ಆರನೇ ಹಂತದ ಚುನಾವಣೆ ಮುಕ್ತಾಯ; ಶೇ. 61.14ರಷ್ಟು ಮತದಾನ; ಕೆಲವಡೆ ಹಿಂಸಾಚಾರ

ಇನ್ನು ಜನ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ದಾಖಲಾಗಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಕಣದಲ್ಲಿರುವ ಪ್ರಮುಖ ರಾಜಕಾರಣಿಗಳ ಭವಿಷ್ಯ 23ಕ್ಕೆ ಹೊರಬೀಳಲಿದೆ.

Ganesh Nachikethu | news18
Updated:May 13, 2019, 7:22 AM IST
ಆರನೇ ಹಂತದ ಚುನಾವಣೆ ಮುಕ್ತಾಯ; ಶೇ. 61.14ರಷ್ಟು ಮತದಾನ; ಕೆಲವಡೆ ಹಿಂಸಾಚಾರ
ಪ್ರಾತಿನಿಧಿಕ ಚಿತ್ರ
  • News18
  • Last Updated: May 13, 2019, 7:22 AM IST
  • Share this:
ನವದೆಹಲಿ(ಮೇ.12): ಲೋಕಸಭಾ ಚುನಾವಣೆಯ 6ನೇ ಹಂತದಲ್ಲಿ ಶೇ. 61.14ರಷ್ಟು ಮತದಾನ ದಾಖಲಾಗಿದೆ. ದೇಶಾದ್ಯಂತ ಈಗಾಗಲೇ 5 ಹಂತಗಳ ಮತದಾನ ಪೂರ್ಣಗೊಂಡಿದೆ. ಈ ಬೆನ್ನಲ್ಲೇ ಇಂದು ಆರನೇ ಹಂತದ ಮತದಾನ ಪ್ರಕ್ರಿಯೆ ನಡೆದಿದೆ. ಇದೀಗ ಕೇಂದ್ರ ಚುನಾವಣಾ ಆಯೋಗ ನೀಡಿರುವ ಮಾಹಿತಿ ಪ್ರಕಾರ ಒಟ್ಟಾರೆ 61.14ರಷ್ಟು ಮತದಾನವಾಗಿದೆ ಎನ್ನಲಾಗಿದೆ.

ದೇಶದ ಏಳು ರಾಜ್ಯಗಳಲ್ಲಿ 59 ಕ್ಷೇತ್ರಗಳಿಗೆ ಮತದಾನ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ 80.16, ದೆಹಲಿ 56.11, ಹರಿಯಾಣ 62.91, ಉತ್ತರ ಪ್ರದೇಶ 53.37, ಬಿಹಾರ 59.29, ಜಾರ್ಖಂಡ್‌ 64.46, ಮಧ್ಯಪ್ರದೇಶ 60.40ರಷ್ಟು ಮತದಾನವಾಗಿದೆ. ಮಾಜಿ ರಾಷ್ಟಪತಿ ಪ್ರಣಬ್​​ ಮುಖರ್ಜಿ, ವಿರಾಟ್‌ ಕೊಹ್ಲಿ, ಗೌತಮ್‌ ಗಂಭೀರ್‌, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ಹಲವು ಗಣ್ಯರು ತಮ್ಮ ಮತದಾನ ಹಕ್ಕು ಚಲಾಯಿಸಿದ್ದಾರೆ.

ಎಂದಿನಂತೆಯೇ ಬೆಳಿಗ್ಗೆ 7ರಿಂದಲೇ ಶುರುವಾಗುವ ಮತದಾನ ಪ್ರಕ್ರಿಯೆ ಸಂಜೆ 6 ರವರೆಗೂ ನಡೆಯಿತು. ಹಾಗೇ ಭದ್ರತೆ ದೃಷ್ಠಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜಾರ್ಖಂಡ್ ಮತ್ತು ಬಿಹಾರದಲ್ಲಿ ಕೆಲವೆಡೆ ಸಂಜೆ 4 ಗಂಟೆ ಮತದಾನ ಪ್ರಕ್ರಿಯೆ ಮುಗಿದಿದೆ. ಆರನೇ ಹಂತದ ಮತದಾನದ ವೇಳೆಯೂ ಘರ್ಷಣೆಗಳು ನಡೆದ ಬಗ್ಗೆಯೂ ವರದಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಮಾತ್ರ ತುಸು ಹೆಚ್ಚಿನ ಪ್ರಕರಣಗಳು ದಾಖಲಾಗಿದೆ.

ಇನ್ನು 59 ಕ್ಷೇತ್ರಗಳ ಪೈಕಿ ಕೆಲವು ಕ್ಷೇತ್ರಗಳಲ್ಲಿ ಮರುಮತದಾನವೂ ನಡೆದಿದೆ. ಒಟ್ಟು 169 ಮತಕೇಂದ್ರಗಳಲ್ಲಿ ಮರುಮತದಾನ ಮಾಡಲಾಗಿದೆ. ಹಿಂದೆ ಈ ಮತ ಕೇಂದ್ರಗಳಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿತ್ತು. ಅಲ್ಲದೇ ಮತಕೇಂದ್ರ ವಶಪಡಿಸಿಕೊಳ್ಳಾಗಿತ್ತು. ಇವಿಎಂಗೆ ಹಾನಿ ಸೇರಿದಂತೆ ಹಿಂಸಾಚಾರ ಘಟನೆಗಳು ಸಂಭವಿಸಿದ್ದವು. ಹಾಗಾಗಿ ಇಲ್ಲಿ ಸರಿಯಾಗಿ ಮತದಾನ ನಡೆದಿರಲಿಲ್ಲ. ಈಗ ಮರುಮತದಾನ ನಡೆಸಲಾಗಿದೆ ಎನ್ನುತ್ತಿದೆ ಆಯೋಗ.

ಇದನ್ನೂ ಓದಿ: ತಂದೆಗೆ ಟಿಕೆಟ್​​ ನೀಡಲು ಸಿಎಂ ಕೇಜ್ರಿವಾಲ್​​ 6 ಕೋಟಿ ಪಡೆದಿದ್ದಾರೆ; ಆಪ್​​ ಮುಖಂಡ ಆರೋಪ

ಸದ್ಯ ಇಡೀ ದೇಶದ ಕಣ್ಣು ಭಾರತದ ರಾಜಧಾನಿ ಮೇಲೆ ನೆಟ್ಟಿತ್ತು. ದೆಹಲಿಯಲ್ಲಿ ಒಟ್ಟು 7 ಲೋಕಸಭಾ ಕ್ಷೇತ್ರಗಳಿವೆ. ಕಾಂಗ್ರೆಸ್​, ಆಪ್​​ ಮತ್ತು ಬಿಜೆಪಿ ಪ್ರತ್ಯೇಕವಾಗಿ ಚುನಾವಣೆ ಎದುರಿಸುತ್ತಿವೆ. ಗೌತಮ್ ಗಂಭೀರ್, ಶೀಲಾ ದೀಕ್ಷಿತ್, ಬಾಕ್ಸರ್ ವಿಜಯೇಂದರ್ ಸಿಂಗ್, ಕೇಂದ್ರ ಮಂತ್ರಿ ಹರ್ಷ ವರ್ಧನ್, ಎಎಪಿಯ ಆತಿಶಿ ಇನ್ನೂ ಹಲವರು ಕಣದಲ್ಲಿದ್ದರು.

ಹಾಗೆಯೇ ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಮತ್ತು ಮೇನಕಾ ಗಾಂಧಿ ಸೇರಿದಂತೆ ಪ್ರಮುಖರು ಕಣದಲ್ಲಿದ್ದರು. ಮಧ್ಯಪ್ರದೇಶದ ಭೂಪಾಲ್​​ನಲ್ಲಿ ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ದಿಗ್ವಿಜಯ್ ಸಿಂಗ್, ಜತೆಗೆ ಜ್ಯೋತಿರಾದಿತ್ಯ ಸಿಂಧ್ಯಾ, ಕೇಂದ್ರ ಮಂತ್ರಿ ನರೇಂದ್ರ ಸಿಂಗ್ ತೋಮರ್ ಅವರುಗಳ ಭವಿಷ್ಯವೂ ಇಂದೇ ನಿರ್ಧಾರವಾಗಿದೆ.ಇದನ್ನೂ ಓದಿ: ಮುಗಿಯದ ಮಾಜಿಗಳ ಜಗಳ; ಸರ್ಕಾರ ಬೀಳಿಸಲು ಬಿಜೆಪಿಗೆ ಕಪ್ಪುಹಣ ಎಲ್ಲಿಂದ ಬರುತ್ತಿದೆ? ಸಿದ್ದು ಪ್ರಶ್ನೆ

2014ರ ಸಾರ್ವತ್ರಿಕ ಚುನಾವಣೆಯಲ್ಲಿ ಈ 59 ಕ್ಷೇತ್ರಗಳಲ್ಲಿ ಬಿಜೆಪಿ 45ರಲ್ಲಿ ಗೆಲುವು ಸಾಧಿಸಿತ್ತು. ತೃಣಮೂಲ ಕಾಂಗ್ರೆಸ್ 8, ಕಾಂಗ್ರೆಸ್ 2 ಹಾಗೂ ಸಮಾಜವಾದಿ ಪಕ್ಷ ಮತ್ತು ಎಲ್‍ಜೆಪಿ ತಲಾ ಒಂದೊಂದು ಸ್ಥಾನ ಗಳಿಸಿತ್ತು. ಇನ್ನೆರಡು ಸ್ಥಾನಗಳು ಪಕ್ಷೇತರರ ಪಾಲಾಗಿತ್ತು.

ಇನ್ನು ಜನ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ದಾಖಲಾಗಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಕಣದಲ್ಲಿರುವ ಪ್ರಮುಖ ರಾಜಕಾರಣಿಗಳ ಭವಿಷ್ಯ 23ಕ್ಕೆ ಹೊರಬೀಳಲಿದೆ.

First published:May 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading