ಚೀನಾ: ಚೀನಾ (China) ದೇಶಾದ್ಯಂತ ಕೊರೊನಾ (Corona) ತನ್ನ ಅಟ್ಟಹಾಸ ಮೆರೆಯುತ್ತಿದೆ. ಮುಂದಿನ 90 ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಲಿ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಆರೋಗ್ಯ ಅರ್ಥಶಾಸ್ತ್ರಜ್ಞ, ಫೀಗಲ್-ಡಿಂಗ್ (Eric Feigl-Ding) ಅವರು ಎಚ್ಚರಿಕೆ ನೀಡಿದ್ದಾರೆ. ಚೀನಾದ ಶೇ.60ರಷ್ಟು ಜನ ಸೋಂಕಿಗೆ ತುತ್ತಾಗುವ ಸಾಧ್ಯತೆಯಿದ್ದು, ಜಗತ್ತಿನ ಶೇ.10ರಷ್ಟು ಜನರಿಗೆ ಕೋವಿಡ್(Covid-19) ಸೋಂಕು ಹರಡುವ ಸಾಧ್ಯತೆಯಿದೆ ಹಾಗೂ ಒಂದು ಮಿಲಿಯನ್ಗೂ ಹೆಚ್ಚು ಮಂದಿ ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಚೀನಾದಲ್ಲಿ ಕೋವಿಡ್ 19 ನಿರ್ಬಂಧ ಸಡಿಲಿಕೆ ಬಳಿಕ ದಾಖಲೆ ಪ್ರಮಾಣದಲ್ಲಿ ಸೋಂಕು ವ್ಯಾಪಿಸುತ್ತಿದೆ. ಚೀನಾದಲ್ಲಿ ಬಹುತೇಕ ಆಸ್ಪತ್ರೆಗಳು ಸೋಂಕಿನಿಂತ ತುಂಬಿ ತುಳುಕುತ್ತಿವೆ.
ಚೀನಾದಲ್ಲಿ ಮುಂದಿನ 90 ದಿನಗಳಲ್ಲಿ 85 ಕೋಟಿಗೂ ಹೆಚ್ಚು ಮಂದಿಗೆ ಕೊರೊನಾ
ಚೀನಾದಲ್ಲಿ ಮುಂದಿನ 90 ದಿನಗಳಲ್ಲಿ 85 ಕೋಟಿಗೂ ಹೆಚ್ಚು ಮಂದಿ ಕೊರೊನಾ ಸೋಂಕಿಗೆ ತುತ್ತಾಗಲಿದ್ದಾರೆ. ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಳ್ಳಬಹುದು ಎಂದು ಸಾಂಕ್ರಾಮಿಕ ರೋಗ ಶಾಸ್ತ್ರಜ್ಞ ಎರಿಕ್ ಫೀಗಲ್ ಹೇಳಿದ್ದಾರೆ. ಕೋವಿಡ್ ರೋಗಳಿಗಾಗಿಯೇ ಬೀಜಿಂಗ್ನಲ್ಲಿ ಮೀಸಲಿಟ್ಟಿರುವ ಸ್ಮಶಾನವು ಈಗಾಗಲೇ ಮೃತದೇಹಗಳಿಂದ ತುಂಬಿದೆ. ಕೊರೊನಾ ವೈರಸ್ ಚೀನಾದ್ಯಂತ ವ್ಯಾಪಿಸುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ.
⚠️THERMONUCLEAR BAD—Hospitals completely overwhelmed in China ever since restrictions dropped. Epidemiologist estimate >60% of 🇨🇳 & 10% of Earth’s population likely infected over next 90 days. Deaths likely in the millions—plural. This is just the start—🧵pic.twitter.com/VAEvF0ALg9
— Eric Feigl-Ding (@DrEricDing) December 19, 2022
ಸದ್ಯ ಚೀನಾದಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆ ಭಾರತದಲ್ಲಿ ಆತಂಕವನ್ನು ಸೃಷ್ಟಿಸಿದೆ. ಇನ್ನೂ ಚೀನಾದಿಂದ ಭಾರತಕ್ಕೆ ಹಾಗೂ ಭಾರತದಿಂದ ಚೀನಾಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಈ ವಿಚಾರ ಸದ್ಯ ತಲೆ ನೋವಾಗಿದೆ.
ಕೊರೊನಾ ಸೋಂಕಿಗೆ ಔಷಧಿ ಪಡೆಯಲು ಹೆಣಗಾಡುತ್ತಿರುವ ಜನ
ರಾಜಧಾನಿ ಬೀಜಿಂಗ್ನಲ್ಲಿನ ಅನೇಕ ನಿವಾಸಿಗಳು ಔಷಧಿ ಪಡೆಯಲು ಹೆಣಗಾಡುತ್ತಿದ್ದಾರೆ. ಆಸ್ಪತ್ರೆಯ ಜ್ವರ ಚಿಕಿತ್ಸಾಲಯಗಳಲ್ಲಿ ದೀರ್ಘ ಸರತಿ ಸಾಲುಗಳು ಮತ್ತು ಆಂಬ್ಯುಲೆನ್ಸ್ಗಳಿಗೆ ಕರೆಗಳು ಹೆಚ್ಚಾಗುತ್ತಿವೆ. ನಗರದ ಅಂತ್ಯಕ್ರಿಯೆಯ ಕೇಂದ್ರಗಳು ಹೆಚ್ಚಿನ ಶವಸಂಸ್ಕಾರಗಳೊಂದಿಗೆ ಒತ್ತಡದಲ್ಲಿವೆ ಎಂದು ವರದಿಯೊಂದು ತಿಳಿಸಿದೆ.
ಇದನ್ನೂ ಓದಿ: Wuhan: ಲ್ಯಾಬ್ನಲ್ಲಿ ಕೆಲಸ ಮಾಡುತ್ತಿದ್ದ ವಿಜ್ಞಾನಿಯ ಶಾಕಿಂಗ್ ಹೇಳಿಕೆ, ಡ್ರ್ಯಾಗನ್ ಬಣ್ಣ ಬಯಲು
ಹಿರಿಯರಿಗೆ ನೀಡುವ ವ್ಯಾಕ್ಸಿನ್ ದರ, ಆಸ್ಪತ್ರೆಗಳಲ್ಲಿ ಉಲ್ಬಣವಾಗುತ್ತಿರುವ ಸೋಂಕಿತರಿಗೆ ತೀವ್ರ ನಿಗಾ ಘಟಕವನ್ನು ಒದಗಿಸುವಲ್ಲಿ ಚೀನಾ ಅಧಿಕಾರಿಗಳು ವಿಫಲರಾಗಿದ್ದಾರೆ. ದೇಶದ 1.4 ಶತಕೋಟಿ ನಾಗರಿಕರಿಗೆ ಮಾರಕವಾಗಿರುವ ಸೋಂಕಿಗೆ ಔಷಧಿಯನ್ನು ನೀಡಲು ಸರ್ಕಾರ ವಿಫಲವಾಗಿದೆ.
4) The deaths in mainland China is being hugely underreported outside of 🇨🇳. Through a survey of hospitals, funeral parlors & related funeral industry chains in Beijing—there is a recent explosion in funeral services caused by the sharp increase in deaths.https://t.co/zm1rxeDUoJ pic.twitter.com/blDsaKjoqG
— Eric Feigl-Ding (@DrEricDing) December 19, 2022
ಚೀನಾದಲ್ಲಿ ಇನ್ಮುಂದೆ ಸೋಂಕು ದ್ವಿಗುಣಗೊಳ್ಳಬಹುದು. ದ್ವಿಗುಣಗೊಳ್ಳುವಿಕೆಯೂ 1 ದಿನಕ್ಕಿಂತ ಕಡಿಮೆಯಿದ್ದರೆ, ಲೆಕ್ಕಾಚಾರ ಮಾಡುವುದು ಕಷ್ಟ. ಏಕೆಂದರೆ PCR ಪರೀಕ್ಷೆ ನಡೆಸಲು ಕಷ್ಟವಾಗುತ್ತದೆ. ಮುಖ್ಯವಾಗಿ ಈ ಸೋಂಕಿನಿಂದ ಚೀನಾವಷ್ಟೇ ಅಲ್ಲದೇ ಪ್ರಪಂಚ ಕೂಡ ತೊಂದರೆಗೀಡಾಗಬಹುದು. ಕೋವಿಡ್-19 ಸಡಿಲಿಕೆಯಿಂದಾಗಿ ಬೀಜಿಂಗ್ ಸೋಮವಾರ ಕೋವಿಡ್ಗೆ ಇಬ್ಬರು ಬಲಿಯಾಗಿದ್ದಾರೆ. ನಂತರ ಮಂಗಳವಾರ ಐವರು ಮಂದಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: Wuhan: ಲ್ಯಾಬ್ನಲ್ಲಿ ಕೆಲಸ ಮಾಡುತ್ತಿದ್ದ ವಿಜ್ಞಾನಿಯ ಶಾಕಿಂಗ್ ಹೇಳಿಕೆ, ಡ್ರ್ಯಾಗನ್ ಬಣ್ಣ ಬಯಲು
ಚೀನಾದ ಪ್ರಮುಖ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಜನವರಿ ಮತ್ತು ಫೆಬ್ರವರಿಯಲ್ಲಿ ಸಾಂಕ್ರಾಮಿಕ ರೋಗ ಉತ್ತುಂಗಕ್ಕೇರುತ್ತದೆ ಎಂದು ಹೇಳುತ್ತಾರೆ, ಆದಾಗ್ಯೂ ಕೋವಿಡ್ ಸೋಂಕುಗಳ ಸಂಖ್ಯೆ ಇದೀಗ ಹೆಚ್ಚಾಗುತ್ತಲೇ ಇದೆ. ಸಾಂಕ್ರಾಮಿಕ ರೋಗಶಾಸ್ತ್ರಜ್ಞ ವು ಜುನ್ಯು ಜನವರಿ ಮಧ್ಯದವರೆಗೆ ಸೋಂಕು ಹೆಚ್ಚಾಗುತ್ತಲೇ ಇರುತ್ತದೆ ಎಂದು ಹೇಳಿದ್ದಾರೆ, ಆದರೆ ಎರಡನೇ ಅಲೆ ಜನವರಿ 21 ರಂದು ಪ್ರಾರಂಭವಾಗುತ್ತದೆ ಎಂದಿದ್ದಾರೆ. ರಜೆಯ ನಂತರ ಜನರು ಕೆಲಸಕ್ಕೆ ಮರಳುವುದರಿಂದ ಫೆಬ್ರವರಿ ಅಂತ್ಯದಿಂದ ಮಾರ್ಚ್ ಮಧ್ಯದವರೆಗೆ ಪ್ರಕರಣಗಳ ಮೂರನೇ ಅಲೆ ಉಲ್ಬಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ