ನವದೆಹಲಿ: ಭಾರತದಲ್ಲಿ (India) ಸಂಚರಿಸುವ ಕಾರುಗಳಿಗೆ ಕನಿಷ್ಠ ಆರು ಏರ್ಬ್ಯಾಗ್ಗಳ (Air bags) ಬಗ್ಗೆ ಸರ್ಕಾರ ದೊಡ್ಡ ನಿರ್ಧಾರ ತೆಗೆದುಕೊಂಡಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ತಾವು ಟ್ವೀಟ್ ಮಾಡಿದ್ದು, ಮುಂದಿನ ಅಕ್ಟೋಬರ್ 1, 2023ರಿಂದ ದೇಶದ ಕಾರುಗಳಲ್ಲಿ ಕನಿಷ್ಠ 6 ಏರ್ಬ್ಯಾಗ್ಗಳನ್ನು ಹೊಂದಿರುವುದು ಕಡ್ಡಾಯವಾಗಿದೆ ಎಂದು ನಿತಿನ್ ಗಡ್ಕರಿ ಹೇಳಿಕೆ ನೀಡಿದ್ದಾರೆ. ಅಕ್ಟೋಬರ್ 1, 2022 ರಿಂದ ವಾಹನ ಚಾಲಕರ ಸುರಕ್ಷತೆಗಾಗಿ ಎಲ್ಲಾ ಎಂಟು ಆಸನಗಳ ವಾಹನಗಳಲ್ಲಿ ಆರು ಏರ್ಬ್ಯಾಗ್ಗಳನ್ನು ಕಡ್ಡಾಯಗೊಳಿಸಲು ಸರ್ಕಾರ (Government) ಈ ಹಿಂದೆ ಯೋಜನೆಯನ್ನು ರೂಪಿಸಿತ್ತು. ಆದರೆ ಈ ನಿಯಮವನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.
ಎಲ್ಲ ಕಾರುಗಳಲ್ಲಿ 6 ಏರ್ಬ್ಯಾಗ್ ಕಡ್ಡಾಯ
ಆದರೆ ಈ ನಿರ್ಧಾರದ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ “ಆಟೋ ಉದ್ಯಮವು ಎದುರಿಸುತ್ತಿರುವ ಜಾಗತಿಕ ಪೂರೈಕೆ ಸರಪಳಿ ಸಮಸ್ಯೆಗಳು ಮತ್ತು ಅದರ ಸ್ಥೂಲ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು (M-1) ವರ್ಗದ ಪ್ರಯಾಣಿಕ ವಾಹನಗಳಲ್ಲಿ 6 ಏರ್ಬ್ಯಾಗ್ಗಳನ್ನು ಇರಿಸಲು ನಿರ್ಧರಿಸಲಾಗಿದೆ” ಎಂದು ಬರೆದಿದ್ದಾರೆ. ಅಕ್ಟೋಬರ್ 1, 2023 ರಿಂದ ಈ ನಿಯಮವು ಕಡ್ಡಾಯ ಎಂದು ತಿಳಿಸಿದ್ದಾರೆ.
ಕಾರು ಚಾಲಕರ ಸುರಕ್ಷತೆಯೇ ನಮ್ಮ ಆದ್ಯತೆ
ತನ್ನ ಮತ್ತೊಂದು ಟ್ವೀಟ್ ನಲ್ಲಿ ರಸ್ತೆ ಸಾರಿಗೆ ಸಚಿವರು, ಯಾವುದೇ ಪ್ರಯಾಣಿಕ ವಾಹನದಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರ ಸುರಕ್ಷತೆಯು ಪ್ರಮುಖ ಆದ್ಯತೆಯಾಗಿದೆ ಎಂದು ಬರೆದಿದ್ದಾರೆ.
Safety of all passengers travelling in motor vehicles irrespective of their cost and variants is the foremost priority.
— Nitin Gadkari (@nitin_gadkari) September 29, 2022
ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ
ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸುವುದು, ಏರ್ಬ್ಯಾಗ್ಗಳನ್ನು ಹೆಚ್ಚಿಸುವುದರಿಂದ ಕಾರುಗಳ ಬೆಲೆಯಲ್ಲಿ ಯಾವುದೇ ಪ್ರಮುಖ ಹೆಚ್ಚಳ ಉಂಟಾಗುವುದಿಲ್ಲ, ಇಂತಹ ಪರಿಸ್ಥಿತಿಯಲ್ಲಿ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಯಾವುದೇ ನಿರ್ಲಕ್ಷ್ಯವನ್ನು ಯಾವುದೇ ಸಂದರ್ಭಗಳಲ್ಲಿ ಸಹಿಸಲಾಗುವುದಿಲ್ಲ. ಇದರಲ್ಲಿ ಯಾವುದೇ ರಾಜಿ ಆಗುವುದಿಲ್ಲ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ: Tipu Express: ಟಿಪ್ಪು ಕಂಡ್ರೆ ಬಿಜೆಪಿಗೆ ಈಗಲೂ ಹೆದರಿಕೆ: ಓವೈಸಿ
ಟಾಟಾ ಗ್ರೂಪ್ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ರಸ್ತೆ ಅಪಘಾತದಲ್ಲಿ ನಿಧನರಾದ ನಂತರ, ವಾಹನಗಳಲ್ಲಿನ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳು ತೀವ್ರಗೊಂಡಿದ್ದವು. ಈ ಘಟನೆಯ ನಂತರ, ಸರ್ಕಾರವು ವಾಹನದಲ್ಲಿ ಮುಂದಿನ ಸೀಟ್ ಮತ್ತು ಹಿಂದಿನ ಸೀಟಿನ ಪ್ರಯಾಣಿಕರು ಇಬ್ಬರೂ ಸೀಟ್ ಬೆಲ್ಟ್ ಧರಿಸುವುದನ್ನು ಕಡ್ಡಾಯಗೊಳಿಸಿತು.
ಕಳೆದ ವರ್ಷ, ನಿತಿನ್ ಗಡ್ಕರಿ ಅವರು ಸುದ್ದಿ ಸಂಸ್ಥೆ PTI ಗೆ “ಹೆಚ್ಚಾಗಿ ಕೆಳ ಮಧ್ಯಮ ವರ್ಗದ ಜನರು ಖರೀದಿಸುವ ಸಣ್ಣ ಕಾರುಗಳು ಸಹ ಏರ್ಬ್ಯಾಗ್ಗಳನ್ನು ಹೊಂದಿರಬೇಕು. ಅದಲ್ಲದೇ ಕೇವಲ ಶ್ರೀಮಂತರು ಖರೀದಿಸುವ ದೊಡ್ಡ ಕಾರುಗಳಲ್ಲಿ ಮಾತ್ರ ವಾಹನ ತಯಾರಕರು ಎಂಟು ಏರ್ಬ್ಯಾಗ್ಗಳನ್ನು ಏಕೆ ಒದಗಿಸುತ್ತಿದ್ದಾರೆ ಎಂದು ಆಶ್ಚರ್ಯಪಡುವುದರ ಜೊತೆಗೆ ಕೆಳ ಮಧ್ಯಮ ವರ್ಗದ ಜನರು ಖರೀದಿಸುವ ಸಣ್ಣ ಕಾರುಗಳಲ್ಲಿಯೂ ಸಹ ಏರ್ ಬ್ಯಾಗ್ಗಳು ಇರಬೇಕು ಎಂಬ ಆಶಯವನ್ನು ಹೊಂದಿದ್ದೇನೆ” ಎಂದು ಹೇಳಿದ್ದರು.
ಕಾಂಗ್ರೆಸ್ ಪಕ್ಷದ ವಕ್ತಾರ ಕ್ಲೈಡ್ ಕ್ರಾಸ್ಟೊ ಅವರಿಂದ ಟೀಕೆ
ಆರು ಏರ್ಬ್ಯಾಗ್ ನಿಯಮವನ್ನು ಮುಂದೂಡುವ ಸರ್ಕಾರದ ನಿರ್ಧಾರದ ಕುರಿತು ಪ್ರತಿಕ್ರಿಯಿಸಿದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ವಕ್ತಾರ ಕ್ಲೈಡ್ ಕ್ರಾಸ್ಟೊ ಅವರು ಟ್ವೀಟ್ ಮಾಡಿ "ಕಾರುಗಳಲ್ಲಿನ ಎಲ್ಲಾ ಪ್ರಯಾಣಿಕರ ಸುರಕ್ಷತೆಯು ಮಹತ್ವದ್ದಾಗಿದೆ. ಆದ್ದರಿಂದ ಅಕ್ಟೋಬರ್ 2023 ರಿಂದ 6 ಏರ್ಬ್ಯಾಗ್ಗಳನ್ನು ಹೊಂದಿರುವ ಕಾರುಗಳು ಕಡ್ಡಾಯವಾಗಿದೆ. ಆದರೆ ಪ್ರತಿಯೊಬ್ಬರಿಗೂ ಇದನ್ನು ಅನ್ವಯಿಸುವುದು ಸ್ವಲ್ಪ ಕಷ್ಟವೇ ಅಲ್ಲವೇ. ಸರ್ಕಾರವು 'ಸುರಕ್ಷತೆ ಆದ್ಯತೆ' ಆಗಿದೆ ಎಂದು ಹೇಳುತ್ತಿರುವುದರಿಂದ ಅದಕ್ಕೆ ಸಬ್ಸಿಡಿ ನೀಡಲು ಗಡ್ಕರಿ ಜಿ ಅವರು ಸರ್ಕಾರವನ್ನು ಕೇಳುತ್ತಾರೆಯೇ?" ಎಂದು ಟೀಕಿಸಿದ್ದಾರೆ.
#NitinGadkari ji says, Safety of all passengers in cars is a priority irrespective of their cost, therefore cars with 6 #airbags mandatory from Oct 2023.
But not everyone can afford this variant and since 'safety is a priority', will Gadkari ji ask government to give a subsidy ?
— Clyde Crasto - क्लाईड क्रास्टो (@Clyde_Crasto) September 29, 2022
ಜನವರಿ 14, 2022 ರಂದು, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, ಅಕ್ಟೋಬರ್ 1, 2022 ರ ನಂತರ ತಯಾರಿಸಲಾದ M1 ವರ್ಗದ ಎಲ್ಲಾ ವಾಹನಗಳಿಗೆ ಆರು ಏರ್ಬ್ಯಾಗ್ಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಿದೆ.
ಇದನ್ನೂ ಓದಿ: BJP Vs AAP: ಮೋದಿ ನಿಂದಿಸಿದ ಆಪ್ ಅಧ್ಯಕ್ಷ: ಇದು ಗುಜರಾತಿಗರಿಗೆ ಅವಮಾನ ಎಂದ ಬಿಜೆಪಿ!
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಪ್ರಕಾರ, 2021 ರಲ್ಲಿ ಭಾರತದಾದ್ಯಂತ ರಸ್ತೆ ಅಪಘಾತಗಳಲ್ಲಿ 1.55 ಲಕ್ಷಕ್ಕೂ ಹೆಚ್ಚು ಜನ ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ಸರಾಸರಿ ದಿನಕ್ಕೆ 426 ಜನ ಅಥವಾ ಪ್ರತಿ ಗಂಟೆಗೆ 18 ಜನರು ಅಪಘಾತಕ್ಕೆ ಒಳಗಾಗಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ವರದಿಗಳಲ್ಲಿ ದಾಖಲಾಗಿವೆ. ಅದರಲ್ಲೂ ಈ ಅಂಕಿ ಅಂಶಗಳು ಇದುವರೆಗೂ ದಾಖಲಾಗಿರುವ ಅತ್ಯಧಿಕ ಸಾವಿನ ಅಂಕಿಅಂಶಗಳಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ