• Home
  • »
  • News
  • »
  • national-international
  • »
  • Firing: ಮೇಘಾಲಯ-ಅಸ್ಸಾಂ ಗಡಿಯಲ್ಲಿ ಗುಂಡಿನ ಚಕಮಕಿ; 6 ಮಂದಿ ಸಾವು, ಪರಿಸ್ಥಿತಿ ಉದ್ವಿಗ್ನ!

Firing: ಮೇಘಾಲಯ-ಅಸ್ಸಾಂ ಗಡಿಯಲ್ಲಿ ಗುಂಡಿನ ಚಕಮಕಿ; 6 ಮಂದಿ ಸಾವು, ಪರಿಸ್ಥಿತಿ ಉದ್ವಿಗ್ನ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಸ್ಸಾಂ-ಮೇಘಾಲಯದ ಗಡಿಯಾದ ಪಶ್ಚಿಮ ಕರ್ಬಿ ಆಂಗ್ಲಾಂಗ್ ಜಿಲ್ಲೆಯ ಮೊಯಿಕ್ರಾಂಗ್‌ನಲ್ಲಿ ಅಸ್ಸಾಂ ಅರಣ್ಯ ಇಲಾಖೆಯ ತಂಡ ಟ್ರಕ್ ಒಂದನ್ನು ತಡೆದಿದೆ. ಟ್ರಕ್‌ನಲ್ಲಿದ್ದವರು ಈ ವೇಳೆ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಅವರನ್ನು ತಡೆ ಹಿಡಿಯಲು ಅರಣ್ಯ ಸಿಬ್ಬಂದಿ ಗುಂಡು ಹಾರಿಸಿ ಟ್ರಕ್‌ನ ಟೈರ್ ಪಂಕ್ಚರ್ ಮಾಡಿದ್ದಾರೆ.

ಮುಂದೆ ಓದಿ ...
  • Share this:

ಅಸ್ಸಾಂ ಮೇಘಾಲಯ ಗಡಿಯಲ್ಲಿ (Assam-Meghalaya border) ಮರಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ನಡೆದ ಘರ್ಷಣೆಯಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಅಸ್ಸಾಂ ಮೇಘಾಲಯ ಗಡಿಯಲ್ಲಿ ಮರಗಳನ್ನು (Tree) ಅಕ್ರಮವಾಗಿ ಸಾಗಿಸುತ್ತಿದ್ದ ಟ್ರಕ್ ಅನ್ನು ಪೊಲೀಸರು (Police) ತಡೆದಿದ್ದಾರೆ. ಈ ವೇಳೆ ಮರಗಳ್ಳರು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಅರಣ್ಯ ಸಿಬ್ಬಂದಿ ಸೇರಿದಂತೆ 6 ಜನರು ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ, ಮೇಘಾಲಯದ ಗಡಿಯಾದ ಪಶ್ಚಿಮ ಕರ್ಬಿ ಆಂಗ್ಲಾಂಗ್ ಜಿಲ್ಲೆಯ ಮೊಯಿಕ್ರಾಂಗ್‌ನಲ್ಲಿ ಅಸ್ಸಾಂ ಅರಣ್ಯ ಇಲಾಖೆಯ ತಂಡ ಮುಂಜಾನೆ 3 ಗಂಟೆ ವೇಳೆಗೆ ಟ್ರಕ್ ಒಂದನ್ನು ತಡೆದಿದೆ. ಟ್ರಕ್‌ನಲ್ಲಿದ್ದವರು ಈ ವೇಳೆ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಅವರನ್ನು ತಡೆ ಹಿಡಿಯಲು ಅರಣ್ಯ ಸಿಬ್ಬಂದಿ ಗುಂಡು ಹಾರಿಸಿ ಟ್ರಕ್‌ನ ಟೈರ್ ಪಂಕ್ಚರ್ ಮಾಡಿದ್ದಾರೆ.


ಗುಂಡು ಹಾರಿಸಿದ ಅರಣ್ಯ ರಕ್ಷಕ ಸಿಬ್ಬಂದಿ


ಅಸ್ಸಾಂ ಮೇಘಾಲಯದ ಗಡಿಯಾದ ಪಶ್ಚಿಮ ಕರ್ಬಿ ಆಂಗ್ಲಾಂಗ್ ಜಿಲ್ಲೆಯ ಮೊಯಿಕ್ರಾಂಗ್‌ನಲ್ಲಿ ಅಸ್ಸಾಂ ಅರಣ್ಯ ಇಲಾಖೆಯ ತಂಡ ಮುಂಜಾನೆ 3 ಗಂಟೆ ವೇಳೆಗೆ ಟ್ರಕ್ ಒಂದನ್ನು ತಡೆದಿದೆ. ಟ್ರಕ್‌ನಲ್ಲಿದ್ದವರು ಈ ವೇಳೆ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಅವರನ್ನು ತಡೆ ಹಿಡಿಯಲು ಅರಣ್ಯ ಸಿಬ್ಬಂದಿ ಗುಂಡು ಹಾರಿಸಿ ಟ್ರಕ್‌ನ ಟೈರ್ ಪಂಕ್ಚರ್ ಮಾಡಿದ್ದಾರೆ.
ಹಿಂಸಾಚಾರದಲ್ಲಿ 6 ಮಂದಿ ಸಾವು


ಟ್ರಕ್‌ನಲ್ಲಿದ್ದವರು ಈ ವೇಳೆ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಅವರನ್ನು ತಡೆ ಹಿಡಿಯಲು ಅರಣ್ಯ ಸಿಬ್ಬಂದಿ ಗುಂಡು ಹಾರಿಸಿ ಟ್ರಕ್‌ನ ಟೈರ್ ಪಂಕ್ಚರ್ ಮಾಡಿದ್ದಾರೆ. ಬಳಿಕ ಅರಣ್ಯ ಸಿಬ್ಬಂದಿ ಟ್ರಕ್‌ನಲ್ಲಿದ್ದ ಮೂವರನ್ನು ಬಂಧಿಸಿ, ಜಿರಿಕಿಂಡಿಂಗ್‌ಗೆ ಕರೆತಂದಿದ್ದಾರೆ. ಘಟನೆಯ ಬಗ್ಗೆ ಅರಣ್ಯ ಸಿಬ್ಬಂದಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಹೆಚ್ಚಿನ ಅಧಿಕಾರಿಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ. ಇನ್ನು ಅಕ್ರಮ ಮರವನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ಪೊಲೀಸರು ತಡೆದ ನಂತರ ನಡೆದ ಹಿಂಸಾಚಾರದಲ್ಲಿ ಅರಣ್ಯ ಸಿಬ್ಬಂದಿ ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ .


ಇದನ್ನೂ ಓದಿ: Shraddha Murder Case: ಶ್ರದ್ಧಾ ಕೊಲೆ ಕೇಸ್ ಏನೂ ಹೊಸದಲ್ಲ! ರಾಜಸ್ಥಾನ ಸಿಎಂ ಬೇಜವಾಬ್ದಾರಿ ಹೇಳಿಕೆ


ಗಡಿ ಭಾಗದಲ್ಲಿ ಹೈ ಅಲರ್ಟ್


ಮೇಘಾಲಯದ ಪಶ್ಚಿಮ ಜೈನ್ತಿಯಾ ಹಿಲ್ಸ್ ಜಿಲ್ಲೆಯ ಕಡೆಗೆ ಅಕ್ರಮ ಮರವನ್ನು ಸಾಗಿಸುತ್ತಿದ್ದ ಮುಕ್ರು ಪ್ರದೇಶದಲ್ಲಿ ಅಸ್ಸಾಂ ಅರಣ್ಯ ಇಲಾಖೆಯ ತಂಡವು ಟ್ರಕ್ ಅನ್ನು ತಡೆದು ನಿಲ್ಲಿಸಿತು ಎಂದು ಪಶ್ಚಿಮ ಕರ್ಬಿ ಆಂಗ್ಲಾಂಗ್ ಪೊಲೀಸ್ ವರಿಷ್ಠಾಧಿಕಾರಿ ಇಮ್ದಾದ್ ಅಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ನಂತರ, ಅಸ್ಸಾಂ ಪೊಲೀಸರು ಯಾವುದೇ ಹಿಂಸಾಚಾರ ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ಕಂಟ್ರೋಲ್‌ಗೆ ತೆಗೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೇಘಾಲಯದ ಗಡಿಯಲ್ಲಿರುವ ಎಲ್ಲಾ ಜಿಲ್ಲೆಗಳಲ್ಲಿ ಎಚ್ಚರಿಕೆ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
48 ಗಂಟೆ ಮೇಘಾಲಯದಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತ


ಇನ್ನು ಪರಿಸ್ಥಿತಿ ಪ್ರಕ್ಷುಬ್ಧಗೊಂಡಿರುವುದರಿಂದ ಮೇಘಾಲಯದಲ್ಲಿ 48 ಗಂಟೆಗಳ ಕಾಲ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಮೇಘಾಲಯದ ಗಡಿಯಲ್ಲಿರುವ ಎಲ್ಲಾ ಜಿಲ್ಲೆಗಳಲ್ಲಿ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಇದನ್ನೂ ಓದಿ: Delhi: ತನ್ನಿಚ್ಛೆಗೆ ವಿರುದ್ಧವಾಗಿ ಮದುವೆಯಾದ ಮಗಳನ್ನು ಕೊಂದ ತಂದೆ, ಸೂಟ್​ಕೇಸ್​ನಲ್ಲಿ ಶವ ತುಂಬಿಸಿದ ಅಮ್ಮ!


ಎಚ್ಚರಿಕೆಯಿಂದ ಇರುವಂತೆ ಸೂಚನೆ


"ಮೇಘಾಲಯದ ಎಲ್ಲಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಯಾವುದೇ ಸಂಭವನೀಯ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ಮೇಲೆ ಕಟ್ಟುನಿಟ್ಟಾದ ನಿಗಾ ಇಡಲು ತಿಳಿಸಲಾಗಿದೆ. ಆದರೆ ಅಂತರರಾಜ್ಯ ಗಡಿಯಲ್ಲಿ ವಾಹನಗಳು ಅಥವಾ ಜನರ ಚಲನೆಗೆ ಯಾವುದೇ ನಿರ್ಬಂಧವಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಇನ್ನು ಅಸ್ಸಾಂನಿಂದ ವಾಹನಗಳನ್ನು ಮೇಘಾಲಯಕ್ಕೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ ಮತ್ತು ನಂತರದ ಎಲ್ಲಾ ಉತ್ಸವಗಳನ್ನು ರದ್ದುಗೊಳಿಸಿದೆ. ಪ್ರವಾಸಿಗರೂ ಪರದಾಡುತ್ತಿದ್ದಾರೆ.

Published by:Annappa Achari
First published: