ಆರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೂ ಹೆಚ್1ಎನ್1 ಸೋಂಕು

ಡಿಸೆಂಬರ್​ನಿಂದಲೂ ಭಾರತದ ವಿವಿಧೆಡೆ ಹಂದಿ ಜ್ವರ ಬಾಧೆ ಹೆಚ್ಚಾಗಿದೆ. ಶೀತ ವಾತಾವರಣದಲ್ಲಿ ಈ ಸೋಂಕು ಹೆಚ್ಚಾಗಿರುತ್ತದೆ. ಬೇಸಿಗೆ ಶುರುವಾಗುತ್ತಿದ್ದಂತೆ ಸೋಂಕು ಸಹಜವಾಗಿಯೇ ಕಡಿಮೆಯಾಗುತ್ತದೆ ಎನ್ನಲಾಗಿದೆ.

ಹೆಚ್1ಎನ್1

ಹೆಚ್1ಎನ್1

  • News18
  • Last Updated :
  • Share this:
ನವದೆಹಲಿ(ಫೆ. 25): ಕೊರೊನಾ ವೈರಸ್ ಭೀತಿ ಹೆಚ್ಚುತ್ತಿರುವ ಹೊತ್ತಿನಲ್ಲೇ ಭಾರತದಲ್ಲಿ ಹಂದಿ ಜ್ವರದ ಬಾಧೆ ತೀವ್ರಗೊಳ್ಳುತ್ತಿದೆ. ಹಲವೆಡೆ ಹೆಚ್1ಎನ್1 ಸೋಂಕಿಗೆ ತುತ್ತಾದವರ ಸಂಖ್ಯೆ ಹೆಚ್ಚುತ್ತಿದೆ. ಹೈದರಾಬಾದ್​ನಲ್ಲಿ ಒಬ್ಬ ಮಹಿಳೆ ಹಂದಿ ಜ್ವರಕ್ಕೆ ಬಲಿಯಾಗಿದ್ದಾರೆ. ಇದೇ ಹೊತ್ತಿನಲ್ಲಿ ಸರ್ವೋಚ್ಚ ನ್ಯಾಯಾಲಯದ ಆರು ನ್ಯಾಯಮೂರ್ತಿಗಳಿಗೆ ಹೆಚ್1ಎನ್1 ಸೋಂಕು ತಗುಲಿರುವ ವಿಚಾರ ಬೆಳಕಿಗೆ ಬಂದಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ನ್ಯಾಯಾಲಯದಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ಧಾರೆ.

ನ್ಯಾಯಮೂರ್ತಿಗಳೂ ಸೇರಿ ಸುಪ್ರೀಂ ಕೋರ್ಟ್​​ನ ಎಲ್ಲಾ ಸಿಬ್ಬಂದಿಗೂ ಆರೋಗ್ಯ ತಪಾಸಣೆ ನಡೆಸಬೇಕಿದೆ. ನ್ಯಾಯಮೂರ್ತಿಗಳೂ ಸಿಜೆಐ ಅವರನ್ನು ಭೇಟಿ ಮಾತನಾಡಿದ್ಧಾರೆ ಎಂದು ನ್ಯಾ| ಚಂದ್ರಚೂಡ್ ತಿಳಿಸಿದ್ಧಾರೆ.

ಇದೇ ವೇಳೆ, ಹಂದಿ ಜ್ವರ ಅಥವಾ ಸ್ವೈನ್ ಫ್ಲೂ ಅಪಾಯಕಾರಿ ರೀತಿಯಲ್ಲಿ ಹರಡುತ್ತಿದೆ. ಉತ್ತರ ಪ್ರದೇಶದ ಮೀರತ್ ನಗರವೊಂದರಲ್ಲೇ ಹತ್ತಿರ ಹತ್ತಿರ 40 ಮಂದಿಗೆ ಹೆಚ್1ಎನ್1 ವೈರಸ್ ಸೋಂಕು ತಗುಲಿದೆ. ಇವತ್ತು ಇನ್ನೂ ಇಬ್ಬರು ವ್ಯಕ್ತಿಗಳಿಗೆ ಹಂದಿ ಜ್ವರ ವ್ಯಾಪಿಸಿದೆ.

ಇದನ್ನೂ ಓದಿ: ತಾಜ್ ಮಹಲ್ ಹಾಗೂ ಪ್ರೇಮಕಥೆ ತಿಳಿದು ಭಾವುಕರಾದ ಡೊನಾಲ್ಡ್ ಟ್ರಂಪ್ ಮತ್ತವರ ಪತ್ನಿ

ಹೈದರಾಬಾದ್​ನಲ್ಲಿ ಮೂರು ದಿನಗಳ  ಹಿಂದಷ್ಟೇ ಹೆರಿಗೆಯಾಗಿದ್ದ 38 ವರ್ಷದ ಮಹಿಳೆ ಇವತ್ತು ಸ್ವೈನ್ ಫ್ಲೂ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಇಲ್ಲಿ 200ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿರುವುದು ಕಂಡುಬಂದಿದೆ.

ಡಿಸೆಂಬರ್​ನಿಂದಲೂ ಭಾರತದ ವಿವಿಧೆಡೆ ಹಂದಿ ಜ್ವರ ಬಾಧೆ ಹೆಚ್ಚಾಗಿದೆ. ಶೀತ ವಾತಾವರಣದಲ್ಲಿ ಈ ಸೋಂಕು ಹೆಚ್ಚಾಗಿರುತ್ತದೆ. ಬೇಸಿಗೆ ಶುರುವಾಗುತ್ತಿದ್ದಂತೆ ಸೋಂಕು ಸಹಜವಾಗಿಯೇ ಕಡಿಮೆಯಾಗುತ್ತದೆ ಎನ್ನಲಾಗಿದೆ.

ಶೀತ, ಕೆಮ್ಮು, ವಾಂತಿ, ಜ್ವರ ಹೆಚ್1ಎನ್1 ರೋಗ ಲಕ್ಷಣಗಳೆಂದು ಗುರುತಿಸಲಾಗಿದೆ. ವೈರಸ್​ನಿಂದ ಹರಡುವ ರೋಗ ಇದಾಗಿದೆ. ಸೋಂಕಿತರು ಇರುವೆಡೆ ಉಸಿರಾಡಿದಾಗ ಗಾಳಿಯ ಮೂಲಕ ವೈರಸ್ ಹರಡುತ್ತದೆ. ಅಥವಾ ವೈರಸ್ ಸೋಂಕಿರುವ ವಸ್ತುವನ್ನು ಮುಟ್ಟಿ ಅದು ಬಾಯಿ ಅಥವಾ ಮೂಗಿಗೆ ತಾಗಿದರೆ ಆ ಮೂಲಕವೂ ಸೋಂಕು ಹರಡಬಹುದು. ಈ ಸೋಂಕನ್ನು ಬಹಳ ಬೇಗ ಗುರುತಿಸಿ ಚಿಕಿತ್ಸೆ ನೀಡಿದರೆ ಹುಷಾರಾಗಬಹುದು. ಒಂದು ವೇಳೆ ವಿಳಂಬ ಮಾಡಿದರೆ ಸಾವಿನಲ್ಲಿ ಅಂತ್ಯವಾಗಬಹುದು ಎಂದು ವೈದ್ಯರು ಎಚ್ಚರಿಸುತ್ತಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: