6 ವರ್ಷದ ಬಾಲಕಿಯನ್ನು ಕ್ರೂರವಾಗಿ ಅತ್ಯಾಚಾರ ಎಸಗಿದ ಆರೋಪಿಯ 3 ರೇಖಾಚಿತ್ರ ಬಿಡುಗಡೆ ಮಾಡಿದ ಪೊಲೀಸರು

ಬಾಲಕಿ ಅಪಹರಣವಾದ ನಾಲ್ಕು ಅಥವಾ ಐದು ಗಂಟೆಯ ಬಳಿಕ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಕುಟುಂಬದವರು ಬೇಗನೇ ಘಟನೆ ಬಗ್ಗೆ ಮಾಹಿತಿ ನೀಡಬೇಕಿತ್ತು. ಅಪಹರಣದ ಮಾಹಿತಿ ತಡವಾಗಿ ಸಿಕ್ಕಿದ್ದರಿಂದ ಪೊಲೀಸರು ಸ್ಥಳಕ್ಕೆ ಹೋಗುವಷ್ಟರಲ್ಲಿ ಆರೋಪಿ ಅಲ್ಲಿಂದ ಪರಾರಿಯಾಗಿದ್ದ ಎಂದು ಸಿಒ ಪವನ್ ಕುಮಾರ್ ಹೇಳಿದ್ದಾರೆ.

ಆರೋಪಿಯ ರೇಖಾಚಿತ್ರ

ಆರೋಪಿಯ ರೇಖಾಚಿತ್ರ

 • Share this:
  ಲಕ್ನೋ; ಉತ್ತರಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆರು ವರ್ಷದ ಬಾಲಕಿ ಮೇಲೆ ಕ್ರೂರವಾಗಿ ಅತ್ಯಾಚಾರ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಗಳು ನಡೆದ ಮಾಹಿತಿ ಮೇರೆಗೆ ಪೊಲೀಸರು ಆರೋಪಿಯ ಮೂರು ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.

  ಪೊಲೀಸರ ಪ್ರಕಾರ, ಆರು ವರ್ಷದ ಬಾಲಕಿ ಗುರುವಾರ ಹೊರಗೆ ಆಟವಾಡುತ್ತಿದ್ದಳು. ಆ ವೇಳೆ ಸ್ಥಳಕ್ಕೆ ಬಂದ ಆರೋಪಿ ಬಾಲಕಿಯನ್ನು ಬಲವಂತವಾಗಿ ಬೈಕಿನಲ್ಲಿ ಕೂರಿಸಿಕೊಂಡು ಹೋಗಿದ್ದಾನೆ. ಬಳಿಕ ಸಂಪೂರ್ಣ ನಿತ್ರಾಣ ಸ್ಥಿತಿಯಲ್ಲಿ ಮೈದಾನದಲ್ಲಿ ಮೈದಾನದಲ್ಲಿ ಮಲಗಿದ್ದಳು.

  ಸಂತ್ರಸ್ತೆಯನ್ನು ಕೂಡಲೇ ಮೀರತ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ. ದೇಹದ ಹಲವು ಭಾಗಗಳಲ್ಲಿ ಗಂಭೀರ ಗಾಯಗಳಾಗಿವೆ. ಬಾಲಕಿಗೆ ಪ್ರಜ್ಞೆ ಇದೆ. ಆದರೆ, ಆಕೆ ತುಂಬಾ ಗಾಬರಿಗೊಂಡಿದ್ದಾಳೆ ಎಂದು ವೈದ್ಯರು ಹೇಳುತ್ತಾರೆ.

  ಆರೋಪಿ ಪತ್ತೆಗೆ ಐದು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ. ಗಡಿ ಮತ್ತು ಹಳ್ಳಿಗಳಲ್ಲಿ ಹುಡುಕಾಟ ಆರಂಭವಾಗದೆ. ಸುತ್ತಮುತ್ತಲಿನ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಕ್ಷಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

  ಆರೋಪಿ ಬಾಲಕಿಯನ್ನು ಬಲವಂತವಾಗಿ ಬೈಕಿನಲ್ಲಿ ಕೂರಿಸಿಕೊಂಡು ಹೋಗುವುದನ್ನು ಇಬ್ಬರು ಮಹಿಳೆಯರು ನೋಡಿದ್ದಾರೆ. ಅವರ ನೀಡಿದ ಮಾಹಿತಿ ಆಧಾರದ ಮೇಲೆ ಆರೋಪಿಯ ರೇಖಾಚಿತ್ರ ಸಿದ್ಧಪಡಿಸಲಾಗಿದೆ ಎಂದು ಗರ್​ಮುಕ್ತೇಶ್ವರದ ಸರ್ಕಲ್ ಆಫೀಸರ್ ಪವನ್ ಕುಮಾರ್ ಹೇಳಿರುವುದಾಗಿ ದಿ ಪ್ರಿಂಟ್ ವರದಿ ಮಾಡಿದೆ.

  ಅತ್ಯಾಚಾರ ಸಂತ್ರಸ್ತ ಬಾಲಕಿಯ ಕುಟುಂಬದವರು ಅಪರಿಚಿತ ವ್ಯಕ್ತಿ ಎಂದು ದೂರು ದಾಖಲಿಸಿದ್ದಾರೆ. ಆದರೆ, ಆರೋಪಿ ಕುಟುಂಬ ಸದಸ್ಯರಿಗೆ ಪರಿಚಯವಿದೆ ಎಂದು ಪೊಲೀಸರು ಹೇಳುತ್ತಾರೆ.

  ಇದನ್ನು ಓದಿ: ಬೈರುತ್ ಸ್ಫೋಟದ ನಂತರ ಎಚ್ಚೆತ್ತ ಅಧಿಕಾರಿಗಳು; ಚೆನ್ನೈ ಬಂದರಿನಲ್ಲಿಟ್ಟಿದ್ದ 700 ಟನ್​ ಅಮೋನಿಯಂ ನೈಟ್ರೇಟ್​ ಸ್ಥಳಾಂತರ

  ಬಾಲಕಿ ಅಪಹರಣವಾದ ನಾಲ್ಕು ಅಥವಾ ಐದು ಗಂಟೆಯ ಬಳಿಕ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಕುಟುಂಬದವರು ಬೇಗನೇ ಘಟನೆ ಬಗ್ಗೆ ಮಾಹಿತಿ ನೀಡಬೇಕಿತ್ತು. ಅಪಹರಣದ ಮಾಹಿತಿ ತಡವಾಗಿ ಸಿಕ್ಕಿದ್ದರಿಂದ ಪೊಲೀಸರು ಸ್ಥಳಕ್ಕೆ ಹೋಗುವಷ್ಟರಲ್ಲಿ ಆರೋಪಿ ಅಲ್ಲಿಂದ ಪರಾರಿಯಾಗಿದ್ದ ಎಂದು ಸಿಒ ಪವನ್ ಕುಮಾರ್ ಹೇಳಿದ್ದಾರೆ.

  Published by:HR Ramesh
  First published: