ನವದೆಹಲಿ (ಆ. 4): ತೃಣಮೂಲ ಕಾಂಗ್ರೆಸ್ನ ಆರು ಸಂಸದರನ್ನು ರಾಜ್ಯಸಭೆಯಿಂದಾಗಿ ಅಮಾನತ್ತು ಮಾಡಲಾಗಿದೆ. ಬುಧವಾರ ಕಲಾಪ ನಡೆಯುವ ವೇಳೆಗೆ ಅಸಭ್ಯ ವರ್ತನೆ ತೋರಿದ ಆರೋಪದ ಮೇಲೆ ಈ ಕ್ರಮವನ್ನು ಕೈಗೊಳ್ಳಲಾಗಿದೆ. ರಾಜ್ಯ ಸಭಾ ಕಲಾಪ ನಡೆಯುತ್ತಿದ್ದ ವೇಳೆ ಅವರು ನಾಮಫಲಕ ಪ್ರದರ್ಶಿಸಿ, ಕುರ್ಚಿಗಳನ್ನು ಎಳೆದಾಡಿ, ಅಡ್ಡಿಯುಂಟು ಮಾಡಿದ್ದರು. ಈ ಹಿನ್ನಲೆ ಅವರನ್ನು ಅಮಾನತು ಮಾಡಿ ರಾಜ್ಯ ಸಭಾ ಅಧ್ಯಕ್ಷರಾದ ವೆಂಕಯ್ಯ ನಾಯ್ಡು ಈ ಆದೇಶ ಹೊರಡಿಸಿದ್ದಾರೆ. ಡೋಲಾ ಸೇನ್, ನಾಡಿಮುಲ್ ಹಕ್, ಅರ್ಪಿತಾ ಘೋಷ್, ಮೌಸಮ್ ನೂರ್, ಶಾಂತಾ ಚೆತ್ರಿ, ಅಬಿರ್ ರಂಜನ್ ಬಿಸ್ವಾಸ್ ಅಮಾನತುಗೊಂಡ ಟಿಎಂಸಿ ನಾಯಕರು.
ಸಂಸದರ ನಡುವಳಿಕೆ ಅಸಭ್ಯವಾಗಿದೆ. ಈ ಹಿನ್ನಲೆಯಲ್ಲಿ ಅಧ್ಯಕ್ಷರು ನಿಯಮ 255ರ ಅಡಿಯಲ್ಲಿ ಕೌನ್ಸಿಲ್ನಿಂದ ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಈ ಆದೇಶದ ಅನ್ವಯ ಈ ಆರು ಜನ ಸಂಸದರು ಇನ್ನು ಉಳಿದ ಕಲಾಪದಲ್ಲಿ ಹಾಜರಾಗುವಂತೆ ಇಲ್ಲ.
ಇದನ್ನು ಓದಿ: ದಕ್ಷಿಣ ಕನ್ನಡದಲ್ಲಿ ಹೆಚ್ಚಾದ ಸೋಂಕು; ವಾರಂತ್ಯದಲ್ಲಿ ಧರ್ಮಸ್ಥಳ, ಕುಕ್ಕೆ ದೇವಸ್ಥಾನಗಳಿಗೆ ಭಕ್ತರಿಗಿಲ್ಲ ಪ್ರವೇಶ
ಸಂಸತ್ ಮುಂಗಾರು ಅಧಿವೇಶನ ಆರಂಭವಾದಾಗ ವಿಪಕ್ಷಗಳು ಪೆಗಾಸಸ್ ವಿಷಯದ ಕುರಿತು ಚರ್ಚಿಸಲು ಪಟ್ಟು ಹಿಡಿದಿತ್ತು. ರಾಜ್ಯ ಸಭೆಯಲ್ಲೂ ಕೂಡ ಪ್ರತಿಪಕ್ಷಗಳು ಈ ಕುರಿತ ಚರ್ಚೆಗೆ ಬೇಡಿಕೆ ಇಟ್ಟಿದ್ದವು. ಇದರಿಂದ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಈ ವೇಳೆ ಸದನದ ಬಾವಿಗೆ ಇಳಿದ ಪ್ರತಿಪಕ್ಷ ನಾಯಕರು ಗದ್ದಲದ ಸೃಷ್ಟಿಸಿದರು. ಈ ವೇಳೆ ತಮ್ಮ ಸ್ಥಾನಗಳಿಗೆ ಹಿಂದಿರುಗುವಂತೆ ಸಂಸದರನ್ನು ರಾಜ್ಯ ಸಭಾ ಅಧ್ಯಕ್ಷರಾದ ವೆಂಕಯ್ಯ ನಾಯ್ದು ಕೇಳಿ ಕೊಂಡರು. ಅಲ್ಲದೇ ಈ ವೇಳೆ ಅವರಿಗೆ ನಿಯಮ 255 ಅಡಿ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಲಾಗಿತ್ತು. ಆದರೂ ಟಿಎಂಸಿ ಶಾಸಕರು ನಾಮ ಫಲಕ ಹಿಡಿದು ಕಲಾಪಕ್ಕೆ ಅಡ್ಡಿ ಮಾಡಿದರು.
ಈ ಹಿನ್ನಲೆ ಸದನದಲ್ಲಿ ಅಸಭ್ಯ ವರ್ತನೆ ತೋರಿದ ಹಿನ್ನಲೆ ರಾಜ್ಯ ಸಭಾ ಸದಸ್ಯರು 255ನೇ ನಿಯಮದ ಅಡಿ ಸದನ ತೊರೆಯುವಂತೆ ಆದೇಶಿಸಿದರು. ಈ ವೇಳೆ ಅಮಾನತು ಆದ ಸಂಸದ ಹೆಸರನ್ನು ರಾಜ್ಯ ಸಭಾ ಅಧ್ಯಕ್ಷರು ತಿಳಿಸಲಿಲ್ಲ. ರಾಜ್ಯ ಸಭಾ ಕಾರ್ಯಾಲಯ ಈ ಪಟ್ಟಿ ನೀಡಲಿದೆ ಎಂದಿದ್ದರು
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ