Kerala Lottery: ಲಾಟರಿ ಮಹಾತ್ಮೆ; ರಾತ್ರೋರಾತ್ರಿ ಕೋಟ್ಯಧಿಪತಿಗಳಾದ ಕೇರಳದ ಸೇಲ್ಸ್​ಮನ್​ಗಳು!

Kerala Lottery: ಕೇರಳದಲ್ಲಿ ಸರ್ಕಾರದಿಂದಲೇ ಲಾಟರಿ ಟಿಕೆಟ್​ ಮಾರಾಟ ಮಾಡಲಾಗುತ್ತದೆ. ಬಂಪರ್ ಟಿಕೆಟ್ ಮಾರಾಟ ಮಾಡಿದ ಏಜೆಂಟ್​ಗೆ 1 ಕೋಟಿ ರೂ. ಕಮಿಷನ್ ಸಿಗಲಿದೆ. ಲಾಟರಿಯ ಎರಡನೇ ಬಹುಮಾನವಾಗಿ 10 ಜನರಿಗೆ 50 ಲಕ್ಷ ರೂ. ಸಿಗಲಿದೆ. 20 ಟಿಕೆಟ್​ಗಳಿಗೆ ಮೂರನೇ ಬಹುಮಾನವಾಗಿ 10 ಲಕ್ಷ ರೂ. ಸಿಗಲಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ತಿರುವನಂತಪುರಂ (ಸೆ. 20): ಕೆಲವೊಮ್ಮೆ ಅದೃಷ್ಟವೊಂದು ಚೆನ್ನಾಗಿದ್ದರೆ ಯಾವುದೇ ಶ್ರಮವಿಲ್ಲದೆ ಶ್ರೀಮಂತರಾಗಿಬಿಡಬಹುದು. ಅದೆಲ್ಲ ಕನಸಲ್ಲಿ ಅಥವಾ ಸಿನಿಮಾದಲ್ಲಿ ಮಾತ್ರ ಸಾಧ್ಯ ಎಂದುಕೊಳ್ಳಬೇಡಿ. ಪಕ್ಕದ ರಾಜ್ಯ ಕೇರಳದ 6 ಜನ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಕೋಟ್ಯಧಿಪತಿಗಳಾಗಿದ್ದಾರೆ!

ಕೇರಳ ಲಾಟರೀಸ್​ ಇಲಾಖೆಯ ಬಂಪರ್ ಲಾಟರಿಯ ಫಲಿತಾಂಶ ಬಂದಿದ್ದೇ ತಡ 6 ಮಂದಿಗೆ ಈ ಅದೃಷ್ಟ ಖುಲಾಯಿಸಿದೆ. ಕೇರಳದ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದ ಲಾಟರಿ ಟಿಕೆಟ್​ ವಿಜೇತರಾಗಿರುವ 6 ಮಂದಿಯನ್ನು ನೋಡಿದ ಜನರು ಆಶ್ಚರ್ಯದಿಂದ ಹುಬ್ಬೇರಿಸುತ್ತಿದ್ದಾರೆ. ತಿರುವೋಣಂ ಬಂಪರ್ ಲಾಟರಿ ಮೊದಲ ವಿಜೇತರಿಗೆ 12 ಕೋಟಿ ಘೋಷಿಸಿತ್ತು. ಲಾಟರಿಯ ಫಲಿತಾಂಶ ಗೊತ್ತಾದ ಕೂಡಲೆ ವಿಜೇತರನ್ನು ಹುಡುಕುವ ಸವಾಲು ಎದುರಾಯಿತು.

ಕೇರಳದ ಕೊಲ್ಲಂ ಜಿಲ್ಲೆಯ ಕರುಂಗಪಲ್ಲಿಯಲ್ಲಿ ಚುಂಗಟ್ ಜ್ಯುವೆಲರಿ ಶಾಪ್​ನಲ್ಲಿ ಸೇಲ್ಸ್​ಮನ್ ಆಗಿ ಕೆಲಸ ಮಾಡುತ್ತಿದ್ದ ರಾಜೀವನ್, ರಂಜಿಮ್, ರೋನಿ, ವಿವೇಕ್, ಸುಬಿನ್ ಮತ್ತು ರಥೇಶ್ ಅವರಿಗೆ ಬಂಪರ್ ಲಾಟರಿಯ ಫಲಿತಾಂಶ ಪ್ರಕಟವಾದ ವಿಷಯ ತಿಳಿಯಿತು. ತಾವೂ ಸ್ಥಳೀಯ ಏಜೆಂಟ್ ಮೂಲಕ 2 ಲಾಟರಿ ಟಿಕೆಟ್​ ಖರೀದಿಸಿದ್ದು ನೆನಪಾಗಿ ಕುತೂಹಲದಿಂದ ತಮಗೇನಾದರೂ ಲಾಟರಿ ಹೊಡೆದಿದೆಯಾ? ಎಂದು ಪರಿಶೀಲಿಸಲು ಮುಂದಾದರು.

ಫೇಸ್​ಬುಕ್​ನಲ್ಲಿ ಅಮ್ಮ ಕಳಿಸಿದ ಕೋಪದ ಇಮೋಜಿ ನೋಡಿದ ಮಗಳಿಗೆ ಹೃದಯಾಘಾತ​!

ಅಚ್ಚರಿಯೆಂಬಂತೆ ಆ ಎರಡು ಲಾಟರಿ ಟಿಕೆಟ್​ಗಳಲ್ಲಿ ಒಂದಕ್ಕೆ ಮೊದಲ ಬಹುಮಾನ ಸಿಕ್ಕಿತ್ತು. ಟಿಎಂ 160869 ಎಂಬ ನಂಬರ್​ನ ಲಾಟರಿಗೆ 12 ಕೋಟಿ ರೂ. ಬಹುಮಾನ ಬಂದಿತ್ತು. ಈ ಶಾಕಿಂಗ್ ನ್ಯೂಸ್​ ತಿಳಿದ ಕೂಡಲೆ ಆ ವಿಷಯವನ್ನು ಅರಗಿಸಿಕೊಳ್ಳಲು ಅವರಿಗೆ ಬಹಳ ಸಮಯವೇ ಬೇಕಾಯಿತು. ಸೇಲ್ಸ್​ಮನ್ ಆಗಿ ಕೆಲಸ ಮಾಡುತ್ತಿದ್ದವರ ಜೀವನವೇ ಆ ಲಾಟರಿಯಿಂದ ಬದಲಾಗುವುದರಲ್ಲಿತ್ತು. ಮತ್ತೊಮ್ಮೆ ತಮಗೇ ಲಾಟರಿ ಬಹುಮಾನ ಬಂದಿದೆಯೆಂಬುದನ್ನು ಅವರು ಖಾತರಿಪಡಿಸಿಕೊಂಡರು.

ನಮಗೂ ಶಾಕಿಂಗ್ ನ್ಯೂಸ್​:

ಈ ಬಗ್ಗೆ ಪ್ರತಿಕ್ರಿಯಿಸಿರುವ ಆ 6 ಮಂದಿ, ನಮಗೆ ಈಗಲೂ ಲಾಟರಿ ಹೊಡೆದ ವಿಷಯವನ್ನು ನಂಬಲು ಸಾಧ್ಯವಾಗುತ್ತಿಲ್ಲ. ನಾವು 6 ಜನರೂ ಸೇರಿ ಈ ಟಿಕೆಟ್ ಖರೀದಿಸಿದ್ದೆವು. ಹೀಗಾಗಿ, ಬಂದ ಬಹುಮಾನದಲ್ಲಿ ನಾವೆಲ್ಲರೂ ಸಮಾನವಾಗಿ ಹಂಚಿಕೊಳ್ಳುತ್ತೇವೆ. ಒಬ್ಬೊಬ್ಬರಿಗೆ 2 ಕೋಟಿ ಹಣ ಸಿಗಲಿದೆ ಎಂಬುದು ನಿಜಕ್ಕೂ ಅಚ್ಚರಿಯ ವಿಷಯ. ಮೊದಲು ನಮ್ಮಲ್ಲಿ 3 ಜನ ಮಾತ್ರ ಲಾಟರಿ ಟಿಕೆಟ್ ಖರೀದಿಸಲು ನಿರ್ಧರಿಸಿದ್ದೆವು. ಆದರೆ, ಲಾಟರಿ ಟಿಕೆಟ್ ಕೊಳ್ಳುವ ದಿನ ಸಂಜೆ ಇನ್ನೂ ಮೂವರು ನಮ್ಮ ಜೊತೆ ಸೇರಿದರು. ಬುಧವಾರ ಲಾಟರಿ ಟಿಕೆಟ್ ಖರೀದಿಸಿದ್ದೆವು. ನಿನ್ನೆ ಲಾಟರಿ ಫಲಿತಾಂಶ ಪ್ರಕಟವಾಗಿದೆ. ಆ ಬಹುಮಾನದ ಮೊತ್ತದಲ್ಲಿ ಬೇರೆ ತೆರಿಗೆಯೆಲ್ಲ ಕಳೆದು ಒಬ್ಬೊಬ್ಬರಿಗೆ ಸುಮಾರು 1 ಕೋಟಿ ರೂ. ಸಿಗುತ್ತದೆ. ನಮ್ಮಲ್ಲಿ ಬಹುತೇಕ ಎಲ್ಲರೂ ಬಡ ಕುಟುಂಬದಿಂದ ಬಂದವರಾಗಿದ್ದೇವೆ. ಹಾಗಾಗಿ, ಈ ಹಣದಿಂದ ನಮ್ಮ ಕಷ್ಟವೆಲ್ಲ ಪರಿಹಾರವಾಗಲಿದೆ. ಇದರಲ್ಲಿ ಸ್ವಲ್ಪ ಹಣವನ್ನು ಚಾರಿಟಿಗೆ ಮೀಸಲಿಡಲಿದ್ದೇವೆ ಎಂದು ಅವರು ಇಂಡಿಯಾ ಟುಡೇಗೆ ಪ್ರತಿಕ್ರಿಯಿಸಿದ್ದಾರೆ.

ಲವ್​ ಲೆಟರ್ಸ್​​ಗೆ ಬೆಂಕಿ ಹಚ್ಚಲು ಹೋಗಿ ಇಡೀ ಅಪಾರ್ಟ್​ಮೆಂಟ್​ನ್ನೇ ಸುಟ್ಟ ಯುವತಿ

ಈ ಬಂಪರ್ ಟಿಕೆಟ್ ಮಾರಾಟ ಮಾಡಿದ ಏಜೆಂಟ್​ಗೆ 1 ಕೋಟಿ ರೂ. ಕಮಿಷನ್ ಸಿಗಲಿದೆ. ಲಾಟರಿಯ ಎರಡನೇ ಬಹುಮಾನವಾಗಿ 10 ಜನರಿಗೆ 50 ಲಕ್ಷ ರೂ. ಸಿಗಲಿದೆ. 20 ಟಿಕೆಟ್​ಗಳಿಗೆ ಮೂರನೇ ಬಹುಮಾನವಾಗಿ 10 ಲಕ್ಷ ರೂ. ಸಿಗಲಿದೆ. ಕೇರಳ ಸರ್ಕಾರಕ್ಕೆ ಈ ಲಾಟರಿ ಇಲಾಖೆ ಬಹಳ ಆದಾಯವನ್ನು ತಂದುಕೊಡುತ್ತದೆ. ಇಲ್ಲಿ ಪ್ರತಿದಿನ, ವಾರಕ್ಕೊಮ್ಮೆ ಲಾಟರಿಯನ್ನು ಡ್ರಾ ಮಾಡಲಾಗುತ್ತದೆ. ಹಾಗೇ, ಓಣಂ, ಕ್ರಿಸ್​ಮಸ್, ಮಾನ್ಸೂನ್​ ಸಂದರ್ಭಗಳಲ್ಲಿ ಬಂಪರ್ ಲಾಟರಿ ಬಿಡಲಾಗುತ್ತದೆ. ಇದರಲ್ಲಿ ವಿಜೇತರಾದ ಅದೃಷ್ಟಶಾಲಿಗಳು ಕೋಟ್ಯಧಿಪತಿಗಳಾಗುತ್ತಾರೆ.

First published: