ನೋಯ್ಡಾದಲ್ಲಿ ದಟ್ಟ ಮಂಜಿಗೆ ಕಾಣದ ರಸ್ತೆ; ಕಾಲುವೆಗೆ ಉರುಳಿ ಬಿದ್ದ ಕಾರು, 6 ಮಂದಿ ಸಾವು

ಘಟನೆಯಲ್ಲಿ ಇನ್ನು 5 ಮಂದಿ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರುತಿ ಎರ್ಟಿಗಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಒಟ್ಟು ಕಾರಿನಲ್ಲಿ 11 ಮಂದಿ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಾರು ಅಪಘಾತದ ದೃಶ್ಯ

ಕಾರು ಅಪಘಾತದ ದೃಶ್ಯ

  • Share this:
ನೋಯ್ಡಾ(ಡಿ.30): ಇಂದು ಮುಂಜಾನೆ ರಾಷ್ಟ್ರ ರಾಜಧಾನಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ದಟ್ಟ ಮಂಜು ಆವರಿಸಿತ್ತು. ಹೀಗಾಗಿ ರೈಲು ಹಾಗೂ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿತ್ತು. ದಟ್ಟವಾಗಿ ಆವರಿಸಿದ್ದ ಮಂಜಿನಿಂದಾಗಿ ರಸ್ತೆಗಳೂ ಸಹ ಕಾಣಿಸುತ್ತಿರಲಿಲ್ಲ. ಉತ್ತರ ಪ್ರದೇಶದ ಗ್ರೇಟರ್​​​ ನೋಯ್ಡಾದಲ್ಲಿ ದಟ್ಟ ಮಂಜಿನಿಂದಾಗಿ ನಿನ್ನೆ ತಡರಾತ್ರಿ ಅಪಘಾತವೊಂದು ಸಂಭವಿಸಿದೆ.

ಚಲಿಸುತ್ತಿದ್ದ ಕಾರು ಮುಂದೆ ರಸ್ತೆ ಕಾಣದೆ ಕಾಲುವೆಯೊಂದಕ್ಕೆ ಉರುಳಿ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸತ್ತವರಲ್ಲಿ ಇಬ್ಬರು ಮಕ್ಕಳು ಇದ್ದರೆಂದು ತಿಳಿದು ಬಂದಿದೆ.

ಕಿಡ್ನಾಪ್ ಮಾಡಲು ಬಂದವರು ಯುವತಿಯ ಮೂಗು ಕತ್ತರಿಸಿ ಹೋದರು!

ಘಟನೆಯಲ್ಲಿ ಇನ್ನು 5 ಮಂದಿ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರುತಿ ಎರ್ಟಿಗಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಒಟ್ಟು ಕಾರಿನಲ್ಲಿ 11 ಮಂದಿ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಾರಿನಲ್ಲಿದ್ದವರೆಲ್ಲರೂ ಸಂಭಾಲ್​ ಜಿಲ್ಲೆಯವರಾಗಿದ್ದು, ದೆಹಲಿಗೆ ಪ್ರಯಾಣಿಸುತ್ತಿದ್ದರು. ಮೃತಪಟ್ಟವರನ್ನು ಮಹೇಶ್​(35), ಕಿಶನ್​ ಲಾಲ್​​(50), ನೀರೇಶ್​(17), ರಾಮ್​​ ಖಿಲಾದಿ(75), ಮಲ್ಲು(12), ನೇತ್ರಪಾಲ್​(40) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

ತಮಿಳುನಾಡಿನ ರಾಮೇಶ್ವರಂ ಬೀಚ್​ನಲ್ಲಿ ಚಿತ್ರದುರ್ಗದ ವಿದ್ಯಾರ್ಥಿ ಮುಳುಗಿ ಸಾವು

ಭಾರತೀಯ ಹವಾಮಾನ ಇಲಾಖೆ ಪಂಜಾಬ್​​, ಹರಿಯಾಣ, ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ನಿನ್ನೆ ರೆಡ್​-ಕಲರ್​​​ ವಾರ್ನಿಂಗ್ ಘೋಷಿಸಿತ್ತು. ಇನ್ನು, ಮಧ್ಯಪ್ರದೇಶದಲ್ಲಿ ಬ್ಲೂ-ಕಲರ್​ ವಾರ್ನಿಂಗ್​ ಘೋಷಣೆ ಮಾಡಲಾಗಿತ್ತು. ವಿಪರೀತ ಹವಾಮಾನ ವೈಪರೀತ್ಯದಿಂದಾಗಿ ರೆಡ್ ಕೋಡೆಡ್​ ವಾರ್ನಿಂಗ್​ ನೀಡಲಾಗಿದೆ.
Published by:Latha CG
First published: