West Bengal Election 2021: ಬಂಗಾಳದಲ್ಲಿ 6ನೇ ಹಂತದ ಮತದಾನದಲ್ಲಿ ಈವರೆಗೆ ಶೇ.57.30 ದಾಖಲೆ ಮತ ಚಲಾವಣೆ

ಮಧ್ಯಾಹ್ನ 1 ಗಂಟೆ ವೇಳೆಗೆ ಶೇ. 57.30ರಷ್ಟು ಮತದಾನವಾಗಿದೆ. ಉತ್ತರ್ ದಿನಜ್​ಪುರ್​ನಲ್ಲಿ ಶೇ. 60.45, ನಾಡಿಯಾದಲ್ಲಿ ಶೇ. 59.01, ಉತ್ತರ 24 ಪರಗಣಾಸ್​ನಲ್ಲಿ ಶೇ. 51.96 ಹಾಘೂ ಪುರ್ಬಾ ಬರ್ದಾಮನ್​ನಲ್ಲಿ ಶೇ. 62.72ರಷ್ಟು ಮತದಾನವಾಗಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕಲ್ಕತ್ತಾ: ಪಶ್ಚಿಮಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಇಂದು 6ನೇ ಹಂತದ ಮತದಾನ ನಡೆದಿದೆ. ಒಟ್ಟು 43 ವಿಧಾನಸಭಾ ಕ್ಷೇತ್ರಗಳಿಗೆ 6ನೇ ಹಂತದಲ್ಲಿ ಮತದಾನ ನಡೆಯುತ್ತಿದ್ದು, 306 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿ ಸ್ಪರ್ಧಿಸಿದ್ದಾರೆ. ಸುಮಾರು 1 ಕೋಟಿ ಜನರು ಈ 306 ಅಭ್ಯರ್ಥಿಗಳ ಹಣೆಬರೆಹವನ್ನು ಇಂದು ಬರೆಯಲಿದ್ದಾರೆ. ಮಧ್ಯಾಹ್ನ ಒಂದು ಗಂಟೆಯ ವೇಳೆ ಶೇ.57.30 ಮತದಾನವಾಗಿದೆ. ದೇಶದಲ್ಲಿ ಮಾರಕ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಲಕ್ಷ ಗಡಿ ದಾಟುತ್ತಿರುವ ಮಧ್ಯೆ ಪಶ್ಚಿಮಬಂಗಾಳದಲ್ಲಿ ಚುನಾವಣೆ ನಡೆಯುತ್ತಿದೆ.

  6ನೇ ಹಂತದ ಮತದಾನಕ್ಕೂ ಮುನ್ನ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ ಅವರು, ಪಶ್ಚಿಮಬಂಗಾಳದ ಜನರು ಹೊಸ ವಿಧಾನಸಣೆ ಆಯ್ಕೆಗೆ ಮತ ಚಲಾಯಿಸಲಿದ್ದಾರೆ. ಇಂದು ಆರನೇ ಹಂತದ ಮತದಾನ ನಡೆಯುತ್ತಿದ್ದು, ಮತ ಚಲಾಯಿಸುವವರು ತಮ್ಮ ಹಕ್ಕು ಚಲಾಯಿಸುವಂತೆ ಮನವಿ ಮಾಡಿದ್ದಾರೆ.

  ಪರಿಸ್ಥಿತಿಯನ್ನು ನಿಯಂತ್ರಿಸಲು ಭದ್ರತಾ ಪಡೆಗಳ ಒಂದು ದೊಡ್ಡ ತುಕಡಿಯನ್ನು ತೊಂದರೆಗೊಳಗಾಗಿರುವ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ನೈಹತಿ ಕ್ಷೇತ್ರದ ಹಲಿಸಹಾರ್ ಪ್ರದೇಶದಲ್ಲಿ, ಸ್ಥಳೀಯ ಬಿಜೆಪಿ ಮುಖಂಡರ ನಿವಾಸಕ್ಕೆ ಬಾಂಬ್‌ಗಳನ್ನು ಎಸೆಯಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಬಾಂಬ್​ ಸ್ಫೋಟದಿಂದ ಅವರ ತಾಯಿ ಮತ್ತು ಕಿರಿಯ ಸಹೋದರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ವಿಷಯವಾಗಿ ಟಿಎಂಸಿ ಮತ್ತು ಬಿಜೆಪಿ ಪರಸ್ಪರರ ವಿರುದ್ಧ ಆರೋಪಗಳನ್ನು ಮಾಡಿವೆ.

  ಎಲ್ಲೆಡೆಯೂ ಮಾರಕ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತದಾರರು COVID-19 ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಪಾಲಿಸುವಂತೆ ಭದ್ರತಾ ಸಿಬ್ಬಂದಿ ಎಚ್ಚರಿಕೆ ನೀಡುತ್ತಿದ್ದಾರೆ. ಹೆಚ್ಚಿನ ಮತದಾನ ಕೇಂದ್ರಗಳ ಹೊರಗೆ ದೊಡ್ಡ ಸರತಿ ಸಾಲುಗಳಲ್ಲಿ ಮತದಾರರು ಮತ ಚಲಾಯಿಸಲು ನಿಂತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ದಿನಾಜ್‌ಪುರದ ಚೋಪ್ರಾ ಪ್ರದೇಶದಲ್ಲಿ, ಮತದಾನ ಕೇಂದ್ರವೊಂದರ ಏಜೆಂಟರು ಹೆಕ್ಲಿಂಗ್ ಆರೋಪದ ಮೇಲೆ ಟಿಎಂಸಿ ಮತ್ತು ಬಿಜೆಪಿಯ ಕಾರ್ಯಕರ್ತರ ನಡುವೆ ಘರ್ಷಣೆ ನಡೆದ ನಂತರ ಗುಂಡು ಹಾರಿಸಲಾಗಿದೆ ಎಂದು ವರದಿಯಾಗಿದೆ. ಎರಡೂ ಪಕ್ಷಗಳು ಯಾವುದೇ ಬಂದೂಕನ್ನು ಬಳಸಿರುವುದನ್ನು ನಿರಾಕರಿಸಿವೆ.

  ಇದನ್ನು ಓದಿ: Modi V/S Didi: ಕೊರೋನಾ ಸಂಕಷ್ಟ ‘ಮೋದಿ ನಿರ್ಮಿತ ದುರಂತ’ ಎಂದು ತಿವಿದ ಬಂಗಾಳದ ಸಿಎಂ ದೀದಿ..!

  ಆರನೇ ಹಂತದ ವಿಧಾನಸಭಾ ಚುನಾವಣೆಯಲ್ಲಿ ಮತದಾನ ನಡೆಯುತ್ತಿರುವ ಬಂಗಾಳದ ವಿವಿಧ ಭಾಗಗಳಲ್ಲಿ ಅಹಿತಕರ ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿವೆ, ಆದರೆ ಒಟ್ಟಾರೆ ಮತದಾನದ ಪರಿಸ್ಥಿತಿ ಹೆಚ್ಚಾಗಿ ಶಾಂತಿಯುತವಾಗಿ ನಡೆದಿದೆ. ಬೆಳಿಗ್ಗೆ 11 ರವರೆಗೆ 37.27 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾದ ಚುನಾವಣೆ 43 ವಿಧಾನಸಭಾ ಸ್ಥಾನಗಳಲ್ಲಿ ನಡೆಯುತ್ತಿದೆ. ಉತ್ತರ 24 ಪರಗಣಾಸ್ ಜಿಲ್ಲೆಯಲ್ಲಿ 17 ವಿಧಾನಸಭಾ ಕ್ಷೇತ್ರಗಳು, ನಾಡಿಯಾ ಮತ್ತು ಉತ್ತರ ದಿನಾಜ್‌ಪುರದಲ್ಲಿ ತಲಾ ಒಂಬತ್ತು ಮತ್ತು ಪೂರ್ಬಾ ಬರ್ಧಾಮನ್‌ನಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

  ಮಧ್ಯಾಹ್ನ 1 ಗಂಟೆ ವೇಳೆಗೆ ಶೇ. 57.30ರಷ್ಟು ಮತದಾನವಾಗಿದೆ. ಉತ್ತರ್ ದಿನಜ್​ಪುರ್​ನಲ್ಲಿ ಶೇ. 60.45, ನಾಡಿಯಾದಲ್ಲಿ ಶೇ. 59.01, ಉತ್ತರ 24 ಪರಗಣಾಸ್​ನಲ್ಲಿ ಶೇ. 51.96 ಹಾಘೂ ಪುರ್ಬಾ ಬರ್ದಾಮನ್​ನಲ್ಲಿ ಶೇ. 62.72ರಷ್ಟು ಮತದಾನವಾಗಿದೆ.
  Published by:HR Ramesh
  First published: