ಬೆಂಕಿ ಹೊತ್ತಿಕೊಂಡಿದ್ದ ಕಟ್ಟಡದಿಂದ ಮಕ್ಕಳನ್ನು ರಕ್ಷಿಸಿದ್ದೇ ಬಲು ರೋಚಕ; ಸಖತ್ ವೈರಲ್ ಆಗ್ತಿದೆ ವಿಡಿಯೋ

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, 19 ಸಾವಿರ ಬಾರಿ ವೀಕ್ಷಿಸಲ್ಪಟ್ಟಿದೆ. ನೆಟ್ಟಿಗರು ಯುವಕರ ಸಾಹಸಮಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಕ್ಕಳನ್ನು ರಕ್ಷಿಸಿದ ಯುವಕರು

ಮಕ್ಕಳನ್ನು ರಕ್ಷಿಸಿದ ಯುವಕರು

 • Share this:
  ಬೆಂಕಿ ಹೊತ್ತಿಕೊಂಡಿದ್ದ ಕಟ್ಟಡದಲ್ಲಿ ಸಿಲುಕಿಕೊಂಡಿದ್ದ ಇಬ್ಬರು ಮಕ್ಕಳನ್ನು ರಕ್ಷಿಸಲು 6 ಮಂದಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿರುವ ಘಟನೆ ಚೀನಾದಲ್ಲಿ ನಡೆದಿದೆ. ಮಾನವ ಸರಪಳಿ ಮೂಲಕ ಆರು ಜನರು ಸಾಹಸ ಮಾಡಿ ಇಬ್ಬರು ಮಕ್ಕಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಸಾಹಸಮಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಬಹುಅಂತಸ್ತಿನ ಕಟ್ಟಡದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ 3ನೇ ಮಹಡಿಯಲ್ಲಿ ಇಬ್ಬರು ಮಕ್ಕಳು ಸಿಲುಕಿಕೊಂಡಿದ್ದರು. ಆ ಮಕ್ಕಳನ್ನು ಕಾಪಾಡಲು ಯಾರೂ ಸಹ ಮುಂದೆ ಬಂದಿರಲಿಲ್ಲ. ಆಗ ದೃಶ್ಯ ನೋಡಿದ ಕೆಲ ಯುವಕರು ಮಕ್ಕಳನ್ನು ರಕ್ಷಿಸಲು ನಿರ್ಧರಿಸಿದರು. ತಾವೊಂದು ಉಪಾಯ ಮಾಡಿ, ಮಾನವ ಸರಪಳಿ ನಿರ್ಮಿಸಿದರು. ಆ ಮೂಲಕ ಕಟ್ಟಟವನ್ನು ಹತ್ತಿ, 3ನೇ ಮಹಡಿ ತಲುಪಿ ಮಕ್ಕಳನ್ನು ಸುರಕ್ಷಿತವಾಗಿ ಕರೆತಂದರು.

  ಯುವಕರು ಸಾಹಸಮಯವಾಗಿ ಮಕ್ಕಳನ್ನು ರಕ್ಷಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಭೇಷ್, ಶಹಬ್ಬಾಸ್ ಎಂದು ಹೇಳುತ್ತಿದ್ದು, ಇವರೇ ನಿಜವಾಗ ಹೀರೋಗಳು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯುವಕರು ಮಾನವ ಸರಪಳಿ ನಿರ್ಮಿಸಿಕೊಂಡು ಬೆಂಕಿ ಹೊತ್ತಿಕೊಂಡಿದ್ದ ಕಟ್ಟಡದಿಂದ ಇಬ್ಬರು ಬಾಲಕಿಯರನ್ನು ಕಾಪಾಡಿದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

  ಇದನ್ನೂ ಓದಿ:Petrol Diesel Prices- ಹಾಸನದಲ್ಲಿ 94ಕ್ಕಿಂತ ಕೆಳಗಿಳಿದ ಡೀಸೆಲ್ ಬೆಲೆ; ಇಲ್ಲಿದೆ ಜಿಲ್ಲಾವಾರು ಪೆಟ್ರೋಲ್ ದರ ಪಟ್ಟಿ

  25 ಸೆಕೆಂಡ್​​ಗಳಿರುವ ಈ ವಿಡಿಯೋ ಕ್ಲಿಪ್​​ನಲ್ಲಿ 6 ಮಂದಿ ಯುವಕರು ಮಕ್ಕಳನ್ನು ರಕ್ಷಿಸಿದ್ದಾರೆ. ಯುವಕರು ಕಟ್ಟಡದಲ್ಲಿದ್ದ ಕಬ್ಬಿಣದ ಗ್ರಿಲ್ಸ್​​ಗಳನ್ನು ಹಿಡಿದು ಒಂದೊಂದೇ ಮಹಡಿ ಹತ್ತಿ ಸಾಗಿದ್ದಾರೆ. ಬಳಿಕ 3ನೇ ಮಹಡಿ ತಲುಪಿ ಅಲ್ಲಿ ಕಿಟಕಿಯ ಮೂಲಕ ಇಬ್ಬರು ಬಾಲಕಿಯರನ್ನು ರಕ್ಷಿಸಿದ್ದಾರೆ. ಬೆಂಕಿ ಹೊತ್ತಿಕೊಂಡಿದ್ದ ಹಿನ್ನೆಲೆ ಕಟ್ಟಡದಲ್ಲಿ ದಟ್ಟ ಹೊಗೆ ಕವಿದಿತ್ತು.

  ಘಟನೆ ಬಳಿಕ ಎರಡು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. ಕಟ್ಟಡಕ್ಕೆ ಏಣಿ ಹಾಕಿ ಆ ಯುವಕರು ಇಳಿಯಲು ಅಗ್ನಿಶಾಮಕ ಸಿಬ್ಬಂದಿ ಸಹಕರಿಸಿದರು.

  ಇದನ್ನೂ ಓದಿ:Karnataka Weather Today: ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

  ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, 19 ಸಾವಿರ ಬಾರಿ ವೀಕ್ಷಿಸಲ್ಪಟ್ಟಿದೆ. ನೆಟ್ಟಿಗರು ಯುವಕರ ಸಾಹಸಮಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೇವರು ನಿಮಗೆ ಯಾವಾಗಲೂ ಒಳ್ಳೆಯದನ್ನೇ ಮಾಡಲಿ ಎಂದು ಹರಸಿದ್ದಾರೆ.

  ಇತ್ತೀಚೆಗೆ ಇದೇ ರೀತಿ ಘಟನೆಯೊಂದು ಸಂಭವಿಸಿತ್ತು. ಬೆಂಕಿ ಹೊತ್ತಿಕೊಂಡಿದ್ದ ಕಟ್ಟಡದಿಂದ ತನ್ನ ಮಗುವನ್ನು ರಕ್ಷಿಸಿದ್ದ ತಾಯಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
  Published by:Latha CG
  First published: