಗೆ ಮೀಸಲಿಡಲಾಗಿದೆ.

sushma chakre | news18
Updated:February 1, 2019, 5:55 PM IST
Union Budget 2019: 2 ವರ್ಷಗಳ ನಂತರ ಆರೋಗ್ಯ ಕ್ಷೇತ್ರಕ್ಕೆ 61 ಸಾವಿರ ಕೋಟಿ ಮೀಸಲಿಟ್ಟ ಕೇಂದ್ರ ಸರ್ಕಾರ
ಸಾಂದರ್ಭಿಕ ಚಿತ್ರ
sushma chakre | news18
Updated: February 1, 2019, 5:55 PM IST
ನವದೆಹಲಿ (ಫೆ. 1): ಕೇಂದ್ರದ ಹಣಕಾಸು ಸಚಿವ ಪಿಯೂಷ್​ ಗೋಯಲ್ ಇಂದು ಮಂಡಿಸಿರುವ ಬಜೆಟ್​ನಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಬರೋಬ್ಬರಿ 61,398 ಕೋಟಿ ರೂ. ಘೋಷಿಸಿದ್ದಾರೆ. ಅದರಲ್ಲಿ 6,400 ಕೋಟಿಯನ್ನು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಆಯುಷ್ಮಾನ್ ಭಾರತ್​ಗೆ ಮೀಸಲಿಡಲಾಗಿದೆ.

ಮುಂಬರುವ ಹಣಕಾಸು ವರ್ಷದಲ್ಲಿ ಆರೋಗ್ಯ ವಲಯಕ್ಕಾಗಿ ಮೀಸಲಿಟ್ಟಿರುವ ಹಣ ಕಳೆದ 2 ವರ್ಷಗಳಿಗಿಂತ ಹೆಚ್ಚಾಗಿದೆ. 2018-19ನೇ ಸಾಲಿನ ಬಜೆಟ್​ಗೆ ಹೋಲಿಸಿದರೆ ಈ ವರ್ಷ ಶೇ. 16ರಷ್ಟು ಹೆಚ್ಚು ಹಣವನ್ನು ವೈದ್ಯಕೀಯ ಕ್ಷೇತ್ರಕ್ಕೆ ನೀಡಲಾಗಿದೆ. ಕಳೆದ ವರ್ಷ ಈ ಕ್ಷೇತ್ರಕ್ಕೆ 54,302.50 ಕೋಟಿ ರೂ. ಮೀಸಲಿಡಲಾಗಿತ್ತು.

ಮಧ್ಯಮವರ್ಗ, ಕರ್ನಾಟಕಕ್ಕೆ ಮಹತ್ವದ ಕೊಡುಗೆ ಸಿಕ್ಕಿದೆ; ಬಜೆಟ್​ಗೆ ರಾಜ್ಯ ಬಿಜೆಪಿ ನಾಯಕರಿಂದ ಭರ್ಜರಿ ಸ್ವಾಗತ

ನ್ಯಾಷನಲ್ ಅರ್ಬನ್ ಹೆಲ್ತ್​ ಮಿಷನ್​ನಡಿ ಆಯುಷ್ಮಾನ್​ ಭಾರತ್​ ಹೆಲ್ತ್​ ಆ್ಯಂಡ್​ ವೆಲ್​ನೆಸ್​ ಸೆಂಟರ್​ ಸ್ಥಾಪನೆಗಾಗಿ 250 ಕೋಟಿ ರೂ. ನಿಗದಿಪಡಿಸಲಾಗಿದೆ. 1350 ಕೋಟಿ ರೂ. ಹಣವನ್ನು ನ್ಯಾಷನಲ್ ರೂರಲ್ ಹೆಲ್ತ್​ ಮಿಷನ್​ನಡಿ ಹೆಲ್ತ್​ ಆ್ಯಂಡ್​ ವೆಲ್​ನೆಸ್​ ಸೆಂಟರ್​ಗಾಗಿ ಮೀಸಲಿಡಲಾಗಿದೆ. ಈ ಯೋಜನೆಯಡಿ ಸುಮಾರು 1.5 ಲಕ್ಷ ಉಪ ವಿಭಾಗಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೆಲ್ತ್​ ಆ್ಯಂಡ್​ ವೆಲ್​ನೆಸ್​ ಸೆಂಟರ್​ಗಳಾಗಿ 2022ರ ವೇಳೆಗೆ ಪರಿವರ್ತಿಸಲಾಗುವುದು. ಈ ಕೇಂದ್ರಗಳು ಡಯಾಬಿಟಿಸ್​, ಕ್ಯಾನ್ಸರ್​ ಮತ್ತು ಇತರೆ ಅನಾರೋಗ್ಯಪೀಡಿತರಿಗೆ ಚಿಕಿತ್ಸೆಯನ್ನು ಒದಗಿಸಲಿವೆ.

Union Budget 2019 | ಕೇಂದ್ರ ಬಜೆಟ್​ ಯೋಜನೆಗಳು ಜನಪರವಾಗಿಯೇ ಇದೆ ಆದರೆ, ಅನುಷ್ಠಾನವೇ ಅನುಮಾನ?

ಈ ಬಾರಿ ಕೇಂದ್ರ ಸರ್ಕಾರ 2,500 ಕೋಟಿ ರೂ. ಹಣವನ್ನು ನ್ಯಾಷನಲ್​ ಏಡ್ಸ್​ ಮತ್ತು ಎಸ್​ಟಿಡಿ ಕಂಟ್ರೋಲ್​ ಕಾರ್ಯಕ್ರಮಗಳಿಗಾಗಿ ಮೀಸಲಿಟ್ಟಿರುವ ಹಣದಲ್ಲಿ 575 ಕೋಟಿ ರೂ. ಹೆಚ್ಚಳವಾಗಿದೆ. ಕಳೆದ ವರ್ಷದ ಬಜೆಟ್​ನಲ್ಲಿ 1,925 ಕೋಟಿ ರೂ. ಮೀಸಲಿಡಲಾಗಿತ್ತು. ಏಮ್ಸ್​ಗೆ ನೀಡಲಾದ ಅನುದಾನ 3,599 ಕೋಟಿ ರೂ.ಗೆ ಹೆಚ್ಚಳವಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಈ ಪ್ರಮಾಣ 3,298 ಕೋಟಿಯಷ್ಟಿತ್ತು.
Loading...

ಕ್ಯಾನ್ಸರ್​, ಡಯಾಬಿಟಿಸ್, ಕಾರ್ಡಿಯೋ- ವಸ್ಕಲರ್ ಡಿಸೀಸ್​ ನಿಯಂತ್ರಣಕ್ಕಾಗಿ ಈ ಬಾರಿ 175 ಕೋಟಿ ಮೀಸಲಿಡಲಾಗಿದೆ. ಕಳೆದ ಬಾರಿ ಈ ಪ್ರಮಾಣ 100.50 ಕೋಟಿಯಷ್ಟಿತ್ತು. ತಂಬಾಕು ನಿಯಂತ್ರಣ ಕಾರ್ಯಕ್ರಮಗಳಿಗಾಗಿ ಮತ್ತು ಡ್ರಗ್​ ಡಿಅಡಿಕ್ಷನ್​ ಕಾರ್ಯಕ್ರಮಗಳಿಗಾಗಿ 65 ಕೋಟಿ ಮೀಸಲಿಡಲಾಗಿದೆ.

First published:February 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626