ಸುಳ್ಳು ಅತ್ಯಾಚಾರ ಕೇಸ್​​ನಲ್ಲಿ 31 ವರ್ಷ ಜೈಲು ಶಿಕ್ಷೆ; ನೂರಾರು ಕೋಟಿ ರೂ. ಪರಿಹಾರ ನೀಡಿದ ಕೋರ್ಟ್!

ಜೈಲಿನಲ್ಲಿ ಕಳೆದ ಪ್ರತಿ ವರ್ಷಕ್ಕೂ 1 ಮಿಲಿಯನ್​​ ನಂತೆ ತಲಾ 31 ಮಿಲಿಯನ್​​ ಜೊತೆ ಹೆಚ್ಚುವರಿಯಾಗಿ 13 ಮಿಲಿಯನ್​ ಸೇರಿಸಿ ಒಟ್ಟು 75 ಮಿಲಿಯನ್​​ ಹಣವನ್ನು ಇಬ್ಬರಿಗೂ ಪರಿಹಾರವಾಗಿ ನೀಡಲಾಗಿದೆ.

photo courtesy: inshorts news

photo courtesy: inshorts news

  • Share this:
ನ್ಯೂಯಾರ್ಕ್​: ನೂರು ಅಪರಾಧಿಗಳಿಗೆ ಶಿಕ್ಷೆ ಆಗದಿದ್ದರೂ, ಒಬ್ಬ ನಿರಪರಾಧಿಗೆ ಜೈಲು ಶಿಕ್ಷೆಯಾಗಬಾರದು ಅನ್ನೋದು ಕಾನೂನಿನ ಧೇಯವಾಕ್ಯ. ಆದರೆ ಹಲವು ಪ್ರಕರಣಗಳಲ್ಲಿ ಮುಗ್ಧರು ಮಾಡದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಈ ರೀತಿಯೇ ಆದ ತಪ್ಪನ್ನು ಅಮೆರಿಕದ ನ್ಯಾಯಾಲಯ ದೊಡ್ಡ ಮೊತ್ತದ ಪರಿಹಾರ ನೀಡುವ ಮೂಲಕ ಕೊನೆಗೂ ನ್ಯಾಯ ನೀಡಿದೆ. 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಪ್ರಕರಣದಲ್ಲಿ ಹೆನ್ರಿ ಮ್ಯಾಕ್​ಕಲಂ ಹಾಗೂ ಲಿಯೋನ್​ ಬ್ರೌನ್​​ ಎಂಬ ಇಬ್ಬರು ಬರೋಬ್ಬರಿ 31 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು. ಇವರ ಮೇಲಿನ ರೇಪ್​​ & ಮರ್ಡರ್​ ಕೇಸ್​ ಖುಲಾಸೆಯಾಗಿದ್ದು, ನಾರ್ತ್​ ಕೆರೊನಿಯಾ ಕೋರ್ಟ್​ 75 ಮಿಲಿಯನ್​ ( 550 ಕೋಟಿ ರೂ.) ಹಣವನ್ನು ಪರಿಹಾರವಾಗಿ ನೀಡಿದೆ.

1983ರಲ್ಲಿ 11 ವರ್ಷ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಹೆನ್ರಿ, ಲಿಯೋನ್​ರನ್ನು ಬಂಧಿಸಲಾಗಿತ್ತು. ಬಂಧನಕ್ಕೊಳಗಾದಾಗ ಹೆನ್ರಿಗೆ 19 ವರ್ಷ ಹಾಗೂ ಲಿಯೋನ್​ಗೆ 15 ವರ್ಷ ವಯಸ್ಸಾಗಿತ್ತು. ಆಗ ಪ್ರಕರಣದ ತನಿಖೆ ನಡೆಸಿದ್ದ ಕೋರ್ಟ್​ ಇಬ್ಬರಿಗೂ ಮರಣದಂಡನೆ ಶಿಕ್ಷೆಯನ್ನು ವಿಧಿಸಿತ್ತು. ಕೋರ್ಟ್​ನ ಆದೇಶದ ವಿರುದ್ಧ ಕಾನೂನು ಹೋರಾಟ ನಡೆಸಿದ ಬಳಿಕ 2014ರಲ್ಲಿ ಇಬ್ಬರೂ ಪ್ರಕರಣದಿಂದ ಖುಲಾಸೆಗೊಂಡಿದ್ದರು. ಅಷ್ಟರಲ್ಲಿ ಆಗಲೇ ಬರೋಬ್ಬರಿ 31 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ ಇಬ್ಬರು ತಮ್ಮ ಯವ್ವನವನ್ನು ಕಂಬಿಗಳ ಹಿಂದೆಯೇ ಕಳೆದಿದ್ದರು.

ಇನ್ನು ಡಿಎನ್​ಎ ಪರೀಕ್ಷೆಯಲ್ಲಿ ಇಬ್ಬರು ಅತ್ಯಾಚಾರವೆಸಗಿಲ್ಲ ಎಂಬುವುದು ಸಾಬೀತಾಗಿತ್ತು. ತಮ್ಮ ವಿರುದ್ಧದ ಸುಳ್ಳು ಆರೋಪ ಹಾಗೂ ಶಿಕ್ಷೆಯ ವಿರುದ್ಧ  ಹೆನ್ರಿ, ಲಿಯೋನ್ ಮತ್ತೆ ಕೋರ್ಟ್​ ಮೆಟ್ಟಿಲೇರಿದ್ದರು. ಇಬ್ಬರಿಗೂ ಆದ ನೋವು, ನಷ್ಟವನ್ನು ಪರಿಗಣಿಸಿದ ನಾರ್ತ್​ ಕೆರೊಲಿನಾ ಕೋರ್ಟ್​​ ಈಗ 75 ಮಿಲಿಯನ್​ ಹಣವನ್ನು ಪರಿಹಾರವಾಗಿ ನೀಡಿದೆ. ಜೈಲಿನಲ್ಲಿ ಕಳೆದ ಪ್ರತಿ ವರ್ಷಕ್ಕೂ 1 ಮಿಲಿಯನ್​​ ನಂತೆ ತಲಾ 31 ಮಿಲಿಯನ್​​ ಜೊತೆ ಹೆಚ್ಚುವರಿಯಾಗಿ 13 ಮಿಲಿಯನ್​ ಸೇರಿಸಿ ಒಟ್ಟು 75 ಮಿಲಿಯನ್​​ ಹಣವನ್ನು ಇಬ್ಬರಿಗೂ ಪರಿಹಾರವಾಗಿ ನೀಡಲಾಗಿದೆ.

ಕೋರ್ಟ್​ನ ಆದೇಶದ ಬಗ್ಗೆ ಸಂತತ ಹಂಚಿಕೊಂಡ ಹೆನ್ರಿ ಕೊನೆಗೂ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದಿದ್ದಾರೆ. ಜೈಲಿನಲ್ಲಿ ಇನ್ನೂ ನಮ್ಮಂತೆಯೇ ಅನೇಕ ಮುಗ್ಧರು ಶಿಕ್ಷೆ ಅನುಭವಿಸುತ್ತಿದ್ದಾರೆ. ಮಾಡದ ತಪ್ಪಿಗೆ ಅವರು ಅನುಭವಿಸುತ್ತಿರುವ ನೋವು ಸಹಿಸುವಂತಹದಲ್ಲ ಎಂದು ಲಿಯೋನ್​ ಅಸಮಾಧಾನ ಹೊರ ಹಾಕಿದ್ದಾರೆ. ಹೆನ್ರಿ ಹಾಗೂ ಲಿಯೋನ್​ ಇಬ್ಬರು ಕಪ್ಪು ವರ್ಣಿಯರಾಗಿದ್ದು, ಲಿಯೋನ್​ ಅಂಗವೈಕಲ್ಯವನ್ನೂ ಹೊಂದಿದ್ದಾರೆ.

ಕಪ್ಪು ವರ್ಣೀಯರ ವಿರುದ್ಧ ಪೂರ್ವಗ್ರಹ ಪೀಡಿತರಾಗಿ ತನಿಖೆ ನಡೆಸಿದ್ದರಿಂದಲೇ ಹೆನ್ರಿ, ಲಿಯೋನ್​ ಮಾಡದ ತಪ್ಪಿಗೆ ಶಿಕ್ಷ ಅನುಭವಿಸುವಂತಾಗಿದ್ದು ಎಂದು ಹಲವರು ಆರೋಪಿಸಿದ್ದಾರೆ. ಇನ್ನು ಕೆಲವರು ತನಿಖೆ ನಡೆಸಿದ ಪೊಲೀಸ್​ ಅಧಿಕಾರಿಗಳಿಗೆ ಜೈಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಪ್ರಕರಣದಿಂದ ಹಲವರು ಅಮೆರಿಕದ ನ್ಯಾಯಾಲಯಗಳನ್ನು ಟೀಕಿಸುತ್ತಿದ್ದರೆ, ಇನ್ನು ಹಲವರು ಪರಿಹಾರ ನೀಡಿದ ಕೋರ್ಟ್​​ನ ತೀರ್ಮಾನವನ್ನು ಪ್ರಶಂಸಿಸಿದ್ದಾರೆ.
Published by:Kavya V
First published: