Mumbai Rains: ಮಹಾಮಳೆಗೆ ತತ್ತರಿಸಿದ ಮುಂಬೈ; ದಾಖಲೆಯ ಮಳೆಯಿಂದ ಡ್ಯಾಂ ಒಡೆದು ಜನಜೀವನ ಅಸ್ತವ್ಯಸ್ತ

Mumbai Rain: ರಾಜ್ಯದ ರತ್ನಗಿರಿಯ ತಿವಾರೆಯಲ್ಲಿ ಡ್ಯಾಂ ಒಡೆದ ಪರಿಣಾಮ 12 ಮನೆಗಳು ಕೊಚ್ಚಿಹೋಗಿವೆ. 6 ಜನ ಸಾವನ್ನಪ್ಪಿದ್ದು, 20ರಿಂದ 24 ಜನರು ನಾಪತ್ತೆಯಾಗಿದ್ದಾರೆ.  ರಕ್ಷಣಾ ಸಿಬ್ಬಂದಿ ಮತ್ತು ಪೊಲೀಸರು ಕಾಣೆಯಾದವರನ್ನು ಪತ್ತೆಹಚ್ಚಲು ಕಾರ್ಯೋನ್ಮುಖರಾಗಿದ್ದಾರೆ.

Sushma Chakre | news18
Updated:July 3, 2019, 9:35 AM IST
Mumbai Rains: ಮಹಾಮಳೆಗೆ ತತ್ತರಿಸಿದ ಮುಂಬೈ; ದಾಖಲೆಯ ಮಳೆಯಿಂದ ಡ್ಯಾಂ ಒಡೆದು ಜನಜೀವನ ಅಸ್ತವ್ಯಸ್ತ
ಮುಂಬೈ ಮಳೆ
Sushma Chakre | news18
Updated: July 3, 2019, 9:35 AM IST
ಮುಂಬೈ (ಜು.3): ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಜನರು ಆತಂಕಕ್ಕೊಳಗಾಗಿದ್ದು, ನಿನ್ನೆ ದಾಖಲೆಯ ಮಳೆ ಸುರಿದಿದೆ. ಕಳೆದ 45 ವರ್ಷಗಳಲ್ಲಿ ಸುರಿದ 2ನೇ ಅತ್ಯಧಿಕ ಮಳೆಗೆ ಮುಂಬೈ ನಗರಿ ಸಾಕ್ಷಿಯಾಗಿದೆ.

ರಾಜ್ಯದ ರತ್ನಗಿರಿಯ ತಿವಾರೆಯಲ್ಲಿ ಡ್ಯಾಂ ಒಡೆದ ಪರಿಣಾಮ 12 ಮನೆಗಳು ಕೊಚ್ಚಿಹೋಗಿವೆ. 6 ಜನರು ಸಾವನ್ನಪ್ಪಿದ್ದು, 20ರಿಂದ 24 ಜನರು ನಾಪತ್ತೆಯಾಗಿದ್ದಾರೆ.  ರಕ್ಷಣಾ ಸಿಬ್ಬಂದಿ ಮತ್ತು ಪೊಲೀಸರು ಕಾಣೆಯಾದವರನ್ನು ಪತ್ತೆಹಚ್ಚಲು ಕಾರ್ಯೋನ್ಮುಖರಾಗಿದ್ದಾರೆ.ಇಂದು ಬೆಳಗ್ಗೆಯಿಂದ ಕೊಂಚ ಮಳೆಯ ಅಬ್ಬರ ಕಡಿಮೆಯಾಗಿರುವುದರಿಂದ ನಿನ್ನೆ ನಿಲ್ಲಿಸಲಾಗಿದ್ದ ಕೆಲವು ರೈಲುಗಳು ಸಂಚರಿಸಲಿವೆ. ಭಾರೀ ಮಳೆಯಿಂದ ನಿನ್ನೆ ನಡೆಯಬೇಕಿದ್ದ ಸಿಇಟಿ ಕೌನ್ಸೆಲಿಂಗ್ ಜು. 5ಕ್ಕೆ ಮುಂದೂಡಿಕೆಯಾಗಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಸ್ಪೈಸ್​ಜೆಟ್ ವಿಮಾನ ಜಾರಿದ ಕಾರಣದಿಂದ ಮುಖ್ಯ ರನ್​ವೇಯನ್ನು ಮುಚ್ಚಿ, 54 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿತ್ತು.ಇದುವರೆಗೂ 1000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ನಿನ್ನೆಯ ಮಳೆಯಿಂದ ರೈಲು ಸಂಚಾರವೂ ಸ್ಥಗಿತಗೊಂಡಿತ್ತು. ನಿನ್ನೆ ಒಂದೇ ದಿನ ಮಹಾರಾಷ್ಟ್ರದ ಮಳೆಯ ಅಬ್ಬರಕ್ಕೆ 14ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
Loading...

ಗಡಿಪಾರು ಆದೇಶದ ವಿರುದ್ಧ ವಿಜಯ್ ಮಲ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಅನುಮತಿ ನೀಡಿದ ಲಂಡನ್​ ಹೈಕೋರ್ಟ್​

2005ರಲ್ಲಿ ಸುರಿದ ಭಾರೀ ಮಳೆಯಿಂದ ಮುಂಬೈನಲ್ಲಿ ಪ್ರವಾಹ ಉಂಟಾಗಿತ್ತು. 1974ರಲ್ಲಿ ಒಂದೇ ದಿನ ಭಾರೀ ಮಳೆಯಾಗಿ ದಾಖಲೆ ಸೃಷ್ಟಿಸಿತ್ತು. ಅದರ ನಂತರ ನಿನ್ನೆ ಸುರಿದ ಮಳೆ ಮುಂಬೈನಲ್ಲಿ ಒಂದೇ ದಿನ ಸುರಿದ ಅತ್ಯಧಿಕ ಮಳೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.

ಮಲಾಡ್​ನ ಕುರಾರ್​ ಗ್ರಾಮದ ಎತ್ತರಪ್ರದೇಶದಲ್ಲಿ ಎರಡು ಮನೆಯ ಗೋಡೆ ಕುಸಿದ ಪರಿಣಾಮ 16 ಜನ ಸಾವನ್ನಪ್ಪಿದ್ದಾರೆ. ಸೋಮವಾರ ಮಧ್ಯರಾತ್ರಿ 12.30ರ ವೇಳೆಗೆ ಘಟನೆ ನಡೆದಿದ್ದು,ಮುಂಬೈ ಮತ್ತು ಕಲ್ಯಾಣ್​ನ  2 ಪ್ರತ್ಯೇಕ ಘಟನೆಗಳಲ್ಲಿ ಗೋಡೆ ಕುಸಿದ ಪರಿಣಾಮ 16 ಮಂದಿ ಸಾವನ್ನಪ್ಪಿದ್ದಾರೆ. ಮಲಾಡ್​ನ ದುರಂತದಲ್ಲಿ 13 ಜನ ಸಾವನ್ನಪ್ಪಿದ್ದರು. ಕಲ್ಯಾಣ್​ನಲ್ಲಿ ಎರಡು ಮನೆಗಳ ಮೇಲೆ ಶಾಲಾ ಗೋಡೆ ಕುಸಿದ ಪರಿಣಾಮ ಮೂವರು ಸಾವನ್ನಪ್ಪಿದ್ದರು. ಮೂರು ವರ್ಷದ ಮಗು ಸೇರಿದಂತೆ ಮೂವರು ಸಾವನ್ನಪ್ಪಿದ್ದುಮೃತಪಟ್ಟವರ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ ಧನ ನೀಡುವುದಾಗಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್​ ಘೋಷಿಸಿದ್ದಾರೆ.ಮುಂಬೈ ನಗರದ ಅಂಧೇರಿ, ಕುರ್ಲಾ, ಬಾಂದ್ರಾ, ಚಾರ್ನಿ ರಸ್ತೆ, ಸಾಂತಾ ಕ್ರೂಸ್, ಬಿಕೆಸಿ ಮತ್ತಿತರ ಪ್ರದೇಶಗಳಲ್ಲಿ ರಸ್ತೆ ಮತ್ತು ರೈಲ್ವೆ ಹಳಿಗಳು ಜಲಾವೃತವಾಗಿದ್ದು, ರೈಲು ಸಂಚಾರಕ್ಕೂ ತೊಂದರೆಯಾಗಿದೆ. ಇನ್ನೂ ಕೆಲವು ದಿನಗಳು ಮಳೆ ಮುಂದುವರೆಯಲಿದ್ದು, ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
First published:July 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...