Couple: ಗಂಡ-ಹೆಂಡ್ತಿ ಮಧ್ಯೆ 41 ವರ್ಷದಲ್ಲಿ 60 ಕೇಸ್, ಇವ್ರ ವಿಚಾರಣೆ ಮಾಡಿ ನ್ಯಾಯಾಧೀಶರೇ ಸುಸ್ತು, ಏನಂದ್ರು ಕೇಳಿ

ಮದುವೆಯಾಗಿ ಸಂಸಾರ ಮಾಡುವಾಗಲೂ, ಡಿವೋರ್ಸ್ ಪಡೆದು ಬೇರೆಯಾದ ಮೇಲೂ ಇವರ ಜಗಳಕ್ಕೆ ಮಾತ್ರ ಕೊನೆಯೇ ಇಲ್ಲ. ಜಗಳ ಆಡುತ್ತಲೇ ಇದ್ದಾರೆ. 40 ವರ್ಷದಲ್ಲಿ ಪರಸ್ಪರ ಗಂಡ ಹೆಂಡತಿ ಮೇಲೂ, ಹೆಂಡತಿ ಗಂಡನ ಮೇಲೂ 60 ಕೇಸ್ ದಾಖಲಿಸಿದ್ದಾರೆ. ಇವರ ಕೇಸ್ ವಿಚಾರಣೆ ಮಾಡಿ ನ್ಯಾಯಾಧೀಶರೇ ಸುಸ್ತಾಗಿಬಿಟ್ಟಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೆಲವೊಂದು ಜೋಡಿ (Couple) ಹಾಗೆಯೇ. ಜಗಳ ಆಡುತ್ತಲೇ ಇರಬೇಕು. ಅಬ್ಬಾ ಈ ಜೋಡಿಯದ್ದು ಎಂಥಾ ಬಂಧವೋ ಗೊತ್ತಿಲ್ಲ. ಆದರೆ ಮದುವೆಯಾಗಿ (Marriage) ಸಂಸಾರ ಮಾಡುವಾಗಲೂ, ಡಿವೋರ್ಸ್ ಪಡೆದು ಬೇರೆಯಾದ ಮೇಲೂ ಇವರ ಜಗಳಕ್ಕೆ ಮಾತ್ರ ಕೊನೆಯೇ ಇಲ್ಲ. ಜಗಳ ಆಡುತ್ತಲೇ ಇದ್ದಾರೆ. 40 ವರ್ಷದಲ್ಲಿ ಪರಸ್ಪರ ಗಂಡ ಹೆಂಡತಿ ಮೇಲೂ, ಹೆಂಡತಿ ಗಂಡನ ಮೇಲೂ 60 ಕೇಸ್ ದಾಖಲಿಸಿದ್ದಾರೆ. ಇವರ ಕೇಸ್ (Case) ವಿಚಾರಣೆ ಮಾಡಿ ನ್ಯಾಯಾಧೀಶರೇ ಸುಸ್ತಾಗಿಬಿಟ್ಟಿದ್ದಾರೆ. ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಬುಧವಾರದಂದು ನಿರ್ದಿಷ್ಟ ವೈವಾಹಿಕ ವಿವಾದದ ಪ್ರಕರಣದಲ್ಲಿ ಆಶ್ಚರ್ಯಚಕಿತರಾದರು. ದೂರವಾದ ದಂಪತಿಗಳು 11 ವರ್ಷಗಳ ಪ್ರತ್ಯೇಕತೆ ಸೇರಿದಂತೆ 41 ವರ್ಷಗಳ ಅವಧಿಯಲ್ಲಿ ಪರಸ್ಪರ 60 ಪ್ರಕರಣಗಳನ್ನು ಹೊಂದಿದ್ದಾರೆ. ಕೆಲವರು ಜಗಳವಾಡುವುದನ್ನು ಇಷ್ಟಪಡುತ್ತಾರೆ. ಅವರು ಯಾವಾಗಲೂ ನ್ಯಾಯಾಲಯದಲ್ಲಿ ಇರಲು ಬಯಸುತ್ತಾರೆ. ಅವರು ನ್ಯಾಯಾಲಯವನ್ನು ನೋಡದಿದ್ದರೆ ಅವರಿಗೆ ನಿದ್ರೆ ಬರುವುದಿಲ್ಲ ಎಂದು ಸಿಜೆಐ ಹೇಳಿದ್ದಾರೆ.

ವಿವಾದವನ್ನು ಇತ್ಯರ್ಥಗೊಳಿಸಲು ಮಧ್ಯಸ್ಥಿಕೆಗೆ ಹೋಗುವಂತೆ ಪೀಠವು ದಂಪತಿಗಳನ್ನು ಕೇಳಿತು. "ವಕೀಲರ ಜಾಣ್ಮೆಯನ್ನು ಗುರುತಿಸಬೇಕಾಗಿದೆ" ಎಂದು ನ್ಯಾಯಮೂರ್ತಿ ಹಿಮಾ ಕೊಹ್ಲಿ ಹೇಳಿದರು. ಏಕೆಂದರೆ ದಂಪತಿಗಳು ನ್ಯಾಯಾಲಯಕ್ಕೆ ಎಷ್ಟು ಬಾರಿ ಬಂದಿದ್ದಾರೆ ಎಂದು ಆಶ್ಚರ್ಯವಂತೆ ಇತ್ತು ಇವರ ಪ್ರಕರಣ.

ಮಾವನಿಂದಲೇ ಲೈಂಗಿಕ ಕಿರುಕುಳ?

ಲೈವ್‌ಲಾ ವರದಿ ಮಾಡಿದಂತೆ, ದಂಪತಿಗಳ ಪ್ರಕರಣಗಳು ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್‌ನಲ್ಲಿವೆ. ಪತಿ ಮತ್ತು ಹೆಂಡತಿಯ ನಡುವಿನ ಸಂಬಂಧವು ದೂರವಾಗಿದೆ ಎಂದು ಗಮನಿಸಲಾಗಿದೆ. ಮಾವ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ನಿ ಆರೋಪಿಸಿದ್ದಳು. ಈಗ ಎರಡೂ ಪಕ್ಷಗಳು ಮಧ್ಯಸ್ಥಿಕೆಗೆ ಹೋಗಲು ಬಯಸುತ್ತವೆ ಎನ್ನಲಾಗಿದೆ.

ಮಧ್ಯಸ್ಥಿಕೆ ವಹಿಸಿ ಮಾತುಕತೆ

ಸಮಗ್ರ ಇತ್ಯರ್ಥಕ್ಕೆ ನೀವು ಸಿದ್ಧರಿದ್ದೀರಾ ಎಂದು ಸುಪ್ರೀಂ ಕೋರ್ಟ್ ಪತ್ನಿಯ ವಕೀಲರನ್ನು ಕೇಳಿದೆ. ಆಕೆಯ ವಕೀಲರು ಅವರು ಮಧ್ಯಸ್ಥಿಕೆಗೆ ಹೋಗಲು ಸಿದ್ಧರಿದ್ದಾರೆ ಆದರೆ ಹೈಕೋರ್ಟ್‌ನ ವಿಚಾರಣೆಗೆ ತಡೆ ನೀಡಬಾರದು ಎಂದು ಹೇಳಿದರು. ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.

ಇದನ್ನೂ ಓದಿ: Andhra Temple: ದೇವರ ಒಡವೆ ಕದ್ದು ತಪ್ಪಿಸಿಕೊಳ್ಳುವಾಗ ಕಿಟಕಿಯಲ್ಲೇ ಸಿಕ್ಕಿಬಿದ್ದ ಕಳ್ಳ

ನೀವು ಹೋರಾಟದಲ್ಲಿ ತುಂಬಾ ಆಸಕ್ತಿ ಹೊಂದಿರುವಂತೆ ತೋರುತ್ತಿದೆ. ನೀವು ಎರಡನ್ನೂ ಹೊಂದಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.

ಇಂಥದ್ದೂ ಒಂದು ಜಗಳ

ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಆದರೆ ಇವರದ್ದು ಗಂಡ ಹೆಂಡಿರ ಜಗಳ 41 ವರ್ಷ ಎಂಬಂತಿದೆ, ಅಂತೂ ಇಂತೂ ಇವರು ಒಂದಾಗುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಒಂದಾಗೋದು ಹಾಗಿರಲಿ ದೂರವಿದ್ದರೂ ಸುಖವಾಗಿರುವಂತೆ ಇಲ್ಲ. ಕಾರಣ ಇಬ್ಬರಿಗೆ ಜಗಳವಾಡುತ್ತಿದ್ದರಷ್ಟೇ ನೆಮ್ಮದಿ ಎಂಬಂತಿದೆ ಇವರ ನಡೆ.

ಇದನ್ನೂ ಓದಿ: Exams: ಆನ್ಸರ್ ಪೇಪರ್​ನಲ್ಲಿ ರಾಜಕೀಯ ಪಕ್ಷದ ಘೋಷಣೆ, ಸಿಂಬಲ್ ಮಾಡಿದ್ರೆ ಬೀಳುತ್ತೆ ದುಬಾರಿ ದಂಡ

ಯುವಕ ಮೊದಲ ಡೇಟ್ ನಲ್ಲಿ ಬಿಲ್ ಪೇ ಮಾಡದಕ್ಕೆ ಯುವತಿ ಬ್ರೇಕಪ್ ಮಾಡಿಕೊಂಡಿದ್ದಾಳೆ. ಹೋಟೆಲ್ ನಲ್ಲಿ ಕಾಫಿಗೆ ಹಣ ನೀಡದ್ದಕ್ಕೆ ಮುನಿಸಿಕೊಂಡ ಯುವತಿ ಮತ್ತೊಮ್ಮೆ ಆತನನ್ನು ಭೇಟಿಯಾಗಲ ನಿರಾಕರಿಸಿದ್ದಾಳೆ. ಈ ಬಗ್ಗೆ ಬ್ರೇಕಪ್ ಮಾಡಿಕೊಂಡಿರುವ ವಿಷಯ ತಿಳಿಸುವ ಸಂದೇಶದ ಸ್ಕ್ರೀನ್ ಶಾಟ್ ರೆಡ್ಡಿಟ್ ನಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಅಮೆರಿಕ ಮೂಲದ ಜೋಡಿ ರೆಸ್ಟೋರೆಂಟ್ ನಲ್ಲಿ ಭೇಟಿಯಾಗಿದ್ದರು. ಇಷ್ಟು ಚಿಕ್ಕ ವಿಷಯದಿಂದ ಬ್ರೇಕಪ್ ಆಗುತ್ತಾ ಅನ್ನೋದು ನೆಟ್ಟಿಗರ ಪ್ರಶ್ನೆ.
Published by:Divya D
First published: