6 year old Girl Killed:
ಪ್ರತಿನಿತ್ಯ(Everyday) ದೇಶದಲ್ಲಿ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತೆ. ಸಣ್ಣ ಪುಟ್ಟ ವಿಚಾರಕ್ಕೆ ಕೊಲೆ(Murder) ಮಾಡಿರುವ ಪ್ರಕರಣಗಳನ್ನ ನೋಡುತ್ತಲೇ ಇರುತ್ತೆವೆ. ದೇಶದಲ್ಲಿ ದಿನದಿಂದ ದಿನಕ್ಕೆ ಕ್ರೈಂ(Crime)ಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ರೇಪ್(Rape) & ಮರ್ಡರ್(Murder) ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿವೆ. ಹೆಣ್ಣು ಮಕ್ಕಳಿಗೆ ಈ ದೇಶದಲ್ಲಿ ರಕ್ಷಣೆ ಇಲ್ಲದಂತಾಗಿದೆ. ಪುಟ್ಟ ಪುಟ್ಟ ಮಕ್ಕಳ ಮೇಲೆ ಕಾಮಾಂಧರು ಎರಗಿ ಬೀಳುತ್ತಿದ್ದಾರೆ. ಪುಟ್ಟ ಮಕ್ಕಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡುತ್ತಿದ್ದಾರೆ. ಅಸ್ಸಾಂನಲ್ಲಿ ಮನಕಲುಕುವ ಘಟನೆಯೊಂದು ನಡೆದಿದೆ. ಅಶ್ಲೀಲ ಚಿತ್ರ(Porn Movie) ನೋಡಲು ನಿರಾಕರಿಸಿದ್ದಕ್ಕೆ ಮೂವರು ಅಪ್ರಾಪ್ತರು(Minors) ಸೇರಿ 6 ವರ್ಷದ ಬಾಲಕಿ(Girl)ಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ತಮ್ಮ ಜೊತೆ ಅಶ್ಲೀಲ ಸಿನಿಮಾ ನೋಡಲು ಒಪ್ಪದಿದ್ದಕ್ಕೆ ಬಾಲಕಿಯನ್ನ 8 ರಿಂದ 11 ವರ್ಷ ಒಳಗಿನ ಮೂವರು ಅಪ್ರಾಪ್ತರು ಕೊಂದು ಹಾಕಿದ್ದಾರೆ. ಬಾಲಕಿಗೆ ಲೈಂಗಿಕ ಕಿರುಕುಳ(Sexual harassment) ನೀಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಬಾತ್ರೂಂನಲ್ಲಿ ಬಾಲಕಿ ಶವ ಪತ್ತೆ
ಅಸ್ಸಾಂನ ಗುವಾಹಟಿಯ ನಾಗಾಂವ್ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ. 6 ವರ್ಷದ ಬಾಲಕಿ, ಕಾಮಾಂಧರ ಅಟ್ಟಹಾಸಕ್ಕೆ ಬಲಿಯಾಗಿದ್ದಾಳೆ. ಇಲ್ಲಿನ ಕಲ್ಲು ಕ್ವಾರಿಯಲ್ಲಿ ಮೂವರು ಅಪ್ರಾಪ್ತರು ಮೊಬೈಲ್ನಲ್ಲಿ ಅಶ್ಲೀಲ ಚಿತ್ರಗಳನ್ನು ನೋಡುತ್ತಿದ್ದರು. ಇದೇ ವೇಳೆ ಇಲ್ಲಿಗೆ ಬಂದ ಬಾಲಕಿ, ನೆರೆಮನೆಯವರೆಂದು ಅವರ ಬಳಿ ಮಾತನಾಡಲು ಹೋಗಿದ್ದಾಳೆ. ಇದೇ ವೇಳೆ ಬಾಲಕಿಗೆ ತಮ್ಮ ಜತೆ ಅಶ್ಲೀಲ ಚಿತ್ರವನ್ನು ನೋಡುವಂತೆ ಬಾಲಕರು ಒತ್ತಾಯಿಸಿದ್ದಾರೆ. ಬಾಲಕಿ ನೋಡಲು ಒಪ್ಪದೇ ಜೋರಾಗಿ ಕಿರುಚಲು ಮುಂದಾಗಿದ್ದಾಳೆ. ಈ ವೇಳೆ ಪಕ್ಕದಲ್ಲಿ ಬಿದ್ದಿದ್ದ ಕಲ್ಲಿನಿಂದ ಆಕೆಯ ತಲೆಯನ್ನು ಮೂವರು ಅಪ್ರಾಪ್ತರು ಜಜ್ಜಿ ಕೊಲೆ ಮಾಡಿದ್ದಾರೆ. ಬಳಿಕ ಬಾಲಕಿಯ ಶವವನ್ನು ಕಲ್ಲು ಕ್ವಾರಿಯ ಬಾತ್ರೂಂನಲ್ಲಿ ಇಟ್ಟು ಅಲ್ಲಿಂದ ಪರಾರಿಯಾಗಿದ್ದರು.
ಇದನ್ನು ಓದಿ :
ಅಪ್ಪ ಅಶ್ಲೀಲ ವಿಡಿಯೋ ತೋರಿಸಿದ್ರು, ಹೋಟೆಲ್ನಲ್ಲಿ ರೇಪ್ ಮಾಡಿದ್ರು: 17 ವರ್ಷದ ಬಾಲಕಿ ಹೇಳಿಕೆ
24 ಗಂಟೆಯಲ್ಲಿ ಪ್ರಕರಣ ಭೇದಿಸಿದ ಖಾಕಿ ಪಡೆ
ಘಟನೆ ನಡೆದು ಒಂದು ದಿನದ ಬಳಿಕ ಸ್ಥಳೀಯರೊಬ್ಬರು ಬಾಲಕಿಯ ಶವವನ್ನು ಕಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಕಳುಹಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಶುರುಮಾಡಿದ ಪೊಲೀಸರಿಗೆ ಅದೇ ಏರಿಯಾದ ಮೂವರು ಬಾಲಕರ ಮೇಲೆ ಅನುಮಾನ ಬಂದಿದೆ. ಕೂಡಲೇ ಅವರನ್ನು ಕರೆಸಿ ವಿಚಾರಣೆ ನಡೆಸಿದಾಗ ಮಾಡಿದ ತಪ್ಪನ್ನು ಮೂವರು ಒಪ್ಪಿಕೊಂಡಿದ್ದಾರೆ. 11 ವರ್ಷದ ಇಬ್ಬರು ಬಾಲಕರು ಹಾಗೂ 8 ವರ್ಷದ ಓರ್ವ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಓರ್ವ ಬಾಲಕನ ತಂದೆಯನ್ನೂ ಪೊಲೀಸರು ಬಂಧಿಸಿದ್ದಾರೆ.
ತಂದೆ ಮೊಬೈಲ್ನಲ್ಲಿದ್ದ ಅಶ್ಲೀಲ ಚಿತ್ರಗಳು
ಮೂವರು ಬಾಲಕರಲ್ಲಿ, ಓರ್ವ ಬಾಲಕನ ತಂದೆ ಮೊಬೈಲ್ನಲ್ಲಿ ಹಲವಾರು ಅಶ್ಲೀಲ ಚಿತ್ರಗಳು ಇತ್ತು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಈ ಮೊಬೈಲ್ನಲ್ಲೇ ಮೂವರು ಅಶ್ಲೀಲ ಚಿತ್ರವನ್ನು ನೋಡುತ್ತಿದ್ದರಂತೆ. ಈ ವೇಳೆ ಅಲ್ಲಿಗೆ ಬಂದ ಬಾಲಕಿಗೂ ನೋಡುವಂತೆ ಒತ್ತಾಯಿಸಿದ್ದಾರೆ. ನೋಡಲು ನಿರಾಕರಿಸಿದ್ದಕ್ಕೆ ಕೊಲೆ ಮಾಡಿದ್ದಾರೆ. ತಂದೆ ತನ್ನ ಮೊಬೈಲ್ನಲ್ಲಿ ಅಶ್ಲೀಲ ಚಿತ್ರಗಳನ್ನ ಸೇವ್ ಮಾಡಿ ಇಟ್ಟುಕೊಂಡಿದ್ದೇ ಕೊಲೆಗೆ ಕಾರಣ ಅಂತ ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ:
ಮಹಾರಾಷ್ಟ್ರದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ; ಆರೋಪಿ ಬಂಧನ
ಹೀಗಾಗಿ ಆತನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ತಂದೆಯೊಬ್ಬ ಜವಾಬ್ದಾರಿಯಿಂದ ಇದ್ದಿದ್ದರೇ ಕೊಲೆಯಾಗದಂತೆ ನೋಡಿಕೊಳ್ಳಬಹುದಿತ್ತು. ಮಕ್ಕಳ ಕೈಗೆ ಮೊಬೈಲ್ ಕೊಟ್ಟು ತಂದೆ ಕಲ್ಲು ಕ್ವಾರಿಯಲ್ಲಿ ಮದ್ಯಪಾನ ಮಾಡುತ್ತಾ ಕುಳಿತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಮಾಡದ ತಪ್ಪಿಗೆ ಬಾಲಕಿ ಕೊಲೆಯಾಗಿದ್ದಾಳೆ. ಇತ್ತ ತಮ್ಮ ಭವಿಷ್ಯವನ್ನ ತಮ್ಮ ಕೈಯಾರೆ ಬಾಲಕರು ಹಾಳುಮಾಡಿಕೊಂಡಿದ್ದು, ಕಂಬಿ ಹಿಂದೆ ಸೇರಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ