ಗಾಂಧಿನಗರ: ತಮ್ಮ ಪ್ರೇಮ ವಿವಾಹಕ್ಕೆ (Love Marriage) ಮನೆಯವರು ಒಪ್ಪದ ಹಿನ್ನೆಲೆ ಪ್ರೇಮಿಗಳಿಬ್ಬರು 6 ತಿಂಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಅವರಿಬ್ಬರ ಸವಿನೆನಪಿಗಾಗಿ ಕುಟುಂಬಸ್ಥರು (Family ಪ್ರತಿಮೆಯನ್ನು (Statues) ನಿರ್ಮಿಸಿದ್ದಾರೆ. ಮೃತ ದುರ್ದೈವಿಗಳನ್ನು ಗಣೇಶ್ ಮತ್ತು ರಂಜನಾ ಎಂದು ಗುರುತಿಸಲಾಗಿದೆ. 2022ರ ಆಗಸ್ಟ್ನಲ್ಲಿ ಗಣೇಶ್ ಮತ್ತು ರಂಜನಾ ಗುಜರಾತ್ನ (Gujrat) ತಾಪಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಘಟನೆ ಬಳಿಕ ಕುಟುಂಬಸ್ಥರು ಅವರಿಬ್ಬರು ಬದುಕಿದ್ದಾಗ ಒಟ್ಟಿಗೆ ಖುಷಿಯಿಂದ ಇರಲು ಸಾಧ್ಯವಾಗಲಿಲ್ಲ ಎಂದು ಪಶ್ಚಾತ್ತಾಪ ಪಡುತ್ತಿದ್ದರು. ಹೀಗಾಗಿ ಪ್ರೇಮಿಗಳ ಪ್ರತಿಮೆಯನ್ನು ನಿರ್ಮಿಸಿ, ವಿಧಿವಿಧಾನಗಳನ್ನು ಅನುಸರಿಸಿ ಪ್ರತಿಮೆಗಳಿಗೆ ಮದುವೆ ಮಾಡಿದ್ದಾರೆ.
ಮೊಮ್ಮಗಳನ್ನು ಪ್ರೀತಿಸುತ್ತಿದ್ದ ಯುವಕ ದೂರದ ಸಂಬಂಧಿಯಾಗಿದ್ದ
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಯುವತಿಯ ಅಜ್ಜ ಭೀಮಸಿಂಗ್ ಪದ್ವಿ, ನನ್ನ ಮೊಮ್ಮಗಳನ್ನು ಪ್ರೀತಿ ಮಾಡುತ್ತಿದ್ದ ಯುವಕ ದೂರದ ಸಂಬಂಧಿಯಾಗಿದ್ದ, ಹೀಗಾಗಿ ಅವರಿಬ್ಬರ ಮದುವೆಗೆ ಒಪ್ಪಿರಲಿಲ್ಲ. ಆದರೆ ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರು. ಆದ್ದರಿಂದ ನಾವು ಅವರಿಬ್ಬರ ಬಗ್ಗೆ ಯೋಚಿಸುವಷ್ಟರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮದುವೆ ಮಾಡಿ ಪ್ರೇಮಿಗಳ ಆಸೆ ಈಡೇರಿಸಿದ ಕುಟುಂಬ
ಸದ್ಯ ಅವರಿಬ್ಬರ ಆಸೆಯನ್ನು ಈಡೇರಿಸುವ ಸಲುವಾಗಿ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎರಡು ಕುಟುಂಬಸ್ಥರು ತೀರ್ಮಾನಿಸಿ ಪ್ರತಿಮೆ ನಿರ್ಮಿಸಿ ಮದುವೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಇತ್ತೇಚೆಗಷ್ಟೇ ಕ್ಷುಲ್ಲಕ ವಿಚಾರಕ್ಕೆ ಪ್ರೇಮಿಗಳು ಸಾವು
ಇತ್ತೇಚೆಗಷ್ಟೇ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದು ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿಹಾರದಲ್ಲಿ ನಡೆದಿತ್ತು. ಸಿಎಗೆ ತಯಾರಿ ನಡೆಸುತ್ತಿದ್ದ ಬಿಹಾರದ ಮುಜಾಫರ್ಪುರ ನಿವಾಸಿ 23 ವರ್ಷದ ಅಂಜಲಿ ಎಂಬ ಯುವತಿ ಜೈಪುರದಲ್ಲಿ ನೆಲೆಸಿರುವ ತನ್ನ ಗೆಳೆಯ ವಿವೇಕ್ ಜೊತೆಗೆ ಜಗಳವಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತನ್ನ ಗೆಳತಿಯ ಸಾವಿನ ಬಗ್ಗೆ ಮಾಹಿತಿ ಸಿಕ್ಕಿದ ನಂತರ ಗೆಳೆಯ ವಿವೇಕ್ ಕೂಡ ಜೈಪುರದ 8 ನೇ ಮಹಡಿಯಿಂದ ಜಿಗಿದು ತಾನೂ ಕೂಡ ಪ್ರಾಣ ಬಿಟ್ಟಿದ್ದನು.
ಪ್ರೇಮಿಗಳನ್ನು ಸಮಾಧಾನ ಪಡಿಸುವಲ್ಲಿ ವಿಫಲವಾದ ಸ್ನೇಹಿತ
ಪೊಲೀಸರ ಪ್ರಕಾರ, ಬುಧವಾರ ರಾತ್ರಿ 9 ಗಂಟೆಗೆ ಪ್ರೇಮಿಗಳಾದ ಅಂಜಲಿ ಮತ್ತು ವಿವೇಕ್ ನಡುವೆ ಜಗಳವಾಗಿತ್ತು. ಸಂಭಾಷಣೆಯ ಸಮಯದಲ್ಲಿ, ಮುಜಾಫರ್ಪುರದ ಇವರಿಬ್ಬರಿಗೂ ಸಾಮಾನ್ಯ ಸ್ನೇಹಿತರಾಗಿರುವ ಒಬ್ಬರು ಕೂಡ ಈ ಕಾನ್ಫರೆನ್ಸ್ ಕರೆಯಲ್ಲಿ ಭಾಗಿಯಾಗಿದ್ದರು. ಅವರು ಈ ಇಬ್ಬರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು, ಆದರೆ ಅದೆಲ್ಲವೂ ವ್ಯರ್ಥವಾಗಿತ್ತು.
ಇದನ್ನೂ ಓದಿ: Love Tragedy: ಇತ್ತ ಕೈಕೊಟ್ಟವಳ ಕೊಂದ ಪ್ರಿಯಕರ, ಅತ್ತ ಪ್ರೇಯಸಿ ಮನೆಯವರ ಕಿರುಕುಳಕ್ಕೆ ಯುವಕ ಸೂಸೈಡ್!
ಮೊಬೈಲ್ ಸ್ವಿಚ್ ಆಫ್ ಮಾಡಿದ ವಿವೇಕ್, ಅಂಜಲಿ ಆತ್ಮಹತ್ಯೆ
ಕಾನ್ಫರೆನ್ಸ್ ಕರೆಯಲ್ಲಿ ಭಾಗಿಯಾಗಿದ್ದ ಕಾಮನ್ ಫ್ರೆಂಡ್, ವಿವೇಕ್ ಮತ್ತು ಅಂಜಲಿ ನಡುವಿನ ವಾಗ್ವಾದದ ನಂತರ, ವಿಷಯಗಳು ಸಹಜವಾದವು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ವಿವೇಕ್ ಕರೆ ಸಂಪರ್ಕ ಕಡಿತಗೊಳಿಸಿದರು. ಕರೆ ಡಿಸ್ಕನೆಕ್ಟ್ ಮಾಡಿದ ನಂತರ ವಿವೇಕ್ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ನಂತರ ಅಂಜಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
8 ನೇ ಮಹಡಿಯಿಂದ ಹಾರಿ ವಿವೇಕ್ ಕೂಡ ಆತ್ಮಹತ್ಯೆಗೆ ಶರಣು
ಈ ಘಟನೆಯ ನಂತರ, ಅಂಜಲಿಯ ಸಹೋದರ ವಿವೇಕ್ಗೆ ಕರೆ ಮಾಡಿ ಘಟನೆಯ ಬಗ್ಗೆ ತಿಳಿಸಿ ಮತ್ತು ಗಂಭೀರ ಪರಿಣಾಮ ಎದುರಿಸಬೇಕಾಗಬಹುದು ಎಂದು ಬೆದರಿಕೆ ಹಾಕಿದ್ದಾನೆ. ಅಂಜಲಿಯ ಸಹೋದರನೊಂದಿಗಿನ ಸಂಭಾಷಣೆಯ ನಂತರ, ವಿವೇಕ್ ಜೈಪುರದಲ್ಲಿ ತನ್ನ ನಿವಾಸದ 8 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದನು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ