ಎರಡು ವರ್ಷಗಳ ನಂತರ ಪತ್ತೆಯಾದ ಅಮೆರಿಕದ Missing Girl..!

6 ವರ್ಷದ ಬಾಲಕಿಯು ನಾಪತ್ತೆಯಾದ ಎರಡು ವರ್ಷಗಳ ನಂತರ ಜೀವಂತವಾಗಿ ಮತ್ತು ಉತ್ತಮ ಆರೋಗ್ಯದಿಂದ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿ ಪತ್ತೆಯಾದ ಮನೆ

ಬಾಲಕಿ ಪತ್ತೆಯಾದ ಮನೆ

  • Share this:
ಆಕೆಗಿನ್ನೂ 6 ವರ್ಷ, ಕಳೆದ ಎರಡು ವರ್ಷಗಳಿಂದ ಕಾಣೆಯಾಗಿದ್ದಳು (Missing). ಎಷ್ಟು ಹುಡುಕುವ ಪ್ರಯತ್ನ ಮಾಡಿದರೂ ಸಹ ಬಾಲಕಿಯ ಪತ್ತೆಯೇ ಆಗಿರಲಿಲ್ಲ. ಅದೃಷ್ಟವಶಾತ್ ಬಾಲಕಿ (Girl) ಸುಮಾರು ಎರಡು ವರ್ಷಗಳ ನಂತರ ಮತ್ತೆ ಸಿಕ್ಕಿದ್ದು, ಯಾವುದೇ ಪ್ರಾಣಾಪಾಯದಂತಹ ಅಹಿತಕರ ಘಟನೆ ನಡೆದಿಲ್ಲ. ಬಾಲಕಿ ಆರೋಗ್ಯವಾಗಿದ್ದು ಕುಟುಂಬವನ್ನು ಸೇರಿದ್ದಾಳೆ. ಆದರೆ ಬಾಲಾಕಿ ಎಲ್ಲಿದ್ದಳು, ಹೇಗೆ ಪತ್ತೆಯಾದ್ಲು, ಬಾಲಕಿಯ ನಾಪತ್ತೆ ಹಿಂದಿರುವ ಕಾಣದ ಕೈ ಯಾರದ್ದು ಎಂಬುವುದೇ ಒಂದು ಇಂಟರೆಸ್ಟಿಂಗ್ ಕಥೆ (Interesting Story).

ನ್ಯೂಯಾರ್ಕ್‌ನಲ್ಲಿ ನಡೆದ ಈ ಘಟನೆ ನಿಜಕ್ಕೂ ಬಿಚ್ಚಿಬೀಳಿಸುತ್ತದೆ. ಎರಡು ವರ್ಷಗಳ ಹಿಂದೆ ಮಿಸ್ ಆಗಿದ್ದ ಪೈಸ್ಲೀ ಶುಲ್ಟಿಸ್ ಎಂಬ ಬಾಲಕಿ ಪ್ರಸ್ತುತ ಮೆಟ್ಟಿಲುಗಳ (ಸ್ಟೇರ್‌ಕೇಸ್) ಕೆಳಗಿರುವ ಕೋಣೆಯೊಂದರಲ್ಲಿ ಪತ್ತೆಯಾಗಿದ್ದಾಳೆ. 6 ವರ್ಷದ ಬಾಲಕಿಯು ನಾಪತ್ತೆಯಾದ ಎರಡು ವರ್ಷಗಳ ನಂತರ ಜೀವಂತವಾಗಿ ಮತ್ತು ಉತ್ತಮ ಆರೋಗ್ಯದಿಂದ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಡೆಗೂ ಬಾಲಕಿ ಪತ್ತೆ ಹಚ್ಚಿದ ಪೊಲೀಸರು

ನ್ಯೂಯಾರ್ಕ್‌ನ ಸ್ಪೆನ್ಸರ್‌ನಿಂದ ಪಶ್ಚಿಮಕ್ಕೆ ಸುಮಾರು 180 ಮೈಲಿ (290 ಕಿಮೀ) ದೂರದಲ್ಲಿ ನಾಪತ್ತೆಯಾದ ಎರಡು ವರ್ಷಗಳ ನಂತರ, ಸೊಗರ್ಟೀಸ್ ಪಟ್ಟಣದ ಮನೆಯಲ್ಲಿ ಪೈಸ್ಲೀ ಶುಲ್ಟಿಸ್ ಎಂಬ ಬಾಲಕಿಯನ್ನು ಪತ್ತೆ ಹಚ್ಚಲಾಗಿದೆ ಎಂದು ಸೌಗರ್ಟೀಸ್ ಪೊಲೀಸ್ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

ಬಾಲಕಿ ಅಪಹರಿಸಿ ಕೂಡಿಟ್ಟಿದ್ದರು

ಪೈಸ್ಲೀ ಶುಲ್ಟಿಸ್ ಬಾಲಕಿಯ ಪಾಲಕರಲ್ಲದ ಪೋಷಕರೇ ಬಾಲಕಿಯನ್ನು ಅಪಹರಿಸಿ ಕೂಡಿಟ್ಟಿದ್ದರು ಎನ್ನಲಾಗಿದೆ. ಪಾಲಕರಲ್ಲದ ಪೋಷಕರು ಎಂದರೆ ಅವರ ಮಕ್ಕಳು ಹೆಚ್ಚಿನ ಸಮಯ ಅವರೊಂದಿಗೆ ವಾಸಿಸುವುದಿಲ್ಲ. ಈ ಪರಿಸ್ಥಿತಿಯು ಸಾಮಾನ್ಯವಾಗಿ ವಿಚ್ಛೇದನದ ನಂತರ ಉದ್ಭವಿಸುತ್ತದೆ, ಅಲ್ಲಿ ಪೋಷಕರು ಜಂಟಿ ಪಾಲನೆಯನ್ನು ಹಂಚಿಕೊಳ್ಳುವ ಬದಲು ಒಬ್ಬ ಪೋಷಕರು ಪ್ರಾಥಮಿಕ, ದೈಹಿಕ ಪಾಲನೆಯನ್ನು ಮಾಡುತ್ತಾರೆ.

ಎರಡು ವರ್ಷಗಳ ಹಿಂದೆ ಪೈಸ್ಲೀ ಶುಲ್ಟಿಸ್ ಎಂಬ ಬಾಲಕಿಯನ್ನು ಆಕೆಯ ಪಾಲಕರಲ್ಲದ ಪೋಷಕರು ಬಾಲಕಿಯನ್ನು ಅಪಹರಿಸಿ ಅಜ್ಜನ ಮನೆಯಲ್ಲಿ ಕೂಡಿಟ್ಟಿದ್ದರು. ಸ್ಟೇರ್‌ಕೇಸ್ ಕೆಳಗಿರುವ ಒಂದು ಕತ್ತಲೆ ಕೋಣೆಯಲ್ಲಿ ಬಾಲಕಿಯನ್ನು 2 ವರ್ಷಗಳಿಂದ ಅಲ್ಲಿಯೇ ಕೂಡಿ ಹಾಕಿದ್ದರು.

ಇದನ್ನು ಓದಿ: HIV: ಏಡ್ಸ್​​ನಿಂದ ಗುಣಮುಖಳಾದ ವಿಶ್ವದ ಮೊದಲು ಮಹಿಳೆ.. ಇದು ಸಾಧ್ಯವಾಗಿದ್ದು ಹೇಗೆ?

ಮಗುವನ್ನು ನೋಡಿಕೊಳ್ಳದ ದಂಪತಿ

ಬಾಲಕಿಯನ್ನು 2 ವರ್ಷಗಳ ಹಿಂದೆ ಆಕೆಯ ಜೈವಿಕ ಪೋಷಕರಾದ ಕಿಂಬರ್ಲಿ ಕೂಪರ್(33), ಮತ್ತು ಕಿರ್ಕ್ ಶುಲ್ಟಿಸ್ ಜೂನಿಯರ್(32) ಅವಳನ್ನು ಅಪಹರಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ದಂಪತಿಯು ಬಾಲಕಿಯನ್ನು ನೋಡಿಕೊಳ್ಳುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ಇರುವಿಕೆಯ ಬಗ್ಗೆ ಪೋಲಿಸರಿಗೆ ಸುಳಿವು ಸಿಕ್ಕಿದ ಮೇಲೆ ಸರ್ಚ್ ವಾರೆಂಟ್ ಪಡೆದುಕೊಂಡು ಸ್ಥಳಕ್ಕೆ ತೆರಳಿದ್ದಾರೆ. ಬಾಲಕಿಯ ಅಜ್ಜನ ಮನೆಗೆ ಮೊದಲು ತೆರಳಿ, ಅಲ್ಲಿ ಹುಡುಕಿದ್ದಾರೆ, ನಂತರ ನೆಲಮಾಳಿಗೆಗೆ ಹೋಗುವ ಮುಚ್ಚಿದ ಮೆಟ್ಟಿಲುಗಳ ಕೆಳಗೆ ಸುಮಾರು ಒಂದು ಗಂಟೆಗಳ ಕಾಲ ಹುಡುಕಿದರು.

ಕತ್ತಲೆ ಕೋಣೆಯಲ್ಲಿದ್ದ ಬಾಲಕಿ

ಸ್ಟೆಪ್ ಬೋರ್ಡ್‌ಗಳನ್ನು ತೆಗೆದ ನಂತರ, ಹುಡುಗಿ ಮತ್ತು ಅವಳ ತಾಯಿ ಕಿಂಬರ್ಲಿ ಕತ್ತಲೆ ಕೋಣೆಯಲ್ಲಿ ಅಡಗಿರುವುದು ಕಂಡುಬಂತು ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿ ಪೈಸ್ಲೀಯನ್ನು ರಕ್ಷಿಸಿ ಪೊಲೀಸ್ ಪ್ರಧಾನ ಕಚೇರಿಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವಳನ್ನು ಪರೀಕ್ಷಿಸಿದರು. ಬಾಲಕಿ ಆರೋಗ್ಯವಾಗಿದ್ದು, ಆಕೆಯನ್ನು ಕುಟುಂಬಸ್ಥರಿಗೆ ಒಪ್ಪಿಸಲಾಯಿತು.

ಇದನ್ನು ಓದಿ: Facebook​​ನಲ್ಲಿ ಶುರುವಾಯ್ತು ಲವ್ವಿಡವ್ವಿ: ಗಂಡ, ಮಕ್ಕಳಿದ್ರೂ ಪ್ರೀತಿಗೆ ಬಿದ್ದ ಸಲಿಂಗಿಗಳು

ಪೊಲೀಸರು ಆಕೆಯ ಪೋಷಕರು ಮತ್ತು ಹುಡುಗಿಯ ಅಜ್ಜ ಕಿರ್ಕ್ ಶುಲ್ಟಿಸ್ ಅವರನ್ನು ಬಂಧಿಸಿದ್ದು, ಇವರ ವಿರುದ್ಧ ಕೇಸ್ ದಾಖಲಾಗಿದೆ.

ಗುಟ್ಟು ಬಿಡದ ಅಜ್ಜ

ಬಾಲಕಿ ಕಾಣೆಯಾದಾಗಿನಿಂದ ಅಜ್ಜ ಕಿರ್ಕ್ ಶುಲ್ಟಿಸ್ ಜೂನಿಯರ್ ಅವರನ್ನು ಹಲವಾರು ಬಾರಿ ಪೋಲಿಸರು ವಿಚಾರಿಸಿದ್ದರು. ಗುಟ್ಟು ಬಿಟ್ಟು ಕೊಡದ ಕಿರ್ಕ್ ಆಕೆಯ ಸ್ಥಳದ ಬಗ್ಗೆ ತನಗೆ ತಿಳಿದಿಲ್ಲ ಎಂದು ಸಮರ್ಥಿಸಿಕೊಂಡರು ಮತ್ತು ಅವರು ಮಗುವನ್ನು ನೋಡಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದ್ದರು.

ಸದ್ಯ 2 ವರ್ಷಗಳ ನಂತರ ಬಾಲಕಿ ಸಿಕ್ಕಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದು, ಸುರಕ್ಷಿತವಾಗಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Published by:Seema R
First published: