ಕಣ್ಣೆದುರೇ ಮಗನ ಸಾವು ಕಂಡು ದುಃಖಿಸುತ್ತಿದ್ದ ತಂದೆ, ಕುಳಿತಲ್ಲೇ ಕ್ಷಣಾರ್ಧದಲ್ಲಿ ಸಾವು - ಹೃದಯ ವಿದ್ರಾವಕ ಘಟನೆ

Madhya Pradesh: 60 ವರ್ಷದ ತಂದೆಯು ತನ್ನ ಮಗನ ಸಾವನ್ನು ನೋಡಿ ಅಳುತ್ತಾ ಅಲ್ಲೇ ಶವದ ಪಕ್ಕದಲ್ಲಿಯೇ ಕುಳಿತಿರುವಾಗಲೇ ಇನ್ನೊಂದು ರೈಲು ಅದೇ ಹಳಿಯ ಮೇಲೆ ಕುಳಿತಂತಹ ತಂದೆಯನ್ನು ಹೊಡೆದುಕೊಂಡು ಹೋಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೆಲವೊಮ್ಮೆ ಮನೆಯಲ್ಲಿ ಒಂದು ಅಹಿತಕರ ಘಟನೆ ನಡೆದರೆ ಅದರ ಬೆನ್ನಲ್ಲೇ ಇನ್ನೊಂದು ಅಹಿತಕರ ಘಟನೆ(Unpleasant Incident) ನಡೆದಿರುವುದನ್ನು ನಾವೆಲ್ಲಾರೂ ಕೇಳಿರುತ್ತೇವೆ ಮತ್ತು ಟಿವಿಯಲ್ಲಿ ನೋಡಿರುತ್ತೇವೆ. ತುಂಬಾನೇ ನೋವು (Painful)ತರುವ ಸಂಗತಿ ಎಂದರೆ ತಂದೆ ತಾಯಿಯ ಮುಂದೆ ಅವರ ಮಕ್ಕಳು ಸಾವನ್ನಪ್ಪುವುದು ಎಂದು ಹೇಳಿದರೆ ಅದರಲ್ಲೂ ಮಕ್ಕಳು ಆತ್ಮಹತ್ಯೆ (Suicide)ಮಾಡಿಕೊಂಡು ಸಾವನ್ನಪ್ಪಿದ್ದರೇ ಪೋಷಕರ(Parents) ಗೋಳಾಟ ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದರೆ ತಪ್ಪಾಗುವುದಿಲ್ಲ. ಇಲ್ಲಿಯೂ ಅಂತಹದೇ ಒಂದು ಹೃದಯ ವಿದ್ರಾವಕ ಘಟನೆಯೊಂದು ಮಧ್ಯಪ್ರದೇಶದ (Madhya Pradesh) ಹೋಶಂಗಾಬಾದ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದೆ. ಮಗನ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೇ, ಅಲ್ಲಿಯೇ ಕುಳಿತು ಆಳುತ್ತಿದ್ದ ತಂದೆ, ಕೆಲವೇ ಸೆಕೆಂಡ್‌ಗೆ (Few seconds)ಸಾವನ್ನುಪ್ಪಿರುವುದು ನಿಜಕ್ಕೂ ದುರ್ದೈವದ ಸಂಗತಿ.

ಹೃದಯ ವಿದ್ರಾವಕ ಘಟನೆ
ಮನೆಯಲ್ಲಿ ಹಿರಿಯರೊಂದಿಗೆ ಮಾತಿನ ಚಕಮಕಿ ನಡೆದು ಬೇಸರದಿಂದ ಮನೆಯಿಂದ ಹೋಗಿ ಮಗನೊಬ್ಬ ಚಲಿಸುತ್ತಿರುವ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಇದನ್ನು ನೋಡಿದ 60 ವರ್ಷದ ತಂದೆಯು ತನ್ನ ಮಗನ ಸಾವನ್ನು ನೋಡಿ ಅಳುತ್ತಾ ಅಲ್ಲೇ ಶವದ ಪಕ್ಕದಲ್ಲಿಯೇ ಕುಳಿತಿರುವಾಗಲೇ ಇನ್ನೊಂದು ರೈಲು ಅದೇ ಹಳಿಯ ಮೇಲೆ ಕುಳಿತಂತಹ ತಂದೆಯನ್ನು ಹೊಡೆದುಕೊಂಡು ಹೋಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಈ ಘಟನೆ ದೇಶದಲ್ಲೆಡೆ ಸುದ್ದಿಯಾಗಿದ್ದು, ಪೋಷಕರು, ಮಕ್ಕಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಉಗ್ರರೆಂದು ತಪ್ಪಾಗಿ ಭಾವಿಸಿ 13 ನಾಗರಿಕರನ್ನ ಕೊಂದ ಭದ್ರತಾ ಪಡೆ; ಉನ್ನತ ಮಟ್ಟದ ತನಿಖೆ

ಕಣ್ಣಾರೆ ಕಂಡು ಆಘಾತ
ಈ ವ್ಯಕ್ತಿ ತನ್ನ ಮಗ ಕೆಲವು ಕ್ಷಣಗಳ ಹಿಂದೆ ರೈಲ್ವೆ ಹಳಿಗಳ ಮೇಲೆ ಜಿಗಿದು ಸಾವನ್ನಪ್ಪಿರುವುದನ್ನು ಕಣ್ಣಾರೆ ನೋಡಿದ್ದರಿಂದ ತುಂಬಾನೇ ಆಘಾತಕ್ಕೆ ಒಳಗಾಗಿದ್ದು, ಅಲ್ಲೇ ಹಳಿಗಳ ಮೇಲೆ ಕುಳಿತು ಅಳುತ್ತಾ ಕುಳಿತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತಂದೆಯು ಅಳುತ್ತಾ ಕುಳಿತ್ತಿದ್ದಾಗ ಅವರ ಇಬ್ಬರು ಸಹೋದರರು ಸಮೀಪಿಸುತ್ತಿರುವ ರೈಲಿನ ಬಗ್ಗೆ ಅವರನ್ನು ಎಚ್ಚರಿಸಲು ಪ್ರಯತ್ನಿಸಿದರೂ ಅವರು ಅದನ್ನು ಕೇಳಲಿಲ್ಲ ಮತ್ತು ವೇಗವಾಗಿ ಬಂದ ರೈಲು ಅವರನ್ನು ಹೊಡೆದುಕೊಂಡು ಹೋಗಿದೆ" ಎಂದು ಹೋಶಂಗಾಬಾದ್ ಪೊಲೀಸ್ ಅಧೀಕ್ಷಕ ಗುರುಕರಣ್ ಸಿಂಗ್ ಹೇಳಿದರು.

ಆತ್ಮಹತ್ಯೆ ಬೆದರಿಕೆ
ಸಾವಿಗೀಡಾದ 60 ವರ್ಷದ ವ್ಯಕ್ತಿಯ ಇಬ್ಬರು ಮಕ್ಕಳಲ್ಲಿ ಕಿರಿಯವನಾದ 36 ವರ್ಷದ ಮಗ, ಕುಟುಂಬದಲ್ಲಿ ತೀವ್ರ ವಾಗ್ವಾದದ ನಂತರ ಸ್ವಲ್ಪ ಸಮಯದ ಹಿಂದೆ ಶೋಹಾಗ್ಪುರ್ ಪಟ್ಟಣದಲ್ಲಿರುವ ತಮ್ಮ ಮನೆಯಿಂದ ಹೊರ ಹೋಗಿದ್ದರು. ಅವರ ಮಗ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮನೆಯಲ್ಲಿ ಬೆದರಿಕೆ ಹಾಕಿದ್ದನು. ಇವನು ಹೊರ ನಡೆದಾಗ ಇವರ ತಂದೆ ಮತ್ತು ಅವರ ಇಬ್ಬರು ಸಹೋದರರು ಸಹ ಅವರ ಹಿಂದೆ ಹಿಂಬಾಲಿಸಿಕೊಂಡು ಹೋದರು" ಎಂದು ಸಿಂಗ್ ಈ ಮನಕಲಕುವ ಘಟನೆಯ ಬಗ್ಗೆ ಹೇಳಿದರು.

ಇದನ್ನೂ ಓದಿ: Viral News: ಹೀಗೂ ಉಂಟೇ..? ಹಾವು ಓಡಿಸೋಕೆ ಹೋಗಿ 13 ಕೋಟಿ ಮೌಲ್ಯದ ಮನೆಗೆ ಬೆಂಕಿ ಹಚ್ಚಿದ ಭೂಪ

ಹಳಿಗಳ ಮೇಲೆ ಕುಳಿತು ಜೋರಾಗಿ ಆಳುತ್ತಿದ್ದ ತಂದೆ
ಮಗ ಮನೆಯಿಂದ ಹೊರ ನಡೆದು ನೇರವಾಗಿ ರೈಲ್ವೆ ಹಳಿಗಳ ಬಳಿಗೆ ಹೋಗಿ ಚಲಿಸುತ್ತಿರುವ ರೈಲಿನ ಮುಂದೆ ಜಿಗಿದು ಸಾವನ್ನಪ್ಪಿದನು. ಆ ಘಟನೆಯನ್ನು ನೋಡಿದ ತಂದೆ ಅಲ್ಲಿಯೇ ಹಳಿಗಳ ಮೇಲೆ ಕುಳಿತು ಜೋರಾಗಿ ಅಳಲು ಪ್ರಾರಂಭಿಸಿದರು" ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ. ಸ್ವಲ್ಪ ಸಮಯದ ನಂತರ, ಮತ್ತೊಂದು ರೈಲು ಅದೇ ಹಳಿಯ ಮೇಲೆ ಬಂದು ತಂದೆಯನ್ನು ಸಹ ಹೊಡೆದುಕೊಂಡು ಹೋಗಿದೆ. ಸಾವಿಗೀಡಾದ ತಂದೆ ಮತ್ತು ಮಗ ಇಬ್ಬರು ಪೀಠೋಪಕರಣಗಳ ಅಂಗಡಿ ನಡೆಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಶವ ಪರೀಕ್ಷೆಯ ನಂತರ 2 ಶವಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಸಿಂಗ್ ಹೇಳಿದರು.
Published by:vanithasanjevani vanithasanjevani
First published: